Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಾರ ಭವಿಷ್ಯ: ಆಗಸ್ಟ್ 25-31ರ ಈ ದಿನಗಳಲ್ಲಿ ನಿಮ್ಮ ಆರ್ಥಿಕ ಜೀವನ ಹೇಗಿರಲಿದೆ?
ಈ ವಾರದ ರಾಶಿಫಲ ಪ್ರಕಾರ ಈ ವಾರ ನಿಮ್ಮ ಆರ್ತಿಕ ಭವಿಷ್ಯ ಹೇಗಿದೆ?
ಮೇಷ ರಾಶಿ
ಮೇಷ ರಾಶಿಯವರಿಗೆ ಈ ವಾರ ಆರ್ಥಿಕವಾಗಿ ಉತ್ತಮವಾಗಿಲ್ಲ, ಹಣಕಾಸು ಚೆನ್ನಾಗಿರುತ್ತದೆ, ಆದರೆ ಖರ್ಚು ಅಧಿಕವಿರಲಿದೆ. ಇನ್ನು ವ್ಯಾಪಾರಿಗಳು ಹಣಕಾಸು ವ್ಯವಹಾರದ ಬಗ್ಗೆ ಜಾಗ್ರತೆವಹಿಸಿ, ಈ ಅವಧಿಯಲ್ಲಿ ಹೊಸ ವ್ಯವಹಾರ ಮಾಡಲು ಹೋಗಬೇಡಿ. ಇನ್ನು ಈ ಸಮಯದಲ್ಲಿ ಬಜೆಟ್‌ಗಿಂತ ಹೆಚ್ಚು ಖರ್ಚು ಮಾಡಬೇಡಿ.

ವೃಷಭ ರಾಶಿ
ಈ ಸಮಯದಲ್ಲಿ ನೀವು ಹಣದ ಬಗ್ಗೆ ತುಂಬಾ ಜಾಗ್ರತೆವಹಿಸಿ, ನಿಮ್ಮ ಬಜೆಟ್ ಮೀರಿ ಖರ್ಚು ಮಾಡಲು ಹೋಗಬೇಡಿ. ಇನ್ನು ಹಣದ ಸಮಸ್ಯೆಯಿಂದಾಗಿ ಕುಟುಂಬದಲ್ಲಿಯೂ ಕೆಲ ಭಿನ್ನಾಭಿಪ್ರಾಯ ಉಂಟಾಗಬಹುದು. ಸಾಲ ಮಾಡಿ ಹೂಡಿಕೆ ಮಾಡಬೇಡಿ.
ಮಿಥುನ ರಾಶಿ
ಆರ್ಥಿಕವಾಗಿ ನೋಡುವುದಾದರೆ ಈ ದಿನ ನಿಮಗೆ ಉತ್ತಮವಾಗಿದೆ. ಹಣಕ್ಕಾಗಿ ನೀವು ಪ್ರಯತ್ನಗಳು ಯಶಸ್ವಿಯಾಗಲಿದೆ. ಇನ್ನು ಈ ಅವಧಿ ಹೂಡಿಕೆಗೂ ತುಂಬಾ ಚೆನ್ನಾಗಿದೆ. ಹೆಚ್ಚು ಲಾಭ ಗಳಿಸಲು ಸಾಧ್ಯವಾಗುವುದು.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಆರ್ಥಿಕವಾಗಿ ನೋಡುವುದಾದರೆ ತುಂಬಾ ಉತ್ತಮವಾಗಿದೆ. ವ್ಯಾಪಾರಿಗಳು ಧನ ಲಾಭ ಪಡೆಯುತ್ತೀರಿ, ಅದರೆ ಇತರರ ಮಾತು ಕೇಳಿ ಹೂಡಿಕೆ ಮಾಡಬೇಡಿ ಹಾಗೂ ನೀವು ಅತಿ ಹೆಚ್ಚು ಖರ್ಚು ಮಾಡಬೇಡಿ.
ಸಿಂಹ ರಾಶಿ
ಈ ವಾರ ಆರ್ಥಿಕವಾಗಿ ನಿಮಗೆ ಉತ್ತಮವಾಗಿರಲಿದೆ, ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ, ಅದರೆ ಅಗ್ಯತಕ್ಕಿಂತ ಹೆಚ್ಚು ಖರ್ಚು ಮಾಡಲು ಹೋಗಬೇಡಿ. ಬಜೆಟ್ ಪ್ಲ್ಯಾನ್ ಮಾಡಿ ಖರ್ಚು ಮಾಡಿದರೆ ಭವಿಷ್ಯದಲ್ಲಿ ಹಣದ ಸಮಸ್ಯೆಯಾಗಲ್ಲ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ವಾರ ಆರ್ಥಿಕ ವಿಷಯದಲ್ಲಿ ಏರಳಿತಗಳಿರಬಹುದು. ಇದರಿಂದ ಹೆಚ್ಚು ಒತ್ತಡ ಇರಲಿದೆ. ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಬಜೆಟ್ ಪ್ಲ್ಯಾನ್ ಮಾಡುವುದು ಮುಖ್ಯ.
ತುಲಾ ರಾಶಿ
ತುಲಾ ರಾಶಿಯವರಿಗೆ ಆರ್ಥಿಕವಾಗಿ ತುಂಬಾ ಒಳ್ಳೆಯದು. ಈ ವಾರ ಖರ್ಚು ಕಡಿಮೆ ಇರಲಿದೆ. ಹೀಗಾಗಿ ಹಣದ ಸಮಸ್ಯೆ ಇರಲ್ಲ, ವ್ಯಾಪಾರಿಗಳು, ಉದ್ಯಮಿಗಳು ಲಾಭ ಗಳಿಸುತ್ತೀರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ವಾರ ಉತ್ತಮವಾಗಿರಲಿದೆ. ವ್ಯಾಪಾರಿಗಳಿಗೆ ಲಾಭ ಗಳಿಸಲು ಸಾಧ್ಯವಾಗುವುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರೆ
ಉತ್ತಮ ಪ್ರಯೋಜನ ಪಡೆಯಲಿದೆ. ಆದರೆ ಈ ವಾರ ಖರ್ಚು ಕೂಡ ಹೆಚ್ಚಿರಲಿದೆ.
ಧನು ರಾಶಿ
ಧನು ರಾಶಿಯವರಿಗೆ ಈ ವಾರ ಉತ್ತಮವಾಗಿರಲಿದೆ. ವ್ಯಾಪಾರದಲ್ಲಿ ಅಡೆತಡೆಗಳು ದೂರಾಗುವುದರಿಂದ ಲಾಭ ಗಳಿಸುತ್ತೀರಿ. ಈ ಅವಧಿಯಲ್ಲಿ ಪ್ರಯತ್ನಪಟ್ಟರೆ ಉಳಿತಾಯ ಮಾಡಲು ಸಾಧ್ಯವಾಗುವುದು.
ಮಕರ ರಾಶಿ
ಮಕರ ರಾಶಿಯವರಿಗೆ ಆರ್ಥಿಕವಾಗಿ ಉತ್ತಮವಾಗಿದೆ, ಈ ವಾರದಲ್ಲಿ ಹಣಕ್ಕೆ ಸಂಬಂಧಿಸಿದ ಚಿಂತೆಗಳು ದೂರವಾಗುತ್ತವೆ. ವ್ಯಾಪಾರಿಗಳು ಉತ್ತಮ ಲಾಭ ಪಡೆಯುತ್ತೀರಿ. ಒಟ್ಟಿನಲ್ಲಿ ಆರ್ಥಿಕವಾಗಿ ಉತ್ತಮವಾಗಿದೆ.
ಕುಂಭ ರಾಶಿ
ಹಣದ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರುವುದು. ನಿಮ್ಮ ಖರ್ಚುಗಳನ್ನು ಸುಲಭವಾಗಿ ಭರಿಸಲಾಗುವುದು. ನೀವು ಸಣ್ಣ ಹೂಡಿಕೆಗಳನ್ನು ಮಾಡಲು ಆಲೋಚಿಸುತ್ತಿದ್ದರೆ ಈ ಅವಧಿ ಉತ್ತಮವಾಗಿದೆ.
ಮೀನ ರಾಶಿ
ನೀವು ಉದ್ಯಮಿಯಾಗಿದ್ದರೆ ಈ ವಾರ ಉತ್ತಮವಾಗಿರಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ. ನೀವು ಯಾವುದೇ ಹೊಸ ಆಸ್ತಿ, ಮನೆ, ವಾಹನ ಇತ್ಯಾದಿಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ ಈ ಸಮಯದಲ್ಲಿ ನಿಮ್ಮಾಸೆ ಈಡೇರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications