Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಈ ವಾರ ಈ 5 ರಾಶಿಯವರು ಖರ್ಚು ಬಗ್ಗೆ ಗಮನಹರಿಸಿದರೆ ಒಳ್ಳೆಯದು
ಈ ವಾರದ ರಾಶಿಫಲ ಪ್ರಕಾರ ಈ ವಾರ 5 ರಾಶಿಯವರು ಆರ್ಥಿಕವಾಗಿ ಜಾಗ್ರತೆವಹಿಸಬೇಕು, ಕೆಲಸ ಕಾರ್ಯದಲ್ಲಿ ಹೆಚ್ಚಿನ ಗಮನಹರಿಸಿದರೆ ಒಳ್ಳೆಯದು. ಈ ವಾರ ಯಾವೆಲ್ಲಾ ರಾಶಿಗಳಿಗೆ ಅಷ್ಟೊಂದು ಅನುಕೂಲಕರವಲ್ಲ ಎಂದು ನೋಡುವುದಾದರೆ...

ಮೇಷ ರಾಶಿ
ವಾರದ ಪ್ರಾರಂಭದಲ್ಲಿ ಹಣಕಾಸು ವಿಚಾರದಲ್ಲಿ ತುಂಬಾನೇ ಜಾಗ್ರತೆವಹಿಸಬೇಕು, ಅದರಲ್ಲಿಯೂ ಯಾರದೋ ಮಾತು ಕೇಳಿ ಹೂಡಿಕೆ ಮಾಡಲು ಹೋಗಬೇಡಿ, ವಾರದ ಆರಂಭ ಅಷ್ಟು ಅನುಕೂಲಕರವಲ್ಲ ಆದರ ನಂತರ ದಿನಗಳು ಉತ್ತಮವಾಗಿರಲಿದೆ. ಆಸ್ತಿ ಸಂಬಂಧಿಸಿದ ಕಾರ್ಯಗಳಿಗೆ ಈ ವಾರ ಅನುಕೂಲಕರವಾಗಿದೆ. ವೃತ್ತಿ ಜೀವನದ ಬಗ್ಗೆ ನೋಡುವುದಾದರೆ ಕೆಲಸದ ಒತ್ತಡ ಇರಲಿದೆ. ವೈವಾಹಿಕ ಬದುಕಿನ ದೃಷ್ಟಿಯಿಂದ ಈ ವಾರ ಉತ್ತಮವಾಗಿರಲಿದೆ.
ಮಿಥುನ ರಾಶಿ
ಈ ವಾರ ಆರ್ಥಿಕವಾಗಿ ಕೆಲ ಸವಾಲುಗಳು ಎದುರಾಗಬಹುದು. ಕೆಲಸಕಾರ್ಯಗಳಲ್ಲಿ ಅಡೆತಡೆಗಳು ಎದುರಾಗಬಹುದು, ವಾರದ ಮಧ್ಯದ ನಂತರ ನಿಮ್ಮ ಆರ್ಥಿಕ ಪ್ರಯತ್ನಗಳಿಗೆ ಉತ್ತಮ ಫಲ ಸಿಗಲಿದೆ. ಆರಂಭದಲ್ಲಿ ಕೆಲಸದಲ್ಲಿದ್ದ ಅಡೆತಡೆಗಳು ದೂರಾಗಲಿದೆ, ಹಣಕಾಸಿನ ವಿಷಯದಲ್ಲಿ ಈ ವಾರ ಜಾಗ್ರತೆವಹಿಸಿದರೆ ಒಳ್ಳೆಯದು. ಕುಟುಂಬದಲ್ಲಿಯೂ ಚಿಕ್ಕ ವಿಷಯಕ್ಕೆ ಭಿನ್ನಾಭಿಪ್ರಾಯ ಉಂಟಾಗಬಹುದು.
ಸಿಂಹ ರಾಶಿ
ಈ ವಾರ ಹಣಕಾಸಿನ ದೃಷ್ಟಿಯಿಂದ ನಿಮಗೆ ಅಷ್ಟೊಂದು ಅನುಕೂಲಕರವಲ್ಲ, ಖರ್ಚುಗಳು ಹೆಚ್ಚಿರಲಿದೆ, ಅನಗ್ಯತ ಖರ್ಚುಗಳು ಬರಬಹುದು. ಕೆಲಸದಲ್ಲಿನ ನಿರ್ಲಕ್ಷ್ಯ ಸಮಸ್ಯೆ ಹೆಚ್ಚಿಸಬಹುದು, ಕುಟುಂಬ ಜೀವನದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯ ಉಂಟಾದರೆ ಸಮಸ್ಯೆ ಹೆಚ್ಚಾಗಲು ಬಿಡಬೇಡಿ. ಗುರುವಾರ ಮತ್ತು ಶುಕ್ರವಾರ ಸ್ವಲ್ಪ ಹೆಚ್ಚು ಜಾಗ್ರತೆವಹಿಸಿ.
ಕನ್ಯಾ ರಾಶಿ
ಈ ವಾರದ ಆರಂಭ ನಿಮಗೆ ತುಂಬಾ ಚೆನ್ನಾ ಗಿರಲಿದೆ, ನಿಮ್ಮ ಕೆಲಸ ಕಾರ್ಯಗಳಿಗೆ ಉತ್ತಮ ಫಲ ಸಿಗಲಿದೆ, ನಿಮ್ಮ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುವುದು. ಖರ್ಚುಗಳು ಬರಬಹುದು, ಆದರೆ ಆರ್ಥಿಕ ಸಮಸ್ಯೆ ಉಂಟಾಗದಂತೆ ನಿಭಾಯಿಸಿಕೊಂಡು ಹೋಗಲು ಸಾಧ್ಯವಾಗುವುದು. ವಿರೋಧಿಗಳ ಬಗ್ಗೆ ಜಾಗ್ರತೆವಹಿಸಿ.
ಮೀನ ರಾಶಿ
ಗೊಂದಲವಿದ್ದಾಗ ಯಾವುದೇ ನಿರ್ದಾರಕ್ಕೆ ಬರಬೇಡಿ ಎಂದು ಸಲಹೆ ನೀಡಲಾಗುವುದು. ಆರ್ಥಿಕವಾಗಿ ಈ ಅವಧಿ ನಿಮಗೆ ಉತ್ತಮವಾಗಿರಲಿದೆ. ನಿಮಗೆ ಕುಟುಂಬದ ಬೆಂಬಲ ಇರಲಿದೆ. ವಾರಾಂತ್ಯದಲ್ಲಿ ಖರ್ಚು ಬಗ್ಗೆ ಗಮನಹರಿಸಿ, ಬಜೆಟ್ ಮೀರಿ ಖರ್ಚು ಮಾಡಲು ಹೋಗಬೇಡಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











