ಆಗಸ್ಟ್ 25ಕ್ಕೆ ಕನ್ಯಾ ರಾಶಿಗೆ ಶುಕ್ರ ಸಂಚಾರ: ಈ 3 ರಾಶಿಗಳಿಗೆ ಅದೃಷ್ಟಕರ, 9 ರಾಶಿಯವರು ಜಾಗ್ರತೆ

ಆಗಸ್ಟ್ 25ಕ್ಕೆ ಶುಕ್ರನು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಸಂಚರಿಸಲಿದೆ. ಈ ಶುಕ್ರನ ರಾಶಿ ಬದಲಾವಣೆ ಹೆಚ್ಚಿನ ರಾಶಿಗಳಿಗೆ ಅನುಕೂಲಕರವಲ್ಲ, ಯಾವ ರಾಶಿಯವರಿಗೆ ಅದೃಷ್ಟಕರ, ಯಾರು ಜಾಗ್ರತೆವಹಿಸಬೇಕು ಎಂದು ನೋಡೋಣ:

Venus Transit In Virgo

ಕನ್ಯಾ ರಾಶಿ

ಶುಕ್ರ ನಿಮ್ಮ ಲಗ್ನ ಮನೆಗೆ ಸಂಚರಿಸಿದಾಗ ಆರ್ಥಿಕ ದೃಷ್ಟಿಯಿಂದ ನಿಮಗೆ ಒಳ್ಳೆಯದಿದೆ, ಆದರೆ ಈ ಅವಧಿಯಲ್ಲಿ ಆರೋಗ್ಯದ ಕಡೆಗೆ ಗಮನಹರಿಸಿ. ನಿಮ್ಮ ಕೆಲಸದಲ್ಲಿ ನೀವು ಅನಗತ್ಯ ಬದಲಾವಣೆಗಳನ್ನು ಎದುರಿಸಬೇಕಾಗಬಹುದು. ಸ್ವಂತ ವ್ಯವಹಾರವನ್ನು ಹೊಂದಿರುವವರು ವ್ಯಾಪಾರ ಪಾಲುದಾರರಿಂದ ಸಮಸ್ಯೆಗಳನ್ನು ಎದುರಿಸಬಹುದು . ನಿಮ್ಮ ಹಾಗೂ ಸಂಗಾತಿ ನಡುವಿನ ಭಿನ್ನಾಭಿಪ್ರಾಯ ಹೋಗಲಾಡಿಸಲು ಪ್ರಯತ್ನಿಸಿ. ಆರೋಗ್ಯದ ಬಗ್ಗೆ ಹೇಳುವುದಾದರೆ ಅಲರ್ಜಿಯ ಸಮಸ್ಯೆ ಉಂಟಾಗಬಹುದು.

ಮಕರ ರಾಶಿ

ಮಕರ ರಾಶಿಯಲ್ಲಿ ಶುಕ್ರನ ಸಂಚಾರ 9ನೇ ಮನೆಯಲ್ಲಿ ಇರುವ ಈ ಅವಧಿಯಲ್ಲಿ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ. ವೃತ್ತಿ ಬದುಕಿನಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ನಿಮಗೆ ಅದೃಷ್ಟದ ಬೆಂಬಲ ಇರಲಿದೆ. ನೀವು ವಿದೇಶದಿಂದ ಹೊಸ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು. ಕೆಲಸದ ಸ್ಥಳದಲ್ಲಿ ನೀವು ಬಡ್ತಿ ಪಡೆಯುವ ಸಾಧ್ಯತೆಯಿದೆ. ಸ್ವಂತ ವ್ಯವಹಾರವನ್ನು ಹೊಂದಿರುವವರು ಈ ಅವಧಿಯಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ, ವ್ಯಾಪಾರಿಗಳು ಪ್ರಗತಿಯನ್ನು ಕಾಣುತ್ತೀರಿ. ಆರೋಗ್ಯ ಕೂಡ ಚೆನ್ನಾಗಿರಲಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯಲ್ಲಿ ಶುಕ್ರ 11ನೇ ಮನೆಯಲ್ಲಿ ಇರುವಾಗ ನಮಗೆ ಅದೃಷ್ಟಕರವಾಗಿದೆ. ಈ ಅವಧಿಯಲ್ಲಿ ಅದೃಷ್ಟದ ಬೆಂಬಲ ಇರುವುದರಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಾಣುತ್ತೀರಿ. ವ್ಯಾಪಾರಿಗಳಿಗೆ ಲಾಭ ಗಳಿಸಲು ಸಾಧ್ಯವಾಗುವುದು. ಕುಟುಂಬ ಜೀವನ ಚೆನ್ನಾಗಿರಲಿದೆ. ವೈವಾಹಿಕ ಬದುಕಿನಲ್ಲಿ ಬಾಂಧವ್ಯ ತುಂಬಾ ಚೆನ್ನಾಗಿರಲಿದೆ. ಆರೋಗ್ಯ ಸಮಸ್ಯೆ ಇದ್ದರೆ ಸುಧಾರಣೆ ಕಂಡು ಬರಲಿದೆ.

ಈ ರಾಶಿಯವರು ಜಾಗ್ರತೆ

ಮೇಷ ರಾಶಿ

ಶುಕ್ರ ಕನ್ಯಾ ರಾಶಿಗೆ ಸಂಚರಿಸಿದಾಗ ಮೇಷ ರಾಶಿಯವರು ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವಧಿಯಲ್ಲಿ ಆರ್ಥಿಕವಾಗಿ ನಿವು ತುಂಬಾನೇ ಜಾಗ್ರತೆವಹಿಸಬೇಕು. ಸಾಲ ತೆಗೆದುಕೊಳ್ಳಬೇಕಾಗುವುದು. ಆದರೆ ಅಗ್ಯತಕ್ಕಿಂತ ಹೆಚ್ಚು ಸಾಲ ತೆಗೆದುಕೊಳ್ಳಬೇಡಿ. ಕುಟುಂಬ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯಗಳಿರಬಹುದು.
ನಿಮ್ಮ ಹಾಗೂ ಸಂಗಾತಿ ನಡುವೆ ಕೆಲ ಭಿನ್ನಾಭಿಪ್ರಾಯಗಳಿರಬಹುದು. ಆರೋಗ್ಯದ ಬಗ್ಗೆ ಕೂಡ ಗಮನಹರಿಸಬೇಕು.

ವೃಷಭ ರಾಶಿ

ಈ ಶುಕ್ರ ಸಂಚಾರದ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿ ಕೆಲ ಸಮಸ್ಯೆಗಳಿರಬಹುದು, ಕೆಲಸದ ಕಡೆಗೆ ಹೆಚ್ಚು ಗಮನಹರಿಸಲು ಸಾಧ್ಯವಾಗುವುದಿಲ್ಲ. ಸ್ವಂತ ವ್ಯವಹಾರ ಮಾಡುವವರು ಅಜಾಗರೂಕತೆಯಿಂದ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳಬಹುದು. ವ್ಯಾಪಾರಿಗಳಿಗೆ ಲಾಭ ಗಳಿಸಲು ಕಷ್ಟವಾಗುವುದು. ಆರ್ಥಿಕವಾಗಿ ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಆರೋಗ್ಯಕ್ಕಾಗಿ ಕೂಡ ಹೆಚ್ಚಿನ ಹಣ ಖರ್ಚಾಗುವುದು.

ಮಿಥುನ ರಾಶಿ

ವೃತ್ತಿ ಬದುಕಿನಲ್ಲಿ ನೀವು ಊಹಿಸದೆ ಇದ್ದರು ವರ್ಗಾವಣೆಯಾಗಬಹುದು. ಹಣದ ಬಗ್ಗೆ ಹೇಳುವುದಾದರೆ ಅಧಿಕ ಖರ್ಚು ಇರಲಿದೆ. ಈ ಅವಧಿಯಲ್ಲಿ ಆರ್ಥಿಕ ಲಾಭ ಗಳಿಸಲು ಕಷ್ಟವಾಗುವುದು. ಸಂಬಂಧದ ವಿಷಯದಲ್ಲಿ ಈ ಅವಧಿ ಅಷ್ಟೊಂದು ಅನುಕೂಲಕರವಲ್ಲ. ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿರಬಹುದು.

ಕರ್ಕ ರಾಶಿ

ಈ ಶುಕ್ರ ಸಂಚಾರ ಕರ್ಕ ರಾಶಿಯವರಿಗೆ ಅನುಕೂಲಕರವಲ್ಲ, ವೈವಾಹಿಕ ಬದುಕಿನಲ್ಲಿ ಸಮನ್ವಯದ ಕೊರತೆ ಕಂಡು ಬರುವುದು. ಈ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿ ಕೆಲ ಸಮಸ್ಯೆಗಳು ಎದುರಾಗುವುದರಿಂದ ಒತ್ತಡ ಅನುಭವಿಸುವಿರಿ, ವ್ಯಾಪಾರಿಗಳು ಕೂಡ ಲಾಭ ಗಳಿಸಲು ಕಷ್ಟವಾಗುವುದು. ಆರೋಗ್ಯದ ಕಡೆ ತುಂಬಾ ಗಮನಹರಿಸಬೇಕು.

ಸಿಂಹ ರಾಶಿ

ಸಿಂಹ ರಾಶಿಯಲ್ಲಿ ಶುಕ್ರ 2ನೇ ಮನೆಯಲ್ಲಿ ಇದ್ದಾಗ ಹಣಕ್ಕೆ ಸಂಬಂಧಿಸಿದ ಸಮಸ್ಯೆ ಎದುರಾಗಬಹುದು. ವೈಯಕ್ತಿಕ ಜೀವನದಲ್ಲಿನ ಸಮಸ್ಯೆಗಳು ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರುವುದು. ಕೆಲಸದಲ್ಲಿ ಹೆಚ್ಚಿನ ಒತ್ತಡ ಇರಲಿದೆ. ವ್ಯಾಪಾರಿಗಳಿಗೆ ಲಾಭ ಗಳಿಸಲು ಕಷ್ಟವಾಗುವುದು. ನಿಮ್ಮ ಸಂಗಾತಿಯ ಜೊತೆಗೆ ಕೆಲ ಭಿನ್ನಾಭಿಪ್ರಾಯಗಳಿರಬಹುದು. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳಿರಬಹುದು.


ತುಲಾ ರಾಶಿ

ಶುಕ್ರನು ನಿಮ್ಮ ಹನ್ನೆರಡನೇ ಮನೆಯಲ್ಲಿ ನಡೆಯಲಿದೆ. ಇದರಿಂದ ನೀವು ಅನಗತ್ಯ ಪ್ರಯಾಣ, ಆರ್ಥಿಕ ಸಮಸ್ಯೆ, ಕೆಲಸದ ಒತ್ತಡ, ಕೆಲಸದ ಜಾಗದಲ್ಲಿ ಮೇಲಾಧಿಕಾರಿಗಳ ಬೆಂಬಲ ಸಿಗದಿರುವುದು ಈ ಬಗೆಯ ಸಮಸ್ಯೆಗಳನ್ನು ಎದುರಿಸಬಹುದು. ಇನ್ನು ಕುಟುಂಬ ಜೀವನದಲ್ಲಿಯೂ ಕೆಲ ಸಮಸ್ಯೆಗಳು ಎದುರಾಗಬಹುದು. ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಆರೋಗ್ಯದ ಬಗ್ಗೆ ಹೇಳುವುದಾದರೆ ಹಲ್ಲು ನೋವಿನ ಸಮಸ್ಯೆವಿರಬಹುದು.

ಧನು ರಾಶಿ

ಧನು ರಾಶಿಯಲ್ಲಿ ಶುಕ್ರನ 10ನೇ ಸ್ಥಾನ ಅನುಕೂಲಕರವಲ್ಲ. ಈ ಅವಧಿಯಲ್ಲಿ ನೀವು ವೃತ್ತಿ ಜೀವನದ ಕಡೆಗೆ ಹೆಚ್ಚಿನ ಗಮನ ತೋರಿಸಲ್ಲ, ಅಲ್ಲದೆ ಕೆಲಸದಲ್ಲಿ ಅಭದ್ರತೆಯ ಭಾವನೆ ಉಂಟಾಗಬಹುದು. ವೃತ್ತಿ ಬದುಕಿನಲ್ಲಿ ಅತೃಪ್ತಿ ಕಾಡುವುದು. ಸ್ವಂತ ವ್ಯವಹಾರ ಮಾಡುವವರು ಲಾಭವನ್ನು ಪಡೆಯುವಲ್ಲಿ ವಿಳಂಬವನ್ನು ಎದುರಿಸಬಹುದು. ಸಂಬಂಧದಲ್ಲಿ ಅಹಂ ಕೆಟ್ಟ ಪರಿಣಾಮ ಬೀರಬಹುದು. ಆರೋಗ್ಯ ಸಮಸ್ಯೆ ಎದುರಾಗಬಹುದು.

ಕುಂಭ ರಾಶಿ

ಕುಂಭ ರಾಶಿಯಲ್ಲಿ ಶುಕ್ರ 8ನೇ ಮನೆಯಲ್ಲಿದ್ದಾಗ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಲ್ಲ. ಕುಟುಂಬದಲ್ಲಿ ಕೆಲ ಸಮಸ್ಯೆಗಳಿರಬಹುದು. ಕೆಲಸದಲ್ಲಿ ಅತೃಪ್ತಿ ಕಾಡುವುದು, ಕೆಲಸದ ಬದಲಾವಣೆಯ ಬಗ್ಗೆ ಯೋಚಿಸುತ್ತೀರಿ, ಆದರೆ ಅವಸರದಿಂದ ನಿರ್ಧಾರಕ್ಕೆ ಬರಬೇಡಿ. ವ್ಯಾಪಾರಿಗಳು ಕೂಡ ಈ ಅವಧಿಯಲ್ಲಿ ಕಠಿಣ ಸ್ಪರ್ಧೆಯನ್ನು ಎದುರಿಸುತ್ತೀರಿ. ಆರೋಗ್ಯದ ಬಗ್ಗೆ ಹೇಳುವುದಾದರೆ ಹಾರ್ಮೋನ್‌ಗೆ ಸಂಬಂಧಿಸಿದ ಸಮಸ್ಯೆವಿರಬಹುದು.

ಮೀನ ರಾಶಿ

ಮೀನ ರಾಶಿಯವರಲ್ಲಿ ಶುಕ್ರ ನಿಮ್ಮ ಏಳನೇ ಮನೆಯಲ್ಲಿರುತ್ತಾನೆ. ಕುಟುಂಬದೊಂದಿಗೆ ಹೊಂದಾಣಿಕೆಯ ಕೊರತೆಯನ್ನು ಎದುರಿಸಬಹುದು. ವೈವಾಹಿಕ ಜೀವನದಲ್ಲಿ ಹೊಂದಾಣಿಕೆಯ ಕೊರತೆ ಇರಬಹುದು. ಕೆಲಸದಲ್ಲಿ ಸವಾಲು ಎದುರಾಗಬಹುದು. ವ್ಯಾಪಾರಿಗಳು ಕೂಡ ಕೆಲ ಸಮಸ್ಯೆಗಳನ್ನು ಎದುರಿಸಬಹುದು . ಸಂಬಂಧದ ಕಡೆಗೆ ತುಂಬಾನೇ ಗಮನಹರಿಸಬೇಕು. ಆರೋಗ್ಯ ಸಮಸ್ಯೆಯಿಂದ ಆರ್ಥಿಕ ಸಮಸ್ಯೆ ಎದುರಾಗಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Venus Transit In Virgo : Lucky And Unlucky Zodiac Signs In Kannada

Venus Transit In Virgo: Here is lucky and unlucky zodiac signs during this time, read on.....
Story first published: Thursday, August 22, 2024, 21:16 [IST]
X
Desktop Bottom Promotion