Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೂರ್ಯ-ಚಂದ್ರರಿಂದ ವ್ಯತಿಪಾತ ಯೋಗ: ಸುಳ್ಳು ಆರೋಪ, ಟೀಕೆ, ಹಣ ನಷ್ಟ ಅನುಭವಿಸುವುದು ಖಚಿತ!
ನಮ್ಮ ಸೌರಮಂಡಲದಲ್ಲಿ ಸೂರ್ಯ ಹಾಗೂ ಚಂದ್ರನನ್ನು ಬಹಳ ಪ್ರಮುಖ ಗ್ರಹಗಳಾಗಿ ಪರಿಗಣಿಸಲಾಗಿದೆ. 9 ಗ್ರಹಗಳ ಸಾಲಿನಲ್ಲಿಈ ಎರಡು ಗ್ರಹಗಳನ್ನು ಕೇಂದ್ರ ಬಿಂದುಗಳೆಂದು ಕರೆಯಲಾಗಿದೆ. ಹಾಗೆ ಚಂದ್ರ ಹಾಗೂ ಸೂರ್ಯನ ಚಲನೆಯ ವಿದ್ಯಮಾನವನ್ನು ಮುಖ್ಯ ಬದಲಾವಣೆಗಳ ತರುವಂತಹ ಸ್ಥಿತಿ ಎಂದು ಸಹ ಪರಿಗಣಿಸಲಾಗುತ್ತದೆ.
ಸೂರ್ಯ ಹಾಗೂ ಚಂದ್ರ ನಿಗದಿತ ಸಮಯದಲ್ಲಿ ತಮ್ಮ ರಾಶಿ ಹಾಗೂ ನಕ್ಷತ್ರಗಳ ಬದಲಾಯಿಸುತ್ತವೆ. ಆದ್ರೆ ಈ ಎರಡು ಗ್ರಹಗಳು ಒಂದು ರಾಶಿಯಲ್ಲಿ ಸಂಯೋಗವಾಗುವುದು ಬಹಳ ಅಪರೂಪ. ಈ ರೀತಿಯ ಅಪರೂಪದ ವಿದ್ಯಮಾನ ಉಂಟಾದರೆ ಅಲ್ಲಿ ವೈಧೃತಿ ಮತ್ತು ವ್ಯತಿಪಾತದಂತಹ ಯೋಗ ರೂಪುಗೊಳ್ಳುತ್ತವೆ.

ಇನ್ನು ನವೆಂಬರ್ 26 ಬುಧವಾರ ಬೆಳಗ್ಗೆ 5:26ರ ಮುಹೂರ್ತದಲ್ಲಿ ಸೂರ್ಯ ಹಾಗೂ ಚಂದ್ರ ಸಮನಾಂತರ ಚಲನೆಯಲ್ಲಿರುತ್ತಾರೆ. ಸೂರ್ಯನು ವೃಶ್ಚಿಕ ರಾಶಿಯಲ್ಲಿ ಚಲಿಸಿದರೆ ಅದೇ ಸಮಯದಲ್ಲಿ ಚಂದ್ರನು ಮಕರ ರಾಶಿಯಲ್ಲಿ ಚಲಿಸುತ್ತಾನೆ. ಎರಡು ಗ್ರಹಗಳು ಬೇರೆ ಬೇರೆ ರಾಶಿಯಲ್ಲಿದ್ದಾಗಲೂ ಚಲನೆಯ 180 ಡಿಗ್ರಿಯಲ್ಲಿರಲಿದೆ. ಹೀಗಾಗಿ ಇದು ವ್ಯತಿಪಾತ ಯೋಗಕ್ಕೆ ಕಾರಣವಾಗಲಿದೆ.
ಆದ್ರೆ ಈ ಯೋಗವು ಬೇರೆ ಬೇರೆ ರಾಶಿಯಲ್ಲಿ ರೂಪುಗೊಳ್ಳುವುದು ಹಲವು ರೀತಿಯಲ್ಲಿ ಅಶುಭ ಕಾರಕವಾಗುತ್ತಿದೆ. ಹಾಗಾದ್ರೆ ಯಾವೆಲ್ಲಾ ರಾಶಿಯವರು ಸೂರ್ಯ ಚಂದ್ರರ ಈ ಚಲನೆಯಿಂದ ಸಮಸ್ಯೆಗಳ ಎದುರಿಸಲಿದ್ದಾರೆ ಯಾವೆಲ್ಲಾ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಸೂರ್ಯ ಮತ್ತು ಚಂದ್ರನ ಈ ಅಪರೂಪದ ವ್ಯತಿಪಾತ ಯೋಗವು ಮೇಷ ರಾಶಿಯವರಿಗೆ ಅನೇಕ ರೀತಿಯ ಅಡ್ಡಿಗಳ ಉಂಟು ಮಾಡಬಹುದು. ನಿಮ್ಮ ಮಾನಸಿಕ ಮತ್ತು ಭಾವನಾತ್ಮಕ ಪ್ರಕ್ಷುಬ್ಧತೆಯನ್ನು ಹೆಚ್ಚಿಸಬಹುದು. ನಿಮಗೆ ಹತ್ತಿರವಿರುವ ಯಾರೊಂದಿಗಾದರೂ ಹಠಾತ್ ಸಂಘರ್ಷ ಅಥವಾ ತಪ್ಪು ತಿಳುವಳಿಕೆಗಳು ಉಂಟಾಗಬಹುದು. ನಿಮ್ಮ ಮೇಲೆ ಗಂಭೀರ ಸ್ವರೂಪದ ಆರೋಪಗಳು ಎದುರಾಗಬಹುದು. ನಿಮ್ಮ ಪರಿಶ್ರಮಗಳು ನೀರಿನ ಮೇಲೆ ಹೋಮ ಮಾಡಿದಂತಹ ಫಲಿತಾಂಶಕ್ಕೆ ಕಾರಣವಾಗಬಹುದು. ಕೋಪ ನಿಯಂತ್ರಿಸಲಾಗದೆ ಅದರಿಂದ ಹಾನಿ ಅನುಭವಿಸಬಹುದು. ಹಣಕಾಸು ವಿಚಾರವಾಗಿ ಈ ಅವಧಿಯಲ್ಲಿ ಎಚ್ಚರಿಕೆಯ ಅಗತ್ಯವಿದೆ. ನೀವು ಹಠಾತ್ ಅನಗತ್ಯ ವೆಚ್ಚವನ್ನು ಎದುರಿಸಬಹುದು. ಹೂಡಿಕೆ, ಸಾಲ ಅಥವಾ ಪ್ರಮುಖ ಆರ್ಥಿಕ ನಿರ್ಧಾರವನ್ನು ಸದ್ಯಕ್ಕೆ ಮುಂದೂಡುವುದು ಉತ್ತಮ.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ವ್ಯತಿಪಾತ ಯೋಗವು ಗೌರವ ಹಾಗೆ ಸಂಬಂಧಗಳ ಪರೀಕ್ಷೆಗೆ ಒಳಪಡಿಸುವ ಸಮಯ ಆಗಿರಲಿದೆ. ಕೆಲಸದ ಸಂಬಂಧವಾಗಿ ನಿಮ್ಮಲ್ಲಿ ಒತ್ತಡ ಹಾಗೆ ದಿಢೀರ್ ಬದಲಾವಣೆಗಳು ನಿಮ್ಮಲ್ಲಿ ಸಮಸ್ಯೆಗಳ ತರಬಹುದು. ಪ್ರತಿಯೊಂದು ಸನ್ನಿವೇಶದಲ್ಲೂ ಸಂಯಮ ಮತ್ತು ಸಭ್ಯತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ನಿಮ್ಮ ಮೇಲೆ ಟೀಕೆ, ಆರೋಪಗಳು ಬರಬಹುದು. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಆತುರದ ನಿರ್ಧಾರಗಳು ಹಾನಿಕಾರಕವಾಗಬಹುದು. ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಸಹ ಮುಖ್ಯ. ಆರೋಗ್ಯಕ್ಕೆ ಸಂಬಂಧಿಸಿದಂತೆ ನೀವು ತಲೆನೋವು, ಆಯಾಸ ಅಥವಾ ಹೆಚ್ಚಿದ ಮಾನಸಿಕ ಒತ್ತಡವನ್ನು ಅನುಭವಿಸಬಹುದು. ಸಣ್ಣ ವಿವಾದವು ದೊಡ್ಡ ವಿವಾದವಾಗಿ ಬೆಳೆಯದಂತೆ ನೋಡಿಕೊಳ್ಳುತ್ತದೆ.
ಮಕರ ರಾಶಿ
ಈ ಸಮಯದಲ್ಲಿ ಚಂದ್ರನು ನಿಮ್ಮ ರಾಶಿಯಲ್ಲಿ ಇರುವುದರಿಂದ ಈ ವ್ಯತಿಪಾತ ಯೋಗವು ಮಕರ ರಾಶಿಯವರಿಗೆ ಅತ್ಯಂತ ಸವಾಲಿನ ದಿನಗಳ ತರಲಿದೆ. ಇದು ನಿಮ್ಮ ಮನಸ್ಸನ್ನು ಪ್ರಕ್ಷುಬ್ಧ, ಭಾರ ಮತ್ತು ಗೊಂದಲಗಳಿಗೆ ತಳ್ಳಬಹುದು. ನಕಾರಾತ್ಮಕ ಆಲೋಚನೆಗಳ ಹೆಚ್ಚಳವು ನಿಮ್ಮ ನಿರ್ಧಾರ ತೆಗೆದುಕೊಳ್ಳುವಿಕೆಯ ಮೇಲೂ ಪರಿಣಾಮ ಬೀರಬಹುದು. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಸಣ್ಣ ನಷ್ಟಗಳು ಅಥವಾ ತಪ್ಪು ವಹಿವಾಟುಗಳು ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications