Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಬುಧನ ರಾಶಿಗೆ ಶುಕ್ರ ಸಂಚಾರ: ದೀಪಾವಳಿ ಮುನ್ನ ಇವರಲ್ಲಿ ಅಚ್ಚರಿ ಫಲಿತಾಂಶ!
ಶುಕ್ರನ ಚಲನೆಯು ಎಲ್ಲಾ ರಾಶಿಗಳ ಮೇಲೆ ಹಾಗೆ ಎಲ್ಲರ ಮೇಲೆಯೂ ಪರಿಣಾಮ ಉಂಟು ಮಾಡುವುದು ನೋಡಬಹುದು. ಹಾಗೆ ಶುಕ್ರನನ್ನು ಜ್ಯೋತಿಷ್ಯದಲ್ಲಿ ರಾಕ್ಷಸರ ಗುರು ಎಂಬುದಾಗಿ ಪರಿಗಣಿಸಲಾಗಿದೆ. ಶುಕ್ರನು ಸೌಂದರ್ಯ, ಪ್ರೀತಿ, ಸಂಪತ್ತು, ಸಮೃದ್ಧಿ, ಸಂತೋಷದ ಸಂಕೇತವಾಗಿದೆ. ಹಾಗೆ ಶುಕ್ರನು ಒಲಿದರೆ ಅಥವಾ ನಿಮ್ಮ ಜಾತಕದಲ್ಲಿ ಉತ್ತಮ ಮನೆಯಲ್ಲಿದ್ದರೆ ನಿಮ್ಮಲ್ಲಿ ಶುಕ್ರದೆಸೆ ಆರಂಭವಾಗುತ್ತದೆ.
ಗ್ರಹಗಳಲ್ಲಿ ಶುಕ್ರನು ಪ್ರತಿ 30 ದಿನಗಳಿಗೊಮ್ಮೆ ರಾಶಿ ಬದಲಾಯಿಸುತ್ತಾನೆ. ಅಂತಹ ಶುಕ್ರನು ವೃಷಭ ಮತ್ತು ತುಲಾ ರಾಶಿಯ ಅಧಿಪತಿ ಆಗಿದ್ದಾನೆ. ಶುಕ್ರನ ಸ್ಥಾನದಲ್ಲಿ ಬದಲಾವಣೆಯಾದಾಗಲೆಲ್ಲಾ, ವ್ಯಕ್ತಿಯ ಆರ್ಥಿಕ ಪರಿಸ್ಥಿತಿ, ಪ್ರೇಮ ಜೀವನ ಇತ್ಯಾದಿಗಳ ಮೇಲೆ ಪರಿಣಾಮವು ಗೋಚರಿಸುತ್ತದೆ. ಅಲ್ಲದೆ ವ್ಯಕ್ತಿಯ ಜಾತಕದಲ್ಲಿ ಶುಕ್ರನು ಉತ್ತಮ ಸ್ಥಾನದಲ್ಲಿದ್ದರೆ ಮಾತ್ರ, ಆ ವ್ಯಕ್ತಿಯು ಉತ್ತಮ ಸಮೃದ್ಧ ಮತ್ತು ಐಷಾರಾಮಿ ಜೀವನವನ್ನು ನಡೆಸುತ್ತಾನೆ.

ಇನ್ನು ಶುಕ್ರನು ದೀಪಾವಳಿಗೂ ಮುನ್ನ ಕನ್ಯಾ ರಾಶಿಗೆ ಪ್ರವೇಶಿಸುತ್ತಾನೆ. ಅದರ ಪರಿಣಾಮವು ಮೇಷ ರಾಶಿಯಿಂದ ಹಿಡಿದು ಮೀನ ರಾಶಿಯವರೆಗೂ ಪ್ರಭಾವ ಉಂಟು ಮಾಡುತ್ತಾನೆ. ಆದ್ರೆ ಕನ್ಯಾ ರಾಶಿಯಲ್ಲಿ ಬುಧನು ಅಧಿಪತಿಯಾಗಿದ್ದಾನೆ. ಹೀಗಾಗಿ ಶುಕ್ರನ ಬುಧನ ರಾಶಿಗೆ ಚಲಿಸುವುದು ಹಲವು ರೀತಿಯ ಬದಲಾವಣೆಗಳ ನೋಡಬಹುದು.
ಶುಕ್ರನ ಈ ಸಂಚಾರದಿಂದಾಗಿ ಕೆಲವು ರಾಶಿ ಜನರು ತಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ನೋಡಬಹುದು. ಹಾಗಾದ್ರೆ ಶುಕ್ರನ ಈ ಚಲನೆಯು ಯಾರಿಗೆ ಶುಭಕರವಾಗುತ್ತಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ವೃಶ್ಚಿಕ ರಾಶಿ
ಶುಕ್ರನು ವೃಶ್ಚಿಕ ರಾಶಿಯ 11 ನೇ ಮನೆಗೆ ಸ್ಥಳಾಂತರವಾಗಲಿದ್ದಾನೆ. ಇದು ವೃಶ್ಚಿಕ ರಾಶಿಯವರಲ್ಲಿ ಅನೇಕ ರೀತಿಯ ಬದಲಾವಣೆಗಳಿಗೆ ಕಾರಣವಾಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಹಿಂದೆಂದಿಗಿಂತಲೂ ಸುಧಾರಿಸಲಿದೆ. ನಿಮ್ಮ ಆದಾಯದ ಮೂಲದಿಂದ ಬಂದಿರುವಂತಹ ಹಣವು ಉತ್ತಮ ಕೆಲಸಗಳಿಗೆ ವ್ಯಯಿಸುತ್ತೀರಿ. ಹಾಗೆ ಮನೆ ಕಟ್ಟುವುದು, ಆಸ್ತಿ ಸಂಬಂಧಿತ ವಿಚಾರವಾಗಿ ಎದುರಾಗಿದ್ದ ಹಲವು ಸಮಸ್ಯೆಗಳ ನಿವಾರಣೆ ಸನಿಹವಾಗಲಿದೆ. ಕೆಲವರಿಗೆ ಹೊಸ ಆದಾಯದ ಮೂಲಗಳು ಸಿಗುತ್ತವೆ. ಕೆಲಸ ಮಾಡುವವರಿಗೆ ಬಡ್ತಿ ಸಿಗುವ ಸಾಧ್ಯತೆಯಿದೆ. ಸಮಾಜದಲ್ಲಿ ನಿಮ್ಮ ಮೌಲ್ಯ ಮತ್ತು ಗೌರವ ಹೆಚ್ಚಾಗುತ್ತದೆ. ಈ ಅವಧಿಯಲ್ಲಿ ನಿಮ್ಮ ಮಕ್ಕಳು ಉತ್ತಮ ಪ್ರಗತಿಯನ್ನು ಕಾಣುತ್ತಾರೆ. ಷೇರು ಮಾರುಕಟ್ಟೆ ಇತ್ಯಾದಿಗಳಿಂದ ಅನಿರೀಕ್ಷಿತವಾಗಿ ಉತ್ತಮ ಲಾಭ ಪಡೆಯುವ ಸಾಧ್ಯತೆಯಿದೆ.
ಸಿಂಹ ರಾಶಿ
ಶುಕ್ರನು ಸಿಂಹ ರಾಶಿಯ 2 ನೇ ಮನೆಗೆ ಸ್ಥಳಾಂತರಗೊಳ್ಳುತ್ತಾನೆ. ಇದು ಈ ರಾಶಿಯ ಜನರಲ್ಲಿನ ಆರ್ಥಿಕ ಸಮಸ್ಯೆಗಳ ನಿವಾರಣೆ ಮಾಡಲಿದೆ. ನಿಮ್ಮ ಹಣಕಾಸು ಸಂಬಂಧಿತ ವಿಚಾರದಲ್ಲಿ ಉತ್ತಮ ಪರಿಸ್ಥಿತಿ ನೋಡಬಹುದು. ಕುಟುಂಬ ಜೀವನದಲ್ಲಿ ಎದುರಾಗಿದ್ದ ಸಮಸ್ಯೆಗಳಿಗೆ ಪರಿಹಾರ ಪಡೆಯಲಿದ್ದೀರಿ. ಅವಿವಾಹಿತರಲ್ಲಿ ವಿವಾಹ ಸಂಬಂಧಿತ ತೊಡಕು ನಿವಾರಣೆಯಾಗಲಿದೆ. ಹೊಸ ಮನೆ, ಆಸ್ತಿ ಖರೀದಿಯಂತಹ ವಿಚಾರದಲ್ಲಿ ಲಾಭವಿದೆ. ಮಕ್ಕಳ ಕುರಿತಾದ ದೊಡ್ಡ ಸಮಸ್ಯೆಗಳಿಗೆ ಪರಿಹಾರವಿದೆ.
ಧನು ರಾಶಿ
ಶುಕ್ರನು ಧನು ರಾಶಿಯ 10 ನೇ ಮನೆಗೆ ಸ್ಥಳಾಂತರಗೊಳ್ಳುತ್ತಾನೆ. ಇದರಿಂದಾಗಿ ಈ ರಾಶಿಚಕ್ರ ಚಿಹ್ನೆಯ ಜನರು ತಮ್ಮ ಕೆಲಸ ಮತ್ತು ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತಾರೆ. ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉತ್ತಮ ಉದ್ಯೋಗ ಸಿಗುವ ಸಾಧ್ಯತೆಯಿದೆ. ವೃತ್ತಿಪರವಾಗಿ ಉತ್ತಮವಾಗಿರುತ್ತದೆ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಅಥವಾ ಹೊಸ ಜವಾಬ್ದಾರಿಗಳು ಸಿಗಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications