Latest Updates
-
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ?
ವಾರ ಭವಿಷ್ಯ: ಡಿಸೆಂಬರ್ 15-21ರವರೆಗಿನ ವಾರ ರಾಶಿಫಲ ಪ್ರಕಾರ ಯಾವ ರಾಶಿಗೆ ಹೇಗಿದೆ?
ಗ್ರಹಗತಿಗಳ ಸ್ಥಾನದ ಪ್ರಕಾರ ಈ ವಾರದ ಭವಿಷ್ಯ ನೀಡಲಾಗಿದ್ದು ಈ ವಾರ ಯಾವ ರಾಶಿಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:
ಮೇಷ ರಾಶಿ
ಈ ವಾರದ ಆರಂಭದಲ್ಲಿ ನಿಮಗೆ ತುಂಬಾನೇ ಕೆಲಸ ಕಾರ್ಯಗಳಿರುತ್ತದೆ. ಆದರೆ ಯಾವುದೇ ಕೆಲಸವನ್ನು ಬಾಕಿಯುಳಿಸಬೇಡಿ, ಹೆಚ್ಚು ಶ್ರಮ ಹಾಕಿ ಪೂರ್ಣಗೊಳಿಸಿ. ನಿಮ್ಮ ಕೆಲಸ ಪೂರ್ನವಾಗಿಸಲು ಸಹೋದ್ಯೋಗಿಗಳ ಬೆಂಬಲ ಕೂಡ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಈ ವಾರ ಅಷ್ಟೊಂದು ಅನುಕೂಲಕರವಲ್ಲ, ಖರ್ಚು ಹೆಚ್ಚಿರಲಿದೆ, ಸಾಲ ತೆಗೆದುಕೊಳ್ಳಬೇಕಾಗಬಹುದು. ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ಚೆನ್ನಾಗಿರಲಿದೆ.

ವೃಷಭ ರಾಶಿ
ವಾರದ ಆರಂಭ ಅಷ್ಟೊಂದು ಅನುಕೂಲಕರವಲ್ಲ, ಆದರೆ ಕ್ರಮೇಣ ಎಲ್ಲವೂ ಸರಿಯಾಗಲಿದೆ, ಪ್ರತಿಕೂಲ ಸಂದರ್ಭದಲ್ಲಿ ಮನೆಯವ ಬೆಂಬಲ ಸಿಗಲಿದೆ, ಬೇರೆಯವರು ನಿಮಗೆ ತೊಂದರೆ ಕೊಡಲು ಪ್ರಯತ್ನಿಸಬಹುದು. ಆರ್ಥಿಕವಾಗಿ ನೋಡುವುದಾದರೆ ಈ ವಾರ ತುಂಬಾನೇ ಚೆನ್ನಾಗಿರಲಿದೆ. ವಾರದ ಕೊನೆಯಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.
ಮಿಥುನ ರಾಶಿ
ಈ ವಾರದ ಆರಂಭದ ಎರಡು ದಿನಗಳು ನಿಮಗೆ ಅಷ್ಟೊಂದು ಅನುಕೂಲಕರವಲ್ಲ, ಆದರೆ ನಂತರ ಎಲ್ಲವೂ ಸರಿಯಾಗಲಿದೆ. ವೃತ್ತಿಯಲ್ಲಿ ಕೆಲವು ಸವಾಲು ಎದುರಾಗಬಹುದು. ಆರ್ಥಿಕವಾಗಿ ಈ ಸಮಯ ಅನುಕೂಲಕರವಲ್ಲ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ.
ಕರ್ಕ ರಾಶಿ
ಈ ವಾರ ನಿಮಗೆ ಶುಭವಾಗಿದೆ, ನಿಮ್ಮ ಕೆಲಸಕ್ಕೆ ಉತ್ತಮ ಪ್ರಶಂಸೆ ದೊರೆಯಲಿದೆ. ವೃತ್ತಿ ಬದುಕಿನಲ್ಲಿ ನೀವು ಉತ್ತಮ ಅವಕಾಶ ದೊರೆಯಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ವೈವಾಹಿಕ ಬದುಕು ತುಂಬಾ ಚೆನ್ನಾಗಿರಲಿದೆ. ಬಜೆಟ್ ಮೀರಿ ಖರ್ಚು ಮಾಡಬೇಡಿ, ಹಣವನ್ನು ಉಳಿತಾಯ ಮಾಡಲು ಪ್ರಯತ್ನಿಸಿ. ನಿಮ್ಮ ಕುಟುಂಂಬ ಜೀವನ ಚೆನ್ನಾಗಿರಲಿದೆ.
ಸಿಂಹ ರಾಶಿ
ಈ ಅವಧಿ ನಿಮಗೆ ತುಂಬಾ ಚೆನ್ನಾಗಿರಲಿದೆ. ಹಲವು ಕೆಲಸವನ್ನು ಒಂದೇ ಸಮಯದಲ್ಲಿ ಮಾಡಬೇಕಾಗುತ್ತದೆ. ಆರ್ಥಿಕವಾಗಿ ಈ ಅವಧಿ ಅನುಕೂಲಕರವಾಗಿರಲಿದೆ. ಆಸ್ತಿ ಸಂಬಂಧಿಸಿದ ಸಮಸ್ಯೆ ಬಗೆಹರಿಯಲಿದೆ.ವಾರದ ಕೊನೆಯಲ್ಲಿ ನಸ್ಸಿನಲ್ಲಿ ಹಲವು ಗೊಂದಲಗಳು ಉಂಟಾಗಬಹುದು.
ಕನ್ಯಾ ರಾಶಿ
ಆರ್ಥಿಕವಾಗಿ ಈ ಅವಧಿ ಅನುಕೂಲಕರವಾಗಿದೆ. ಆರ್ಥಿಕವಾಗಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ಈ ವಾರ ಪೂರ್ತಿ ತುಂಬಾ ಸಂತೋಷದಿಂದ ಕಳೆಯಲು ಸಾಧ್ಯವಾಗುವುದು. ಆಸ್ತಿ ಸಂಬಂಧಿಸಿದ ವ್ಯವಹಾರಕ್ಕೆ ಈ ಅವಧಿ ಅನುಕೂಲಕರವಾಗಿದೆ. ವಾಹನ ಖರೀದಿಗೆ ಈ ಅವಧಿ ಅನುಕೂಲಕರವಾಗಿದೆ.
ತುಲಾ ರಾಶಿ
ಈ ವಾರ ಆರ್ಥಿಕವಾಗಿ ಅಷ್ಟಿಂದು ಅನುಕೂಲಕರವಲ್ಲ, ಹಣದ ಸಮಸ್ಯೆ ಮಾನಸಿಕ ಒತ್ತಡ ಹೆಚ್ಚಿಸಲಿದೆ. ನಿಮ್ಮ ಮನೆಯವರ ಜೊತೆಗೆ ಕೆಲ ಭಿನ್ನಾಭಿಪ್ರಾಯ ಉಂಟಾಗಿದೆ. ವಾರಾಂತ್ಯವು ನಿಮಗೆ ಅನುಕೂಲಕರವಾಗಿರಲಿದೆ. ಅನಗ್ಯತ ವಿವಾದಗಳ ಕಡೆ ಗಮನಹರಿಸಬೇಡಿ.
ವೃಶ್ಚಿಕ ರಾಶಿ
ಈ ವಾರ ನಿಮಗೆ ಅನುಕೂಲಕರವಾಗಿದೆ, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಬರಲಿದೆ. ನಿಮ್ಮ ಕೆಲಸ ಕಾರ್ಯವು ನಿಮ್ಮ ಯೋಜನೆಯಂತೆಯೇ ಪೂರ್ಣಗೊಳ್ಳಲಿದೆ, ಕೆಲವೊಂದು ಧಾರ್ಮಿಕ ಕಾರ್ಯಗಳ ಕಡೆ ಕೂಡ ಗಮನಹರಿಸಬಹುದು.
ಧನು ರಾಶಿ
ಈ ವಾರ ಕೆಲಸದ ಒತ್ತಡ ಅಧಿಕವಿರಲಿದೆ, ಅದೃಷ್ಟದ ಬೆಂಬಲ ನಿಮಗೆ ಇರುವುದರಿಂದ ನಿಮ್ಮ ಕೆಲಸ ಕಾರ್ಯವು ಉತ್ತಮವಾಗಿ ನಡೆಯಲಿದೆ. ಆರ್ಥಿಕವಾಗಿಯೂ ಈ ದಿನ ನಿಮಗೆ ಅನುಕೂಲಕರವಾಗಿದೆ. ಯಾವುದಾದರು ಪ್ರಮುಖ ದಾಖಲೆಗಳಿದ್ದರೆ ಅದನ್ನು ಜೋಪಾನ ಮಾಡಿ, ಅನಗ್ಯತ ವಿವಾದಗಳಿಗೆ ಸಿಲುಕದಂತೆ ಜಾಗ್ರತೆವಹಿಸಿ.
ಮಕರ ರಾಶಿ
ಈ ವಾರ ನಿಮಗೆ ಅನುಕೂಲಕರವಾಗಿರಲಿದೆ. ಮನೆಯ ವಾತಾವರಣ ತುಂಬಾ ಚೆನ್ನಾಗಿರಲಿದೆ. ಆರ್ಥಿಕವಾಗಿ ಈ ಅವಧಿ ತುಂಬಾ ಚೆನ್ನಾಗಿರಲಿದೆ, ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಕೆಲಸ ಕಾರ್ಯಗಳು ನಿಮ್ಮ ಯೋಜನೆಯಂತೆಯೇ ಪೂರ್ಣವಾಗುವುದರಿಂದ ಆತ್ಮವಿಶ್ವಾಸ ಹೆಚ್ಚಾಗಲಿದೆ.
ಕುಂಭ ರಾಶಿ
ವಾರದ ಆರಂಭ ಅಷ್ಟೊಂದು ಅನುಕೂಲಕರವಲ್ಲ, ಆರ್ಥಿಕವಾಗಿಯೂ ಕೆಲ ಸವಾಲುಗಳು ಎದುರಾಗಬಹುದು, ಆದರೆ ನಂತರದ ದಿನಗಳು ಉತ್ತಮವಾಗಿರಲಿದೆ. ವೃತ್ತಿ ಬದುಕಿನಲ್ಲಿ ನಿಮಗೆ ಉತ್ತಮ ಅವಕಾಶ ದೊರೆಯಲಿದೆ. ಕುಟುಂಬದ ಜೊತೆ ಸಂತೋಷವಾಗಿರುತ್ತೀರಿ.
ಮೀನ ರಾಶಿ
ಈ ಹಿಂದೆ ಮಾಡಿದ ಕಠಿಣ ಶ್ರಮಕ್ಕೆ ಈ ವಾರ ಉತ್ತಮ ಫಲಿತಾಂಶ ದೊರೆಯಲಿದೆ, ಆರ್ಥಿಕವಾಗಿ ಅನುಕೂಲಕರವಾಗಿದೆ, ಆದರೆ ನೀವು ನಿಮ್ಮ ಖರ್ಚುಗಳ ಕಡೆಗೆ ಗಮನಹರಿಸಬೇಕು,ವಾರದ ಕೊನೆ ನಿಮಗೆ ತುಂಬಾ ಚೆನ್ನಾಗಿರಲಿದೆ, ಸಂತೋಷದಿಂದ ಸಮಯ ಕಳೆಯಲು ಸಾಧ್ಯವಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications












