Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮೀನ ರಾಶಿಗೆ ಶುಕ್ರ ಸಂಚಾರ: ಈ ಮೂರು ರಾಶಿಯವರಲ್ಲಿ ಹಣಕಾಸು ಸ್ಥಿತಿ ಉತ್ತುಂಗಕ್ಕೆ!!
ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ರಾಶಿ ಹಾಗೂ ಪ್ರತಿಯೊಂದು ಗ್ರಹಗಳ ಸಂಚಾರ ಕೂಡ ಬಹಳ ಮುಖ್ಯ ಎನಿಸುತ್ತದೆ. ಇದೇ ಏಪ್ರಿಲ್ 13ರಂದು ಮೀನ ರಾಶಿಗೆ ಶುಕ್ರನ ಸಂಚಾರವಾಗುತ್ತಿದೆ. ಈ ರೀತಿಯ ಗ್ರಹಗಳ ಸ್ಥಾನಗಳು ಒಬ್ಬರ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಪ್ರತಿಯೊಂದು ಗ್ರಹಗಳು ಒಂದು ನಿರ್ದಿಷ್ಟ ಸಮಯದದಲ್ಲಿ ರಾಶಿ ಬದಲಾಯಿಸುವುದು ನಾನಾ ರೀತಿಯ ಲಾಭ ನಷ್ಟಕ್ಕೆ ಕಾರಣವಾಗುವುದು ನೋಡಬಹುದು.
ಕೆಲವೊಮ್ಮೆ ಗ್ರಹಗಳ ಹಿಮ್ಮುಖ ಚಲನೆ, ನೇರ ಚಲನೆ, ವಕ್ರ ಚಲನೆಯನ್ನು ನಾವು ಗಮನಿಸಬಹುದು. ಈಗ ಮೀನ ರಾಶಿಗೆ ಶುಕ್ರನ ಸಂಚಾರವು 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಶುಕ್ರನನ್ನು ಸಂಪತ್ತಿನ ಗ್ರಹವೆಂದು, ಐಶ್ವರ್ಯದ ಪ್ರತೀಕವೆಂದು ನಂಬಲಾಗಿದೆ. ಹೀಗಾಗಿ ಶುಕ್ರಬಲದ ಕಾರಣದಿಂದಾಗಿ ಒಬ್ಬ ವ್ಯಕ್ತಿಯ ಜೀವನ ಬದಲಾಯಿಸಲಿದೆ.

ಶುಕ್ರನು ಪ್ರಸ್ತುತ ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಅವನು ವಕ್ರ ಸ್ಥಾನದಲ್ಲಿ ಪ್ರಯಾಣಿಸುತ್ತಿದ್ದಾನೆ. ನಕಾರಾತ್ಮಕ ಸ್ಥಾನದಲ್ಲಿರುವ ಗ್ರಹಗಳು ದುರ್ಬಲವಾಗಿರುತ್ತವೆ. ಈ ಪರಿಸ್ಥಿತಿಯಲ್ಲಿ ಶುಕ್ರನು ಏಪ್ರಿಲ್ 13 ರಂದು ಮೀನ ರಾಶಿಯಲ್ಲಿ ವಕ್ರ ಚಲನೆಗೆ ಒಳಗಾಗುತ್ತಾನೆ. ಇದರಿಂದಾಗಿ ಎಲ್ಲಾ 12 ರಾಶಿಯವರಿಗೂ ಪರುಣಾಮ ಬೀರುವುದು ನೋಡಬಹುದು. ಹಾಗಾದ್ರೆ ಇದರಿಂದ ಯಾವ ರಾಶಿಯವರಿಗೆ ಲಾಭವಾಗುತ್ತಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕರ್ಕ ರಾಶಿ
ಮೀನ ರಾಶಿಯಲ್ಲಿ ಶುಕ್ರನ ವಕ್ರ ಸಂಚಾರವು ಕರ್ಕ ರಾಶಿಯವರ ಮೇಲೆಯು ಪ್ರಭಾವ ಬೀರಲಿದೆ. ಕರ್ಕ ರಾಶಿಯ 9ನೇ ಮನೆಯಲ್ಲಿ ವಿವರ್ತಿ ಪಡೆಯಲಿದ್ದಾನೆ. ಇದರಿಂದ ನಿಮ್ಮ ಹಲವು ರೀತಿ ಲಾಭವಾಗುವುದು ನೋಡಬಹುದು. ನಿಮ್ಮ ಪ್ರತಿಯೊಂದು ಕೆಲಸದಲ್ಲೂ ಶುಕ್ರನ ಬೆಂಬಲ ಹಾಗೂ ಆತನ ಆಶೀರ್ವಾದ ಇರುವುದು ನೋಡಬಹುದು. ನೀವು ಹೊಸ ಉದ್ಯಮ, ಸ್ವಂತ ಉದ್ಯೋಗ ಕಟ್ಟಲು ಮುಂದಾಗಿದ್ದರೆ ಈ ಸಮಯದಲ್ಲಿ ಬಹಳ ಲಾಭದಾಯಕವಾಗುತ್ತದೆ. ಈ ದಿನದಲ್ಲಿ ಆರಂಭಿಸುವ ಕೆಲಸಗಳು ಅತ್ಯುತ್ತಮ ಫಲಿತಾಂಶ ನೀಡಲಿದೆ. ನೀವು ಉದ್ಯೋಗ ಹುಡುಕುತ್ತಿದ್ದರೆ ನಿಮ್ಮ ನಿರೀಕ್ಷೆಗೂ ಮೀರಿದ ವೇತನ ಇರುವಂತಹ ಕೆಲಸ ಸಿಗಬಹುದು. ಹಲವು ವಿಚಾರಗಳು ನಿಮ್ಮ ಅಣತಿಯಂತೆ ನಡೆಯಲಿದೆ. ನಿಮ್ಮ ಕುಟುಂಬದ ವ್ಯವಹಾರವನ್ನು ಮತ್ತಷ್ಟು ವೃದ್ಧಿಸಲು ಮುಂದಾಗಬಹುದು.
ಮಿಥುನ ರಾಶಿ
ಶುಕ್ರನು ಮಿಥುನ ರಾಶಿಯ 10 ನೇ ಮನೆಯಲ್ಲಿ ವಕ್ರ ನಿವರ್ತಿಯನ್ನು ತಲುಪುತ್ತಾನೆ. ಇದು ಈ ಮಿಥುನ ರಾಶಿಯವರ ದಾಂಪತ್ಯ ಜೀವನದಲ್ಲಿ ಸುಖ ತರಲಿದೆ. ನಮ್ಮ ಕುಟುಂಬಸ್ಥರಿಂದ ನಿಮ್ಮ ಕೆಲಸದ ಪರವಾಗಿ ಹಾಗೆ ನಿಮ್ಮ ಮಾತುಗಳಿಗೆ ಬೆಂಬಲ ಸಿಗಲಿದೆ. ನಿಮ್ಮ ದೂರದ ಸಂಬಂಧಗಳು ಮತ್ತಷ್ಟು ಬಲವಾಗುತ್ತದೆ. ನಿಮ್ಮ ವ್ಯಾಪಾರದಲ್ಲಿ ಹಣಕಾಸು ಲಾಭ ನೋಡಬಹುದು. ಅದರಲ್ಲೂ ಇತ್ತಿಚಿಗೆ ನೀವು ವ್ಯಾಪಾರ ಆರಂಭಿಸಿದ್ದರೆ ಅದರಿಂದ ಹಲವು ರೀತಿ ಲಾಭ ನೋಡಬಹುದು. ಮನಸ್ಸಿನಲ್ಲಿ ಹಲವು ದಿನಗಳಿಂದ ಬಯಸಿದ್ದ ವಸ್ತುಗಳು ನಿಮ್ಮನ್ನು ಹುಡುಕಿ ಬರಬಹುದು. ಮನೆಯ ವಾತಾವರಣದಲ್ಲಿ ನಿಮ್ಮಿಂದಾಗಿ ಶಾಂತಿ ನೆಲೆಸಲಿದೆ.
ಕುಂಭ ರಾಶಿ
ಕುಂಭ ರಾಶಿಯ ಎರಡನೇ ಮನೆಯಲ್ಲಿ ಶುಕ್ರನು ವಕ್ರ ನಿವರ್ತಿಯನ್ನು ತಲುಪುತ್ತಾನೆ. ಹೀಗಾಗಿ ಕುಂಭ ರಾಶಿಯವರಲ್ಲಿ ಹಣಕಾಸು ವಿಚಾರ ಅತ್ಯಂತ ಸುಲಭವಾಗುತ್ತದೆ. ನೀವು ಹಣಕಾಸಿನ ನೆರವಿಗಾಗಿ ಬ್ಯಾಂಕ್ ಅಥವಾ ಸ್ನೇಹಿತರ ಬಳಿ ಪ್ರಸ್ತಾಪ ಮಾಡಿದ್ದರೆ ಈ ಸಮಯದಲ್ಲಿ ಸುಸೂತ್ರವಾಗಿ ಎಲ್ಲವು ನೆರವೇರಲಿದೆ. ಇಲ್ಲಿಯವರೆಗೆ ನಿಮಗೆ ಬರಬೇಕಿದ್ದ ಹಣವು ಈ ಸಮಯದಲ್ಲಿ ನಿಮ್ಮ ಕೈ ಸೇರಲಿದೆ. ನಿಮ್ಮ ಆರೋಗ್ಯದ ಜೊತೆಗೆ ಮನೆಯಲ್ಲಿನ ಕುಟುಂಬಸ್ಥರ ಆರೋಗ್ಯದಲ್ಲೂ ಸುಧಾರಣೆ ನೋಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











