Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವೃಷಭ ರಾಶಿಯಲ್ಲಿ ಶುಕ್ರ ಗೋಚಾರ ಫಲ: ದ್ವಾದಶ ರಾಶಿಗಳಿಗೆ ಶುಕ್ರನ ಪ್ರಭಾವ ಹೇಗಿರಲಿದೆ?
ಶುಕ್ರನು ವೃಷಭ ರಾಶಿಗೆ ಸಂಚರಿಸಲಿದೆ, ಮೇ 19ಕ್ಕೆ ವೃಷಭ ರಾಶಿಗೆ ಸಂಚರಿಸಿದಾಗ ಇದರ ಪ್ರಭಾವ 12 ರಾಶಿಗಳಿಗೆ ಹೇಗಿರಲಿದೆ?
ಮೇಷ ರಾಶಿ
ವೃಷಭ ರಾಶಿಗೆ ಶುಕ್ರನು ಸಂಚರಿಸಿದಾಗ ಮೇಷ ರಾಶಿಯಲ್ಲಿ ಶುಕ್ರ 2ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನೀವು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳದಿರುವುದು ಒಳ್ಳೆಯದು. ವೃತ್ತಿ ಜೀವನದಲ್ಲಿ ತುಂಬಾನೇ ಒತ್ತಡ ಇರಲಿದೆ. ಆರ್ಥಿಕವಾಗಿಯೂ ಈ ಅವಧಿ ಅಷ್ಟೊಂದು ಉತ್ತಮವಾಗಿಲ್ಲ. ಇನ್ನು ಈ ಅವಧಿಯಲ್ಲಿ ನೀವು ಆರೋಗ್ಯದ ಕಡೆಗೆ ಗಮನಹರಿಸಿ.

ವೃಷಭ ರಾಶಿ
ಶುಕ್ರ ವೃಷಭ ರಾಶಿಗೆ ಸಂಚರಿಸಲಿದೆ. ಈ ಅವಧಿಯಲ್ಲಿ ಕೆಲಸದ ಒತ್ತಡ ಹೆಚ್ಚಿರಲಿದೆ. ಇನ್ನು ವ್ಯಾಪಾರಸ್ಥರಿಗೆ ಮಿಶ್ರ ಫಲ ಲಾಭವೂ ಇರಲ್ಲ, ನಷ್ಟವೂ ಇರಲ್ಲ. ಈ ಅವಧಿಯಲ್ಲಿ ಉಳಿತಾಯ ಮಾಡುವುದು ಕಷ್ಟವಾಗಬಹುದು. ವೈವಾಹಿಕ ಜೀವನದಲ್ಲಿಯೂ ಸಂಬಂಧ ಅಷ್ಟೊಂದು ಚೆನ್ನಾಗಿರಲ್ಲ. ನೀವು ನಿಮ್ಮಿಬ್ಬರ ನಡುವೆ ಸಂಬಂಧ ಉತ್ತಮ ಪಡಿಸಲು ನೀವು ಹೆಚ್ಚಿನ ಶ್ರಮ ಹಾಕಬೇಕು. ಆರೋಗ್ಯದ ಕಡೆಗೂ ಗಮನಹರಿಸಬೇಕು.
ಮಿಥುನ ರಾಶಿ
ಮಿಥುನ ರಾಶಿಯಲ್ಲಿ ಶುಕ್ರ 12ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಆಧ್ಯಾತ್ಮಕ ಜೀವನದ ಕಡೆಗೆ ಹೆಚ್ಚಿನ ಗಮನಹರಿಸುತ್ತೀರಿ. ಈ ಅವಧಿಯಲ್ಲಿ ಕೆಲಸದಲ್ಲಿ ತೃಪ್ತಿಇರಲ್ಲ. ವ್ಯಾಪಾರಿಗಳಿಗೂ ಈ ಅವಧಿ ಸವಾಲಿನಿಂದ ಕೂಡಿರಲಿದೆ. ಆರ್ಥಿಕವಾಗಿ ನೋಡುವುದಾದರೆ ಈ ಅವದಿ ಮಿಶ್ರಫಲ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯವಿರಬಹುದು. ಈ ಅವಧಿಯಲ್ಲಿ ಆರೋಗ್ಯ ನಿರ್ಲಕ್ಷ್ಯ ಮಾಡಲು ಹೋಗಬೇಡಿ.
ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ ಶುಕ್ರ 11ನೇ ಮನೆಯಲ್ಲಿ ಇರಲಿದೆ. ವೃತ್ತಿ ಬದುಕು ತುಂಬಾ ಚೆನ್ನಾಗರಿಲಿದೆ. ನೀವು ವ್ಯಾಪಾರ ಕ್ಷೇತ್ರದೊಂದಿಗೆ ಸಂಬಂಧ ಹೊಂದಿದ್ದರೆ ನೀವು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಆರ್ಥಿಕವಾಗಿ ತುಂಬಾ ಒಳ್ಳೆಯದಿದೆ. ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ. ನಿಮ್ಮ ಆರೋಗ್ಯ ಜೀವನ ಕೂಡ ಚೆನ್ನಾಗಿರಲಿದೆ.
ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಶುಕ್ರ 10ನೇ ಮನೆಯಲ್ಲಿ ಇರುವಾಗ ವೃತ್ತಿ ಬದುಕಿನಲ್ಲಿ ಏರಳಿತ ಉಂಟಾಗುವುದು. ನೀವು ವ್ಯಾಪಾರಿಯಾಗಿದ್ದರೆ ನೀವು ಲಾಭವನ್ನು ಪಡೆಯಬಹುದು ಮತ್ತು ಕೆಲವೊಮ್ಮೆ ನೀವು ನಷ್ಟವನ್ನು ಅನುಭವಿಸಬೇಕಾಗಬಹುದು. ಹಣದ ವಿಷಯದಲ್ಲಿ ಜಾಗ್ರತೆವಹಿಸಿ, ವೈವಾಹಿಕ ಜೀವನ ಚೆನ್ನಾಗಿರಲಿದೆ. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
ಕನ್ಯಾ ರಾಶಿ
ಕನ್ಯಾ ರಾಶಿಯಲ್ಲಿ ಬುಧ 9ನೇ ಮನೆಯಲ್ಲಿ ಇರುವಾಗ ವೃತ್ತಿ ಬದುಕು ತುಂಬಾ ಚೆನ್ನಾಗಿರಲಿದೆ. ನೀವು ವ್ಯಾಪಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೆ ಈ ಅವಧಿ ನಿಮಗೆ ಉತ್ತಮವಾಗಿದೆ. ಹಣಕಾಸಿನ ಸ್ಥಿತಿ ಚೆನ್ನಾಗಿರಲಿದೆ. ವ್ಯಾಪಾರಿಗಳು ಉತ್ತಮ ಆರ್ಥಿಕ ಪ್ರಯೋಜನ ಪಡೆಯುತ್ತೀರಿ. ವೈವಾಹಿಕ ಜೀವನ, ಆರೋಗ್ಯ ಚೆನ್ನಾಗಿರಲಿದೆ.
ತುಲಾ ರಾಶಿ
ವೃತ್ತಿ ಜೀವನದಲ್ಲಿ ನೀವು ಬದಲಾವಣೆಗಳನ್ನು ನಿರೀಕ್ಷಿಸಬಹುದು. ವ್ಯಾಪಾರಿಗಳಿಗೆ ಈ ಸಾಗಣೆಯು ವ್ಯವಹಾರದಲ್ಲಿ ಯಶಸ್ಸನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ. ಆರ್ಥಿಕವಾಗಿ ಈ ಅವಧಿ ತುಂಬಾ ಒಳ್ಳೆಯದಿದೆ. ವೈವಾಹಿಕ ಜೀವನದಲ್ಲಿ ಕೆಲ ಸಮಸ್ಯೆಗಳಿರಬಹುದು, ನೀವಿಬ್ಬರು ಮಾತನಾಡಿ ಪರಿಹರಿಸುವುದು ಒಳ್ಳೆಯದು. ಕಣ್ಣಿನ ಆರೋಗ್ಯ ಸಮಸ್ಯೆವಿರಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯಲ್ಲಿ ಶುಕ್ರ 7ನೇ ಮನೆಯಲ್ಲಿ ಇರಲಿದೆ. ವೃತ್ತಿ ಜೀವನದಲ್ಲಿ ನಿಮಗೆ ಉತ್ತಮವಾಗಲಿದೆ. ಈಗ ಇರುವ ಕೆಲಸದಲ್ಲಿ ನೀವು ಉತ್ತಮ ಪ್ರಗತಿ ಹೊಂದಲಿದೆ. ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿದೆ. ಆರ್ಥಿಕವಾಗಿ ಒಳ್ಳೆಯದಿದೆ. ಇನ್ನು ವೈವಾಹಿಕ ಜೀವನದಲ್ಲಿ ನಿಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯ ಇರಲಿದೆ. ಆರೋಗ್ಯ ಕೂಡ ಚೆನ್ನಾಗಿ ಇರುವುದರಿಂದ ಈ ಅವಧಿ ನಿಮಗೆ ಉತ್ತಮವಾಗಿದೆ.
ಧನು ರಾಶಿ
ಧನು ರಾಶಿಯವರಿಗೆ ಈ ಅವಧಿ ಮಿಶ್ರಫಲ, ವೃತ್ತಿ ಬದುಕಿನಲ್ಲಿ ನಿಮಗೆ ತೃಪ್ತಿ ಇರಲ್ಲ. ಹೀಗಾಗಿ ನೀವು ಕೆಲಸ ಬದಲಾಯಿಸಲು ಯೋಚಿಸಬಹುದು. ನೀವು ವ್ಯಾಪಾರ ವಲಯದೊಂದಿಗೆ ಸಂಬಂಧ ಹೊಂದಿದ್ದರೆ, ಈ ಸಾಗಣೆಯು ನಿಮಗೆ ಲಾಭದ ವಿಷಯದಲ್ಲಿ ಮಧ್ಯಮ ಯಶಸ್ಸು ತರಲಿದೆ. ಆರ್ಥಿಕವಾಗಿ ಈ ದಿನ ತುಂಬಾ ಚೆನ್ನಾಗಿದೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗದಂತೆ ಜಾಗ್ರತೆವಹಿಸಿ. ಆರೋಗ್ಯ ಚೆನ್ನಾಗಿರಲಿದೆ.
ಮಕರ ರಾಶಿ
ಮಕರ ರಾಶಿಯಲ್ಲಿ ಶುಕ್ರ 5ನೇ ಮನೆಯಲ್ಲಿ ಇರುವಾಗ ವೃತ್ತಿ ಬದುಕಿನಲ್ಲಿ ಉತ್ತಮ ಅವಕಾಶಗಳು ದೊರೆಯಲಿದೆ. ಆದರೆ ಕೆಲಸಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಯಾಣ ಮಾಡಬಹುದು. ಆದರೆ ಆ ಪ್ರಯಾಣ ನಿಮಗೆ ಲಾಭದಾಯಕವಾಗಿರಲಿದೆ. ವ್ಯಾಪಾರಿಗಳು ಕೂಡ ಉತ್ತಮ ಪ್ರಯೋಜನ ಪಡೆಯುತ್ತೀರಿ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ.
ಈ ಅವಧಿಯಲ್ಲಿ ನಿಮ್ಮ ವೈವಾಹಿಕ ಬದುಕು ತುಂಬಾನೇ ಚೆನ್ನಾಗಿರಲಿದೆ.
ಕುಂಭ ರಾಶಿ
ಕುಂಭರಾಶಿಯಲ್ಲಿ ಶುಕ್ರ 4ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಹೃದಯ ಸಂಬಂಧಿ ಸಮಸ್ಯೆ ಇರುವವರು ತುಂಬಾ ಜಾಗ್ರತೆವಹಿಸಬೇಕು. ಈ ಸಮಯದಲ್ಲಿ ಮನೆಯ ಸೌಕರ್ಯಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡುತ್ತೀರಿ. ವೃತ್ತಿ ಬದುಕಿನಲ್ಲಿ ಯಶಸ್ಸು ದೊರೆಯಲಿದೆ. ಆರ್ಥಿಕವಾಗಿ ಈ ದಿನ ತುಂಬಾ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ಸ್ವಲ್ಪ ಹಣ ಉಳಿತಾಯ ಮಾಡಲು ಸಾಧ್ಯವಾಗುವುದು. ವೈವಾಹಿಕ ಜೀವನ ಚೆನ್ನಾಗಿರಲಿದೆ.
ಮೀನ ರಾಶಿ
ಮೀನ ರಾಶಿಯಲ್ಲಿ 3ನೇ ಮನೆಯಲ್ಲಿ ಇರಲಿದೆ. ವೃತ್ತಿ ಜೀವನದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಸಹೋದ್ಯೋಗಿಗಳೊಂದಿಗೆ ನಿಮ್ಮ ಸಂಬಂಧದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ನೀವು ವ್ಯಾಪಾರ ಕ್ಷೇತ್ರದೊಂದಿಗೆ ಸಂಬಂಧ ಹೊಂದಿದ್ದರೆ ಅದರಲ್ಲಿ ಲಾಬ ದೊರೆಯಲಿದೆ. ಆರ್ಥಿಕವಾಗಿ ಈ ದಿನ ತುಂಬಾ ಚೆನ್ನಾಗಿರಲಿದೆ. ಆರೋಗ್ಯ ಜೀವನ ಚೆನ್ನಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications