Latest Updates
-
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ!
ಈ ವಾರ (ಮಾರ್ಚ್30-ಏಪ್ರಿಲ್ 7) ದ್ವಾದಶ ರಾಶಿಗಳಲ್ಲಿ ಹಣದ ವಿಚಾರ ಯಾರಿಗೆ ಅನುಕೂಲಕರ, ಯಾರಿಗಲ್ಲ
ವಾರ ಭವಿಷ್ಯದಲ್ಲಿ ಈ ವಾರ ಆರ್ಥಿಕವಾಗಿ ಯಾವೆಲ್ಲಾ ರಾಶಿಗಳಿಗೆ ಅನುಕೂಲಕರ, ಯಾವ ರಾಶಿಯ ವ್ಯಾಪಾರಸ್ಥರಿಗೆ ಲಾಭದ ಸಮಯ, ಯಾರೆಲ್ಲಾ ಖರ್ಚಿನ ಬಗ್ಗೆ ಎಚ್ಚರವಹಿಸಬೇಕು ಎಂದು ನೋಡೋಣ ಬನ್ನಿ:

ಮೇಷ ರಾಶಿ
ಈ ವಾರ ಮೇಷ ರಾಶಿಯವರಿಗೆ ಉತ್ತಮವಾಗಿದೆ. ವ್ಯಾಪಾರಿಗಳು ಲಾಭ ಗಳಿಸಲು ಕೆಲವೊಂದು ವ್ಯವಹಾರ ಟ್ರಿಕ್ಸ್ ಅನುಸರಿಸಬೇಕು, ಆದರೆ ಅಡ್ಡ ಮಾರ್ಗ ಹಿಡಿಯಬಾರದು. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ಉಳಿತಾಯದ ಮೇಲೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುವುದು.
ವೃಷಭ ರಾಶಿ
ವ್ಯಾಪಾರಿಗಳ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯ ಲಕ್ಷಣಗಳಿವೆ. ನೀವು ಹೊಸ ಆದಾಯದ ಮೂಲವನ್ನು ಪಡೆಯುವ ಸಾಧ್ಯತೆಯಿದೆ. ನೀವು ಪಾಲುದಾರಿಕೆಯಲ್ಲಿಕೆಲವು ಕೆಲಸವನ್ನು ಪ್ರಾರಂಭಿಸಿದ್ದರೆ ಅದರಿಂದ ಉತ್ತಮ ಲಾಭ ಪಡೆಯುತ್ತೀರಿ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ವಾರ ಹೆಚ್ಚು ಖರ್ಚುಗಳು ಇರಲಿದೆ. ಅನಗ್ಯತ ಖರ್ಚು ನಿಯಂತ್ರಿಸಿದರೆ ಒಳ್ಳೆಯದು. ಇನ್ನು ಈ ಹಿಂದೆ ಸಾಲ ಮಾಡಿದ್ದರೆ ಅದನ್ನು ಮರು ಪಾವತಿಸಲು ಒತ್ತಾಯ ಬೀಳಳುವುದು. ವ್ಯಾಪಾರಿಗಳು ಲಾಭ ಗಳಿಸಲು ಹೆಚ್ಚು ಶ್ರಮಿಸಬೇಕು.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಈ ಅವಧಿ ಅನುಕೂಲಕರವಾಗಿದೆ. ವ್ಯಾಪಾರಿಗಳು ಈ ಅವಧಿಯಲ್ಲಿ ಅನೇಕ ಸಣ್ಣ ಪ್ರಯೋಜನಗಳನ್ನು ಪಡೆಯಬಹುದು. ದೊಡ್ಡ ಲಾಭವನ್ನು ಗಳಿಸಲು, ಆತುರದಲ್ಲಿ ಯಾವುದೇ ತಪ್ಪು ಹೆಜ್ಜೆ ಇಡಬೇಡಿ, ಯಾವುದೇ ಹೂಡಿಕೆ ಮಾಡುವುದಾದರೆ ಅದರ ಬಗ್ಗೆ ಚೆನ್ನಾಗಿ ಯೋಚಿಸಿ ನಂತರ ಮುಂದುವರೆಯಿರಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿದೆ. ಸ್ವಂತ ವ್ಯವಹಾರ ಪ್ರಾರಂಬೀಸಿರುವವರು ಒಳ್ಳೆಯ ಲಾಭ ಪಡೆಯುತ್ತೀರಿ. ವ್ಯಾಪಾರಿಗಳು ವಾರದ ಕೊನೆಯಲ್ಲಿ ನೀವು ಆರ್ಥಿಕ ಲಾಭಗಳನ್ನು ಪಡೆಯುವ ಬಲವಾದ ಸಾಧ್ಯತೆಯಿದೆ.
ಕನ್ಯಾ ರಾಶಿ
ಈ ವಾರ ಆರ್ಥಿಕವಾಗಿ ನಿಮಗೆ ಪ್ರಯೋಜನಕಾರಿಯಾಗಿದೆ. MNCಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸಂಬಳ ಹೆಚ್ಚಾಗುವ ಸೂಚನೆಯಿದೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ನೀವು ಹೊಸ ಆದಾಯದ ಮೂಲವನ್ನು ಹುಡುಕುತ್ತಿದ್ದರೆ, ಈ ಸಮಯದಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಒಟ್ಟಿನಲ್ಲಿ ಈ ವಾರ ಉತ್ತಮವಾಗಿರಲಿದೆ.
ತುಲಾ ರಾಶಿ
ಉದ್ಯೋಗಸ್ಥರಿಗೆ ಈ ಅವಧಿ ಉತ್ತಮವಾಗಿದೆ. ಈ ಸಮಯದಲ್ಲಿ ನೀವು ಬಡ್ತಿ ಪಡೆಯಬಹುದು. ನಿಮ್ಮ ಆದಾಯವೂ ಹೆಚ್ಚಾಗುವ ಸಾಧ್ಯತೆ ಇದೆ. ವ್ಯಾಪಾರಿಗಳು ಯಾವುದೇ ಕಾನೂನುಬಾಹಿರ ಕೆಲಸವನ್ನು ಮಾಡದಂತೆ ಸಲಹೆ ನೀಡಲಾಗುವುದು, ಹಣವನ್ನು ಮಿತವಾಗಿ ಖರ್ಚು ಮಾಡಿ, ಉಳಿದಾಯತ್ತ ಗಮನಹರಿಸಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರುಗೆ ಹಣದ ವಿಷಯದಲ್ಲಿ ಈ ವಾರ ಅನುಕೂಲಕರವಲ್ಲ. ವಾರದ ಕೊನೆಯಲ್ಲಿ ದೊಡ್ಡ ಖರ್ಚು ನಿಮ್ಮ ಬಜೆಟ್ ಅನ್ನು ಅಸಮತೋಲನಗೊಳಿಸಬಹುದು. ಯೋಚಿಸದೆ ಖರ್ಚು ಮಾಡಿದರೆ ಸಾಲದ ಹೊರೆಯೂ ಹೆಚ್ಚಾಗಬಹುದು. ಈ ಇನ್ನು ಆರೋಗ್ಯಕ್ಕಾಗಿ ಕೂಡ ಹಣ ಖರ್ಚಾಗುವುದು.
ಧನು ರಾಶಿ
ಈ ಸಮಯದಲ್ಲಿ ಖರ್ಚು ಕಡಿಮೆ ಇರುವುದರಿಂದ ಆರ್ಥಿಕ ದೃಷ್ಟಿಯಿಮದ ಉತ್ತಮವಾಗಿದೆ. ಉಳಿತಾಯ ಮಾಡಲು ಸಾಧ್ಯವಾಗುವುದು. ಈ ಅವಧಿಯಲ್ಲಿ ನೀವು ಹಣಕಾಸಿನ ನಿರ್ಧಾರವನ್ನು ತೆಗೆದುಕೊಂಡರೆ, ಅದರಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ವ್ಯಾಪಾರಿಗಳು ಈ ಸಮಯದಲ್ಲಿ ಹೊಸ ವ್ಯವಹಾರ ಮಾಡಲು ಹೋಗಬೇಡಿ.
ಮಕರ ರಾಶಿ
ಮಕರ ರಾಶಿಯವರಿಗೆ ಈ ಅವಧಿ ಉತ್ತಮವಾಗಿದೆ. ನೀವು ನಿಮ್ಮ ಅಧ್ಯಯನವನ್ನು ಪೂರ್ಣಗೊಳಿಸಿ ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮಗೆ ಉತ್ತಮ ಅವಕಾಶ ಸಿಗಬಹುದು.ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡಿದರೆ ಈ ಅವಧಿ ಉತ್ತಮವಾಗಿದೆ, ಆರ್ಥಿಕ ಸಮಸ್ಯೆ ದೂರಾಗುವುದು. ಆರ್ಥಿಕ ದೃಷ್ಟಿಯಿಂದ ಈ ವಾರ ತುಂಬಾ ಶುಭಕರವಾಗಿರುತ್ತದೆ.
ಕುಂಭ ರಾಶಿ
ಸಣ್ಣ ವ್ಯಾಪಾರಿಗಳು ಉತ್ತಮ ಲಾಭ ಗಳಿಸಬಹುದು. ನೀವು ಆನ್‌ಲೈನ್ ವ್ಯಾಪಾರ ಮಾಡುತ್ತಿದ್ದರೆ ಈ ಸಮಯದಲ್ಲಿ ಉತ್ತಮ ಕಾಭ ಗಳಿಸಲು ಸಾಧ್ಯವಾಗುವುದು. ಇದೆಲ್ಲವೂ ನಿಮ್ಮ ಸರಿಯಾದ ನಿರ್ಧಾರಗಳು ಮತ್ತು ಕಠಿಣ ಪರಿಶ್ರಮದ ಫಲಿತಾಂಶವಾಗಿದೆ.
ಮೀನ ರಾಶಿ
ಈ ವಾರ ಹಣದ ವಿಷಯದಲ್ಲಿ ತುಂಬಾ ದುಬಾರಿಯಾಗಲಿದೆ. ಆರ್ಥಿಕ ಸಂಕಷ್ಟ ಉಂಟಾಗುವುದು. ನಿಮ್ಮ ಖರ್ಚುಗಳನ್ನು ನಿಯಂತ್ರಿಸಲು ನೀವು ಪ್ರಯತ್ನಿಸಿದರೆ ಅದು ಉತ್ತಮವಾಗಿರುತ್ತದೆ ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ಕ ವ್ಯಾಪಾರಿಗಳು ಯಾವುದೇ ಪ್ರಮುಖ ವ್ಯವಹಾರ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳದಂತೆ ಸಲಹೆ ನೀಡಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











