Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಹುವಿನ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ ರಾಶಿಯವರ ಜೀವನದಲ್ಲಿ ಜಾಕ್‌ಪಾಟ್, ಸಾಲು ಸಾಲು ಸಿಹಿ ಸುದ್ದಿ!!
ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳು ತಮ್ಮ ರಾಶಿ ಮತ್ತು ನಕ್ಷತ್ರಗಳನ್ನು ಬದಲಾಯಿಸುತ್ತ ಇರುತ್ತವೆ. ಗ್ರಹಗಳ ಈ ಬದಲಾವಣೆಗಳು ಎಲ್ಲಾ ರಾಶಿ ಜನರ ಜೀವನದಲ್ಲಿಯೂ ಬದಲಾವಣೆಗಳ ತರುತ್ತವೆ. ಗ್ರಹಗಳ ಬದಲಾವಣೆಯಂತೆ, ನಕ್ಷತ್ರಗಳ ಬದಲಾವಣೆಗಳು ಕೂಡ ಜ್ಯೋತಿಷ್ಯದಲ್ಲಿ ಬಹಳ ಮುಖ್ಯ ಅಂಶವೆಂದು ಪರಿಗಣಿಸಲಾಗುತ್ತದೆ.
ನಿರ್ದಿಷ್ಟ ಸಮಯದಲ್ಲಿ ಎಲ್ಲಾ ಗ್ರಹಗಳು ತಮ್ಮ ನಕ್ಷತ್ರ ಬದಲಾಯಿಸುತ್ತವೆ. ಇದು ಹಲವು ರಾಶಿಗಳ ಮೇಲೆ ಪರಿಣಾಮ ಬೀರುವುದು ನೋಡಬಹುದು. ಈಗ ಶುಕ್ರನ ಸಂಚಾರದಿಂದ ಹಲವು ರಾಶಿಗಳ ಮೇಲೆ ಪರಿಣಾಮ ಉಂಟು ಮಾಡುವುದು ನೋಡಬಹುದು. ನವೆಂಬರ್ 7 ರಂದು ಶುಕ್ರನು ರಾಹುವಿನ ಆಳ್ವಿಕೆಯ ಸ್ವಾತಿ ನಕ್ಷತ್ರಕ್ಕೆ ಪ್ರವೇಶಿಸುತ್ತಾನೆ. ಇದು ಕೆಲವು ರಾಶಿ ಜನರಿಗೆ ಅಪಾರ ಅದೃಷ್ಟವನ್ನು ತರಲಿದೆ.

ಶುಕ್ರನ ಈ ನಕ್ಷತ್ರ ಬದಲಾವಣೆಯು ಮೂರು ರಾಶಿ ಜನರಲ್ಲಿ ಐಷಾರಾಮಿ ಜೀವನ ಮತ್ತು ಸಮೃದ್ಧಿಯನ್ನು ನೀಡಲಿದೆ. ಶುಕ್ರನನ್ನು ಸಂಪತ್ತಿನ ಗ್ರಹವೆಂದು ಕೂಡ ಪರಿಗಣಿಸಲಾಗಿದೆ. ಹಾಗೆ ಶುಕ್ರನ ಆಶೀರ್ವಾದ ಪಡೆಯುವಂತಹ ರಾಶಿಗಳು ಅದ್ಭುತ ಯಶಸ್ಸು ಪಡೆಯುವುದು ಸಹ ನೋಡಬಹುದು.
ಹಲವರಿಗೆ ಈ ನಕ್ಷತ್ರ ಬದಲಾವಣೆಯು ಅದೃಷ್ಟ ತರುತ್ತಿದೆ. ಹಾಗಾದ್ರೆ ನಾಳೆಯಿಂದ ಶುಕ್ರನ ನಕ್ಷತ್ರ ಬದಲಾವಣೆಯು ಯಾರಿಗೆಲ್ಲಾ ಅದೃಷ್ಟದಾಯಕ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ರಾಹುವಿನ ಸ್ವಾತಿ ನಕ್ಷತ್ರಕ್ಕೆ ಶುಕ್ರನ ಚಲನೆಯು ದೊಡ್ಡ ಬದಲಾವಣೆಗಳಿಗೆ ಕಾರಣವಾಗಲಿದೆ. ನಿಮ್ಮ ವೃತ್ತಿ ಜೀವನದಲ್ಲಿ ಹಲವು ರೀತಿಯ ಬದಲಾವಣೆಗಳ ಎದುರು ನೋಡಬಹುದು. ಆಪ್ತರಿಂದ ನಿಮ್ಮಿಂದಾಗಿ ಹಣಕಾಸಿನ ನೆರವು ಸಿಗಬಹುದು. ಆರ್ಥಿಕ ಸ್ಥಿತಿಯಲ್ಲಿ ದಿಢೀರ್ ಬದಲಾವಣೆಗಳು ಬರಲಿವೆ, ಈ ಬದಲಾಣೆಗಳು ನಿಮ್ಮ ಮಾನಸಿಕ ನೆಮ್ಮದಿಗೆ ಕಾರಣವಾಗಿದೆ. ನಿಮ್ಮ ವೃತ್ತಿ ಜೀವನದಲ್ಲಿನ ಬಡ್ತಿ, ವೇತನ ಹೆಚ್ಚಳ, ಪ್ರಯಾಣಗಳು ಎಲ್ಲವೂ ನೀವು ಅಂದುಕೊಂಡ ರೀತಿಯಲ್ಲಿ ಮುಗಿಯಲಿವೆ. ಉದ್ಯೋಗದಲ್ಲಿರುವವರು ಗೌರವ ಮತ್ತು ಹೊಸ ಜವಾಬ್ದಾರಿಗಳನ್ನು ಪಡೆಯುತ್ತಾರೆ. ಉದ್ಯಮಿಗಳಿಗೆ ಎಲ್ಲಾ ಕೆಲಸಗಳನ್ನು ಸರಿಯಾಗಿ ಪೂರ್ಣಗೊಳಿಸಲು ಇದು ಉತ್ತಮ ಸಮಯವಾಗಿರುತ್ತದೆ.
ಮಿಥುನ ರಾಶಿ
ಸ್ವಾತಿ ನಕ್ಷತ್ರಕ್ಕೆ ಶುಕ್ರನ ಪ್ರವೇಶವು ಮಿಥುನ ರಾಶಿಯವರಿಗೆ ಸಕಾರಾತ್ಮಕ ಬದಲಾವಣೆಗಳ ತರಲಿದೆ. ಈ ಅವಧಿಯಲ್ಲಿ ನೀವು ನಿಮ್ಮ ಜೀವನದಲ್ಲಿನ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ವೃತ್ತಿಯಲ್ಲಿ ಪ್ರಗತಿ ಮತ್ತು ಕುಟುಂಬ ಜೀವನದಲ್ಲಿ ಶಾಂತಿ ಇರಲಿದೆ. ವ್ಯಾಪಾರ ಸಂಬಂಧಿತ ಅಡ್ಡಿಯೊಂದು ನಿವಾರಣೆಯಾಗಲಿದೆ. ನಿಮ್ಮ ಹಲವು ಸಮಯದ ಆರ್ಥಿಕ ಸಮ್ಯಸ್ಯೆಯೊಂದರಿಂದ ಮುಕ್ತಿ ಪಡೆಯುವ ಅವಕಾಶ ಪಡೆಯಲಿದ್ದೀರಿ. ಮನೆ, ನಿವೇಶನ, ಕಟ್ಟಡ ನಿರ್ಮಾಣ, ಹೊಸ ವ್ಯಾಪಾರ ಆರಂಭಿಸುವ ನಿಮ್ಮ ಬಯಕೆಗಳಿಗೆ ಹೊಸ ಆರಂಭ ಸಿಗಬಹುದು.
ಸಿಂಹ ರಾಶಿ
ಸ್ವಾತಿ ನಕ್ಷತ್ರದಲ್ಲಿ ಶುಕ್ರನ ಸಂಚಾರವು ಸಿಂಹ ರಾಶಿಯವರಿಗೆ ಅನಿರೀಕ್ಷಿತ ಅದೃಷ್ಟ ತರಲಿದೆ. ಬ್ಯಾಂಕಿಂಗ್ ಮತ್ತು ಸಾಲದ ವಿಚಾರದಲ್ಲಿ ಬಹುದಿನಗಳಿಂದ ಬಯಸಿದ ಫಲಿತಾಂಶ ಪಡೆಯಬಹುದು. ಕುಟುಂಬದಲ್ಲಿದ್ದ ಹಣಕಾಸಿನ ಒತ್ತಡವೊಂದನ್ನು ನೀವು ನಿಭಾಯಿಸುತ್ತೀರಿ. ವಾಹನ ಸಂಬಂಧಿತ ವಿಚಾರದಲ್ಲಿ ಶುಭವಾಗುತ್ತದೆ. ಅವಿವಾಹಿತರಲ್ಲಿನ ಖರ್ಚುಗಳು ದಿಢೀರ್ ಕಡಿಮೆಯಾಗಲಿವೆ. ಆರೋಗ್ಯ ಸುಧಾರಣೆಯ ಮಾರ್ಗವಿದೆ. ನೀವು ದೇವಾಲಯ ಭೇಟಿಯಿಂದ ಅದೃಷ್ಟ ಪಡೆಯಬಹುದು. ನಿಮ್ಮ ಸಾಲದ ಪ್ರಮಾಣ ಇಳಿಕೆಯಾಗಲಿದೆ. ಗೃಹಿಣಿಯರು ಬಹು ಸಮಯದಿಂದ ಅನುಭವಿಸಿದ್ದ ಕಷ್ಟವೊಂದನ್ನು ಬಗೆಹರಿಸಿಕೊಳ್ಳಲಿದ್ದೀರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications