ಮೇ 25-31ವರೆಗಿನ ವಾರದ ಆರೋಗ್ಯ ಭವಿಷ್ಯದ ಪ್ರಕಾರ 12 ರಾಶಿಗಳಲ್ಲಿ ಯಾವ ರಾಶಿಗಳಿಗೆ ಆರೋಗ್ಯ ಚೆನ್ನಾಗಿರಲಿದೆ?

ಈ ವಾರದ ನಿಮ್ಮ ಆರೋಗ್ಯ ಭವಿಷ್ಯ ಹೇಗಿರಲಿದೆ ಎಂದು ನೋಡೋಣ ಬನ್ನಿ:

ಮೇಷ ರಾಶಿ

ಈ ವಾರ ನೀವು ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು. ನೀವು ನಿಮ್ಮ ಆಹಾರಕ್ರಮದ ಕಡೆಗೆ ತುಂಬಾನೇ ಗಮಹರಿಸಬೇಕು. ತುಂಬಾ ಆಯಾಸು ಅನಿಸಿದರೆ ವಿಶ್ರಾಂತಿ ಕಡೆಗೆ ಗಮನಹರಿಸಬೇಕು. ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಬೇಡ.

Weekly Health Horoscope

ವೃಷಭ ರಾಶಿ

ಕೆಲಸ-ಕೆಲಸ ಅಂತ ನೀವು ಆರೋಗ್ಯದ ಕಡೆಗೆ ಗಮನಹರಿಸಬೇಕು. ನೀವು ಆರೋಗ್ಯದ ಕಡೆಗೂ ಗಮನಹರಿಸಬೇಕು. ನೀವು ತುಂಬಾ ಸಮಯದಿಂದ ಯಾವುದೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ನೀವು ಹೆಚ್ಚು ಜಾಗರೂಕರಾಗಿರಬೇಕು.

ಮಿಥುನ ರಾಶಿ

ಆರೋಗ್ಯದ ದೃಷ್ಟಿಯಿಂದ ಈ ವಾರ ನಿಮಗೆ ಉತ್ತಮವಾಗಿರುತ್ತದೆ. ಇದರಿಂದಾಗಿ ನಿಮ್ಮ ಕೆಲಸ ಕಾರ್ಯಗಳಿಗೆ ಗಮನಹರಿಸಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಮಾನಸಿಕ ಒತ್ತಡವೂ ಕಡಿಮೆಯಿರಲಿದೆ. ನಿಮ್ಮ ದೈನಂದಿನ ದಿನಚರಿಯಲ್ಲಿ ನೀವು ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ, ಅದು ನಿಮಗೆ ಶೀಘ್ರದಲ್ಲೇ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

ಕರ್ಕ ರಾಶಿ

ಅನಾರೋಗ್ಯಕರ ಆಹಾರಕ್ರಮದಿಂದಾಗಿ ಆರೋಗ್ಯ ಸಮಸ್ಯೆವಿರಬಹುದು, ನಿಮಗೆ ಯಕೃತ್ತಿನ ಸಮಸ್ಯೆಯಿದ್ದರೆ, ನೀವು ಹೆಚ್ಚು ಜಾಗರೂಕರಾಗಿರಬೇಕು. ಆರೋಗ್ಯ ಸಮಸ್ಯೆಯಿದ್ದರೆ ಔಷಧಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳಿ.

ಸಿಂಹ ರಾಶಿ

ಈ ವಾರ ಆರೋಗ್ಯ ಸಮಸ್ಯೆಗಳಿರಬಹುದು. ಅನಗತ್ಯ ಚಿಂತೆ ಮತ್ತು ಕೋಪದಿಂದ ದೂರವಿರಲು ಸಹ ನಿಮಗೆ ಸಲಹೆ ನೀಡಲಾಗುವುದು. ವ್ಯಾಯಾಮ ಮಾಡಿ, ಧ್ಯಾನದ ಕಡೆಗೆ ಗಮನಹರಿಸುವುದು ಒಳ್ಳೆಯದು.

ಕನ್ಯಾ ರಾಶಿ

ನೀವು ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಈ ಅವಧಿಯಲ್ಲಿ ಮಾನಸಿಕ ಒತ್ತಡ ಹೆಚ್ಚಿರಲಿದೆ. ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ, ನೀವು ಆರೋಗ್ಯದ ಕಡೆಗೆ ಗಮನಹರಿಸಿ.

ತುಲಾ ರಾಶಿ

ಈ ಅವಧಿಯಲ್ಲಿ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರುತ್ತೀರಿ. ನಿಮ್ಮ ಸಕಾರಾತ್ಮಕತೆ ಎಲ್ಲರನ್ನೂ ಮೆಚ್ಚಿಸುತ್ತದೆ. ನೀವು ಆರೋಗ್ಯದ ಕಡೆಗೆ ಗಮನಹರಿಸುತ್ತೀರಿ. ಈ ಅವಧಿಯಲ್ಲಿ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರುತ್ತೀರಿ. ಆರೋಗ್ಯ ಚೆನ್ನಾಗಿ ಇರುವುದರಿಂದ ಕೆಲಸದ ಕಡೆಗೆ ಗಮನಹರಿಸುತ್ತೀರಿ.

ವೃಶ್ಚಿಕ ರಾಶಿ

ಈ ಅವಧಿಯಲ್ಲಿ ಯಾವುದೇ ಪ್ರಮುಖ ಆರೋಗ್ಯ ಸಂಬಂಧಿತ ಸಮಸ್ಯೆಗಳಿರಲ್ಲ ಆದರೆ ಹೊರಗಿನ ಆಹಾರವನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗುವುದು. ನೀವು ಕೂಡ ನಿಮ್ಮ ಅರೋಗ್ಯದ ಕಡೆಗೆ ಗಮನಹರಿಸಿ.

ಧನು ರಾಶಿ

ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ ಮಾಡಲು ಹೋಗಬೇಡಿ, ನಿಮ್ಮ ಜೀವನಶೈಲಿಯಲ್ಲಿ ವ್ಯಾಯಾಮ ಸೇರಿಸಿ. ಸಾಧ್ಯವಾದಷ್ಟು ಹಸಿರು ತರಕಾರಿಗಳು ಮತ್ತು ತಾಜಾ ಹಣ್ಣುಗಳನ್ನು ಸೇವಿಸಬೇಕು.

ಮಕರ ರಾಶಿ

ಈ ಅವಧಿ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ, ತಲೆನೋವು, ಆಯಾಸ, ನಿದ್ರಾಹೀನತೆ ಮುಂತಾದ ಹಲವು ಸಮಸ್ಯೆಗಳಿರಬಹುದು. ಇದಲ್ಲದೆ, ನಿಮಗೆ ಅಲರ್ಜಿ ಅಥವಾ ಸೋಂಕು ಉಂಟಾಗುವ ಸಾಧ್ಯತೆಯೂ ಇದೆ. ನಿಮ್ಮ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿದ್ದರೆ ಉತ್ತಮ. ಧ್ಯಾನದ ಕಡೆಗೆ ಗಮನಹರಿಸಿ.

ಕುಂಭ ರಾಶಿ

ನಿಮ್ಮ ಆರೋಗ್ಯ ಚೆನ್ನಾಗಿರಲಿದೆ, ಮಾನಸಿಕವಾಗಿಯೂ ಉತ್ತಮವಾಗುತ್ತೀರಿ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಇನ್ನಷ್ಟು ಬಲಪಡಿಸಲು ಪ್ರಯತ್ನಿಸಿ. ಇದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಯಾವುದೇ ಸಮಸ್ಯೆ ಇರಲ್ಲ.

ಮೀನ ರಾಶಿ

ವಾರದ ಆರಂಭವು ನಿಮಗೆ ಉತ್ತಮವಾಗಿರುವುದಿಲ್ಲ. ಈ ಅವಧಿಯಲ್ಲಿ ನೀವು ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬಹುದು. ಆದರೆ ನಿಧಾನಕ್ಕೆ ಆರೋಗ್ಯದಲ್ಲಿ ನೀವು ಸುಧಾರಣೆಯನ್ನು ಕಾಣುತ್ತೀರಿ, ಆದರೆ ನೀವು ಸ್ವಲ್ಪವೂ ಅಜಾಗರೂಕರಾಗಿರಬಾರದು. ಈ ಅವಧಿಯಲ್ಲಿ, ನೀವು ಕಣ್ಣುಗಳು, ಹೊಟ್ಟೆ ಅಥವಾ ಮೂಳೆಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಹೊಂದಿರಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Weekly Health Horoscope From May 25 To May 31 In Kannada

Weekly Health Horoscope: How will health of 12 zodiac signs from May 25 To May 31, read on...
Story first published: Friday, May 24, 2024, 18:49 [IST]
X
Desktop Bottom Promotion