Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2026ರ ಆರಂಭದಲ್ಲೇ ಮಕರ ರಾಶಿಗೆ ಶುಕ್ರ ಸಂಚಾರ; ಈ ರಾಶಿಯವರಿಗೆ ಧನಲಾಭ, ಶನಿ ಪ್ರಭಾವದಿಂದ ಮುಕ್ತಿ!
ವೈದಿಕ ಜ್ಯೋತಿಷ್ಯದಲ್ಲಿ ಶುಕ್ರನನ್ನು ರಾಕ್ಷಸರ ಗುರು ಎಂದು ಪರಿಗಣಿಸಲಾಗುತ್ತದೆ. ಈ ಶುಕ್ರನನ್ನು ಸೌಂದರ್ಯ, ಐಷಾರಾಮಿ, ಪ್ರೀತಿ, ಸಂಪತ್ತು ಮತ್ತು ಸಮೃದ್ಧಿಗೆ ಕಾರಣವೆಂದು ಪರಿಗಣಿಸಲಾಗುತ್ತದೆ. ಇದು ವೃಷಭ ಮತ್ತು ತುಲಾ ರಾಶಿಯ ಅಧಿಪತಿಯೂ ಆಗಿದೆ. ಹಾಗೆ ಶುಕ್ರನು ವೇಗವಾಗಿ ಚಲಿಸುವ ಗ್ರಹ ಆಗಿರುವುದರಿಂದ ಒಂದು ವರ್ಷದಲ್ಲಿ ಎಲ್ಲಾ ಗ್ರಹಗಳಿಗೂ ಚಲಿಸುವುದು ನೋಡಬಹುದು.
ಈ ರೀತಿಯಾಗಿ ಶುಕ್ರನು 2026ರ ಮೊದಲ ತಿಂಗಳಲ್ಲಿ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಂಚಾರ ಜನವರಿ 13 ರಂದು ನಡೆಯಲಿದೆ. ಜನವರಿ 14ರಂದು ಮಕರ ಸಂಕ್ರಾಂತಿಯಾಗಿದ್ದು ಈ ಹಬ್ಬದ ಹಿಂದಿನ ದಿನ ಶುಕ್ರನ ಸಂಚಾರ ನೋಡಬಹುದು. ಆದ್ರೆ ಮಕರ ರಾಶಿಯ ಅಧಿಪರಿ ಶನಿಯಾಗಿದ್ದಾನೆ. ಈ ಶನಿ ರಾಶಿಗೆ ಶುಕ್ರನ ಪ್ರವೇಶವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಏಕೆಂದರೆ ಜ್ಯೋತಿಷ್ಯದ ಪ್ರಕಾರ, ಶನಿ ಮತ್ತು ಶುಕ್ರ ಸ್ನೇಹಪರರಾಗಿದ್ದಾರೆ. ಶುಕ್ರನ ಈ ರಾಶಿಚಕ್ರ ಬದಲಾವಣೆಯ ಪ್ರಭಾವವು 12 ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಕಂಡುಬರುತ್ತದೆ.

ಈ ಶುಕ್ರ ಸಂಚಾರವು ಕೆಲವು ರಾಶಿ ಜನರ ಅದೃಷ್ಟವನ್ನು ಬೆಳಗಿಸಲಿದೆ. ಪರಿಣಾಮವಾಗಿ ಅನಿರೀಕ್ಷಿತ ಆರ್ಥಿಕ ಲಾಭಗಳು ಉಂಟಾಗುತ್ತವೆ ಮತ್ತು ಸಿಲುಕಿಕೊಂಡ ಹಣವನ್ನು ಮರುಪಡೆಯಲಾಗುತ್ತದೆ. ವ್ಯವಹಾರದಲ್ಲಿ ಉತ್ತಮ ಪ್ರಗತಿಯೂ ಇರಲಿದೆ. ಹಾಗೆ ಈ ಸಂಚಾರದಿಂದ ಹಲವರಿಗೆ ಲಾಭಕರವಿದೆ. ಹಾಗಾದ್ರೆ ಶುಕ್ರನಿಂದ ಯಾರಿಗೆ ಅನುಕೂಲಕರ ದಿನಗಳಿವೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತುಲಾ ರಾಶಿ
ಶುಕ್ರನು ತುಲಾ ರಾಶಿಯ 4ನೇ ಮನೆಗೆ ಸ್ಥಳಾಂತರಗೊಳ್ಳುತ್ತಾನೆ. ಇದರಿಂದ ಈ ರಾಶಿಯವರ ಸೌಲಭ್ಯಗಳು ಹೆಚ್ಚಾಗುತ್ತವೆ. ನೀವು ಐಷಾರಾಮಿ ಜೀವನ ನಡೆಸುವಿರಿ. ಹೊಸ ಮನೆ ಮತ್ತು ವಾಹನ ಲಾಭಗಳಿವೆ. ನಿರುದ್ಯೋಗಿ ಯುವಕರಿಗೆ ಈ ಸಮಯದಲ್ಲಿ ಉತ್ತಮ ಅವಕಾಶಗಳು ಸಿಗಲಿವೆ. ಪ್ರೇಮ ಜೀವನ ಸಿಹಿಯಾಗಲಿದೆ. ನಿಮ್ಮ ಹಲವು ಓಡಾಟಗಳು ನೀವು ಬಯಸಿದ ಫಲಿತಾಂಶಗಳ ತರಲಿದೆ. ಹಾಗೆ ಶನಿಯ ಸಹಕಾರದ ಕಾರಣ ನಿಮ್ಮ ಆರ್ಥಿಕ ಅಡ್ಡಿಗಳು ನಿವಾರಣೆಯಾಗಲಿದೆ. ಅದ್ರಲ್ಲೂ ಹೊಸ ವ್ಯವಹಾರಲ್ಲಿನ ಅಡಚಣೆಗಳು ನಿವಾರಣೆಯಾಗಲಿದೆ. ಹಾಗೆ ಬಹು ಸಮಯದಿಂದ ನಿಮಗೆ ಸಮಸ್ಯೆ ತಂದಿದ್ದ ವಿಚಾರವೊಂದರಿಂದ ನಿಮಗೆ ಅನುಕೂಲವಿದೆ. ಜಂಟಿ ವ್ಯವಹಾರ ಮಾಡುವವರಿಗೆ ಉತ್ತಮ ಲಾಭ ಸಿಗುತ್ತದೆ.
ಮಕರ ರಾಶಿ
ಶುಕ್ರನು ಮಕರ ರಾಶಿಯ ಮೊದಲ ಮನೆಗೆ ಸ್ಥಳಾಂತರಗೊಳ್ಳುತ್ತಾನೆ. ಇದು ಮಕರ ರಾಶಿ ಜನರಿಗೆ ಅನುಕೂಲಕರ ಸಮಯ ಆಗಿರಲಿದೆ. ನಿಮ್ಮ ಹಲವು ಕೆಲಸಗಳು ನೀವು ಬಯಸಿದಂತೆ ನಡೆಯಲಿದೆ. ಸ್ನೇಹ ಸಂಬಂಧಗಳು ಬಲವಾಗುತ್ತವೆ. ವಾಹನ ಲಾಭವಿದೆ. ಅವಿವಾಹಿತರಲ್ಲಿ ದೊಡ್ಡ ಮೊತ್ತದ ಲಾಭದ ಮೂಲಕ ಕೈ ಸೇರಲಿದೆ. ನಿಮ್ಮ ಹೂಡಿಕೆಯಿಂದ ಲಾಭ ಹೆಚ್ಚಾಗಲಿದೆ. ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯನ್ನು ನೋಡುತ್ತೀರಿ. ವಿವಾಹಿತರ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಪ್ರೇಮಿಗಳಿಗೆ ಈ ಸಮಯ ಮಧುರವಾಗಲಿದೆ.
ಧನು ರಾಶಿ
ಶುಕ್ರನು ಧನು ರಾಶಿಯ 2 ನೇ ಮನೆಗೆ ಸ್ಥಳಾಂತರಗೊಳ್ಳುತ್ತಾನೆ. ಇದರಿಂದಾಗಿ ಧನು ರಾಶಿ ಜನರಿಗೆ ಅನಿರೀಕ್ಷಿತ ಆರ್ಥಿಕ ಲಾಭಗಳನ್ನು ಪಡೆಯುವುದು ನೋಡಬಹುದು. ದಾಂಪತ್ಯ ವಿಚಾರದಲ್ಲಿ ಮಧುರ ದಿನಗಳಿವೆ. ಕೆಲಸ ಮತ್ತು ವೃತ್ತಿ ಸಂಬಂಧಿತ ವಿಚಾರದಲ್ಲಿ ಶುಭವಾಗುವುದು ನೋಡಬಹುದು. ನಿಮ್ಮ ಎಲ್ಲಾ ಕೆಲಸಗಳಲ್ಲಿ ಕುಟುಂಬಸ್ಥರ ಬೆಂಬಲ ಸಿಗುವುದು ನೋಡಬಹುದು. ನಿಮ್ಮ ದೊಡ್ಡ ಕೆಲಸ ಅಥವಾ ಒಪ್ಪಂದವೊಂದು ನಿಮಗೆ ಶುಭ ತರಲಿದೆ. ವಾಹನ ಸಂಬಂಧಿತ ಲಾಭಗಳು ಹೆಚ್ಚಾಗಲಿದೆ.
(ಹಕ್ಕುತ್ಯಾಗ: ಮೇಲೆ ಒದಗಿಸಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಇದನ್ನು ಮಾಹಿತಿಯಾಗಿ ಮಾತ್ರ ತೆಗೆದುಕೊಳ್ಳಬೇಕು. ಯಾವುದೇ ಮಾಹಿತಿ ಅಥವಾ ಊಹೆಯನ್ನು ಅಭ್ಯಾಸ ಮಾಡುವ ಅಥವಾ ಕಾರ್ಯನಿರ್ವಹಿಸುವ ಮೊದಲು ದಯವಿಟ್ಟು ಅರ್ಹ ವೃತ್ತಿಪರರನ್ನು ಸಂಪರ್ಕಿಸಿ.)



Click it and Unblock the Notifications










