Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಡಿಸೆಂಬರ್‌ನಲ್ಲಿ 2 ಬಾರಿ ಶುಕ್ರ ಸಂಕ್ರಮಣ..! ಈ ಮೂರು ರಾಶಿಯವರ ಕೈ ತುಂಬಲಿದೆ ಹಣ..!!
ಶುಕ್ರನನ್ನು ಸಂಪತ್ತು, ವೈಭವ, ಐಶ್ವರ್ಯ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗಿದೆ. ಹೀಗಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನಿಗೆ ಬಹಳ ಮುಖ್ಯ ಮಹತ್ವವಿದೆ. ಗ್ರಹಗಳು ತಮ್ಮ ಸ್ಥಾನ ಬದಲಾಯಿಸಿದಾಗೆಲ್ಲಾ ಹಲವು ರಾಶಿ ಜನರ ಮೇಲೆ ಪ್ರಭಾವ ಉಂಟಾಗುತ್ತಿರುತ್ತದೆ. ಈಗ ನಾವು 2024ರ ಕೊನೆಯ ತಿಂಗಳಿಗೆ ಆಗಮಿಸುತ್ತಿದ್ದೇವೆ. ವರ್ಷದ ಕೊನೆಯಲ್ಲೂ ಕೆಲವೊಂದು ಗ್ರಹಗತಿಗಳ ಬದಲಾವಣೆ ನಿಮ್ಮ ರಾಶಿಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ.
ಹಾಗೆ ಈ ಡಿಸೆಂಬರ್‌ನಲ್ಲಿ ಶುಕ್ರ ಸಂಕ್ರಮಣ ಸಂಭವಿಸುತ್ತಿದೆ. ಶುಕ್ರ ಒಂದು ರಾಶಿಯೊಂದ ಮತ್ತೊಂದು ರಾಶಿಗೆ ಚಲಿಸುವ ಪ್ರಕ್ರಿಯೆ ಇದು. ಶುಕ್ರವು ಒಂದು ನಿರ್ದಿಷ್ಟ ಅವಧಿಯಲ್ಲಿ ಒಂದು ಚಿಹ್ನೆಯಿಂದ ಇನ್ನೊಂದಕ್ಕೆ ಚಲಿಸುತ್ತದೆ. ಶುಕ್ರನು ಸದ್ಯ ಧನು ರಾಶಿಯಲ್ಲಿದ್ದಾನೆ. ಹಾಗೆ ಡಿಸೆಂಬರ್‌ನಲ್ಲಿ ಶುಕ್ರ ಎರಡು ಬಾರಿ ರಾಶಿ ಬದಲಾಯಿಸುತ್ತಿದ್ದಾನೆ.

ಡಿಸೆಂಬರ್‌ನಲ್ಲಿ ಶುಕ್ರ ಮೊದಲು ಮಕರ ರಾಶಿಯಲ್ಲಿ ಹಾಗೂ ಕುಂಭ ರಾಶಿಗೆ ಚಲಿಸಲಿದ್ದಾನೆ. ಡಿಸೆಂಬರ್ 2ರಂದು ಮಕರ ರಾಶಿ ಹಾಗೂ ಡಿಸೆಂಬರ್ 28ರಂದು ಕುಂಭ ರಾಶಿಗೆ ಶುಕ್ರ ಚಲಿಸಲಿದ್ದಾನೆ. ಶುಕ್ರನನ್ನು ಸೌಂದರ್ಯ, ಸಂಪತ್ತು, ಲಾಭ, ಅದೃಷ್ಟದ ಅಧಿಪತಿ ಎಂದು ಕರೆಯಲಾಗುತ್ತದೆ. ಏಕೆಂದರೆ ಯಾವ ರಾಶಿಯಲ್ಲಿ ಶುಕ್ರನಿರುತ್ತಾನೋ ಅವರಿಗೆ ಲಾಭದಾಯಕ ಆಗೋದು ಖಚಿತ.
ಹಾಗಾದ್ರೆ ಈ ಡಿಸೆಂಬರ್‌ನಲ್ಲಿ ಶುಕ್ರ ಮಕರ ಹಾಗೂ ಕುಂಭ ರಾಶಿಯಲ್ಲಿರುವುದರಿಂದ ಯಾವ ರಾಶಿಯವರ ಅದೃಷ್ಟ ಬದಲಾಗಲಿದೆ. ಹಾಗಾದ್ರೆ ಶುಕ್ರ ಸಂಕ್ರಮಣವು ಯಾವ ಮೂರು ರಾಶಿಯವರಲ್ಲಿ ಅದೃಷ್ಟ ಹೊತ್ತು ಬರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕುಂಭ ರಾಶಿ
ಕುಂಭ ರಾಶಿಯವರು ಡಿಸೆಂಬರ್‌ನಲ್ಲಿ ಎರಡು ಬಾರಿ ಶುಕ್ರ ಸಂಕ್ರಮಣದೊಂದಿಗೆ ಅದೃಷ್ಟ ಬದಲಾಗುತ್ತುದೆ. ನಿಮ್ಮ ಆರ್ಥಿಕ ಸ್ಥಿತಿ ಬದಲಾಗುತ್ತದೆ. ನಿಮಗೆ ಹಣದ ಅವಶ್ಯಕತೆ ಇದ್ದಾಗಲೆಲ್ಲ ಹಣ ನಿಮ್ಮ ಕೈ ಸೇರಲಿದೆ. ಹಾಗೆ ನಿಮ್ಮ ದಿನಗಳು ಯಾವುದೇ ಆರ್ಥಿಕ ಸಂಕಷ್ಟದಿಂದ ಕೂಡಿರದೆ ಲಾಭದಾಯಕವಾಗಿ ನಡೆಯಲಿವೆ. ಉದ್ಯೋಗಿಗಳಿಗೆ ಎಲ್ಲಿಲ್ಲದ ಬೆಂಬಲ ಸಿಗಲಿದೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ಹೆಚ್ಚು ಸಂತೋಷ ಇರಲಿದೆ. ಅವಿವಾಹಿತರಿಗೆ ಒಳ್ಳೆಯ ಸುದ್ದಿ ಆಗಮನದ ನಿರೀಕ್ಷೆ ಇದೆ. ನೀವು ಅಂದುಕೊಂಡಿದ್ದ ಕೆಲಸಗಳು ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆಯಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಡಿಸೆಂಬರ್ ತಿಂಗಳಿನಲ್ಲಿ ಶುಕ್ರ ಸಂಕ್ರಮಣದಿಂದ ಬಹಳಷ್ಟು ಲಾಭಗಳು ಒಲಿಯಲಿವೆ. ಅಇವಾಹಿತರಿಗೆ ಸಂಬಂಧಗಳು ಹುಡುಕಿ ಬರಲಿವೆ. ಹಾಗೆ ನಿಮ್ಮ ಆದಾಯ ದುಪ್ಪಟ್ಟಾಗುವ ಸಂಭವವಿರುತ್ತದೆ. ಕುಟುಂಬದಲ್ಲಿನ ಹಲವು ಸಮಸ್ಯೆಗಳಿಗೆ ನೀವು ಪರಿಹಾರ ಪಡೆಯಲಿದ್ದೀರಿ. ಅನಿರೀಕ್ಷಿತವಾಗಿ ನಿಮಗೆ ಹಣ ಹರಿದು ಬರಲಿದೆ. ಬಹುಕಾಲದಿಂದ ಬಾಕಿ ಉಳಿದ ಸಾಲಗಳು, ಲಾಭದಾಯಕ ಹೂಡಿಕೆಗಳಿಂದ ನಿಮ್ಮ ಆದಾಯ ಹೆಚ್ಚಾಗಬಹುದು. ನೀವು ನೌಕರರಾಗಿದ್ದರೆ ನಿಮ್ಮ ಕೆಲಸದ ಸ್ಥಳದಲ್ಲಿ ನಿಮಗೆ ಒಳ್ಳೆಯ ಮಾತುಗಳು, ಹೊಗಳಿಕೆ, ಹೆಚ್ಚಿನ ಜವಾಬ್ದಾರಿ ಸಿಗಲಿದೆ.
ವೃಷಭ ರಾಶಿ
ಶುಕ್ರ ಸಂಕ್ರಮಣದಿಂದಾಗಿ ಈ ವೃಷಭ ರಾಶಿಯವರಲ್ಲಿ ಆರೋಗ್ಯಕರ ಲಾಭಗಳು ಹೆಚ್ಚಾಗುತ್ತದೆ. ಬಹುಕಾಲದ ನಿಮ್ಮ ಅನಾರೋಗ್ಯ ಸಮಸ್ಯೆ ನಿವಾರಣೆಯಾಗುವ ಹಂತ ತಲುಪಲಿ. ವರ್ಷಗಳಿಂದ ನೀವು ಅಂದುಕೊಂಡಿದ್ದ ಕಾರ್ಯಗಳು ಈಗ ಪರಿಪೂರ್ಣವಾಗಲಿದೆ. ಕೌಟುಂಬಿಕ ಸಮಸ್ಯೆಗಳು, ಅದಕ್ಕೆ ಪರಿಹಾರ ಕೂಡ ಸುಲಭವಾಗಲಿದೆ. ಮನೆಯಲ್ಲಿ ಶುಭ ಕಾರ್ಯಕ್ಕೆ ನೀವು ಕಾರಣರಾಗಬಹುದು. ಇಲ್ಲವೆ ನಿಮ್ಮಿಂದ ಶುಭ ಕಾರ್ಯ ನಡೆಯಬಹುದು. ದಾಂಪತ್ಯ ಜೀವನ ಚೆನ್ನಾಗಿರಲಿದೆ. ದೂರ ಪ್ರಯಾಣಗಳು, ಸಂಬಂಧಿಕರ ಭೇಟಿ, ಪ್ರವಾಸದಂತಹ ಕಾರ್ಯಗಳಲ್ಲಿ ನೀವು ತೊಡಗಬಹುದು. ಬ್ಯಾಂಕಿಂಗ್, ಹೂಡಿಕೆ, ಇನ್ಸುರೆನ್ಸ್ ಇತರೆ ಲಾಭದಾಯಕ ವಲಯದಲ್ಲಿದ್ದವರು ಹೆಚ್ಚು ಲಾಭ ಮಾಡುವಂತಹ ಸಾಧ್ಯತೆ ಇದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











