ಈ ವಾರ (ಫೆ.11- 17ರವರೆಗೆ)ಈ 3 ರಾಶಿಯವರಿಗೆ ಒಳ್ಳೆಯದು ಈ 4 ರಾಶಿಯವರು ತುಂಬಾನೇ ಜಾಗ್ರತೆವಹಿಸಿ

ಗ್ರಹಗತಿಗಳ ಸ್ಥಾನದ ಪ್ರಕಾರ ಈ ವಾರ (ಫೆಬ್ರವರಿ11-17) ಈ 3 ರಾಶಿಯವರಿಗೆ ಅದೃಷ್ಟಕರ, ಈ 4 ರಾಶಿಯವರು ಜಾಗ್ರತೆ:

ಕನ್ಯಾ ರಾಶಿ

ಈ ವಾರ ಕನ್ಯಾರಾಶಿಗಳಿಗೆ ತುಂಬಾ ಒಳ್ಳೆಯದು, ಉದ್ಯೋಗಿಗಳಿಗೆ ಈ ವಾರ ತುಂಬಾ ಅದೃಷ್ಟಕರವಾಗಿರುತ್ತದೆ. ಈ ವಾರ ನಿಮ್ಮ ಶ್ರಮಕ್ಕೆ ತಕ್ಕ ಫಲಿತಾಂಶ ದೊರೆಯಲಿದೆ. ಈ ವಾರ ನೀವು ತುಂಬಾ ಧನಾತ್ಮಕವಾಗಿ ಉಳಿಯುತ್ತೀರಿ. ನೀವು ವಿದೇಶಕ್ಕೆ ಹೋಗಿ ಉದ್ಯೋಗ ಮಾಡಲು ಬಯಸಿದ್ದರೆ ಈ ವಾರ ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು. ಉದ್ಯಮಿಗಳಿಗೆ ಈ ವಾರ ತುಂಬಾ ಒಳ್ಳೆಯದು, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಸುಧಾರಣೆಯನ್ನು ಕಾಣಬಹುದು, ಆರೋಗ್ಯದ ದೃಷ್ಟಿಯಿಂದಲೂ ಇದು ಒಳ್ಳೆಯದು.

Weekly Horoscope

ಧನು ರಾಶಿ

ಈ ವಾರ ಧನು ರಾಶಿಯವರಿಗೆ ಲಾಭದಾಯಕವಾಗಿರಲಿದೆ, ವ್ಯಾಪಾರಿಗಳಿಗೆ ಈ ವಾರ ತುಂಬಾ ಉತ್ತಮವಾಗಿದೆ. ಉದ್ಯೋಗಿಗಳು ಮಾಡುವ ಪ್ರಯಾಣ ಲಾಭದಾಯಕವಾಗಿರುತ್ತದೆ. ಈ ಅವಧಿಯಲ್ಲಿ ನೀವು ಬಯಸಿದ ವರ್ಗಾವಣೆಯನ್ನು ಪಡೆಯಬಹುದು. ಹಣದ ವಿಷಯದಲ್ಲಿ ಈ ವಾರ ನಿಮಗೆ ತುಂಬಾ ಅದೃಷ್ಟದ ವಾರ ನಿಮ್ಮ ಹಣಕಾಸಿನ ಸಮಸ್ಯೆ ಬಗೆಹರಿಯಲಿದೆ. ವೈಯಕ್ತಿಕ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಕೊನೆಗೊಳ್ಳಲಿದೆ. ಈ ಸಮಯದಲ್ಲಿ ನೀವು ಉತ್ತಮ ಮನಸ್ಥಿತಿಯಲ್ಲಿ ಕಾಣುವಿರಿ. ಆರೋಗ್ಯದ ದೃಷ್ಟಿಯಿಂದ ಈ ವಾರ ಅನುಕೂಲಕರವಾಗಿರುತ್ತದೆ.

ಕುಂಭ ರಾಶಿ

ನೀವು ನಿರುದ್ಯೋಗಿಗಳಾಗಿದ್ದರೆ ಮತ್ತು ದೀರ್ಘಕಾಲದವರೆಗೆ ಉದ್ಯೋಗವನ್ನು ಹುಡುಕುತ್ತಿದ್ದರೆ, ಈ ವಾರವು ತುಂಬಾ ಉತ್ತಮವಾಗಿದೆ, ಈ ವಾರ ಒಳ್ಳೆಯ ಕೆಲಸ ಸಿಗಲಿದೆ. ಈ ಸಮಯದಲ್ಲಿ ನಿಮ್ಮ ಶ್ರಮವು ಫಲ ನೀಡಲಿದೆ. ಅವಾಹಿತರಿಗೆ ಮದುವೆ ಸಂಬಂಧ ಬರಬಹುದು. ಶೀಘ್ರದಲ್ಲೇ ನೀವು ಮದುವೆಯಾಗಬಹುದು. ಆರ್ಥಿಕ ಬಿಕ್ಕಟ್ಟನ್ನು ತಪ್ಪಿಸಲು, ನಿಮ್ಮ ಬಜೆಟ್ ಅನ್ನು ಮೀರಿ ಹೋಗದಂತೆ ಸಲಹೆ ನೀಡಲಾಗುವುದು, ಆರೋಗ್ಯ ಸಮಸ್ಯೆಯಿದ್ದರೆ ಸುಧಾರಣೆ ಕಾಣಬಹುದು.

ಈ ರಾಶಿಯವರು ಜಾಗ್ರತೆವಹಿಸಬೇಕು
ಮಿಥುನ ರಾಶಿ

ಈ ವಾರ ನಿಮಗೆ ಏರಿಳಿತಗಳಿಂದ ಕೂಡಿರಲಿದೆ. ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೆ ತುಂಬಾ ಜಾಗ್ರತೆವಹಿಸಬೇಕು. ವ್ಯಾಪಾರಿಗಳು ಈ ಅವಧಿಯಲ್ಲಿ ದೊಡ್ಡ ಹೂಡಿಕೆಗಳನ್ನು ಮಾಡಬೇಡಿ, ಮಾಡಿದರೆ ನಷ್ಟ ಉಂಟಾಗುವುದು. ನೀವು ಪಾಲುದಾರಿಕೆಯಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸಲಿದ್ದರೆ, ನಿಮ್ಮ ಹಾದಿಯಲ್ಲಿ ಕೆಲವು ಅಡಚಣೆಗಳು ಉಂಟಾಗಬಹುದು. ನೀವು ಪಾಲುದಾರಿಕೆಯಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸಲಿದ್ದರೆ, ನಿಮ್ಮ ಹಾದಿಯಲ್ಲಿ ಕೆಲವು ಅಡಚಣೆಗಳು ಉಂಟಾಗಬಹುದು.

ಸಿಂಹ ರಾಶಿ

ಸಂಬಂಧಗಳ ವಿಷಯದಲ್ಲಿ ಈ ವಾರ ಅಷ್ಟು ಚೆನ್ನಾಗಿರಲ್ಲ. ಪ್ರಣಯ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು. ನಿಮ್ಮ ಸಂಬಂಧದ ಬಗ್ಗೆ ನೀವು ಪ್ರಾಮಾಣಿಕವಾಗಿರಬೇಕು. ನೀವು ವಿವಾಹಿತರಾಗಿದ್ದರೆ, ನಿಮ್ಮ ವೈವಾಹಿಕ ಜೀವನದ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು. ಈ ಸಮಯದಲ್ಲಿ, ನೀವು ಭವಿಷ್ಯದ ಬಗ್ಗೆ ತುಂಬಾ ಚಿಂತಿತರಾಗುತ್ತೀರಿ. ಹಣದ ವಿಷಯದಲ್ಲಿ ಈ ವಾರ ನಿಮಗೆ ಸ್ವಲ್ಪ ದುಬಾರಿಯಾಗಲಿದೆ. ಆರೋಗ್ಯ ಸಮಸ್ಯೆಗಳಿರಬಹುದು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಈ ಅವಧಿಯಲ್ಲಿ ನಿಮ್ಮ ಆಯಾಸವು ಗಮನಾರ್ಹವಾಗಿ ಹೆಚ್ಚಾಗಬಹುದು.

ವೃಶ್ಚಿಕ ರಾಶಿ

ಸಂಬಂಧದಲ್ಲಿ ಅನ್ಯಗತ ಅಹಂನಿಂದಾಗಿ ಸಮಸ್ಯೆ ಹೆಚ್ಚಾಗುವುಉದ. ನೀವು ಅವಿವಾಹಿತರಾಗಿದ್ದರೆ, ಈ ಸಮಯದಲ್ಲಿ ನಿಮಗೆ ಮದುವೆಯ ಪ್ರಸ್ತಾಪವು ಬರಬಹುದು. ಆದರೆ ನಿರ್ಧಾರಗಳನ್ನು ತರಾತುರಿಯಲ್ಲಿ ತೆಗೆದುಕೊಳ್ಳಬೇಡಿ, ಸ್ವಲ್ಪ ಕಾಯುವುದು ಒಳ್ಳೆಯದು. ಹಣದ ವಿಷಯದಲ್ಲಿ ನೀವು ಸ್ವಲ್ಪ ಕಡಿಮೆ ಅದೃಷ್ಟವನ್ನು ಪಡೆಯುತ್ತೀರಿ. ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಪ್ರಯತ್ನಿಸುತ್ತಿದ್ದರೆ, ನಿಮ್ಮ ಪ್ರಯತ್ನಗಳು ವಿಫಲವಾಗಬಹುದು, ಉದ್ಯೋಗಿಗಳಿಗೆ ಕೆಲಸದ ಒತ್ತಡ ಅಧಿಕವಿರಲಿದೆ. ಡಾಕ್ಯೂಮೆಂಟ್ ವಿಷಯದಲ್ಲಿ ಜಾಗ್ರತೆವಹಿಸಿ.

ಮೀನ ರಾಶಿ

ಈ ವಾರ ನೀವು ನಿಮ್ಮ ಮಾತಿನ ಕಡೆಗೆ ಗಮನಹರಿಸಿ, ನಿಮ್ಮ ಮಾತೇ ದೊಡ್ಡ ಸಮಸ್ಯೆ ಉಂಟು ಮಾಡಬಹುದು. ವ್ಯಾಪಾರಿಗಳು ವ್ಯವಹಾರದಲ್ಲಿ ಅಡಚಣೆ ಎದುರಿಸಬಹುದು. ಉದ್ಯೋಗಿಗಳು ಕೆಲಸದಲ್ಲಿ ತಪ್ಪುಗಳಾಗದಂತೆ ಜಾಗ್ರತೆವಹಿಸಿ. ಹಣದ ವಿಷಯದಲ್ಲಿ ಈ ವಾರ ನಿಮಗೆ ಸರಾಸರಿಯಾಗಲಿದೆ. ನೀವು ಐಷಾರಾಮಿಗಳಿಗೆ ಅಗತ್ಯಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡಿದರೆ, ನಿಮ್ಮ ಸಮಸ್ಯೆಗಳು ಹೆಚ್ಚಾಗಬಹುದು. ಈ ಅವಧಿಯಲ್ಲಿ ಆರೋಗ್ಯ ದುರ್ಬಲವಾಗಿರುತ್ತದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Weekly Horoscope (February 11-17): Lucky And Unlucky Zodiac Signs

Weekly Horoscope (February 11-17): These lucky to 3 zodiac signs, these zodiac needs to be careful, read on...
Story first published: Sunday, February 11, 2024, 8:48 [IST]
X
Desktop Bottom Promotion