Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
1 ವರ್ಷದ ಬಳಿಕ ಸಿಂಹ ರಾಶಿಗೆ ಶುಕ್ರ ಸಂಚಾರ: ಮೂರು ರಾಶಿಯವರು ಹಣಗಳಿಸೋ ಕಾಲ!
ಜ್ಯೋತಿಷ್ಯದ ಪ್ರಕಾರ ಒಂಬತ್ತು ಗ್ರಹಗಳಲ್ಲಿ ಶುಕ್ರನನ್ನು ರಾಕ್ಷಸರ ಗುರು ಎಂದು ಪರಿಗಣಿಸಲಾಗುತ್ತದೆ. ಈ ಶುಕ್ರನು ಸೌಂದರ್ಯ, ಪ್ರೀತಿ, ಐಷಾರಾಮಿ, ಸಂಪತ್ತು ಮತ್ತು ಸಮೃದ್ಧಿಯ ಅಂಶವಾಗಿದೆ. ಇದು ವೃಷಭ ಮತ್ತು ತುಲಾ ರಾಶಿಯ ಅಧಿಪತಿಯೂ ಆಗಿದ್ದಾನೆ. ಶುಕ್ರ ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ ಚಲಿಸಲಿದ್ದಾನೆ. ಹಾಗೆ ಶುಕ್ರನ ಸ್ಥಾನಪಲ್ಲಟವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು.
ಈ ರೀತಿ ಶುಕ್ರನು ಪ್ರತಿ ರಾಶಿಗೂ ಒಂದು ವರ್ಷದ ಬಳಿಕ ಚಲಿಸುತ್ತಾನೆ. ಸದ್ಯ ಶುಕ್ರನು ಈಗ ಕರ್ಕ ರಾಶಿಯಿಂದ ಸಿಂಹ ರಾಶಿಗೆ ಚಲಿಸಲಿದ್ದಾನೆ. ಸೆಪ್ಟೆಂಬರ್‌ನಲ್ಲಿ ಶುಕ್ರನು ಸಿಂಹ ರಾಶಿಗೆ ಚಲಿಸಲಿದ್ದಾನೆ. ಇದರಿಂದ ಹಲವು ರಾಶಿಗಳಿಗೆ ಶುಕ್ರನ ಆಶೀರ್ವಾದ ಸಿಗಲಿದೆ. 1 ವರ್ಷದ ಬಳಿಕ ಸಿಂಹ ರಾಶಿಗೆ ಶುಕ್ರ ಸಂಚರಿಸುವುದರಿಂದ ಹಲವು ರೀತಿಯ ಲಾಭಗಳ ನೋಡಬಹುದಾಗಿದೆ.

ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ನೋಡುವುದರ ಜೊತೆಗೆ, ಹಣಕಾಸು ವಿಚಾರವಾಗಿ ಲಕ್ಷ್ಮಿಯ ಕೃಪೆಗೆ ನೀವು ಒಳಗಾಗುತ್ತೀರಿ. ಹಾಗಾದ್ರೆ ಶುಕ್ರನ ಈ ಚಲನೆಯು ಯಾವ ರಾಶಿಯವರಿಗೆ ಅದ್ಭುತ ಫಲಿತಾಂಶ ತಂದು ಕೊಡಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಧನು ರಾಶಿ
ಶುಕ್ರನು ಧನು ರಾಶಿಯ 9 ನೇ ಮನೆಗೆ ಸ್ಥಳಾಂತರಗೊಳ್ಳುತ್ತಾನೆ. ಇದು ಧನು ರಾಶಿಯ ಮಂದಿಗೆ ಹಲವು ರೀತಿಯಾಗಿ ಶುಭ ಸುದ್ದಿ ಕೇಳಬಹುದು. ಪ್ರತಿಯೊಂದು ವಿಷಯದಲ್ಲೂ ನೀವು ಯಶಸ್ಸು ಪಡೆಯುತ್ತೀರಿ. ನಿfಮಮ ದೀರ್ಘಕಾಲದ ಹೂಡಿಕೆಗಳು ನಿಮ್ಮ ನಿರೀಕ್ಷೆಗೂ ಮೀರಿದ ಲಾಭ ನೀಡಬಹುದು. ವ್ಯಾಪಾರಿಗಳಿಗೆ ಉತ್ತಮ ಲಾಭ ಮಾಡುವ ಸಮಯಗಳು ಬರಲಿವೆ. ನಿಮ್ಮ ಹೊಸ ಉದ್ಯೋಗ ಅಥವಾ ವ್ಯಾಪಾರದಲ್ಲಿ ಲಾಭ ನೋಡಬಹುದು. ಅವಿವಾಹಿತರಿಗೆ ವಿವಾಹ ಯೋಗ ಬರಬಹುದು. ಆಸ್ತಿ ಸಂಬಂಧಿತ ವಿಚಾರದಲ್ಲಿ ನಿಮಗೆ ಶುಭವಾಗುತ್ತಿದೆ. ಹಣಕಾಸು ವಿಚಾರಗಳಿಗೆ ಪ್ರಯಾಣಗಳ ಮಾಡಬೇಕಾಗಬಹುದು. ಶುಭ ಕಾರ್ಯಗಳಲ್ಲಿ ನೀವು ಭಾಗಿಯಾಗುತ್ತೀರಿ.
ತುಲಾ ರಾಶಿ
ಶುಕ್ರನು ತುಲಾ ರಾಶಿಯ 11 ನೇ ಮನೆಗೆ ಸ್ಥಳಾಂತರಗೊಳ್ಳುತ್ತಾನೆ. ಇದು ತುಲಾ ರಾಶಿಯ ಮಂದಿಗೆ ಅನುಕೂಲಕರ ದಿನಗಳ ತರಲಿದೆ. ನಿಮ್ಮ ದಾಂಪತ್ಯ ವಿಚಾರವಾಗಿ ಎದುರಾಗಿರುವ ಸಮಸ್ಯೆಗಳು ನಿವಾರಣೆಯಾಗಲಿದೆ. ಹೊಸ ಆದಾಯ ಮೂಲಗಳು ನಿಮಗೆ ಲಾಭದಾಯಕ ಆಗಲಿದೆ. ಆರ್ಥಿಕ ಪ್ರಗತಿ ನೋಡಬಹುದು. ಪಿತ್ರಾರ್ಜಿತ ಆಸ್ತಿ, ವ್ಯವಹಾರ ಸಂಬಂಧ ನಿಮಗೆ ಶುಭವಾಗಲಿದೆ. ಮನೆ ನಿರ್ಮಾಣದಲ್ಲಿ ತೊಡಗಿರುವವರಿಗೆ ಆದಾಯ ಕೂಡಿಬರಲಿದೆ. ಉಳಿತಾಯದ ಕಡೆಗೆ ನಿಮ್ಮ ಒಲವು ಹೆಚ್ಚಾಗಲಿದೆ. ಸಂಬಂಧಗಳು ಮತ್ತಷ್ಟು ಬಲವಾಗಲಿದೆ. ವಾಹನ ಖರೀದಿಯ ಲಾಭವಿದೆ.
ಕುಂಭ ರಾಶಿ
ಶುಕ್ರನು ಕುಂಭ ರಾಶಿಯ 7 ನೇ ಮನೆಯಲ್ಲಿ ಶುಕ್ರನು ಸಂಚರಿಸಲಿದ್ದಾನೆ. ಇದರಿಂದಾಗಿ ಈ ಅವಧಿಯಲ್ಲಿ ವಿವಾಹಿತರ ಜೀವನ ಸಂತೋಷವಾಗಿರುತ್ತದೆ. ಅವಿವಾಹಿತ ಯುವತಿಯರಲ್ಲಿ ಕಂಕಣ ಭಾಗ್ಯ ಇರಬಹುದು. ಹಲವು ಹಣಕಾಸು ವಿಚಾರಗಳಲ್ಲಿ ನಿಮ್ಮ ಬುದ್ದಿವಂತಿಕೆಯ ನಡೆ ನಿಮಗೆ ಲಾಭದಾಯಕವಾಗಲಿದೆ. ವ್ಯವಹಾರ ಸಂಬಂಧವಾಗಿ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು. ವಿದೇಶ ಪ್ರಯಾಣ, ಪ್ರವಾಸಗಳಲ್ಲಿ ಒಲವು ಇರಲಿದೆ. ಮನೆಗಾಗಿ ನೀವು ಐಷಾರಾಮಿ ವಸ್ತು ಖರೀದಿಸಲು ಇದು ಸೂಕ್ತ ಸಮಯ ಆಗಿರಲಿದೆ. ವಾಹನ ಲಾಭದ ನಿರೀಕ್ಷೆ ಇಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
