Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೋಹಿಣಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಅದೃಷ್ಟಕರ ರಾಶಿಗಳು ಯಾವುದು ಗೊತ್ತಾ?
ಜ್ಯೋತಿಷ್ಯದಲ್ಲಿ ಶುಕ್ರನಿಗೆ ಪ್ರಮುಖ ಸ್ಥಾನ ನೀಡಲಾಗುತ್ತದೆ. ಐಶ್ವರ್ಯ, ಸಂಪತ್ತು, ಅದೃಷ್ಟಗಳ ತರುವಂತಹ ಗ್ರಹವೆಂದು ಶುಕ್ರನನ್ನು ಪರಿಗಣಿಸಲಾಗಿದೆ. ಶುಕ್ರನು ವೇಗವಾಗಿ ಚಲಿಸುವ ಗ್ರಹ ಬಹಳ ವೇಗವಾಗಿ ತನ್ನ ರಾಶಿಯ ಬದಲಾಯಿಸುತ್ತಾನೆ. ಹೀಗೆ ಶುಕ್ರನು ತನ್ನ ರಾಶಿ ಬದಲಾಯಿಸುವುದರಿಂದ ಎಲ್ಲಾ 12 ರಾಶಿಗಳಲ್ಲೂ ಬದಲಾವಣೆಗಳು ನಡೆಯುವುದು ನೋಡಬಹುದು.
ಜ್ಯೋತಿಷ್ಯದಲ್ಲಿ ಶುಕ್ರನು ಶುಭ ಗ್ರಹದ ಸ್ಥಾನಮಾನವನ್ನು ನೀಡಲಾಗಿದೆ. ಸಂತೋಷ, ಸಮೃದ್ಧಿ, ಪ್ರೀತಿ, ಕಲೆ ಮತ್ತು ಸೌಂದರ್ಯದ ಪ್ರತೀಕವಾಗಿಯೂ ಹೆಸರಿಸಲಾಗಿದೆ. ಒಬ್ಬರ ಜೀವನದಲ್ಲಿ ಶುಕ್ರನ ಪರಿಣಾಮವು ಅತ್ಯಧಿಕವಾಗಿರಲಿದೆ. ಶುಕ್ರನು ಬಲವಾದ ಸ್ಥಾನದಲ್ಲಿದ್ದರೆ ಶುಕ್ರದೆಸೆಯ ಆರಂಭವಾಗುತ್ತದೆ. ಆದರೆ ಅಶುಭ ಕಾರಕವಾದರೆ ಸಮಸ್ಯೆಗಳ ಎದುರಿಸಬೇಕಾಗುತ್ತದೆ.

ಈಗ ಜುಲೈ 8ರಂದು ಶುಕ್ರನು ರೋಹಿಣಿ ನಕ್ಷತ್ರಕ್ಕೆ ಚಲಿಸಿದ್ದಾನೆ. ಶುಕ್ರ ರೋಹಿಣಿ ನಕ್ಷತ್ರಕ್ಕೆ ಚಲಿಸುವುದು ಹಲವರಲ್ಲಿ ಬದಲಾವಣೆಯ ನೋಡಬಹುದು ಹಾಗೆ ಹಲವು ರಾಶಿಗಳಲ್ಲಿ ಇದು ಲಾಭದಾಯಕವಾಗುತ್ತಿದೆ. ಹಾಗಾದ್ರೆ ಶುಕ್ರನಿಂದ ಯಾವೆಲ್ಲಾ ರಾಶಿಯವರಿಗೆ ಲಾಭದಾಯಕ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ಶುಕ್ರನು ರೋಹಿಣಿ ನಕ್ಷತ್ರಕ್ಕೆ ಚಲಿಸುವುದರಿಂದ ವೃಷಭ ರಾಶಿಯವರಲ್ಲಿ ಅತ್ಯಧಿಕ ಲಾಭ ನೋಡಬಹುದು. ಶುಕ್ರನು ನಿಮಗೆ ಭೌತಿಕ ಸಂತೋಷಕ್ಕೆ ಕಾರಣವಾಗಲಿದ್ದಾನೆ. ಉದ್ಯೋಗದಲ್ಲಿ ಬಡ್ತಿ ಹೊಸ ಜಬಾವ್ದಾರಿಗಳು ನಿಮಗೆ ಸಿಗಬಹುದು. ಹಠಾತ್ ಧನಲಾಭದ ನಿರೀಕ್ಷೆಯನ್ನು ಕೂಡ ಇಟ್ಟುಕೊಳ್ಳಬಹುದು. ವಿವಾಹಿತರಲ್ಲಿ ಈ ಸಮಯ ಬಹಳ ಲಾಭದಾಯಕವಾಗುತ್ತಿದೆ. ನೀವು ಬಯಸಿದ ವಸ್ತುವನ್ನು ಖರೀಸಿದಬಹುದು. ಮನೆಯಲ್ಲಿ ಬದಲಾವಣೆಗಳ ತರಬಹುದು. ಉದ್ಯೋಗ ಬದಲಾಯಿಸುವ ಮಾರ್ಗ ಹತ್ತಿರವಾಗಲಿದೆ. ಪಂಚೇಂದ್ರಿಯ ಸಂಬಂಧಿ ಅನಾರೋಗ್ಯ ಸಮಸ್ಯೆಯಿಂದ ನೀವು ಮುಕ್ತಿ ಪಡೆಯುತ್ತೀರಿ. ಶುಭ ಕಾರ್ಯಗಳ ಸಂಬಂಧವಾಗಿ ಚರ್ಚೆಗಳು ಧನಾತ್ಮಕ ಫಲಿತಾಂಶಗಳ ತರಬಹುದು.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಹೊಸ ಉದ್ಯೋಗಾವಕಾಶಗಳು ಸಿಗುವ ಸಾಧ್ಯತೆ ಇರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಯಶಸ್ಸು ತರುವ ಸಮಯ ಆಗಿರಲಿದೆ. ವಿದೇಶ ಪ್ರಯಾಣದ ಬಲವಾದ ಅವಕಾಶಗಳಿವೆ. ಪ್ರೇಮ ಜೀವನದಲ್ಲಿ ಇದರ ಶುಭ ಪರಿಣಾಮಗಳನ್ನು ನೋಡುವಿರಿ. ಹಣಕಾಸು ವಿಚಾರವಾಗಿ ನಮಗೆ ಬಹಳ ಉತ್ತಮ ದಿನಗಳು ಬರಲಿವೆ. ನೀವು ಅಂದುಕೊಂಡತೆ ಹಣಕಾಸು ಬದಲಾವಣೆಗಳಿಗೆ ಸಾಕ್ಷಿಯಾಗಲಿದ್ದೀರಿ. ವ್ಯಾಪಾರಿಗಳಲ್ಲಿ ಪ್ರಗತಿ ನೋಡಬಹುದು. ವಾಹನ ಲಾಭವಿದೆ. ಸರ್ಕಾರಿ ಉದ್ಯೋಗಿಗಳು ಬಹಳ ಸಮಯದಿಂದ ವರ್ಗಾವಣೆಗೆ ಬಯಸಿದ್ದರೆ ಈ ಸಮಯದಲ್ಲಿ ಅದಕ್ಕೆ ಪೂರಕ ವಾತಾವರಣ ಇರಲಿದೆ. ಸಾಲ ಮುಕ್ತರಾಗಲು ಇದು ಸೂಕ್ತ ಸಮಯ ಆಗಿರಲಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಶುಕ್ರನು ಸಮತೋಲನದ ಲಾಭ ನೀಡಲಿದ್ದಾನೆ. ಬಹಳ ಸಮಯದಿಂದ ನೀವು ಬಯಸಿದಂತಹ ವಸ್ತುವೊಂದನ್ನು ನೀವು ಖರೀದಿಸಬಹುದು. ಹಣಕಾಸಿನ ಪ್ರಯೋಜನಗಳು ನಿಮ್ಮನ್ನು ಹುಡುಕಿ ಬರಲಿವೆ. ಅವಿವಾಹಿತರಲ್ಲಿ ಈ ಸಮಯ ಬಹಳ ಲಾಭದಾಯಕ ದಿನಗಳ ನೋಡಬಹುದು, ನಿಮ್ಮ ಔದ್ಯೋಗಿಕ ಯಶಸ್ಸಿಗೆ ಕಾರಣವಾಗಬಹುದು. ಹಾಗೆ ವ್ಯಾಪಾರಿಗಳಲ್ಲಿ ಇದ ಹಣಕಾಸು ಅಡೆತಡೆಗಳು ಈ ಸಮಯದಲ್ಲಿ ನಿವಾರಣೆಯಾಗಲಿದೆ. ವೈವಾಹಿಕ ಜೀವನದಲ್ಲಿ ಸಂತದ ಇರಲಿದೆ. ವಾಹನ ಖರೀದಿ ಸಂಬಂಧವಾಗಿ ಬಹಳ ಸಮಯದಿಂದ ನೀವು ಆಲೋಚಿಸುತ್ತಿದ್ದರೆ ಆ ಕುರಿತ ನಿರ್ಧಾರ ತೆಗೆದುಕೊಳ್ಳಬಹುದು. ಸಂಬಂಧಿಕರಿಂದ ಯಾವುದಾದರು ಹಣ ಬರಬೇಕಾಕಿದ್ದರೆ ಈ ಸಮಯದಲ್ಲಿ ನಿಮ್ಮ ಕೈ ಸೇರಬಹುದು. ಕೃಷಿ ಸಂಬಂಧಿ ವಿಚಾರದಲ್ಲಿ ಬಹಳ ಲಾಭವಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications