Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೃಗಶಿರ ನಕ್ಷತ್ರಕ್ಕೆ ಸಂಪತ್ತಿನ ದೊರೆ ಶುಕ್ರ ಸಂಚಾರ: ಆದಾಯ ಹೆಚ್ಚಳ ಅನುಭವಿಸೋದು ಯಾರು?
ಜ್ಯೋತಿಷ್ಯದಲ್ಲಿ ಶುಕ್ರ ಪ್ರಮುಖ ಗ್ರಹಗಳಲ್ಲಿ ಒಂದಾಗಿದೆ. ಶುಕ್ರ ಸಂಚಾರವು ಪ್ರತಿ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಶುಕ್ರ ಸೌಂದರ್ಯ, ಪ್ರೀತಿ ಮತ್ತು ಐಷಾರಾಮಿ, ಸಮೃದ್ಧಿಯ ಅಧಿಪತಿಯಾಗಿದ್ದಾನೆ. ಶುಕ್ರನ ಪಥ ಬದಲಾವಣೆಯು ಎಲ್ಲಾ ರಾಶಿ ಜನರಿಗೆ ಜೀವನವನ್ನು ಬದಲಾಯಿಸಬಹುದು. ಶುಕ್ರನ ಸಂಚಾರವು ಎಲ್ಲಾ 12 ರಾಶಿ ಜನರ ಮೇಲೆ ಪರಿಣಾಮ ಬೀರುತ್ತದೆ.
ಶುಕ್ರನು ನಿರ್ದಿಷ್ಟ ಕಾಲಕ್ಕೆ ನಿರ್ದಿಷ್ಟ ರಾಶಿಗೆ ಬದಲಾಯಿಸುವುದು ಮಾತ್ರವಲ್ಲದೆ ಆಗಾಗ ನಕ್ಷತ್ರವನ್ನು ಬದಲಾಯಿಸುತ್ತಾನೆ. ಪ್ರತಿ 13ರಿಂದ 14 ದಿನಗಳಿಗೊಮ್ಮೆ ನಕ್ಷತ್ರ ಬದಲಾಯಿಸುವುದು ನೋಡಬಹುದು. ಈಗ ಶುಕ್ರನು ಇದೇ ಮೇ 2026ರಲ್ಲಿ ಮೃಗಶಿರ ನಕ್ಷತ್ರಕ್ಕೆ ಚಲಿಸಲಿದ್ದಾನೆ. ಇದು ಅಪರೂಪದ ಚಲನೆಯಾಗಿರಲಿದೆ. ಈ ಸಮಯದಲ್ಲಿ ಶುಕ್ರನು ತನ್ನ ಉತ್ತುಂಗ ಪ್ರಭಾವವನ್ನು ಬೀರುವ ಸಮಯ ಆಗಿರಲಿದೆ.

ಹಾಗಾದ್ರೆ ಶುಕ್ರನ ಈ ಮೃಗಶಿರ ನಕ್ಷತ್ರಕ್ಕೆ ಚಲಿಸುವ ವಿದ್ಯಮಾನದಿಂದ ಯಾವೆಲ್ಲಾ ರಾಶಿಯವರಿಗೆ ಅನುಕೂಲಕರ ಸಮಯ ಆಗಿರಲಿದೆ. ಯಾರಿಗೆ ಶುಭದಾಯಕ ಯಾರಿಗೆಲ್ಲಾ ಅದೃಷ್ಟ ಹುಡುಕಿ ಬರಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯವರು ಶುಕ್ರನ ಸಂಚಾರದಿಂದ ಹೆಚ್ಚಿನ ಪ್ರಯೋಜನಗಳನ್ನು ಅನುಭವಿಸಲಿದ್ದಾರೆ. ಶುಕ್ರನ ಈ ಸಂಚಾರವು ಉದ್ಯಮಿಗಳಿಗೆ ತುಂಬಾ ಅನುಕೂಲಕರವಾಗಿರುತ್ತದೆ ಮತ್ತು ಹಲವು ವ್ಯವಹಾರಗಳು ಈ ಸಮಯದಲ್ಲಿ ಲಾಭ ತರಲಿವೆ. ಹೊಸ ಉದ್ಯೋಗ ಹುಡುಕುತ್ತಿದ್ದ ಮಂದಿಗೆ ಹಾಗೆ ಕೌಟುಂಬಿಕ ಜೀವನದಲ್ಲಿ ಎದುರಿಸಿದ್ದ ಹಲವು ಸಮಸ್ಯೆಗಳು ನಿವಾರಣೆಯಾಗಲಿದೆ. ಮನೆಯಲ್ಲಿ ಮತ್ತು ಕುಟುಂಬದಲ್ಲಿ ಶಾಂತಿಯುತ ವಾತಾವರಣವಿರುತ್ತದೆ. ಅಲ್ಲದೆ, ಆರ್ಥಿಕ ಪರಿಸ್ಥಿತಿ ತುಂಬಾ ಸ್ಥಿರವಾಗಿರುತ್ತದೆ. ನಿರುದ್ಯೋಗಿ ಯುವತಿಯರು ಆಪ್ತರೊಬ್ಬರ ಸಹಕಾರ ಮೂಲಕ ದೊಡ್ಡ ಲಾಭಕರ ಉದ್ಯೋಗ ಪಡೆಯುವ ಸಾಧ್ಯತೆ ಇದೆ. ನಿಮ್ಮ ವ್ಯಾಪಾರದಲ್ಲಿ ಶುಭವಾಗುತ್ತದೆ.
ಸಿಂಹ ರಾಶಿ
ಈ ಶುಕ್ರನ ಸಂಚಾರವು ಸಿಂಹ ರಾಶಿ ಜನರಿಗೆ ಹೂಡಿಕೆಗಳಿಂದ ಲಾಭ ತರುವುದು ನೋಡಬಹುದು. ನಿಮ್ಮ ಹಲವು ಕೆಲಸಗಳಲ್ಲಿ ಅದೃಷ್ಟ ಒಲಿಯಲಿದೆ. ಅದ್ರಲ್ಲೂ ಹಣಕಾಸಿನ ವಿಚಾರವಾಗಿ ನೀವು ಬಹಳ ಒತ್ತಡದಲ್ಲಿದ್ದರೆ ಈ ಸಮಯದಿಂದ ನಿಮಗೆ ನಿರಾಳತೆ ಸಿಗಲಿದೆ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ದೇವಾಲಯ, ಪುಣ್ಯ ಕ್ಷೇತ್ರ, ಶುಭ ಕಾರ್ಯ, ಪ್ರವಾಸದಂತಹ ಕಾರ್ಯದಲ್ಲಿ ಭಾಗಿಯಾಗುತ್ತೀರಿ. ಉದ್ಯೋಗಾಕಾಂಕ್ಷಿಗಳಿಗೆ ಈ ಸಮಯದಲ್ಲಿ ಅದೃಷ್ಟಕರ ಅವಕಾಶಗಳು ಸಿಗಲಿವೆ. ವೃತ್ತಿಪರತೆ, ಅನಿರೀಕ್ಷಿತ ಲಾಭಗಳು, ಔದ್ಯೋಗಿಕ ಅದೃಷ್ಟ ನಿಮ್ಮದಾಗಲಿದೆ. ಕುಟುಂಬ ಸದಸ್ಯರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಬಹುದು ಮತ್ತು ಕುಟುಂಬದಲ್ಲಿ ಶಾಂತಿ ಇರುತ್ತದೆ. ಸಮಾಜದಲ್ಲಿ ಮನ್ನಣೆ ಮತ್ತು ಗೌರವವು ಹೆಚ್ಚಾಗುವ ಸಮಯ ಆಗಿರಲಿದೆ.
ಮೀನ ರಾಶಿ
ಈ ಶುಕ್ರ ಸಂಚಾರವು ಮೀನ ರಾಶಿಯವರಿಗೆ ಅಪಾರ ಪ್ರಯೋಜನಗಳ ತರಲಿದೆ. ಕೆಲಸ ಮತ್ತು ವೃತ್ತಿ ಬೆಳವಣಿಗೆಯಲ್ಲಿ ಉತ್ತಮ ಯಶಸ್ಸನ್ನು ಸಾಧಿಸುವ ಅವಕಾಶಗಳು ಸಿಗಲಿದೆ. ಕುಟುಂಬದೊಂದಿಗೆ ಸಂಬಂಧಗಳು ಉತ್ತಮವಾಗಿರುತ್ತವೆ ಮತ್ತು ಪೂರ್ವಜರ ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ದೂರಾಗಲಿದೆ. ಅವಿವಾಹಿತರಿಗೆ ವಿವಾಹಯೋಗವಿದೆ. ಬಹಳ ಸಮಯದ ನಿಮ್ಮ ಹಣಕಾಸಿನ ಸಮಸ್ಯೆಗಳು ದೂರಾಗಲಿದೆ. ಉದ್ಯೋಗದಲ್ಲಿರುವವರು ಬಡ್ತಿಗಳನ್ನು ನಿರೀಕ್ಷಿಸಬಹುದು. ನಿಮ್ಮ ವೈವಾಹಿಕ ಜೀವನದಲ್ಲಿದ್ದ ಸಮಸ್ಯೆಯೊಂದು ಬಗೆಹರಿಯಲಿದೆ. ಬಹು ಸಮಯದ ಉಳಿತಾಯದ ಹಣವು ನಿಮ್ಮ ಕೈ ಸೇರುವ ಎಲ್ಲಾ ಸಾಧ್ಯತೆ ಇದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. )



Click it and Unblock the Notifications