Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನ.2ರ ಮಧ್ಯಾಹ್ನ 1:05 ತುಲಾ ರಾಶಿಗೆ ಶುಕ್ರ ಸಂಚಾರ: ಯಾವೆಲ್ಲಾ ರಾಶಿಗೆ ಜಾಕ್‌ಪಾಟ್! ಧನಲಾಭ!
ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಗಳು, ಪ್ರತಿಯೊಂದು ರಾಶಿಗಳು ಕೂಡ ಪ್ರಮುಖ ಎಂದು ಪರಿಗಣಿಸಲಾಗುತ್ತದೆ. ಈ ನವೆಂಬರ್‌ನಲ್ಲಿ ಶುಕ್ರನ ಚಲನೆ ಸಹ ಗಮನಿಸಬಹುದು. ಶುಕ್ರನ ಚಲನೆಯಿಂದಾಗಿ ಎಲ್ಲಾ ರಾಶಿಗಳ ಮೇಲೆಯೂ ಪ್ರಭಾವ ಉಂಟಾಗುತ್ತದೆ. ಶುಕ್ರನು ಈ ನವೆಂಬರ್ 2ರಂದು ಮಧ್ಯಾಹ್ನ 13: 05 ತುಲಾ ರಾಶಿಗೆ ಚಲಿಸಲಿದ್ದಾರೆ.
ಜ್ಯೋತಿಷ್ಯದಲ್ಲಿ ಶುಕ್ರನು ಪ್ರೀತಿ, ಸೌಂದರ್ಯ, ಐಷಾರಾಮಿ, ಸಂತೋಷಗಳು ಮತ್ತು ಸಂಬಂಧಗಳನ್ನು ಪ್ರತಿನಿಧಿಸುವ ಶುಭ ಗ್ರಹವೆಂದು ಪರಿಗಣಿಸಲಾಗುತ್ತದೆ. ಶುಕ್ರನು ತುಲಾ ರಾಶಿಯ ಅಧಿಪತಿ. ಆದ್ದರಿಂದ ಶುಕ್ರನು ತನ್ನದೇ ಆದ ರಾಶಿಯಾದ ತುಲಾ ರಾಶಿಗೆ ಪ್ರಯಾಣಿಸಿದಾಗ, ಅದು ಕೆಲವು ರಾಶಿ ಜನರಿಗೆ ಶುಭ ನೀಡಲಿದೆ.

ಶುಕ್ರನನ್ನು ಸಂಪತ್ತು ಹಾಗೂ ಅದೃಷ್ಟ ತರುವಂತಹ ರಾಶಿ ಎಂದು ಪರಿಗಣಿಸುವ ಕಾರಣ ನವಂಬರ್‌ನಲ್ಲಿ ಯಾವೆಲ್ಲಾ ರಾಶಿಯವರಿಗೆ ಅದೃಷ್ಟ ತರಲಿದೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ಶುಕ್ರನು ಎರಡನೇ ಮತ್ತು ಏಳನೇ ಮನೆಗಳ ಅಧಿಪತಿ. ಈ ಸಂಚಾರದಿಂದಾಗಿ ಮೇಷ ರಾಶಿಯವರಲ್ಲಿ ಲಾಭಕರ ವಿದ್ಯಮಾನಗಳ ನೋಡಬಹುದು. ಹೊಸ ಒಪ್ಪಂದಗಳು, ಹಣಗಳಿಕೆಗೆ ಹೊಸ ಮಾರ್ಗ ತೆರೆದುಕೊಳ್ಳುವುದು ನೋಡಬಹುದು. ಆರ್ಥಿಕ ವಿಚಾರವಾಗಿ ಸದೃಢರಾಗುತ್ತೀರಿ. ಹೂಡಿಕೆಗಳಿಗೆ ಹೊಸ ಅವಕಾಶಗಳಿವೆ. ವ್ಯವಹಾರಸ್ಥರು ತಮ್ಮ ಚಟುವಟಿಕೆಗಳನ್ನು ವಿಸ್ತರಿಸಬಹುದು ಮತ್ತು ಕಷ್ಟಕರವಾದ ಮಾತುಕತೆಗಳ ಮೂಲಕ ದೊಡ್ಡ ಲಾಭವನ್ನು ಗಳಿಸಬಹುದು.
ವೃಷಭ ರಾಶಿ
ವೃಷಭ ರಾಶಿಯ ಮೊದಲ ಮತ್ತು ಆರನೇ ಮನೆಗಳ ಅಧಿಪತಿ ಶುಕ್ರ. ಪ್ರಸ್ತುತ ಶುಕ್ರ ಆರನೇ ಮನೆಯಲ್ಲಿ ಸಾಗುತ್ತಿದ್ದಾನೆ. ಕೆಲಸ ಮತ್ತು ವ್ಯವಹಾರದಲ್ಲಿ ನೀವು ಅನಿರೀಕ್ಷಿತ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಸಂಗಾತಿಯಿಂದ ನಿಮಗೆ ಬೆಂಬಲ ಸಿಗುತ್ತದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಅಥವಾ ಹೊಸ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶಗಳಿವೆ. ದಾಂಪತ್ಯದಲ್ಲಿ ಇದ್ದಂತಹ ದೊಡ್ಡ ಸಮಸ್ಯೆಯೊಂದು ಶುಕ್ರನ ಆಶೀರ್ವಾದದ ಪರಿಣಾಮವಾಗಿ ಬಗೆಹರಿಯಲಿದೆ.
ಸಿಂಹ ರಾಶಿ
ಸಿಂಹ ರಾಶಿಯ ಮೂರನೇ ಮತ್ತು ಹತ್ತನೇ ಮನೆಗಳ ಅಧಿಪತಿಯಾದ ಶುಕ್ರನು ಪ್ರಸ್ತುತ ಮೂರನೇ ಮನೆಯಲ್ಲಿ ಸಾಗುತ್ತಿದ್ದಾನೆ. ಇದರಿಂದ ಸಿಂಹನಲ್ಲಿ ಲಾಭದಾಯಕ ದಿನಗಳಿವೆ. ಹಣಕಾಸು ಸಂಬಂಧಿತ ಒತ್ತಡಗಳು ನಿವಾರಣೆಯಾಗಲಿದೆ. ನಿಮ್ಮ ಹಿಂದಿನ ಕೆಲಸವು ಈಗ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ಅವಧಿಯಲ್ಲಿ ಪ್ರವಾಸ ಕೈಗೊಳ್ಳುವ ಅವಕಾಶಗಳಿವೆ. ನಿಮ್ಮ ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವ ಸಮಯ. ವ್ಯಾಪಾರಿಗಳಲ್ಲಿ ಇದ್ದಂತಹ ದೊಡ್ಡ ಅಡ್ಡಿಯೊಂದು ನಿವಾರಣೆಯಾಗಲಿದೆ.
ಧನು ರಾಶಿ
ಧನು ರಾಶಿಯ ಹನ್ನೊಂದನೇ ಮತ್ತು ಆರನೇ ಮನೆಗಳ ಅಧಿಪತಿಯಾದ ಶುಕ್ರನು ಪ್ರಸ್ತುತ ಹನ್ನೊಂದನೇ ಮನೆಯಲ್ಲಿ ಚಲಿಸಲಿದ್ದಾನೆ. ಈ ಅವಧಿಯಲ್ಲಿ ಧನು ರಾಶಿಯವರಿಗೆ ಹಲವು ರೀತಿಯ ಶುಭವಿದೆ. ನಿಮ್ಮ ಹೊಸ ವ್ಯವಹಾರಗಳು ಯಾವುದೇ ಅಡ್ಡಿಯಿಲ್ಲದೆ ನಡೆಯಲಿವೆ. ಉದ್ಯಮಿಗಳಿಗೆ ಇದು ಸಂತೋಷದ ಅವಧಿಯಾಗಿರುತ್ತದೆ. ತಮ್ಮ ಹೂಡಿಕೆಯನ್ನು ಎರಡು ಪಟ್ಟು ಲಾಭವಾಗಿ ಪರಿವರ್ತಿಸಬಹುದು.
ಕುಂಭ ರಾಶಿ
ಕುಂಭ ರಾಶಿಯ ಒಂಬತ್ತನೇ ಮತ್ತು ನಾಲ್ಕನೇ ಮನೆಗಳ ಅಧಿಪತಿಯಾದ ಶುಕ್ರನು ಪ್ರಸ್ತುತ ಕುಂಭ ರಾಶಿಯ ಒಂಬತ್ತನೇ ಮನೆಯಲ್ಲಿ ಚಲಿಸಲಿದ್ದಾನೆ. ಇದು ನಿಮಗೆ ಅನಿರೀಕ್ಷಿತ ಅದೃಷ್ಟ ಹಾಗೆ ಅನಿರೀಕ್ಷಿ ಲಾಭ ತರಲಿದೆ. ನಿಮ್ಮ ವ್ಯಾಪಾರ, ವ್ಯವಹಾರಗಳು ನೀವು ಅಂದುಕೊಂಡಂತೆ ನಡೆಯಲಿವೆ. ಪ್ರಯಾಣಗಳಲ್ಲಿ ಲಾಭವಿದೆ. ಮಕ್ಕಳ ಉದ್ಯೋಗ ಸಂಬಂಧವಾಗಿ ನೀವು ಸಂತಸ ಪಡುವ ದಿನಗಳಿವೆ. ಮನೆಗಾಗಿ ದುಬಾರಿ ವಸ್ತುವೊಂದನ್ನು ಖರೀದಿಸಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications