Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ದಶಕದ ಬಳಿಕ ಪುಷ್ಯ ನಕ್ಷತ್ರಕ್ಕೆ ಶುಕ್ರ ಸಂಚಾರ: ಹಳೆಯ ಕಷ್ಟಗಳ ಮರೆತುಬಿಡಿ..ಹುಡುಕಿ ಬರಲಿದೆ ಅದೃಷ್ಟ!
ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳ ಚಲನೆಯು ಪ್ರಮುಖ ಹಾಗೂ ಬಹಳ ಮುಖ್ಯ ವಿದ್ಯಮಾನವಾಗಿ ಪರಿಗಣಿಸಲಾಗುತ್ತದೆ. ಹಾಗೆ ಎಲ್ಲಾ ಗ್ರಹಗಳ ಚಲನೆಯಿಂದ ಮೇಷ ರಾಶಿಯಿಂದ ಹಿಡಿದು ಮೀನ ರಾಶಿಯವರೆಗೂ ಬಹಳಷ್ಟು ಪರಿಣಾಮ ಬೀರುವುದು ನೋಡಬಹುದು. 9 ಗ್ರಹಗಳ ಚಲನೆಯ ಪರಿಣಾಮದಿಂದ ವ್ಯಕ್ತಿಯೊಬ್ಬರ ಜೀವನದಲ್ಲಿ ಬದಲಾವಣೆ ನೋಡಬಹುದು. ನಿರ್ದಿಷ್ಟ ಅವಧಿಯಲ್ಲಿ ಗ್ರಹಗಳ ಸ್ಥಾನಪಲ್ಲಟವು ಶುಭ ಮತ್ತು ಅಶುಭ ಲಾಭಗಳ ತರುವುದು ನೋಡಬಹುದು.
ಸದ್ಯ ಈಗ ಶುಕ್ರನು ತನ್ನ ಸ್ಥಾನ ಬದಲಾಯಿಸುತ್ತಿದ್ದಾನೆ. ಶುಕ್ರ ರಾಶಿ ಬದಲಾವಣೆಯ ಜೊತೆಗೆ ನಕ್ಷತ್ರ ಕೂಡ ಬದಲಾಯಿಸುತ್ತಾನೆ. ಶುಕ್ರನನ್ನು ಐಶ್ವರ್ಯ, ಐಷಾರಾಮಿ, ಪ್ರೀತಿ, ಸಂಪತ್ತು, ಸಮೃದ್ಧಿಯ ಅಂಶವಾಗಿದೆ. ಹೀಗಾಗಿ ಯಾರಿಗೆ ಶುಕ್ರನ ಆಶೀರ್ವಾದ ಇರಲಿದ್ಯೋ ಅವರಿಗೆ ಶುಕ್ರದೆಸೆ ಆರಂಭವಾಗೋದು ನೋಡಬಹುದು.

ಸದ್ಯ ಶುಕ್ರನು ವೃಷಭ ಮತ್ತು ತುಲಾ ರಾಶಿಯ ಅಧಿಪತಿ. ಈ ಶುಕ್ರನು ತನ್ನ ಸ್ನೇಹಪರ ಗ್ರಹವಾದ ಶನಿಯ ನಕ್ಷತ್ರಕ್ಕೆ ಚಲಿಸುತ್ತಾನೆ. ಅದೂ ಆಗಸ್ಟ್ 23 ರಂದು, ಶುಕ್ರನು ಶನಿಯ ನಕ್ಷತ್ರವಾದ ಪುಷ್ಯ ನಕ್ಷತ್ರ ಪ್ರವೇಶಿಸುತ್ತಾನೆ. ಶುಕ್ರನು 50 ವರ್ಷಗಳ ನಂತರ ಈ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಹೀಗೆ ದೀರ್ಘಕಾಲದ ಬಳಿಕ ನಕ್ಷತ್ರಕ್ಕೆ ಚಲಿಸುವುದು ಹಲವರಲ್ಲಿ ಲಾಭದಾಯಕವಾಗಲಿದೆ. ಹಾಗಾದ್ರೆ ಯಾರಿಗೆ ಅದೃಷ್ಟಕರ ಲಾಭವಿದೆ ತಿಳಿದುಕೊಳ್ಳೋಣ.
ತುಲಾ ರಾಶಿ
ಶುಕ್ರನ ಸಂಚಾರದಿಂದಾಗಿ ತುಲಾ ರಾಶಿ ಜನರಲ್ಲಿ ಉತ್ತಮ ಪ್ರಗತಿ ಮತ್ತು ಕೆಲಸ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಬಹುದು. ಕೆಲಸ ಮಾಡುವವರು ಕೆಲಸಕ್ಕೆ ಸಂಬಂಧಿಸಿದ ಪ್ರವಾಸಗಳನ್ನು ಕೈಗೊಳ್ಳಬೇಕಾಗಬಹುದು. ಈ ಅವಧಿಯಲ್ಲಿ ನಿಮ್ಮ ಹಣಕಾಸಿನ ವಿಚಾರವಾಗಿ ಉತ್ತಮ ಪಾಠ ಕಲಿಯುವಿರಿ. ನಿಮ್ಮ ಸಾಲಗಳು ಕಡಿಮೆಯಾಗಬಹುದು. ವ್ಯಾಪಾರಿಗಳು ಹಣಗಳಿಸುವ ಅವಕಾಶ ಪಡೆಯಬಹುದು. ಬಹಳ ಸಮಯದಿಂದ ನೀವು ಉತ್ತಮ ಉದ್ಯೋಗ ಹುಡುಕುತ್ತಿದ್ದರೆ ಈ ಸಮಯದಲ್ಲಿ ಅದ್ಭುತ ಲಾಭವಿದೆ. ತಂದೆಯೊಂದಿಗಿದ್ದ ಸಮಸ್ಯೆಯೊಂದು ಬಗೆಹರಿಯಲಿದೆ.
ಮಿಥುನ ರಾಶಿ
ಮಿಥುನ ರಾಶಿಯವರು ಶುಕ್ರನ ಸಂಚಾರದಿಂದಾಗಿ ಆದಾಯದಲ್ಲಿ ಉತ್ತಮ ಏರಿಕೆ ನೋಡಬಹುದು. ನಿಮ್ಮ ವ್ಯವಹಾರದಲ್ಲಿನ ಲಾಭವು ನಿಮಗೆ ತೃಪ್ತಿತರಲಿದೆ. ನಿಮ್ಮ ಉದ್ಯೋಗದಲ್ಲಿನ ಸಮಸ್ಯೆ ಪರಿಹಾರವಾಗಲಿದೆ. ಸಾಲದಿಂದ ಬಹಳ ಸಮಯ ನಿಮಗೆ ಒತ್ತಡ ಸಮಸ್ಯೆ ಎದುರಿಸುತ್ತಿದ್ದರೆ ಈ ಸಮಯದಲ್ಲಿ ಪರಿಹಾರ ಪಡೆಯಬಹುದು. ಖಾಸಗಿ ಸಂಸ್ಥೆ ಉದ್ಯೋಗಿಗಳಿಗೆ ವೇತನ ಸಂಬಂಧಿ ಶುಭ ಸುದ್ದಿ ಇದೆ. ಆಪ್ತರೊಬ್ಬರಿಂದ ನಿಮಗೆ ಹಣಕಾಸು ವಿಚಾರವಾಗಿ ಸಹಕಾರ ಸಿಗಲಿದೆ. ಅನಾರೋಗ್ಯ ವಿಚಾರದಲ್ಲಿ ಸುಧಾರಣೆ ನೋಡಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಶುಕ್ರನ ನಕ್ಷತ್ರ ಬದಲಾವಣೆಯು ಹಲವು ರೀತಿಯ ಶುಭಕ್ಕೆ ಕಾರಣವಾಗಲಿದೆ. ಕೌಟುಂಬಿಕ ವಿಚಾರವಾಗಿ ಇದ್ದ ದೊಡ್ಡ ಒತ್ತಡ, ಅಥವಾ ಭಾರ ಕಡಿಮೆಯಾಗಲಿದೆ. ಅನಿರೀಕ್ಷಿತ ಮೂಲದಿಂದ ಆದಾಯ ಹೆಚ್ಚಳ ನೋಡಬಹುದು. ಪ್ರೀತಿ, ಪ್ರೇಮದ ವಿಚಾರದಲ್ಲೂ ನಿಮಗೆ ಉತ್ತಮ ಸಮಯ ಆಗಿರಲಿದೆ. ಅನೇಕ ಮೂಲಗಳಿಂದ ಹಣ ಬರುತ್ತದೆ. ಇದು ಹಣದ ಸಮಸ್ಯೆಗಳನ್ನು ಕೊನೆಗೊಳಿಸುತ್ತದೆ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ. ಸರ್ಕಾರಿ ಉದ್ಯೋಗಸ್ಥರಿಗೆ ಈ ಸಮಯದಲ್ಲಿ ಬಹಳ ಲಾಭದಾಯಕ ದಿನಗಳಿವೆ. ನಿಮ್ಮ ವೇತನ, ಬಡ್ತಿ, ವರ್ಗಾವಣೆ ಕುರಿತಾಗಿ ದೊಡ್ಡ ಸವಾಲುಗಳು ಕೂಡ ಸುಲಭವಾಗಿ ನಿವಾರಣೆಯಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications











