Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜೂನ್‌ನಲ್ಲಿ ಎರಡು ಬಾರಿ ಶುಕ್ರ ನಕ್ಷತ್ರ ಬದಲಾವಣೆ: ಯಾರಿಗಿದು ಆರ್ಥಿಕ ಲಾಭ ತರಲಿದೆ?
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸಂಚಾರವನ್ನು ಬಹಳ ಪ್ರಮುಖ ವಿದ್ಯಮಾನವಾಗಿ ಪರಿಗಣಿಸಲಾಗುತ್ತದೆ. ಹಾಗೆ ಗ್ರಹಗಳ ಸಂಚಾರವು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರುವುದು ಕೂಡ ನೋಡಬಹುದು. ಇನ್ನು ಪ್ರತಿ ಬಾರಿ ಗ್ರಹಗಳು ರಾಶಿಗಳ ಬದಲಾಯಿಸಿದಾಗ ಪ್ರತಿಯೊಂದು ರಾಶಿ ಜನರ ಮೇಲೆ ಅದರ ಪರಿಣಾಮ ಉಂಟಾಗಲಿದೆ.
ಕೆಲವೊಂದು ಈ ಗ್ರಹಗಳ ಚಲನೆ ಶುಭಕರವಾದರೆ ಮತ್ತೆ ಕೆಲವು ರಾಶಿಗಳಿಗೆ ಅಶುಭವಾಗಬಹುದು. ಇನ್ನು ಗ್ರಹಗಳ ಪೈಕಿ ಶುಕ್ರನನ್ನು ಸಂಪತ್ತು, ಐಷಾರಾಮಿ, ಪ್ರೀತಿ, ಸಮೃದ್ಧಿಯ ಸಂಕೇತವಾಗಿರಲಿದೆ. ಸಾಮಾನ್ಯವಾಗಿ ಶುಕ್ರನು ಒಂದು ತಿಂಗಳಲ್ಲಿ ಒಂದೇ ರಾಶಿಯಲ್ಲಿ ಚಲಿಸುತ್ತಾನೆ. ಶುಕ್ರ ವೇಗವಾಗಿ ಚಲಿಸುವ ಕಾರಣ ಎಲ್ಲಾ ರಾಶಿಯಲ್ಲು ಒಂದೊಂದು ತಿಂಗಳು ನೆಲೆಸಲಿದ್ದಾನೆ.

ಆದ್ರೆ ಈ ಜೂನ್‌ನಲ್ಲಿ ಶುಕ್ರನು ಎರಡು ನಕ್ಷತ್ರಗಳ ಬದಲಾಯಿಸಲಿದ್ದಾನೆ. ನಕ್ಷತ್ರಗಳು ನಮ್ಮ ಜನ್ಮ ರಹಸ್ಯವನ್ನೊಳಗೊಂಡ ಅಂಶವಾಗಿವೆ. ಹೀಗಾಗಿ ಶುಕ್ರನು ನಕ್ಷತ್ರ ಬದಲಾಯಿಸುವುದರಿಂದ ಹಲವು ರೀತಿಯಲ್ಲಿ ಶುಭವಾಗುವುದು ನೋಡಬಹುದು. ಈ ಜೂನ್ 13ರಂದು ಶುಕ್ರನು ಭರಣಿ ನಕ್ಷತ್ರಕ್ಕೆ ಹಾಗೆ ಜೂನ್ 26ರಂದು ಕೃತಿಕಾ ನಕ್ಷತ್ರಕ್ಕೆ ಚಲಿಸಲಿದ್ದಾನೆ. ಈ ರೀತಿ ಶುಕ್ರನ ನಕ್ಷತ್ರ ಬದಲಾವಣೆಯು ಹಲವರಿಗೆ ಲಾಭದಾಯಕವಾಗುತ್ತಿದೆ.
ಶುಕ್ರನ ಈ ನಕ್ಷತ್ರ ಬದಲಾವಣೆಯೂ ಪ್ರಮುಖ ಮೂರು ರಾಶಿಗಳಲ್ಲಿ ಆರ್ಥಿಕ ಸಮಸ್ಯೆ ನಿವಾರಣೆಗೆ ಕಾರಣವಾಗಲಿದೆ. ಹಾಗಾದ್ರೆ ಯಾರಿಗೆ ಇದು ಶುಭಕರ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ಶುಕ್ರನ ನಕ್ಷತ್ರ ಬದಲಾವಣೆಯು ಹಲವು ರೀತಿಯಲ್ಲಿ ಒಳಿತು ಮಾಡಲಿದೆ. ದಾಂಪತ್ಯ ಜೀವನದಲ್ಲಿ ಸುಖ ನೋಡುವ ಸಮಯ ಎನ್ನಬಹುದು. ಏಕೆಂದರೆ ಈ ಸಮಯದಲ್ಲಿ ಯಾವುದಾದರು ಮನಸ್ತಾಪಗಳ ನಿವಾರಣೆ ಆಗಬಹುದು. ವ್ಯಾಪಾರಿಗಳು ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಮೇಲುಗೈ ಸಾಧಿಸಬಹುದು. ನೀವು ಬಹಳ ಸಮಯದಿಂದ ನೀವು ಆಸ್ತಿ ಅಥವಾ ಜಮೀನು ವಿಚಾರವಾಗಿ ಸಮಸ್ಯೆ ಎದುರಿಸುತ್ತಿದ್ದರೆ ಪರಿಹಾರ ಪಡೆಯಬಹುದು. ಅದರಲ್ಲೂ ಧನಾತ್ಮಕ ಪರಿಣಾಮ ಹೆಚ್ಚಾಗಲಿದೆ. ನಿಮ್ಮ ಬಹುಕಾಲದ ಅನಾರೋಗ್ಯ ಸಮಸ್ಯೆ ಕೂಡ ನಿವಾರಣೆ ಸಂಭವವಿದೆ. ಲಕ್ಷ್ಮಿ ದೇವಿಯ ಅನುಗ್ರಹದಿಂದಾಗಿ ನಿಮ್ಮ ಆರ್ಥಿಕ ಸಮಸ್ಯೆಯಲ್ಲೂ ಪರಿಹಾರ ಸಾಧ್ಯವಿದೆ.
ಸಿಂಹ ರಾಶಿ
ಜೂನ್‌ನಲ್ಲಿ ಎರಡು ಬಾರಿ ಶುಕ್ರನು ತನ್ನ ನಕ್ಷತ್ರ ಬದಲಾಯಿಸುವುದು ಸಿಂಹ ರಾಶಿಯವರ ವೈವಾಹಿಕ ಜೀವನವು ಸಿಹಿಯಾಗಿರಲು ಕಾರಣವಾಗುತ್ತದೆ. ನವವಿವಾಹಿತರು ಮಕ್ಕಳೊಂದಿಗೆ ಉತ್ತಮ ಕ್ಷಣಗಳ ಕಳೆಯುತ್ತೀರಿ. ವಿದ್ಯಾರ್ಥಿಗಳಿಗೆ ಈ ಸಮಯ ಬಹಳ ಅನುಕೂಲಕರವಾಗಿರಲಿದೆ. ಕೆಲಸಗಾರರಲ್ಲಿ ವರ್ಗಾವಣೆ, ಬಡ್ತಿ ಇರಲಿದೆ. ವೇತನ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗಲಿದೆ. ನಿಮ್ಮ ಉಳಿತಾಯ, ಹೂಡಿಕೆಗಳು ದುಪ್ಪಟ್ಟಾಗಲಿದೆ. ನಿಮ್ಮ ಬಹಳ ಸಮಯದ ಆರ್ಥಿಕ ಸಮಸ್ಯೆಯೊಂದು ನಿವಾರಣೆಯಾಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ.
ವೃಶ್ಚಿಕ ರಾಶಿ
ಜೂನ್‌ನಲ್ಲಿ ಎರಡು ಬಾರಿ ಶುಕ್ರನ ನಕ್ಷತ್ರ ಬದಲಾವಣೆಯು ಅದೃಷ್ಟ ತರಲಿದೆ. ಪ್ರೇಮ ಸಂಬಂಧಗಳು ಈ ಸಮಯದಲ್ಲಿ ಸಿಹಿ ತರಬಹುದು. ಅವಿವಾಹಿತರಲ್ಲಿ ಈ ಸಮಯ ಬಹಳ ಉತ್ತಮವಾಗಿರಲಿದೆ. ನಿಮ್ಮ ಖರ್ಚುಗಳು ಕಡಿಮೆಯಾಗಲಿದೆ, ಹಾಗೆ ಇದು ನಿಮಗೆ ಮಾನಸಿಕ ನೆಮ್ಮದಿ ತರಲು ಸಹಾಯವಾಗಲಿದೆ. ಅನಿರೀಕ್ಷಿತ ಮೂಲದಿಂದ ನಿಮಗೆ ಹಣಕಾಸು ಲಾಭ ಆಗಬಹುದು. ಯಾರಿಗಾದರು ಹಣ ನೀಡಿದ್ದರೆ ಈ ಸಮಯದಲ್ಲಿ ಅವರಿಂದ ವಾಪಾಸು ಪಡೆಯಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ದೃಢೀಕರಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications