Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2025ರಲ್ಲಿ ಶ್ರೀಮಂತರಾಗೋದು ಇವರೇ..! ನಾಸ್ಟ್ರಾಡಾಮಸ್ ಹೇಳಿದ ಭವಿಷ್ಯವಿದು!!
2025ರಲ್ಲಿ ಹಲವರಿಗೆ ಅತ್ಯಂತ ಅನುಕೂಲಕರ ವರ್ಷವಾಗಲಿದೆ ಎಂಬುದನ್ನು ಮೊದಲೇ ಊಹಿಸಲಾಗಿದೆ. ಎಕೆಂದರೆ 2025ರಲ್ಲಿ ಹಲವು ಗ್ರಹಗಳ ದಿಕ್ಕುಗಳು, ಬದಲಾಗುವುದು, ನಕ್ಷತ್ರಗಳ ಚಲನೆಯಲ್ಲಿ ಬದಲಾವಣೆ, ಗ್ರಹಗತಿಗಳ ಸ್ಥಿತಿಯಲ್ಲಿ ಬದಲಾವಣೆಯಾಗುತ್ತಿದೆ. ಹೀಗೆ 2025ರಲ್ಲಿ ಯಾವ 4 ರಾಶಿಯವರಿಗೆ ಅತ್ಯಧಿಕ ಪ್ರಗತಿಯ ವರ್ಷ ಎಂಬುದನ್ನು ಬಾಬಾ ವಂಗಾ ಈ ಮೊದಲು ಹೇಳಿರುವುದು ನೋಡಬಹುದು.
ಹಾಗೆ 2025ರಲ್ಲಿ ಈ ರಾಶಿಯವರು ಕೋಟ್ಯಧಿಪತಿಗಳಾಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಶ್ರೇಷ್ಠ ಖಗೋಳ ಶಾಸ್ತ್ರಜ್ಞ, ಜ್ಯೋತಿಷಿ ಫ್ರೆಂಚ್‌ನ ನಾಸ್ಟ್ರಾಡಾಮಸ್ ಹೇಳಿದ್ದಾರೆ. ಯಾವ ರಾಶಿಯವರು 2025ರ ಹೊತ್ತಿಗೆ ಕೋಟ್ಯಧಿಪತಿಗಳಾಗಿ ಪ್ರಗತಿ ಸಾಧಿಸುವ ದಿನಗಳ ಎದುರಿಸುತ್ತಾರೆ ಎಂಬುದನ್ನು ಆತ 16ನೇ ಶತಮಾನದಲ್ಲಿಯೇ ನುಡಿದಿದ್ದಾರೆ.

2025 ರ ಅಂತ್ಯದ ವೇಳೆಗೆ ಸ್ಥಿರವಾದ ಐಷಾರಾಮಿ ಜೀವನದಲ್ಲಿ ಅವರು ತಮ್ಮನ್ನು ನೋಡಲಿದ್ದಾರೆ. ಹಾಗಾದ್ರೆ ನಾಸ್ಟ್ರಾಡಾಮಸ್ ಹೇಳಿರುವ 2025ರ ಅಂತ್ಯದಲ್ಲಿ ಶ್ರೀಮಂತರಾಗುವ ರಾಶಿಗಳು ಯಾವುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
2025 ಮಂಗಳನ ಪ್ರತಿನಿಧಿ ವರ್ಷವಾಗಿರುವುದರಿಂದ. ಮೇಷ ರಾಶಿಯವರು ಮಂಗಳನ ಅಧಿಕಾರದಲ್ಲಿರುತ್ತಾರೆ. ಹೀಗಾಗಿ ಈ ವರ್ಷ ನಿಮಗೆ ಆರ್ಥಿಕ ಸದೃಢತೆಯ ಕಾಲವಾಗಲಿದೆ. ಹಣಕಾಸಿನ ವಿಚಾರದಲ್ಲಿ ನೀವು ಬಯಸಿದ್ದನ್ನು ಪಡೆಯುವಂತಹ ವರ್ಷವಂತೆ. ಹೀಗಾಗಿ ನೀವು 2025ರ ವೇಳೆಗೆ ಸಂಪತ್ತು ಕ್ರೂಢೀಕರಿಸುವ ರಾಶಿಯವರಾಗುತ್ತೀರಿ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಇದು ಬೆಳವಣಿಗೆಯ ವರ್ಷವಾಗುತ್ತಿದೆ. ನಿಮ್ಮಲ್ಲಿ ಆದಾಯ ಗಳಿಕೆಯ ಹೆಚ್ಚು ಹೆಚ್ಚು ಅವಕಾಶಗಳು ಹುಡುಕಿ ಬರಲಿವೆ. ಇದರಿಂದ ನೀವು ಅಂದುಕೊಂಡಿದ್ದಕ್ಕಿಂತಲೂ ವೇಗವಾಗಿ ಪ್ರಗತಿ ಸಾಧಿಸಲಿದ್ದೀರಿ, ನಿಮ್ಮ ಆದಾಯದ ಮೂಲವಾದ ಕಸುಬು, ಕೆಲಸಗಳು ನಿಮ್ಮ ಕೈ ಹಿಡಿಯಲಿದೆ, ನೀವು ಬಯಸಿದಂತೆ ಲಾಭ ಮಾಡಬಹುದಂತೆ.
ಸಿಂಹ ರಾಶಿ
ಸಿಂಹ ರಾಶಿಯವರಲ್ಲಿ ಈ ವರ್ಷ ಅತ್ಯಂತ ಪ್ರಮುಖ ಘಟ್ಟ ಎನ್ನಬಹುದು, ನಿಮ್ಮ ಆರ್ಥಿಕ ಪರಿಸ್ಥಿತಿ ಸುಸ್ಥಿರವಾಗಿಡಲು ನೀವು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೀರಿ. ಈ ಪ್ರಯತ್ನದಲ್ಲಿ ಯಶಸ್ಸು ಸಿಗಲಿದೆ. ಇದು ವರ್ಷದ ಕೊನೆಯಲ್ಲಿ ನಿಮಗೆ ಲಾಭದಾಯಕವಾಗಿ ಪರಿಣಮಿಸಲಿದೆ. ಒಂದಿಷ್ಟು ಹಣ ಹೂಡಿಕೆ ಮತ್ತು ಉಳಿತಾಯದಲ್ಲಿ ಇಡುತ್ತೀರಿ. ಇಷ್ಟು ವರ್ಷದ ಶ್ರಮಕ್ಕೆ ಪ್ರತಿಫಲ ಅನುಭವಿಸುವ ವರ್ಷ ಇದಾಗಿರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿ ಮಂದಿ ಈ ವರ್ಷ ಬಡ್ತಿ, ವೇತನ ಹೆಚ್ಚಳ, ಹೂಡಿಕೆ ಲಾಭದಂತಹ ಹಲವು ರೀತಿಯ ಲಾಭದ ಕೆಲಸದಲ್ಲಿ ತೊಡಗಲಿದ್ದಾರೆ. ಇದರಿಂದ ಅತ್ಯಂತ ವೇಗವಾಗಿ ಪ್ರಗತಿ ಕಾಣುತ್ತಾರೆ. ಅವರ ಕೌಶಲ್ಯದ ಕಾರಣದಿಂದ ಹಣ ಮಾಡುವ ಸಂಭವವಿದೆ. ಸಾಂಸ್ಥಿಕ ಕಾರ್ಯಗಳು ಕಾರ್ಯಗತಗೊಳಿಸುವುದು, ಆಸ್ತಿ ಬೆಳವಣಿಗೆ, ಆರ್ಥಿಕ ಸ್ವಾವಲಂಭಿಯಾಗುವುದು ಇದೇ ವರ್ಷದಲ್ಲಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಈ ವರ್ಷ ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿದ್ದಾರೆ. ನಿಮ್ಮ ಪರವಾದ ಒಲವು ಮೂಡುವ ಹಲವು ಕೆಲಸಗಳು ನಡೆಯಲಿದೆ. ನಿಮ್ಮ ಬಹುದಿನಗಳ ಬಯಕೆಗಳು ಈಡೇರುತ್ತವೆ, ಇದು ನಿಮ್ಮಲ್ಲಿ ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ. ವರ್ಷದ ಕೊನೆಗೆ ಒಂದು ದೊಡ್ಡ ಮೊತ್ತವನ್ನು ನೀವು ಪಡೆಯಬಹುದು. ಇದು ನಿಮ್ಮ ಜೀವನ ಬದಲಿಸಬಹುದು.
ಮಕರ ರಾಶಿ
ಮಕರ ರಾಶಿಯವರು ಷೇರು ಮಾರುಕಟ್ಟೆಯಂತಹ ಕಡೆ ಹೂಡಿಕೆ ಮಾಡಿದ್ದರೆ ಲಾಭದಾಯಕವಾಗಲಿದೆ. ನಿಮ್ಮ ಎಲ್ಲಾ ಉಳಿತಾಯಗಳು ಈ ವರ್ಷ ನಿಮ್ಮ ಕೈ ಸೇರಲಿವೆ. ಸಾಲ ನೀಡಿದ್ದರೆ ಎಲ್ಲಾ ಬಾಕಿ ಮರಳಿ ಬರಲಿದೆ. ವರ್ಷದ ಅಂತ್ಯದಲ್ಲಿ ನಿಮಗೆ ಆರ್ಥಿಕ ದೃಢತೆ ಹಾಗೂ ಹೂಡಿಕೆ ಮಾಡಿದ್ದರೆ ದುಪ್ಪಟ್ಟು ಮರಳಿ ಬರುವ ಸಾಧ್ಯತೆ ಹೆಚ್ಚಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications