Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
12 ತಿಂಗಳ ಬಳಿಕ ಸ್ವಂತ ರಾಶಿಗೆ ಶುಕ್ರ ಸಂಚಾರ: ಅಕ್ಷಯ ಪಾತ್ರೆಯಾಗಲಿದೆ ಜೀವನ!
ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರವು ಬಹಳ ಪ್ರಮುಖ ವಿದ್ಯಮಾನ ಎಂಬುದನ್ನು ನೀವೆಲ್ಲಾ ಅರಿತಿರಬಹುದು. ಹಾಗೆ ಗ್ರಹಗಳ ಸಂಚಾರದಿಂದ ಹಲವು ರಾಶಿಗಳಲ್ಲಿ ಹಲವು ರೀತಿ ಬದಲಾವಣೆಗಳು, ಹಲವು ಶುಭ ಹಾಗೂ ಅಶುಭ ಕಾರಕಗಳಿಗೂ ಸಾಕ್ಷಿಯಾಗುವುದು ನೋಡಬಹುದು. ನಿರ್ದಿಷ್ಟ ಸಮಯದಲ್ಲಿ ಗ್ರಹಗಳು ನಿರ್ದಿಷ್ಟ ರಾಶಿಗಳಿಗೆ ಚಲಿಸುವುದು ಈ ಎಲ್ಲಾ ಬದಲಾವಣೆಗಳಿಗೆ ಕಾರಣವಾಗಲಿದೆ.
ಹಾಗೆ ಅಕ್ಟೋಬರ್‌ನಲ್ಲಿ ಹಲವು ಗ್ರಹಗಳ ಚಲನೆಯಲ್ಲಿ ಬದಲಾವಣೆಗಳ ನೋಡಬಹುದು. ಅದರಲ್ಲೂ ಈಗ ಶುಕ್ರನ ಸಂಚಾರದಿಂದಾಗಿ ಹಲವು ರಾಶಿಗಳ ಮೇಲೆ ಪರಿಣಾಮ ಉಂಟು ಮಾಡುವುದು ಸಾಮಾನ್ಯ. ಶುಕ್ರನನ್ನು ಸೌಂದರ್ಯ, ಐಷಾರಾಮಿ, ಪ್ರೀತಿ, ಸಂಪತ್ತು, ಸಮೃದ್ಧಿಯಂತಹ ವಿಚಾರಗಳಿಂದ ಪರಿಗಣಿಸಲಾಗುತ್ತದೆ. ಹೀಗಾಗಿ ಶುಕ್ರನ ಸ್ಥಾನ ಬದಲಾವಣೆ ಆದಾಗಲೆಲ್ಲ. ನಿಮ್ಮಲ್ಲಿ ಹಲವು ರೀತಿಯ ಬದಲಾವಣೆಗಳ ನೋಡಬಹುದಾಗಿದೆ.

ಶುಕ್ರನು ತುಲಾ ಹಾಗೂ ವೃಷಭ ರಾಶಿಯ ಅಧಿಪರಿಯಾಗಿದ್ದಾನೆ. ಈಗ ಶುಕ್ರನು ತನ್ನದೇ ರಾಶಿಯಾಗಿರುವ ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ನವೆಂಬರ್ ತಿಂಗಳಲ್ಲಿ ಶುಕ್ರನು ತನ್ನ ಸ್ವಂತ ರಾಶಿಗೆ ಚಲಿಸಲಿದ್ದಾನೆ. ಸುಮಾರು 12 ತಿಂಗಳ ನಂತರ ತನ್ನದೇ ಆದ ರಾಶಿಗೆ ಚಲಿಸುವ ಶುಕ್ರನ ಪ್ರಭಾವವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಗೋಚರಿಸುತ್ತದೆ.
ವಿಶೇಷವಾಗಿ ಕೆಲವು ರಾಶಿ ಜನರಿಗೆ ಈ ಶುಕ್ರ ಸಂಚಾರದಿಂದಾಗಿ ಆರ್ಥಿಕ ಸ್ಥಿತಿಯಲ್ಲಿ ಸುಸ್ಥಿತಿ ಇರಲಿದೆ. ಪ್ರಗತಿಗೆ ಅವಕಾಶಗಳೂ ಇರುತ್ತವೆ. ನವವಿವಾಹಿತರು ಸಂತಸದ ದಿನಗಳ ಕಳೆಯಬಹುದು. ಈಗ ಶುಕ್ರನು ತುಲಾ ರಾಶಿಗೆ ಚಲಿಸುವುದರಿಂದ ಯಾವ ರಾಶಿ ಜನರಿಗೆ ಉತ್ತಮ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಕರ ರಾಶಿ
ಶುಕ್ರನು ಮಕರ ರಾಶಿಯ 10 ನೇ ಮನೆಯಲ್ಲಿ ಚಲಿಸುತ್ತಾನೆ. ಇದರಿಂದಾಗಿ ಈ ರಾಶಿ ಜನರಲ್ಲಿ ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. ಉದ್ಯೋಗದಲ್ಲಿರುವ ಮಂದಿಗೆ ಬಡ್ತಿಯ ಸಾಧ್ಯತೆ ಇದೆ. ಹಾಗೆ ಈ ಮೊದಲೇ ನೀವು ಮಾಡಿರುವ ಹೂಡಿಕೆಗಳು ಲಾಭದಾಯಕವಾಗಿ ಮರಳಲಿವೆ. ಶುಕ್ರನ ಆಶೀರ್ವಾದದ ಪರಿಣಾಮ ಮನೆಗಾಗಿ ನೀವು ಹೊಸ ವಸ್ತುಗಳ ಖರೀದಿಸಬಹುದು, ಅದ್ರಲ್ಲೂ ದುಬಾರಿ ಬೆಲೆಯ ವಸ್ತುಗಳನ್ನು ಮನೆಗೆ ತರಬಹುದು. ಮಾಧ್ಯಮ, ಕಲೆ ಮತ್ತು ಫ್ಯಾಷನ್ ಡಿಸೈನಿಂಗ್ ಕ್ಷೇತ್ರಗಳಲ್ಲಿರುವವರು ಉತ್ತಮ ಯಶಸ್ಸು ಮತ್ತು ಲಾಭವನ್ನು ಪಡೆಯುತ್ತಾರೆ. ದಾಂಪತ್ಯದಲ್ಲಿದ್ದ ಮನಸ್ತಾಪಗಳು ದೂರಾಗಲಿವೆ.
ಮೇಷ ರಾಶಿ
ಶುಕ್ರನು ಮೇಷ ರಾಶಿಯ 7 ನೇ ಮನೆಗೆ ಚಲಿಸಲಿದ್ದಾನೆ. ಇದರಿಂದಾಗಿ ಈ ರಾಶಿ ಜನರು ತಮ್ಮ ಸಂಗಾತಿಯಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಮದುವೆಯಾಗದವರಿಗೆ ಉತ್ತಮ ಸಂಬಂಧಗಳು ಹುಡುಕಿ ಬರಬಹುದು. ಪ್ರೀತಿಸಿದವರ ಮದುವೆಯಾಗಲು ಬಯಸಿದರೆ, ಈ ಅವಧಿಯಲ್ಲಿ ನಿಮ್ಮ ಕುಟುಂಬದ ಒಪ್ಪಿಗೆಯನ್ನು ಪಡೆಯುತ್ತೀರಿ. ನಿಮ್ಮ ಆದಾಯ ಮೂಲಗಳು ಹೆಚ್ಚಾಗುವುದು ನೋಡಬಹುದು. ಪಾಲುದಾರಿಕೆ ವ್ಯವಹಾರ ಮಾಡುತ್ತಿದ್ದರೆ ನಿಮಗೆ ಶುಭವಿದೆ. ಯಾರಿಗಾದರು ಹಣ ನೀಡಿದ್ದರೆ ಮರಳಿ ಪಡೆಯುವ ಅವಕಾಶಗಳು ಹೆಚ್ಚಾಗಲಿದೆ.
ಕುಂಭ ರಾಶಿ
ಶುಕ್ರನು ಕುಂಭ ರಾಶಿಯ 9 ನೇ ಮನೆಗೆ ಚಲಿಸಲಿದ್ದಾನೆ. ಇದು ಈ ರಾಶಿ ಜನರ ಅದೃಷ್ಟವನ್ನು ಹೆಚ್ಚಿಸಲಿದೆ. ನಿಮ್ಮ ಜೀವನದಲ್ಲಿ ಹಣಕಾಸು ವಿಚಾರಗಳು ಸುಸೂತ್ರವಾಗಿ ನಡೆಯಲಿದೆ. ದೊಡ್ಡ ವ್ಯವಹಾರಗಳ ಮಾಡುತ್ತಿದ್ದವರಿಗೆ ಲಾಭಗಳು ಹೆಚ್ಚಾಗಲಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಾಭದಾಯಕ ಸಮಯ. ವಿದೇಶ ಪ್ರಯಾಣದಂತಹ ವಿಚಾರದಲ್ಲಿ ಶುಭವಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications