Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ವಾರ ಭವಿಷ್ಯ (ಡಿಸೆಂಬರ್8-15): ಜ್ಯೋತಿಷ್ಯ ಪ್ರಕಾರ ಈ ವಾರ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ವಾರದ ಭವಿಷ್ಯ ನೀಡಲಾಗಿದ್ದು ದ್ವಾದಶ ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ವೃತ್ತಿ ಜೀವನ: ಕೆಲಸದ ಒತ್ತಡ ಇರಲಿದೆ, ನೀವು ನಿಮಗೆ ವಹಿಸಿದ ಕೆಲಸವನ್ನು ಜವಾಬ್ದಾರಿಯಂದ ಮಾಡಿ ಮುಗಿಸಲು ಪ್ರಯತ್ನಿಸಬೇಕು, ಚಿಕ್ಕ ನಿರ್ಲಕ್ಷ್ಯ ಸಮಸ್ಯೆಯನ್ನುಂಟು ಮಾಡಬಹುದು.
ಆರ್ಥಿಕ ಜೀವನ: ಆರ್ಥಿಕವಾಗಿಯೂ ಈ ವಾರ ಅಷ್ಟೊಂದು ಅನುಕೂಲಕರವಲ್ಲ, ಹೂಡಿಕೆ ಮಾಡುವಾಗ ನೀವು ತುಂಬಾನೇ ಜಾಗ್ರತೆವಹಿಸಬೇಕು
ಆರೋಗ್ಯ: ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಲೇಬೇಡಿ.
ಕುಟುಂಬ ಜೀವನ: ಕುಟುಂಬ ಜೀವನದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿರಲಿದೆ

ವೃಷಭ ರಾಶಿ
ವೃತ್ತಿ ಜೀವನ: ವೃತ್ತಿ ಬದುಕಿನ ದೃಷ್ಟಿಯಿಂದ ಈ ವಾರ ನಿಮಗೆ ಅನುಕೂಲಕರವಾಗಿರರಿದೆ, ನಿಮ್ಮ ಯೋಜನೆಯಂತೆಯೇ ಕೆಲಸ ಕಾರ್ಯಗಳು ನಡೆಯಲಿದೆ.
ಆರ್ಥಿಕ ಜೀವನ: ಆರ್ಥಿಕವಾಗಿ ಈ ಅವಧಿ ಅನುಕೂಲಕರವಾಗಿದೆ, ವ್ಯಾಪಾರಿಗಳು ತಮ್ಮ ವ್ಯಾಪಾರದಲ್ಲಿ ಉತ್ತಮ ಆರ್ಥಿಕ ಲಾಭ ಪಡೆಯಬಹುದು.
ಕುಟುಂಬ ಜೀವನ: ಗ್ರಹಗತಿಗಳ ಸ್ಥಾನವು ಕುಟುಂಬ ಜೀವನಕ್ಕೂ ಅನುಕೂಲಕರವಾಗಿದೆ, ವೈವಾಹಿಕ ಬದುಕು ತುಂಬಾ ಚೆನ್ನಾಗಿರಲಿದೆ.
ಆರೋಗ್ಯ: ಈ ಅವಧಿಯಲ್ಲಿ ಆರೋಗ್ಯ ಕೂಡ ಚೆನ್ನಾಗಿರಲಿದೆ.
ಮಿಥುನ ರಾಶಿ
ವೃತ್ತಿ ಬದುಕು: ವೃತ್ತಿ ಜೀವನದಲ್ಲಿ ಆರಂಭದಲ್ಲಿ ಕೆಲ ಅಡೆತಡೆಗಳಿರಬಹುದು, ನೀವು ಕೆಲಸದ ಕಡೆಗೆ ಹೆಚ್ಚು ಗಮನಹರಿಸಿದರೆ ಒಳ್ಳೆಯದು
ಆರ್ಥಿಕ ಬದುಕು: ಆರ್ಥಿಕವಾಗಿಯೂ ಈ ವಾರ ನಿಮಗೆ ಮಿಶ್ರಫಲ, ಬಜೆಟ್ ಮೀರಿ ಖರ್ಚು ಮಾಡಬೇಡಿ, ಯಾವುದೇ ಹೂಡಿಕೆ ಮಾಡುವ ಮುನ್ನ ತುಂಬಾನೇ ಜಾಗ್ರತೆವಹಿಸಬೇಕು.
ಕುಟುಂಬ ಜೀವನ: ಸಂಗಾತಿ ಹಾಗೂ ನಿಮ್ಮ ನಡುವೆ ಕೆಲ ಭಿನ್ನಾಭಿಪ್ರಾಯಗಳಿರಬಹುದು, ಹೊಂದಾಣಿಕೆ ಮಾಡಿಕೊಳ್ಳುವುದು ಮನೆಯ ನೆಮ್ಮದಿಗೆ ಅವಶ್ಯಕವಾಗಿದೆ
ಆರೋಗ್ಯ: ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
ಕರ್ಕ ರಾಶಿ
ವೃತ್ತಿ ಬದುಕು: ಈ ವಾರ ನಿಮಗೆ ಅನುಕೂಲಕರವಾಗಿದೆ, ಕೆಲಸದಲ್ಲಿ ಯಶಸ್ಸು ದೊರೆಯಲಿದೆ.
ಆರ್ಥಿಕ ಜೀವನ: ಈ ವಾರ ನಿಮಗೆ ತುಂಬಾನೇ ಅನುಕೂಲಕರವಾಗಿದೆ, ವ್ಯಾಪಾರಿಗಳಿಗೆ ಈ ಅವಧಿ ಉತ್ತಮವಾಗಿರಲಿದೆ. ಈ ವಾರ ಮಾಡುವ ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು.
ಆರೋಗ್ಯ ಜೀವನ ಚೆನ್ನಾಗಿರಲಿದೆ.
ಕುಟುಂಬ ಜೀವನ: ಕುಟುಂಬ ಜೀವನ ಚೆನ್ನಾಗಿರಲಿದೆ.
ಸಿಂಹ ರಾಶಿ
ವೃತ್ತಿ ಬದುಕು: ಕೆಲಸದಲ್ಲಿ ನಿರ್ಲಕ್ಷ್ಯ ಮಾಡಿದರೆ ಸಮಸ್ಯೆ ಹೆಚ್ಚಾಗುವುದು. ನಿಮಗೆ ವಹಿಸಿರುವ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಿ.
ಆರ್ಥಿಕ ಜೀವನ: ಹಣಕಾಸಿನ ದೃಷ್ಟಿಯಿಂದ ಈ ಅವಧಿ ಅನುಕೂಲಕರವಲ್ಲ, ಖರ್ಚು ಹೆಚ್ಚಿರಲಿದೆ, ಈ ವಾರ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಬಹುದು.
ಕುಟುಂಬ ಜೀವನ: ಕುಟುಂಬ ಜೀವನದ ದೃಷ್ಟಿಯಿಂದಲೂ ಈ ಅವಧಿ ಅನುಕೂಲಕರವಲ್ಲ, ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಬಹುದು. ಏನೇ ಸಮಸ್ಯೆ ಉಂಟಾದರೂ ಸಮಧಾನದಿಂದ ವರ್ತಿಸಿ ಎಂದು ಸಲಹೆ ನೀಡಲಾಗುವುದು.
ಆರೋಗ್ಯ: ಆರೋಗ್ಯದ ಬಗ್ಗೆ ಹೇಳುವುದಾದರೆ ಮಾನಸಿಕ ಒತ್ತಡ ಇರಲಿದೆ.
ಕನ್ಯಾ ರಾಶಿ
ವೃತ್ತಿ ಬದುಕು: ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ, ನಿಮ್ಮ ಕೆಲಸ ಕಾರ್ಯಗಳಿಗೆ ಉತ್ತಮ ಫಲ ಸಿಗಲಿದೆ.
ಹಣಕಾಸು: ಹಣಕಾಸಿನ ದೃಷ್ಟಿಯಿಂದಲೂ ಈ ಅವಧಿ ಅನುಕೂಲಕರವಾಗಿದೆ, ಕೆಲಸಗಳು ಸಮಯಕ್ಕೆ ಪೂರ್ಣವಾಗುವುದರಿಂದ ಲಾಭವಾಗಲಿದೆ, ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ.
ಆರ್ಥಿಕವಾಗಿ ಸವಾಲುಗಳು ಬರಬಹುದು, ಆದರೆ ದೊಡ್ಡ ಚಿಂತೆಯಿಲ್ಲ ನಿಭಾಯಿಸಿಕೊಂಡುಹೋಗಲು ಸಾಧ್ಯವಾಗುವುದು.
ಕುಟುಂಬ ಜೀವನದ ದೃಷ್ಟಿಯಿಂದ ನೋಡುವುದಾದರೆ ಅನುಕೂಲಕರವಾಗಿದೆ.
ತುಲಾ ರಾಶಿ
ವೃತ್ತಿ ಬದುಕು: ವೃತ್ತಿ ಜೀವನದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿರಲಿದೆ, ಆದರೆ ಕೆಲಸದ ಒತ್ತಡ ಹೆಚ್ಚಿರಲಿದೆ, ಯೋಜಿತ ರೀತಿಯಲ್ಲಿ ಕೆಲಸ ಕಾರ್ಯ ಮಾಡಿ ಮುಗಿಸಿದರೆ ಒಳ್ಳೆಯದು.
ಹಣಕಾಸು: ಹಣಕಾಸಿನ ದೃಷ್ಟಿಯಿಂದ ಈ ಅವಧಿ ನಿಮಗೆ ಉತ್ತಮವಾಗಿರಲಿದೆ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ.
ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ
ಆರೋಗ್ಯದ ದೃಷ್ಟಿಯಿಂದ ಈ ವಾರ ಚೆನ್ನಾಗಿರಲಿದೆ.
ವೃಶ್ಚಿಕ ರಾಶಿ
ವೃತ್ತಿ ಬದುಕು: ಈ ವಾರ ನಿಮಗೆ ಅನುಕೂಲಕರವಾಗಿರಲಿದೆ, ಯೋಜಿತ ರೀತಿಯಲ್ಲಿಯೇ ಕೆಲಸ ಕಾರ್ಯವನ್ನು ಮಾಡಿ ಮುಗಿಸಲು ಸಾಧ್ಯವಾಗುವುದು. ಅಲ್ಲದೆ ಕೆಲಸದಲ್ಲಿ ನೀವು ಊಹಿಸಿದಂತೆಯೇ ಫಲಿತಾಂಶ ದೊರೆಯಲಿದೆ.
ಆರ್ಥಿಕ ಜೀವನ: ಆರ್ಥಿಕವಾಗಿಯೂ ಈ ವಾರ ತುಂಬಾನೇ ಉತ್ತಮವಾಗಿದೆ. ಹೂಡಿಕೆಯಿಂದ ಲಾಭ ಗಳಿಸಲು ಸಾಧ್ಯವಾಗುವುದು.
ಆರೋಗ್ಯ ಚೆನ್ನಾಗಿರಲಿದೆ, ಕುಟುಂಬ ಜೀವನದ ದೃಷ್ಟಿಯಿಂದಲೂ ಈ ಅವಧಿ ಉತ್ತಮವಾಗಿದೆ.
ಧನು ರಾಶಿ
ವೃತ್ತಿ ಬದುಕು: ವಾರ ಆರಂಭದ ದಿನಗಳಲ್ಲಿ ಕೆಲಸದಲ್ಲಿ ಕೆಲ ಸವಾಲುಗಳನ್ನು ಎದುರಿಸಬಹುದು, ಧನಾತ್ಮಕವಾಗಿ ಯೋಚಿಸಿ
ಹಣಕಾಸು: ಆರ್ಥಿಕವಾಗಿ ಈ ಅವಧಿ ಉತ್ತಮವಾಗಿರಲಿದೆ. ವ್ಯಾಪಾರಿಗಳಿಗೆ ಧನಾತ್ಮಕವಾಗಿರಲಿದೆ.
ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಏನಾದರು ಭಿನ್ನಾಭಿಪ್ರಾಯ ಉಂಟಾಗಿದ್ದರೆ ಎಲ್ಲವೂ ಸರಿಯಾಗಲಿದೆ.
ಆರೋಗ್ಯದ ದೃಷ್ಟಿಯಿಂದಲೂ ಈ ಅವಧಿ ನಿಮಗೆ ಉತ್ತಮವಾಗಿದೆ.
ಮಕರ ರಾಶಿ
ವೃತ್ತಿ ಬದುಕು: ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ. ಹೊಸ ಕೆಲಸ ಪ್ರಾರಂಭಿಸಲು ಯೋಚಿಸುತ್ತಿದ್ದರೆ ಅದಕ್ಕೆ ಈ ಅವಧಿ ತುಂಬಾನೇ ಅನುಕೂಲಕರವಾಗಿದೆ. ಹೂಡಿಕೆಗೆ ಈ ಸಮಯ ನಿಮಗೆ ಅನುಕೂಲಕರವಾಗಿದೆ.
ಆರ್ಥಿಕವಾಗಿಯೂ ಈ ಅವಧಿ ನಮಗೆ ಪ್ರಯೋಜನಕಾರಿಯಾಗಿದೆ
ಕುಟುಂಬ ಜೀವನ: ಕುಟುಂಬದ ಸೌಕರ್ಯಕ್ಕಾಗಿ ಖರ್ಚು ಹೆಚ್ಚಾಗಲಿದೆ.
ಆರೋಗ್ಯದ ದೃಷ್ಟಿಯಿಂದ ಈಅವಧಿ ಅನುಕೂಲಕರವಾಗಿದೆ.
ಕುಂಭ ರಾಶಿ
ವೃತ್ತಿ ಬದುಕು: ವೃತ್ತಿ ಬದುಕಿನ ದೃಷ್ಟಿಯಿಂದ ನೋಡುವುದಾದರೆ ಈ ವಾರ ನಿಮಗೆ ಅನುಕೂಲಕರವಾಗಿದೆ. ಬೇರೆ ಕಡೆ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದರೆ ಈ ಅವಧಿ ಅನುಕೂಲಕರವಾಗಿದೆ.
ಹಣಕಾಸು: ಆರ್ಥಿಕವಾಗಿ ಈ ಅವಧಿ ಅನುಕೂಲಕರವಾಗಿದೆ. ಆದರೆ ಖರ್ಚು ನಿಯಂತ್ರಿಸುವುದು ಒಳ್ಳೆಯದು.
ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದಲೂ ಈ ಅವಧಿ ಅನುಕೂಲಕರವಾಗಿದೆ.
ಮೀನ ರಾಶಿ
ವೃತ್ತಿ ಬದುಕು: ವೃತ್ತಿ ಬದುಕಿನಲ್ಲಿ ಕೆಲ ಸವಾಲುಗಳು ಬರಬಹುದು, ಯಾವುದೇ ಆತುರದ ನಿರ್ಧಾರಕ್ಕೆ ಬರಬೇಡಿ.
ಹಣಕಾಸು: ಆರ್ಥಿಕವಾಗಿ ಈ ಸಮಯ ನಿಮಗೆ ಅನುಕೂಲಕರವಾಗಿದೆ, ಆದರೆ ವಾರದ ಕೊನೆಯಲ್ಲಿ ಖರ್ಚು ಬರಬಹುದು, ಬಜೆಟ್ ಮೀರಿ ಖರ್ಚು ಮಾಡಲು ಹೋಗಬೇಡಿ
ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
