Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆರ್ಥಿಕ ಭವಿಷ್ಯ ಪ್ರಕಾರ ಈ ವಾರ (ಫೆಬ್ರವರಿ9-15) 12 ರಾಶಿಗಳಿಗೆ ಹೇಗಿರಲಿದೆ?
ವಾರ ಭವಿಷ್ಯ ಪ್ರಕಾರ ಫೆಬ್ರವರಿ 9-15ರ ದಿನಗಳಲ್ಲಿ ದ್ವಾದಶ ರಾಶಿಗಳ ಆರ್ಥಿಕ ಭವಿಷ್ಯ ಹೇಗಿರಲಿದೆ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರ ಆರ್ಥಿಕ ಭವಿಷ್ಯ ಉತ್ತಮವಾಗಿರಲಿದೆ, ವಾರದ ಕೊನೆಯಲ್ಲಿ ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು, ವ್ಯಾಪಾರಿಗಳು ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಾಡುವ ಪ್ರಯಾಣ ಲಾಭ ತರಲಿದೆ. ನಿಮ್ಮ ಆದಾಯ ಹೆಚ್ಚಾಗಲಿದೆ.

ವೃಷಭ ರಾಶಿ
ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ವಾರ ಮಿಶ್ರಫಲ, ವ್ಯಾಪಾರಿಗಳು ದೊಡ್ಡ ವ್ಯವಹಾರ ಮಾಡುವಾಗ ಜಾಗ್ರತೆವಹಿಸಿ, ಹೂಡಿಕೆಗೆ ಈ ಸಮಯ ಅನುಕೂಲಕರವಲ್ಲ. ವ್ಯಾಪಾರಿಗಳು ಹಣದ ವಹಿವಾಟು ಮಾಡುವಾಗ ತುಂಬಾನೇ ಜಾಗ್ರತೆವಹಿಸಿ.
ಮಿಥುನ ರಾಶಿ
ಈ ವಾರ ನಿಮಗೆ ತುಂಬಾನೇ ಉತ್ತಮವಾಗಿರಲಿದೆ, ವ್ಯಾಪಾರಿಗಳು ಉತ್ತಮ ಫಲ ಪಡೆಯುತ್ತೀರಿ, ನೀವು ಊಹಿಸಿದಂತೆಯೇ ಲಾಭಗಳಿಸಲು ಸಾಧ್ಯವಾಗಲಿದೆ. ಉದ್ಯೋಗಿಗಳಿಗೆ ಹೊಸ ಆದಾಯದ ಮೂಲ ಸೃಷ್ಟಿಯಾಗಲಿದೆ.
ಕರ್ಕ ರಾಶಿ
ಈ ವಾರ ಹಣದ ಖರ್ಚು ಸ್ವಲ್ಪ ಅಧಿಕವಿರಬಹುದು, ಆದರೆ ಬಜೆಟ್ ಮೀರಿ ಖರ್ಚು ಮಾಡದಂತೆ ಸಲಹೆ ನೀಡಲಾಗುವುದು. ವ್ಯಾಪಾರಿಗಳು ವ್ಯಾಪಾರ ವಿಸ್ತರಣೆ ಬಗ್ಗೆ ಆಲೋಚಿಸುತ್ತಿದ್ದರೆ ಇನ್ನೂ ಸ್ವಲ್ಪ ಕಾಯಲು ಸಲಹೆ ನೀಡಲಾಗುವುದು.
ಸಿಂಹ ರಾಶಿ
ವ್ಯಾಪಾರಿಗಳಿಗೆ ಈ ವಾರ ಅನುಕೂಲಕರವಾಗಿದೆ. ಬಡ್ತಿಯ ನಿರೀಕ್ಷೆಯಲ್ಲಿರುವ ಉದ್ಯೋಗಿಗಳಿಗೆ ಈ ವಾರ ಅನುಕೂಲಕರವಾಗಿದೆ. ನಿಮ್ಮ ಆರ್ಥಿಕ ಪ್ರಯತ್ನಗಳಿಗೆ ಉತ್ತಮ ಫಲ ಸಿಗಲಿದೆ, ಒಟ್ಟಿನಲ್ಲಿ ಆರ್ಥಿಕ ದೃಷ್ಟಿಯಿಂದ ಈ ವಾರ ಉತ್ತಮವಾಗಿದೆ.
ಕನ್ಯಾ ರಾಶಿ
ವಾರದ ಮಧ್ಯದವರೆಗೆ ದೊಡ್ಡ ಸಮಸ್ಯೆ ಬರಲ್ಲ, ಆದರೆ ನಂತರ ಖರ್ಚು ಹೆಚ್ಚು ಬರಲಿದೆ, ಆರೋಗ್ಯ ಸಮಸ್ಯೆಯಿಂದಾಗಿ ಅಥವಾ ಮನೆಯ ಸದಸ್ಯರಿಗೆ ಆರೋಗ್ಯ ಸಮಸ್ಯೆಯಿಂದಾಗಿ ಹೆಚ್ಚು ಹಣ ಖರ್ಚಾಗುವುದು. ಈ ಸಮಯದಲ್ಲಿ ಯಾರಿಗೂ ಹಣ ಸಾಲ ನೀಡಲು ಹೋಗಬೇಡಿ.
ತುಲಾ ರಾಶಿ
ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ಅವಧಿ ಅನುಕೂಲಕರವಾಗಿದೆ, ನಿಮ್ಮ ಕೆಲಸ ಕಾರ್ಯಗಳು ಯೋಜಿತ ರೀತಿಯಲ್ಲಿಯೇ ಪೂರ್ಣಗೊಳ್ಳುವುದರಿಂದ ನೀವು ಹೆಚ್ಚಿನ ಪ್ರಯೋಜನ ಪಡೆಯುತ್ತೀರಿ. ವ್ಯಾಪಾರಿಗಳು ಪ್ರಾರಂಭಕ್ಕಿಂತ ವಾರದ ಕೊನೆಯಲ್ಲಿ ಹೆಚ್ಚಿನ ಪ್ರಯೋಜನ ಪಡೆಯುತ್ತೀರಿ.
ವೃಶ್ಚಿಕ ರಾಶಿ
ಆರ್ಥಿಕ ವಿಷಯದಲ್ಲಿ ಒತ್ತಡವಿರಬಹುದು, ಹಣದ ವಿಷಯದಲ್ಲಿ ಹಿರಿಯರ ಸಲಹೆ ನಿರ್ಲಕ್ಷ್ಯ ಮಾಡಲು ಹೋಗಬೇಡಿ, ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯುವುದರಿಂದ ವಾರದ ಕೊನೆಯಲ್ಲಿ ಆರ್ಥಿಕ ಸ್ಥಿತಿಯಲ್ಲಿ ಪ್ರಯೋಜನ ಪಡೆಯುತ್ತೀರಿ.
ಧನು ರಾಶಿ
ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ವಾರ ನಿಮಗೆ ಅನುಕೂಲಕರವಾಗಿದೆ, ವ್ಯಾಪಾರಿಗಳು ಉತ್ತಮ ಲಾಭ ಪಡೆಯಲು ಸಾಧ್ಯವಾಗಲಿದೆ, ನೀವು ಹಣದ ಹೂಡಿಕೆ ಅಥವಾ ಉಳಿಕೆ ಬಗ್ಗೆ ಆಲೋಚನೆ ಮಾಡುತ್ತಿದ್ದರೆ ಅದಕ್ಕೆ ಈ ವಾರ ಉತ್ತಮವಾಗಿದೆ.
ಮಕರ ರಾಶಿ
ಈ ವಾರ ಖರ್ಚುಗಳು ಹೆಚ್ಚಿರುವುದರಿಂದ ಬಜೆಟ್ ಕಡೆಗೆ ಸ್ವಲ್ಪ ಗಮನ ನೀಡುವುದು ಒಳ್ಳೆಯದು. ಖರ್ಚು ವೆಚ್ಚಗಳ ನಡುವೆ ಸಮತೋಲನ ಕಾಪಾಡುವುದು ಜಾಣತನ. ವ್ಯಾಪಾರಿಗಳು ವ್ಯವಹಾರದ ನಿರ್ಧಾರಗಳನ್ನು ಜಾಗ್ರತೆಯಿಂದ ತೆಗೆದುಕೊಳ್ಳಿ.
ಕುಂಭರಾಶಿ
ಕುಂಭ ರಾಶಿಯವರಿಗೆ ಈ ವಾರ ಅನುಕೂಲಕರವಾಗಿದೆ, ಆದರೆ ವ್ಯಾಪಾರಿಗಳಿಗೆ ಮಧ್ಯಮ ಫಲಪ್ರದವಾಗಿದ. ಖರ್ಚು ಬರಬಹುದು, ಆದರೆ ಅನಗ್ಯತ ಖರ್ಚುಗಳನ್ನು ನಿಯಂತ್ರಿಸಿ.
ಮೀನ ರಾಶಿ
ಮೀನ ರಾಶಿಯವರುಗೆ ಹಣದ ವಿಷಯದಲ್ಲಿ ಸವಾಲಿನ ಸಮಯ, ವ್ಯಾಪಾರಿಗಳು ಎಣಿಸಿದಂತೆ ಲಾಭ ಪಡೆಯಲು ಹೆಚ್ಚು ಶ್ರಮ ಹಾಕಬೇಕಾಗುತ್ತದೆ, ಹಣದ ವ್ಯವಹಾರ ಮಾಡುವಾಗ ಮೋಸ ಹೋಗದಂತೆ ಜಾಗ್ರತೆವಹಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications