Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
ಮೇಷ ರಾಶಿಗೆ ಶುಕ್ರ ಚಲಿಸುತ್ತಿದ್ದಂತೆ ಈ ರಾಶಿಯವರಲ್ಲಿ ಆರ್ಥಿಕ ಲಾಭ..! ನಿಮ್ಮ ರಾಶಿ ಯಾವುದು?
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಚಲನೆಗೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಪ್ರತಿಯೊಂದು ಗ್ರಹಗಳ ಚಲನೆಯು ಒಂದೊಂದು ಲಾಭಗಳ ತರಲಿವೆ. ಹಾಗೆ ಪ್ರತಿಯೊಂದು ರಾಶಿಗಳ ಮೇಲೆಯೂ ಈ ಗ್ರಹಗಳ ಸಂಚಾರ ಪರಿಣಾಮ ಬೀರಲಿದೆ. ಹಾಗೆ ಪ್ರತಿಯೊಂದು ಗ್ರಹಗಳ ಸಂಚಾರವು ಹಲವು ಯೋಗಗಳಿಗೆ ಕಾರಣವಾಗುವುದು ಸಹ ನಾವು ನೋಡಬಹುದು.
ಈಗ ಏಪ್ರಿಲ್ ಅಂತ್ಯದಲ್ಲಿ ಶುಕ್ರನು ಮೇಷ ರಾಶಿಗೆ ಚಲಿಸಲಿದ್ದಾನೆ. ಇದರಿಂದ ಹಲವು ರಾಶಿ ಜನರಿಗೆ ಲಾಭವಾಗುತ್ತಿದೆ. ಶುಕ್ರನು ಮೇಷ ರಾಶಿಯಲ್ಲಿ ಹಲವು ತಿಂಗಳ ಕಾಲ ನೆಲೆಸಲಿದ್ದಾನೆ. ಇದರಿಂದ ಹಲವರ ಜೀವನದಲ್ಲಿ ಅನಿರೀಕ್ಷಿತ ಬದಲಾಣೆ ನೋಡಬಹುದು. ವೃಷಭ ಮತ್ತು ತುಲಾ ರಾಶಿಯ ಅಧಿಪತಿಯಾಗಿರುವ ಶುಕ್ರನು ಮೇಷ ರಾಶಿಗೆ ಚಲಿಸುವುದು ಕೆಲವರಿಗೆ ಅದೃಷ್ಟ ತರಲಿದೆ.

ಮೇಷ ರಾಶಿಗೆ ಶುಕ್ರನು ಚಲಿಸುವುದರಿಂದ ಈ ರಾಶಿಯವರ ಬಹುಕಾಲದ ಆಸೆಗಳು, ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲಿದೆ ಹಾಗಾದ್ರೆ ನಾವಿಂದು ಮೇಷ ರಾಶಿಗೆ ಶುಕ್ರನ ಚಲನೆಯಿಂದ ಏನೆಲ್ಲಾ ಲಾಭ ನೋಡಬಹುದು. ಯಾವ ರೀತಿಯ ಲಾಭಗಳಿಗೆ ಈ ಪ್ರಕ್ರಿಯೆ ಕಾರಣವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ಶುಕ್ರ ಸಂಚಾರವು ತುಂಬಾ ಅನುಕೂಲಕರವಾಗಿರುತ್ತದೆ ಮತ್ತು ಈ ಅವಧಿಯಲ್ಲಿ ಮೇಷ ರಾಶಿಯವರು ತಮ್ಮ ದೈನಂದಿನ ಕೆಲಸದಲ್ಲಿ ಎದುರಿಸುತ್ತಿದ್ದ ಸಮಸ್ಯೆಗಳ ನಿವಾರಣೆಗೆ ಮುಂದಾಗುತ್ತಾರೆ, ನೀವು ವಾಹನ, ಜಮೀನು, ಐಷಾರಾಮಿ ವಸ್ತು ಖರೀದಿಗೆ ಆಲೋಚಿಸಿ ಅದಕ್ಕಾಗಿ ವರ್ಷಗಳಿಂದಲೂ ಯೋಜನೆಗಳ ರೂಪಿಸಿದ್ದರೆ ಈ ಸಮಯದಲ್ಲಿ ನೆರವೇರಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ನಿಮ್ಮ ಬಹಳ ಸಮಯದ ಆರ್ಥಿಕ ಸಮಸ್ಯೆ ಬಗೆಹರಿಯಲಿದೆ. ಅಂದರೆ ವರ್ಷಗಳಿಂದ ನಿಮ್ಮ ಕೈಸೇರದ ಹಣವೊಂದು ಅನಿರೀಕ್ಷಿತ ಬೆಳವಣಿಗೆಗಳ ಮೂಲಕ ನಿಮಗೆ ಸೇರಬಹುದು. ಉದ್ಯೋಗಿಗಳಲ್ಲಿ ಬಡ್ತಿ, ವರ್ಗಾವಣೆಯ ವಿಚಾರವಾಗಿ ಲಾಭದಾಯಕ ದಿನಗಳ ನೋಡಬಹುದು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಶುಕ್ರನ ಸಂಚಾರವು ಹೆಚ್ಚಿನ ಲಾಭಗಳ ತರಲಿದೆ. ಕುಟುಂಬದಲ್ಲಿ ದೊಡ್ಡ ಸವಾಲುಗಳ ನೀವು ಎದುರಿಸಿದ್ದರೆ ಈ ಸಮಯದಲ್ಲಿ ಪರಿಹರ ಪಡೆಯಲಿದ್ದೀರಿ. ವಿವಾಹ ಸಂಬಂಧಿ ಸಮಸ್ಯೆಗಳಿದ್ದರೆ ನಿವಾರಣೆ ಸಾಧ್ಯವಾಗಲಿದೆ. ಹಲವು ಒಪ್ಪಂದಗಳು, ವ್ಯಾಪಾರಕ್ಕೆ ಸಂಬಂಧಿಸಿದ ದೊಡ್ಡ ನಿರ್ಧಾರಗಳನ್ನು ನೀವು ತೆಗೆದುಕೊಳ್ಳುತ್ತೀರಿ. ನೀವು ಬಹಳ ಸಮಯದಿಂದ ಯಾವುದಾದರು ಅನಾರೋಗ್ಯಕ್ಕೆ ತುತ್ತಾಗಿದ್ದರೆ ಚೇತರಿಕೆ ಸಾಧ್ಯವಾಗಲಿದೆ. ಹಣಕಾಸು ವ್ಯವಹಾರದಲ್ಲಿ ಈ ಹಿಂದೆ ಇದ್ದ ಅಡೆತಡೆಗಳು ನಿವಾರಣೆ ಸಾಧ್ಯತೆ ಇದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ಶುಕ್ರನ ಸಂಚಾರದಿಂದಾಗಿ ದೊಡ್ಡ ಲಾಭಗಳಿಗೆ ಒಳಗಾಗುತ್ತಾರೆ. ನಿಮ್ಮ ಆರ್ಥಿಕ ಸ್ಥಿತಿ ಹಿಂದೆಂದಿಗಿಂತಲೂ ಸುಧಾರಿಸಲಿದೆ. ಉದ್ಯಮಿಗಳು ಲಾಭ ಮಾಡಲಿದ್ದಾರೆ. ಕೌಟುಂಬಿಕ ವಿಚಾರದಲ್ಲಿದ್ದ ದೊಡ್ಡ ಸವಾಲುಗಳು, ಮನಸ್ತಾಪಗಳು ಈ ಸಮಯದಲ್ಲಿ ನಿವಾರಣೆ ಆಗುವ ಅವಕಾಶ ಪಡೆಯಲಿದ್ದೀರಿ. ಮನೆಗಾಗಿ ನೀವು ಬಯಸಿದ್ದ ವಸ್ತುವೊಂದನ್ನು ಖರೀದಿಸುತ್ತೀರಿ. ಮಕ್ಕಳ ಭವಿಷ್ಯ ಕುರಿತಾಗಿ ದೊಡ್ಡ ಚಿಂತೆ ದೂರಾಗಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಶುಕ್ರನ ಸಂಚಾರವು ಅನಿರೀಕ್ಷಿತ ಪ್ರಯೋಜನಗಳಿಗೆ ಕಾರಣವಾಗುತ್ತದೆ. ವೃತ್ತಿಪರ ಜೀವನದಲ್ಲಿ ಶಾಂತಿ ಮತ್ತು ಪ್ರಗತಿ ಇರುತ್ತದೆ. ಕಚೇರಿ ಮತ್ತು ಕೆಲಸದ ಸ್ಥಳದಲ್ಲಿ ಮನ್ನಣೆ ಮತ್ತು ಹೊಸ ಜವಾಬ್ದಾರಿಗಳು ಸಿಗುತ್ತವೆ. ಹಣಕಾಸು ವಿಚಾರವಾಗಿ ಪ್ರಗತಿ ಕಾಣಲಿದ್ದೀರಿ. ಬಹಳ ಸಮಯದಿಂದ ನೀವು ಹಣಕ್ಕಾಗಿ ಇಲ್ಲವೆ ಬ್ಯಾಂಕ್ ಸಂಬಂಧಿಸಿದ ಸಾಲಕ್ಕಾಗಿ ಓಟಾಟ ಮಾಡುತ್ತಿದ್ದರೆ ಈ ಸಮಯದಲ್ಲಿ ಯಶಸ್ಸಿ ಸಿಗಲಿದೆ. ಉದ್ಯೋಗ ಹುಡುಕುತ್ತಿದ್ದವರಿಗೆ ಸೂಕ್ತ ಅವಕಾಶಗಳು ಒದಗಿ ಬರಲಿವೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











