Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಾರ ಆರೋಗ್ಯ ರಾಶಿಫಲ: (ಜುಲೈ 14ರಿಂದ ಜುಲೈ 21) ರಾಶಿಗಳ ಆರೋಗ್ಯ ಭವಿಷ್ಯ
ಗ್ರಹಗತಿಗಳ ಸ್ಥಾನವು ಈ ವಾರ ಜನರ ಆರೋಗ್ಯದ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ? ಯಾವ ರಾಶಿಗಳಿಗೆ ಯಾವ ರೀತಿಯ ಫಲ ನೀಡಲಿದೆ ಎಂದು ನೋಡೋಣ ಬನ್ನಿ:
ಮೇಷ ರಾಶಿ
ಈ ವಾರ ನಿಮಗೆ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ, ನೀವು ದೈಹಿಕವಾಗಿ ಸದೃಢರಾಗಿರುತ್ತೀರಿ ಮತ್ತು ನಿಮ್ಮ ಮಾನಸಿಕ ಶಾಂತಿ ನೆಲೆಸಲಿದೆ. ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗುತ್ತದೆ ಮತ್ತು ನೀವು ಧನಾತ್ಮಕ ಶಕ್ತಿಯಿಂದ ನೀವಂದುಕೊಂಡ ಕೆಲಸ ನೆರವೇರಲಿದೆ.

ವೃಷಭ ರಾಶಿ
ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸುವುದು ನಿಮಗೆ ಖರ್ಚಿನ ದಾರಿಗೆ ಕಾರಣವಾಗಲಿದೆ. ಮನೆಯಲ್ಲಿ ಹಿರಿಯರು ಇದ್ದರೆ ಅವರ ಆರೋಗ್ಯದ ಮೇಲೆ ಗಮನವಿಡಿ. ಸರಿಯಾದ ಸಮಯಕ್ಕೆ ವೈದ್ಯರ ಭೇಟಿ ಮಾಡುವುದು ಮುಂದುವರೆಸಿ. ಮಧು ಮೇಹಿಗಳಿಗೆ ಸಮಾಧಾನದ ವಿಚಾರ ಕಾದಿದೆ.
ಮಿಥುನ ರಾಶಿ
ನಿಮ್ಮ ಆರೋಗ್ಯದ ಬಗ್ಗೆ ನೀವು ಬಹಳ ಜಾಗೃತರಾಗಿರುತ್ತೀರಿ ಮತ್ತು ಅದರಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಫಿಟ್‌ನೆಸ್ ಬಗ್ಗೆ ಗಮನವಿಡಿ. ಹೆಚ್ಚು ಸಮಯ ಕಲಸ ಮಾಡಿ ದಣಿಯಬಹುದು. ವಿಶ್ರಾಂತಿಯ ಅಗತ್ಯವಿದೆ. ದೂರ ಪ್ರಯಾಣದಿಂದ ಆಯಾಸ ಸಂಭವ.
ಕರ್ಕ ರಾಶಿ
ನೀವು ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸದಿದ್ದರೆ, ಅದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಹೊಟ್ಟೆ ಸಂಬಂಧಿ ಸಮಸ್ಯೆ ಇರುವವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿದ್ರಾಹೀನತೆಯಿಂದ ಬಳಲುವ ಸಂಭವ ಹೆಚ್ಚಿದೆ.
ಸಿಂಹ ರಾಶಿ
ಈ ವಾರ ಆರೋಗ್ಯದಲ್ಲಿ ಬಹಳ ಉತ್ತಮ ಬೆಳವಣಿಗೆ ಕಾಣಲಿದೆ. ಸೊಂಟ ನೋವು, ಕೀಲು ನೋವು, ವಾತ ಸಂಬಂಧಿ ಸಮಸ್ಯೆ ಇದ್ದವರಿಗೆ ಆರೋಗ್ಯ ಸುಧಾರಣೆಯಾಗಲಿದೆ. ಯಾವುದಾದರು ಅನಾರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರೆ ತಪ್ಪದೆ ಅದನ್ನು ಪಾಲಿಸಿ.
ಕನ್ಯಾ ರಾಶಿ
ಕೆಲವೊಮ್ಮೆ ಸಣ್ಣ ಸಮಸ್ಯೆಗಳು ಕೂಡ ಅತಿಯಾಗಿ ಯೋಚಿಸುವುದರಿಂದ ದೊಡ್ಡದಾಗುತ್ತವೆ. ಜೀವನದ ಏರಿಳಿತಗಳನ್ನು ಧೈರ್ಯದಿಂದ ಎದುರಿಸಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದು ಉತ್ತಮ. ಹೃದಯ ಸಂಬಂಧಿ ಸಮಸ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.
ತುಲಾ ರಾಶಿ
ಒತ್ತಡ ಮತ್ತು ಖಿನ್ನತೆಯು ನಿಮ್ಮನ್ನು ಮೀರಿಸಲು ಬಿಡಬೇಡಿ, ಬದಲಿಗೆ ಧನಾತ್ಮಕವಾಗಿರಿ ಮತ್ತು ಕಷ್ಟಪಟ್ಟು ಕೆಲಸ ಮಾಡಿ, ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಆಶಾವಾದಿ ಆಲೋಚನೆಗಳನ್ನು ಹೊಂದಿರುವ ಜನರೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ.
ವೃಶ್ಚಿಕ ರಾಶಿ
ಈ ವಾರ ನಿಮಗೆ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ. ಎಲ್ಲಾ ದೃಷ್ಟಿಯಲ್ಲೂ ನಿಮಗೆ ಉತ್ತಮ ಆರೋಗ್ಯ ಪ್ರಾಪ್ತಿಯಾಗಲಿದೆ. ಕೆಲಸದ ಒತ್ತಡದಿಂದ ನಿಮಗೆ ವಿರಾಮ ಸಿಗಲಿದೆ. ಇದರಿಂದ ಮಾನಸಿಕ ನೆಮ್ಮದಿ ಸಾಧ್ಯವಾಗಲಿದೆ. ವಾರದ ಕೊನೆಯಲ್ಲಿ ಆರೋಗ್ಯ ಮತ್ತಷ್ಟು ಸುಧಾರಿಸಲಿದೆ.
ಧನು ರಾಶಿ
ಊಟ-ತಿಂಡಿಗೆ ಸಂಬಂಧಿಸಿದ ಸಮಸ್ಯೆಗೆ ಒಳಗಾಗಬಹುದು. ಅದರೆ ಹೊಟ್ಟೆ ನೋವು, ವಾಂತಿ ಸಮಸ್ಯೆ ಎದುರಾಗಬಹುದು. ವಾಹನ ಮಾಲೀಕರು ಈ ವಾರ ಎಚ್ಚರದಿಂದಿರಬೇಕು. ವೈದ್ಯರ ಸಲಹೆಯನ್ನು ನಿರ್ಲಕ್ಷಿಸಬೇಡಿ.
ಮಕರ ರಾಶಿ
ನಿಮ್ಮ ಮೇಲೆ ಹೆಚ್ಚು ಕೆಲಸದ ಒತ್ತಡ ಬರಬಹುದು. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ. ಇದು ನಿಮ್ಮ ಮಾನಸಿಕ ಆರೋಗ್ಯವನ್ನು ಉತ್ತಮವಾಗಿಡುತ್ತದೆ ಮತ್ತು ನೀವು ದೈಹಿಕವಾಗಿಯೂ ಉತ್ತಮವಾಗುತ್ತೀರಿ.
ಕುಂಭ ರಾಶಿ
ಈ ವಾರ ನಿಮ್ಮಲ್ಲಿ ತಲೆನೋವು, ಆಯಾಸ, ನಿದ್ರಾಹೀನತೆ ಮುಂತಾದ ಹಲವು ಸಮಸ್ಯೆಗಳು ಬರಬಹುದು. ಸಾಕಷ್ಟು ವಿಶ್ರಾಂತಿ ಪಡೆಯದ ಕಾರಣ, ನೀವು ತುಂಬಾ ಆಯಾಸ ಮತ್ತು ಭಾರವನ್ನು ಅನುಭವಿಸುವಿರಿ. ನೀವು ಉತ್ತಮ ಆಹಾರದ ಜೊತೆಗೆ ಸಾಕಷ್ಟು ನಿದ್ದೆ ಮಾಡಬೇಕು.
ಮೀನ ರಾಶಿ
ನೀವು ಕೆಲವು ಹಳೆಯ ಕಾಯಿಲೆಯಿಂದ ಪರಿಹಾರವನ್ನು ಪಡೆಯಬಹುದು. ಈ ವಾರ ಮನೆಯ ಆಹಾರಗಳ ಸೇವನೆಗೆ ಹೆಚ್ಚು ನೀಡಿ, ಬೀದಿ ಬದಿ, ಹೋಟೆಲ್ ಆಹಾರ ಸವಿಯುವುದನ್ನು ಆದಷ್ಟು ತಪ್ಪಿಸಿ. ಏಕೆಂದರೆ ಇದರಿಂದ ನಿಮ್ಮ ಆರೋಗ್ಯಕ್ಕೆ ಸಮಸ್ಯೆ ಉಂಟಾಗಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications