Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಕ್ರಮ ಸಂವತ್ಸರ 2081 ಶುರು ಯಾವಾಗ? ಈ ಒಂದು ವರ್ಷ ಯಾವೆಲ್ಲಾ ರಾಶಿಯವರಿಗೆ ಹೆಚ್ಚು ಅನುಕೂಲಕರ
ವಿಕ್ರಮ ಸಂವತ್ಸರ 2081ರ ಹೊಸ ವರ್ಷ ಏಪ್ರಿಲ್ 29ರಿಂದ ಶುರುವಾಗಲಿದೆ. ವೈದಿಕ ಶಾಸ್ತ್ರದ ಪ್ರಕಾರ ಈ ವರ್ಷದ ಅಧಿಪತಿ ಮಂಗಳ. ಇದು ಕೋಪದ ಗ್ರಹ ಎಂದು ಹೇಳಲಾಗುವುದು. ವಿಕ್ರಮ ಸಂವತ್ಸರ ಎಂದರೇನು? ಇದನ್ನು ಹೇಗೆ ಲೆಕ್ಕಚಾರ ಮಾಡಲಾಗುವುದು? ವಿಕ್ರಮ ಸಂವತ್ಸರ 2081 ಯಾವಾಗ ಕೊನೆಯಾಗುವುದು, ವಿಕ್ರಮ ಸಂವತ್ಸರ 2081 ಯಾವೆಲ್ಲಾ ರಾಶಿಯವರಿಗೆ ಅನುಕೂಲಕರ ಎಂದು ನೋಡೋಣ ಬನ್ನಿ:

ವಿಕ್ರಮ ಸಂವತ್ಸರ ಎಂದರೇನು?
ಪಂಚಾಂಗವನ್ನು ವಿಕ್ರಮ ಸಂವತ್ಸರ ನೋಡಿ ಹೇಳಲಾಗುವುದು. ವರ್ಷ, ತಿಂಗಳು, ವಾರ, ತಿಥಿ ಇವುಗಳನ್ನು ಲೆಕ್ಕಾಚಾರ ಮಾಡಲಾಗುವುದು.
ಹಿಂದೂ ಪಂಚಾಂಗದಲ್ಲಿ ಮಾಸದಲ್ಲಿ ಎರಡು ಪಕ್ಷ, ಕೃಷ್ಣ ಪಕ್ಷ 15 ದಿನ,ಶುಕ್ಲ ಪಕ್ಷ 15 ದಿನ. ವರ್ಷದಲ್ಲಿ ಎರಡು ಆಯನ, ಉತ್ತರಾಯಣ, ದಕ್ಷಿಣಾಯನ, ವರ್ಷದಲ್ಲಿ 27 ನಕ್ಷತ್ರಗಳು ರಾಶಿಗಳಲ್ಲಿ ಸಂಚರಿಸುವುದು, ಈ ಬಗೆಯ ಎಲ್ಲಾ ಮಾಹಿತಿ ವಿಕ್ರಮ ಸಂವತ್ಸರ ನೋಡಿ ಹೇಳಲಾಗುವುದು.
ವಿಕ್ರಮ ಸಂವತ್ಸರ 2081 ಹೇಗಿರಲಿದೆ?
ಹೊಸ ಸಂವತ್ಸರದ ಅಧಿಪತಿ ಮಂಗಳ. ಮಂಗಳ ಧೈರ್ಯ, ಆಡಳಿತ, ನಿಯಮಗಳ ಅಧಿಪತಿ, ಅಲ್ಲದೆ 2024 ಶನಿಯ ವರ್ಷ, ಸಂಖ್ಯಾಶಾಸ್ತ್ರ ಪ್ರಕಾರ 2024 ಸಂಖ್ಯೆ 8, 8 ಶನಿಯ ಸಂಖ್ಯೆಯಾಗಿದೆ. ಆದ್ದರಿಂದ ವಿಕ್ರಮ ಸಂವತ್ಸರದ ಹೊಸ ವರ್ಷ ಮಂಗಳ, ಶನಿಯ ಪ್ರಭಾವದಲ್ಲಿ ಇರುತ್ತದೆ, ಆದ್ದರಿಂದ ಈ ವರ್ಷದಲ್ಲಿ ಏರಳಿತಗಳಿರಲಿದೆ, ಆಡಳಿತದಲ್ಲಿ ಹಲವು ಸವಾಲುಗಳಿರಬಹುದು.
ದೇಶದಲ್ಲಿ ಕೆಲ ಅಚ್ಚರಿಯ ಬದಲಾವಣೆಗಳು ಕಂಡು ಬರಬಹುದು, ಅಲ್ಲದೆ ಇವುಗಳ ಪ್ರಭಾವ 12 ರಾಶಿಗಳ ಮೇಲೂ ಇರಲಿದೆ, ಕೆಲವೊಂದು ರಾಶಿಯವರು ಈ ಅವಧಿಯಲ್ಲಿ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ.
ವಿಕ್ರಮ ಸಂವತ್ಸರ 2081ರ ಅವಧಿ
ಏಪ್ರಿಲ್ 29, 2024ರಿಂದ ಶುರುವಾಗಿ ಏಪ್ರಿಲ್ 29, 2025ರವರೆಗೆ ಇರಲಿದೆ.
ವಿಕ್ರಮ ಸಂವತ್ಸರದ ಹೊಸ ವರ್ಷ ಈ ರಾಶಿಯವರಿಗೆ ಅನುಕೂಲಕರ
ಮಿಥುನ ರಾಶಿ
ಹೊಸ ವರ್ಷದಲ್ಲಿ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ. ನಿಮ್ಮೆಲ್ಲಾ ಕಾರ್ಯಗಳು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣವಾಗಲಿದೆ. ಬದುಕಿನಲ್ಲಿ ಖಚಿ, ನೆಮ್ಮದಿ ಇರಲಿದೆ. ವೃತ್ತಿ ಜೀವನದಲ್ಲಿ ಯಶಸ್ಸು ದೊರೆಯಲಿದೆ.
ಮೀನ ರಾಶಿ
ಮೀನ ರಾಶಿಯವರ ಮೇಲೆ ಹೊಸ ವರ್ಷ ಧನಾತ್ಮಕ ಪ್ರಭಾವ ಬೀರಲಿದೆ. ಕೆಲಸದಲ್ಲಿ ಬಡ್ತಿ ದೊರೆಯಲೊದೆ, ವಿದೇಶಕ್ಕೆ ಹೋಗಲು ಬಯಸುವವರಿಗೆ ಈ ಅವಧಿ ಅನುಕೂಲಕರವಾಗಿದೆ.
ಧನು ರಾಶಿ
ಧನು ರಾಶಿಯವರಿಗೆ ವಿಕ್ರಮ ಸಂವತ್ಸರದ ಹೊಸ ವರ್ಷ ಅನುಕೂಲಕರವಾಗಿರಲಿದೆ. ನೀವು ಈ ವರ್ಷ ಯಶಸ್ಸು ಪಡೆಯುತ್ತೀರಿ. ಪಾಲುದಾರಿಕೆಯ ವ್ಯವಹಾರ ಮಾಡುವವರಿಗೆ ಈ ಅವಧಿ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಈ ವರ್ಷದ ಹಣದ ಪರಿಸ್ಥಿತಿ ತುಂಬಾ ಚೆನ್ನಾಗಿರಲಿದೆ, ಹಣವನ್ನು ಉಳಿಸಲು ಸಾಧ್ಯವಾಗುವುದು. ಇನ್ನು ನೀವು ವಿದೇಶಕ್ಕೆ ಹೋಗಲು ಬಯಸುತ್ತಿದ್ದರೆ ಈ ಅವಧಿಯಲ್ಲಿ ನಿಮ್ಮ ಪ್ರಯತ್ನಕ್ಕೆ ಯಶಸ್ಸು ದೊರೆಯಲಿದೆ. ಕುಟುಂಬದೊಂದಿಗೆ ಸಂತೋಷದಿಂದ ಇರುವಿರಿ.
ವೃಶ್ಚಿಕ ರಾಶಿ
ವಿಕ್ರಮ ಸಂವತ್ಸರ 2081 ನಿಮಗೆ ತುಂಬಾ ಶುಭಕರವಾಗಿರಲಿದೆ. ಈ ವರ್ಷದಲ್ಲಿ ನಿಮ್ಮ ಲಕ್ಷುರಿ ಹೆಚ್ಚಾಗಲಿದೆ. ಅಲ್ಲದೆ ಮಾಡಿದ ಹೂಡಿಕೆಯಲ್ಲಿ ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು. ವೃತ್ತಿ ಜೀವನದಲ್ಲಿ ಪ್ರಗತಿ ಕಾಣುವಿರಿ. ವಿವಾಹಿತ ದಂಪತಿ ಮಗುವನ್ನು ಪಡೆಯುವ ಬಯಕೆಯಲ್ಲಿದ್ದರೆ ಮಗುವನ್ನು ಪಡೆಯುತ್ತೀರಿ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ವಿಕ್ರಮ ಸಂವತ್ಸರ ಹೊಸ ಅವಕಾಶಗಳನ್ನು ತರಲಿದೆ. ನೀವು ನಿಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣುತ್ತೀರಿ, ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ, ಸ್ಯಾಲರಿ ಕೂಡ ಹೆಚ್ಚಾಗಲಿದೆ, ಆರೋಗ್ಯ ಕೂಡ ಉತ್ತಮವಾಗಿರುತ್ತದೆ, ಕುಟುಂಬ ಜೀವನದಲ್ಲಿ ಸಂತೋಷ ಇರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications