Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಅಕ್ಟೋಬರ್ 12-18 ಆರ್ಥಿಕ ಭವಿಷ್ಯ: ಈ ವಾರ 12 ರಾಶಿಗಳಿಗೆ ಹೇಗಿರಲಿದೆ?
ಈ ವಾರದ ಭವಿಷ್ಯ ಪ್ರಕಾರ ಈ ವಾರ(ಕ್ಟೋಬರ್ 12-18) ದ್ವಾದಶ ರಾಶಿಗಳಿಗೆ ಹೇಗಿರಲಿದೆ?
ಮೇಷ ರಾಶಿ
ಈ ವಾರ ಆರ್ಥಿಕವಾಗಿ ಸಮಸ್ಯೆ ಇರಲ್ಲ, ಆದರೆ ಹಣ ಖರ್ಚಾಗಲಿದೆ, ಬರಬೇಕಾಗಿರುವ ಹಣ ಕೈಸೇರಲಿದೆ, ಹೀಗಾಗಿ ಆರ್ಥಿಕವಾಗಿ ಉತ್ತಮವಾಗಿರಲಿದೆ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಹಾಗಾಗಿ ನೀವು ಉಳಿತಾಯದ ಕಡೆಗೆ ಗಮನಹರಿಸಿ.
ವೃಷಭ ರಾಶಿ
ಆರ್ಥಿಕ ದೃಷ್ಟಿಯಿಂದ ಈ ವಾರ ನಿಮಗೆ ಉತ್ತಮವಾಗಿರಲಿದೆ, ಕೆಲಸದಲ್ಲಿ ಒತ್ತಡವಿರಲಿದೆ, ನೀವು ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಬೇಕು, ಹಣದ ವಿಷಯದಲ್ಲಿಯೂ ಜಾಗ್ರತೆ ಮಾಡಿ, ಬಜೆಟ್ ಮೀರಿ ಖರ್ಚು ಮಾಡಲು ಹೋಗಬೇಡಿ. ಅಲ್ಲದೆ ಹಣದ ವ್ಯವಹಾರ ಮಾಡುವಾಗ ಜಾಗ್ರತೆವಹಿಸಿ.

ಮಿಥುನ ರಾಶಿ
ಆರ್ಥಿಕವಾಗಿ ಈ ವಾರ ಅಷ್ಟೊಂದು ಅನುಕೂಲಕರವಲ್ಲ, ಆರೋಗ್ಯಕ್ಕಾಗಿ ಹೆಚ್ಚಿನ ಹಣ ಖರ್ಚಾಗಬಹುದು, ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ಕೆಲ ಸವಾಲುಗಳು ಬರಬಹುದು, ಇದು ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ನೀವು ಸಾಲ ಕೇಳಿದ್ದರೆ ಹಣ ಸಿಗಲಿದೆ, ಆದರೆ ಹೆಚ್ಚು ಹಣ ಸಾಲ ಮಾಡದಂತೆ ಜಾಗ್ರತೆವಹಿಸಿ.
ಕರ್ಕ ರಾಶಿ
ಆರ್ಥಿಕವಾಗಿ ಈ ವಾರ ಉತ್ತಮವಾಗಿರಲಿದೆ. ಕೆಲಸ ಬದಲಾಯಿಸಲು ಯೋಚಿಸುತ್ತಿದ್ದರೆ ಅಥವಾ ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ ನಿಮ್ಮ ಆರ್ಥಿಕ ಸ್ಥಿತಿ ಬಲಪಡಿಸುವ ಅವಕಾಶಗಳು ದೊರೆಯಲಿದೆ. ನೀವು ಸರಿಯಾಗಿ ಬಜೆಟ್ ಪ್ಲ್ಯಾನ್ ಮಾಡಿದರೆ ಶೀಘ್ರದಲ್ಲಿಯೇ ಪ್ರಗತಿ ಹೊಂದುವಿರಿ.
ಸಿಂಹ ರಾಶಿ
ಆರ್ಥಿಕವಾಗಿ ಈ ವಾರ ನಿಮಗೆ ಪ್ರಯೋಜನಕಾರಿಯಾಗಿದೆ. ನೀವು ಆದಾಯ ಮೂಲ ಹೆಚ್ಚಿಸಲು ಪ್ರಯತ್ನಿಸುತ್ತಿದ್ದರೆ ನೋಡಿಕೊಂಡು ಮುಂದುವರೆಯಿರಿ. ಕಠಿಣ ಪರಿಶ್ರಮದ ಹೊರತಾಗಿಯೂ ನೀವು ಉತ್ತಮ ಯಶಸ್ಸನ್ನು ಪಡೆಯದಿದ್ದರೆ ನೀವು ಧನಾತ್ಮಕವಾಗಿರಬೇಕು. ಶೀಘ್ರದಲ್ಲಿಯೇ ನೀವು ಉತ್ತಮ ಫಲಿತಾಂಶ ಪಡೆಯುತ್ತೀರಿ. ಆರೋಗ್ಯ ಉತ್ತಮವಾಗಿರಲಿದೆ.
ಕನ್ಯಾ ರಾಶಿ
ಆರ್ಥಿಕವಾಗಿ ಈ ದಿನ ಉತ್ತಮವಾಗಿದೆ, ಆದರೆ ಹಣವನ್ನು ಇತರರ ಮಾತು ಕೇಳಿ ಹೂಡಿಕೆ ಮಾಡಬೇಡಿ, ಹಣದ ನಿರ್ಧಾರವನನ್ನು ನೀವು ನೀವು ಸ್ವತಃ ತೆಗೆದುಕೊಳ್ಳಬೇಕು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದರಿಂದ ಉಳಿತಾಯ ಮಾಡುವುದರ ಬಗ್ಗೆ ಆಲೋಚನೆ ಮಾಡಬಹುದು.
ತುಲಾ ರಾಶಿ
ಹಣದ ದೃಷ್ಟಿಯಿಂದ ನೋಡುವುದಾದರೆ ಈ ದಿನ ಉತ್ತಮವಾಗಿರಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ, ಆದರೆ ಹಣವನ್ನು ಬಜೆಟ್ ಪ್ರಕಾರ ಖರ್ಚು ಮಾಡಿದರೆ ಒಳ್ಳೆಯದು. ಖರ್ಚು ನಿಯಂತ್ರಣ ಮಾಡಿದರೆ ತುಂಬಾ ಒಳ್ಳೆಯದು.
ವೃಶ್ಚಿಕ ರಾಶಿ
ಆರ್ಥಿಕವಾಗಿ ಈ ಅವಧಿ ಉತ್ತಮವಾಗಿರಲಿದೆ, ವ್ಯಾಪಾರಿಗಳು ಈ ಅವಧಿಯಲ್ಲಿ ಉತ್ತಮ ಲಾಭ ಪಡೆಯುತ್ತೀರಿ. ಆದಾಯ ಚೆನ್ನಾಗಿರುವುದರಿಂದ ರ್ಥಿಕ ತೊಂದರೆಯಿಂದ ನಿಲ್ಲಿಸಿದ್ದ ಕೆಲಸ ಮತ್ತೆ ಶುರು ಮಾಡಬಹುದು. ಮನೆಯಲ್ಲಿ ಶೀಘ್ರ ಶುಭ ಕಾರ್ಯ ನಡೆಯುವ ಸೂಚನೆಯಿದೆ.
ಧನು ರಾಶಿ
ಈ ವಾರ ಹಣ ವಿಷಯದಲ್ಲಿ ಮಿಶ್ರಫಲ. ಯಾವುದೇ ಹೂಡಿಕೆ ಮಾಡುವುದಾಗಿ, ದೊಡ್ಡ ಖರೀದಿ ಮಾಡುವುದಾಗಲಿ ಮಾಡಲು ಹೋಗಬೇಡಿ. ವ್ಯಾಪಾರಿಗಳು ಕೂಡ ತಮ್ಮ ವ್ಯವಹಾರದ ಕಡೆಗೆ ಗಮನಹರಿಸಿ. ಸಾಲ ಕೊಡುವುದು, ಪಡೆಯುವುದು ಮಾಡಬೇಡಿ.
ಮಕರ ರಾಶಿ
ವೃತ್ತಿಪರ ಜೀವನದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳಿರಬಹುದು. ಇದು ನಿಮ್ಮ ಆರ್ಥಿಕತೆಯಲ್ಲಿ ಉತ್ತಮ ಪ್ರಯೋಜನ ಬೀರಲಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಈ ಏಳೂ ದಿನಗಳು ನಿಮ್ಮ ಶ್ರಮಕ್ಕೆ ಉತ್ತಮ ಫಲ ಸಿಗಲಿದೆ. ಯಾವುದೇ ಆಸ್ತಿ ಸಂಬಂಧಿತ ವಿಷಯ ನಡೆಯುತ್ತಿದ್ದರೆ ಅದನ್ನು ನ್ಯಾಯಾಲಯದ ಹೊರಗೆ ಪರಿಹರಿಸಲು ಪ್ರಯತ್ನಿಸುವುದು ಉತ್ತಮ. ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ತರಾತುರಿಯಲ್ಲಿ ಮಾಡಬೇಡಿ. ಈ ಅವಧಿಯಲ್ಲಿ ಯಾವುದೇ ಹೂಡಿಕೆ ಮಾಡಬೇಡಿ.
ಕುಂಭ ರಾಶಿ
ಈ ವಾರ ಹಣಕಾಸಿನ ಪರಿಸ್ಥಿತಿ ಸುಧಾರಿಸಬಹುದು, ಆದರೆ ನಿಮ್ಮ ಖರ್ಚುಗಳನ್ನು ನೀವು ನಿಯಂತ್ರಿಸಬೇಕಾಗುತ್ತದೆ. ಅನಗ್ಯತ ಖರ್ಚು ತಪ್ಪಿಸಿ, ಉದ್ಯೋಗವಾಗಲಿ ಅಥವಾ ವ್ಯವಹಾರವಾಗಲಿ, ನಿಮ್ಮ ಕೆಲಸವನ್ನು ನೀವು ಶ್ರದ್ಧೆಯಿಂದ ಮಾಡಬೇಕಾಗುತ್ತದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ.
ಮೀನ ರಾಶಿ
ಈ ವಾರ ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ, ಆದರೆ ಹೆಚ್ಚಿನ ಖರ್ಚು ನಿಮ್ಮ ಚಿಂತೆಗೆ ಕಾರಣವಾಗಿರಬಹುದು, ನೀವು ಬಜೆಟ್ ಪ್ಲ್ಯಾನ್ ಮಾಡಿ ಖರ್ಚು ಮಾಡಿದರೆ ಯಾವುದೇ ಸಮಸ್ಯ ಇರಲ್ಲ. ವ್ಯಾಪಾರಿಗಳು ದೊಡ್ಡ ಲಾಭ ಗಳಿಸುವ ಆಸೆಯಿಂದ ಚಿಕ್ಕ ಲಾಭ ನಿರ್ಲಕ್ಷ್ಯ ಮಾಡಬೇಡಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











