Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವೃಶ್ಚಿಕ ರಾಶಿಯಲ್ಲಿ ಮಂಗಳನಿಂದ ವಿಪ್ರೀತ್ ರಾಜ್‌ಯೋಗ: ಡಿಸೆಂಬರ್‌ವರೆಗೂ ಈ ಮೂರು ರಾಶಿಯವರಿಗೆ ಅದೃಷ್ಟ!
ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹವನ್ನು ಪ್ರಮುಖ ಎಂದು ಪರಿಗಣಿಸಲಾಗುತ್ತದೆ. ಆಯಾ ಗ್ರಹಗಳು ತಮ್ಮದೆ ಆದ ಗುಣಗಳ ಹೊಂದಿವೆ. ವ್ಯಕ್ತಿಯೊಬ್ಬರ ಜೀವನದಲ್ಲಿ ಸಂಭವಿಸುವ ಎಲ್ಲಾ ಕ್ರಿಯೆಗಳಿಗೂ ಈ ಗ್ರಹಗಳ ಚಲನೆಗೂ ಸಂಬಂಧವಿದೆ ಎಂದು ಹೇಳಲಾಗಿದೆ. ಹಾಗೆ 9 ಗ್ರಹಗಳ ಪೈಕಿ ಮಂಗಳ ಕೂಡ ವ್ಯಕ್ತಿಯೊಬ್ಬರ ಜೀವನದಲ್ಲಿ ಬದಲಾವಣೆಗಳ ತರುವಂತಹ ದಿನಗಳಿಗೆ ಗ್ರಹಗಳ ಚಲನೆ ಕಾರಣವಾಗಲಿವೆ.
ಮಂಗಳ ಗ್ರಹವನ್ನು 9 ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗಿದೆ. ಮಂಗಳನು ಧೈರ್ಯ, ಶೌರ್ಯ, ಶಕ್ತಿ, ಸಂಪತ್ತು ಐಶ್ವರ್ಯದ ಸಂಕೇತವಾಗಿದೆ. ಮಂಗಳನು ಪ್ರತಿ 45 ದಿನಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಮಂಗಳನ ಸಂಚಾರವಾದಾಗಲೆಲ್ಲ ಹಲವು ರಾಶಿಗಳಿಗೆ ಲಾಭದಾಯಕವಾಗಲಿದೆ. ಅದ್ರಲ್ಲೂ ಈ ಬಾರಿಯ ಮಂಗಳನ ಚಲನೆಯು ನಿಮ್ಮಲ್ಲಿ ಡಿಸೆಂಬರ್ ವರೆಗೂ ಅದ್ಭುತ ಲಾಭಗಳ ತರಲಿದೆ.

ಮಂಗಳನು ಕಳೆದ ಅಕ್ಟೋಬರ್ 27ರಂದು ವೃಶ್ಚಿಕ ರಾಶಿ ಪ್ರವೇಶಿಸಿದೆ. ಡಿಸೆಂಬರ್ 7ರ ವರೆಗೂ ಮಂಗಳ ಅದೇ ರಾಶಿಯಲ್ಲಿರಲಿದ್ದಾನೆ. ಈ 45 ದಿನಗಳ ಪ್ರಯಾಣದಲ್ಲಿ ಮಂಗಳನು ಈಗ ವಿಪ್ರೀತ್ ರಾಜ್‌ಯೋಗ ರೂಪಿಸಲಿದ್ದಾನೆ. ಈ ರಾಜಯೋಗವು ಹಲವರಿಗೆ ಡಿಸೆಂಬರ್ ವರೆಗೂ ಶುಭದಾಯಕ ಹಾಗೆ ಹಲವು ರಾಶಿಯವರಲ್ಲಿ ಅದೃಷ್ಟಕರವಾಗಿ ಪರಿಣಮಿಸಲಿದೆ.
ಮಂಗಳನ ಈ ಪ್ರಭಾವದಿಂದ ಯಾರಿಗೆಲ್ಲಾ ಲಾಭವಾಗಲಿದೆ? ಯಾರಿಗೆ ಶುಭಕರ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಮಂಗಳವು ಮೇಷ ರಾಶಿಯ 8ನೇ ಮನೆಗೆ ಸ್ಥಳಾಂತರಗೊಂಡು ವಿಪ್ರೀತ್ ರಾಜ್‌ಯೋಗ ರೂಪಿಸಲಿದ್ದಾನೆ. ಇದರಿಂದಾಗಿ ನಿಮ್ಮ ಆಸ್ತಿ ಸಂಬಂಧಿ ಬಹಳ ಹಿಂದಿನ ಸಮಸ್ಯೆಯೊಂದನ್ನು ಪರಿಹರಿಸಿಕೊಳ್ಳಬಹುದು. ಡಿಸೆಂಬರ್ ವರೆಗೂ ಮೇಷ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಅಡ್ಡಿಗಳು ಎದುರಾಗುವುದಿಲ್ಲ. ಪಿತ್ರಾರ್ಜಿತವಾಗಿ ದೊರೆತಿರುವ ನಿಮ್ಮ ಆಸ್ತಿಯ ಮೌಲ್ಯ ಹೆಚ್ಚಾಗಲಿದೆ. ಸ್ವಂತ ಉದ್ಯೋಗ ಮಾಡುವ ಮಂದಿಗೆ ಈ ಸಮಯ ಬಹಳ ಅನುಕೂಲಕರ ಇರಲಿದೆ. ವೃತ್ತಿಯಲ್ಲಿ ಉತ್ತಮ ಪ್ರಗತಿ ಮತ್ತು ವ್ಯವಹಾರವನ್ನು ವಿಸ್ತರಿಸಲು ಅವಕಾಶಗಳಿವೆ.
ಮಿಥುನ ರಾಶಿ
ಮಂಗಳವು ಮಿಥುನ ರಾಶಿಯ 6 ನೇ ಮನೆಗೆ ಸ್ಥಳಾಂತರಗೊಂಡು ವಿಪ್ರೀತ್ ರಾಜ್‌ಯೋಗ ರೂಪಿಸಲಿದ್ದಾನೆ. ಇದರಿಂದಾಗಿ ನಿಮ್ಮ ಹಲವು ಕೆಲಸಗಳಲ್ಲಿ ಶುಭವಾಗುವುದು ನೋಡಬಹುದು. ನೀವು ಯಾವುದೇ ಕೆಲಸ ಮಾಡುವಾಗ ಬಹಳ ಸಮಯದಿಂದ ಕಾಡುತ್ತಿದ್ದ ಭಯ ದೂರಾಗಲಿದೆ. ನಿಮ್ಮ ದೊಡ್ಡ ಕನಸೊಂದನ್ನು ನನಸು ಮಾಡಿಕೊಳ್ಳಲು ಒಮದು ಹೆಜ್ಜೆ ಮುಂದಿಡುತ್ತೀರಿ. ಹೊಸ ಆದಾಯ ಮೂಲ ಹುಡುಕುವ ನಿಮ್ಮ ಬಯಕೆ ಸಹ ಈಡೇರಲಿದೆ. ಹೊಸ ಮನೆ, ವಾಹನ ಇತ್ಯಾದಿಗಳನ್ನು ಖರೀದಿಸುವ ಅವಕಾಶಗಳು ನಿಮಗೆ ಸಿಗುತ್ತವೆ. ಹೊಸ ಉದ್ಯೋಗ ಹುಡುಕುತ್ತಿದ್ದರೆ ಈ ಸಮಯದಲ್ಲಿ ನೀವು ಬಯಸಿದಂತಹ ಕೆಲಸವನ್ನು ಪಡೆಯಬಹುದು. ದೀರ್ಘಕಾಲದ ಅನಾರೋಗ್ಯವೊಂದರಿಂದ ಸುಧಾರಣೆ ಇದೆ.
ಮೀನ ರಾಶಿ
ಮಂಗಳವು ಮೀನ ರಾಶಿಯ 9 ನೇ ಮನೆಗೆ ಸ್ಥಳಾಂತರಗೊಂಡು ವಿಪ್ರೀತ್ ರಾಜ್‌ಯೋಗ ಸೃಷ್ಟಿಸಲಿದೆ. ಇದರಿಂದ ನಿಮ್ಮ ಹಲವು ರೀತಿಯ ಸಮಸ್ಯೆಗಳು ನಿವಾರಣೆಯಾಗಲಿದೆ. ನಿಮ್ಮ ಉದ್ಯೋಗ ಸಂಬಂಧಿತ ವಿಚಾರದಲ್ಲಿ ಸಕಾರಾತ್ಮಕ ಫಲಿತಾಂಶಗಳು ನೀಡುತ್ತದೆ. ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗುವಂತಹ ಕೆಲಸಗಳ ಮಾಡುವಿರಿ. ಮೀನ ರಾಶಿ ಜನರಿಗೆ ಶನಿ 2ನೇ ಹಂತದಲ್ಲಿ ಚಲಿಸುತ್ತಾನೆ. ಹೀಗಾಗಿ ಶನಿಯ ದೋಷ ಡಿಸೆಂಬರ್‌ವರೆಗೂ ಕಡಿಮೆಯಾಗಬಹುದು. ನಿಮ್ಮ ಔದ್ಯೋಗಿಕ ವಿಚಾರದಲ್ಲಿ ಶುಭವಾಗುವ ಲಕ್ಷಣಗಳಿವೆ. ಅವಿವಾಹಿತರಲ್ಲಿ ಆರ್ಥಿಕ ಸ್ಥಿತಿ ಸುಧಾರಿಸಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications