ಜುಲೈ 31ಕ್ಕೆ ಸಿಂಹ ರಾಶಿಯಲ್ಲಿ ಶುಕ್ರ ಸಂಚಾರ: ನಿಮ್ಮ ರಾಶಿಗೆ ಇದೆಯೇ ಶುಕ್ರದೆಸೆ?

ಶುಕ್ರನನ್ನು ಅದೃಷ್ಟದ ಗ್ರಹವೆಂದು ಪರಿಗಣಿಸಲಾಗಿದೆ, ಈ ಶುಕ್ರ ಜುಲೈ 31ಕ್ಕೆ ಸಿಂಹ ರಾಶಿಗೆ ಸಂಚರಿಸಲಿದೆ, ಶುಕ್ರನು ಸಿಂಹ ರಾಶಿಯಲ್ಲಿ ಇರುವಾಗ ದ್ವಾದಶ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂದು ನೋಡೋಣ:

Venus Transit In Leo

ಮೇಷ ರಾಶಿ

ಮೇಷ ರಾಶಿಯವರಿಗೆ ಈ ಶುಕ್ರ ಸಂಚಾರ ತುಂಬಾನೇ ಅನುಕೂಲಕರವಾಗಿದೆ, ಈ ಅವಧಿಯಲ್ಲಿ ನೀವು ವೃತ್ತಿ ಬದುಕಿನಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತೀರಿ, ಪ್ರೇಮಿಗಳಿಗೆ ಈ ಅವಧಿ ವಿಶೇಷವಾಗಿರಲಿದೆ. ಶುಕ್ರನು ನಿಮ್ಮ ಕುಟುಂಬ ಜೀವನದ ಮೇಲೆ ಒಳ್ಳೆಯ ಪ್ರಭಾವ ಬೀರಲಿದೆ, ಕುಟುಂಬದಲ್ಲಿ ಮದುವೆ ಮಾತುಕತೆ ಯಶಸ್ವಿಯಾಗುವುದು. ಆದರೆ ವ್ಯವಹಾರ ಮಾಡುವಾಗ ನೀವು ಸ್ವಲ್ಪ ಜಾಗ್ರತೆವಹಿಸಿ, ಇಲ್ಲದಿದ್ದರೆ ಮೋಸ ಹೋಗಬಹುದು.

ವೃಷಭ ರಾಶಿ

ವೃಷಭ ರಾಶಿಯವರಿಗೂ ಈ ಶುಕ್ರ ಸಂಚಾರ ಅನುಕೂಲಕರವಾಗಿದೆ, ಈ ಸಮಯ ಆಸ್ತಿ ಸಂಬಂಧಿಸಿದ ವ್ಯವಹಾರ ಮಾಡಲು ಸೂಕ್ತವಾಗಿದೆ, ಇದರಲ್ಲಿ ನೀವು ಲಾಭ ಗಳಿಸುತ್ತೀರಿ. ಇನ್ನು ಈ ಸಮಯದಲ್ಲಿ ವಾಹನ ಖರೀದಿಗೂ ಉತ್ತಮವಾಗಿದೆ, ಒಟ್ಟಿನಲ್ಲಿ ಈ ಅವಧಿ ನಿಮಗೆ ಶುಕ್ರದೆಸೆ.

ಮಿಥುನ ರಾಶಿ

ಈ ಶುಕ್ರ ಸಂಚಾರ ನಿಮ್ಮ ವೈಯಕ್ತಿಕ ಜೀವನದ ದೃಷ್ಟಿಯಿಂದ ನೋಡುವುದಾದರೆ ತುಂಬಾ ಉತ್ತಮವಾಗಿದೆ, ಈ ಅವಧಿಯಲ್ಲಿ ನಿಮ್ಮ ಕುಟುಂಬದ ಗೌರವ ಹೆಚ್ಚಾಗಲಿದೆ. ಇನ್ನು ಹೊಸ ಯೋಜನೆಯಲ್ಲಿ ತೊಡಗಿಕೊಳ್ಳುವುದಾದರೆ ನಿಮ್ಮ ಐಡಿಯಾಗಳನ್ನು ಹಂಚಿಕೊಳ್ಳಬೇಡಿ, ಇಲ್ಲದಿದ್ದರೆ ನೀವು ಪ್ರಾರಂಭಿಸುವ ಮುನ್ನವೇ ಅವರು ಪ್ರಾರಂಭಿಸಬಹುದು. ಇನ್ನು ಹೊಸ ಕೆಲಸದ ಪ್ರಯತ್ನಕ್ಕೆ ಯಶಸ್ಸು ದೊರೆಯಲಿದೆ.

ಕರ್ಕ ರಾಶಿ

ಶುಕ್ರನ ಈ ಸಂಚಾರದ ಅವಧಿ ಆರ್ಥಿಕವಾಗಿ ತುಂಬಾ ಉತ್ತಮವಾಗಿದೆ. ನೀವು ಯಾವುದೇ ಹೊಸ ಕೆಲಸ ಅಥವಾ ವ್ಯವಹಾರವನ್ನು ಪ್ರಾರಂಭಿಸಲು ಅಥವಾ ಹೊಸ ಒಪ್ಪಂದಕ್ಕೆ ಸಹಿ ಹಾಕಲು ಬಯಸಿದರೆ ಅದಕ್ಕೆ ಈ ಸಮಯ ತುಂಬಾನೇ ಉತ್ತಮವಾಗಿದೆ. ಕೆಲಸದ ಜಾಗದಲ್ಲಿ ತುಂಬಾನೇ ಜಾಗ್ರತೆವಹಿಸಿ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಈ ಅವಧಿಯಲ್ಲಿ ಹೊಸ ಆದಾಯದ ಮೂಲವನ್ನು ಸೃಷ್ಟಿಸುತ್ತದೆ, ಈ ಅವಧಿಯಲ್ಲಿ ಆರ್ಥಿಕವಾಗಿ ಉತ್ತಮವಾಗಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಅವಾಹಿತರಿಗೆ ಮದುವೆ ಸಂಬಂಧ ನೋಡುತ್ತಿದ್ದರೆ ಈ ಸಮಯ ಉತ್ತಮವಾಗಿದೆ, ಈ ಅವಧಿಯಲ್ಲಿ ಯಾವುದೇ ಷೇರು ಹೂಡಿಕೆ ಮಾಡಲು ಹೋಗಬೇಡಿ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ಶುಕ್ರ ಸಂಚಾರ ಖರ್ಚು ಹೆಚ್ಚಿಸಲಿದೆ, ಈ ಸಮಯದಲ್ಲಿ ನೀವು ದುಬಾರಿ ವಸ್ತುಗಳ ಖರೀದಿಗೆ ಹಣ ಖರ್ಚು ಮಾಡುತ್ತೀರಿ. ಇನ್ನು ವಿದೇಶದಲ್ಲಿ ಕೆಲಸಕ್ಕಾಗಿ ಪ್ರಯತ್ನ ಮಾಡಿದ್ದರೆ ಈ ಸಮಯ ಉತ್ತಮವಾಗಿರಲಿದೆ. ಇನ್ನು ಹಣವನ್ನು ಯಾರಿಗೂ ಸಾಲ ಕೊಡಬೇಡಿ, ಕೊಟ್ಟರೆ ಮರಳಿ ಸಿಗುವುದು ಕಷ್ಟವಾಗುವುದು.

ತುಲಾ ರಾಶಿ

ತುಲಾ ರಾಶಿಯವರಿಗೆ ಈ ಸಂಚಾರದ ಸಮಯದಲ್ಲಿ ಆರ್ತಿಕವಾಗಿ ಉತ್ತಮವಾಗಿದ್ದು ನಿಮ್ಮ ಪ್ರಮುಖ ಆಸೆ ಈಡೇರಲಿದೆ. ಕುಟುಂಬದಲ್ಲಿ ಸಂತೋಷವಿರಲಿದೆ. ನವ ದಂಪತಿಗಳಿಗೆ ಸಂತಾನ ಭಾಗ್ಯದ ಖುಷಿ ಸಿಗಲಿದೆ, ಇನ್ನು ವಿದ್ಯಾರ್ಥಿಗಳಿಗೂ ಈ ಸಮಯ ತುಂಬಾನೇ ಉತ್ತಮವಾಗಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಈ ಅವಧಿಯಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುತ್ತೀರಿ, ಆಸ್ತಿಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಯಲಿದೆ. ವಾಹನವನ್ನು ಖರೀದಿಸಲು ಬಯಸಿದರೆ ಈ ಸಮಯ ಉತ್ತಮವಾಗಿದೆ.

ಧನು ರಾಶಿ

ವ್ಯವಹಾರದಲ್ಲಿ ಉತ್ತಮ ಯಶಸ್ಸು ಸಿಗಲಿದೆ. ವ್ಯವಹಾರದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಕಾನುನು ಸಂಬಂಧಿಸಿದ ವಿಷಯದಲ್ಲಿ ಜಾಗ್ರತೆವಹಿಸಿ.

ಮಕರ ರಾಶಿ

ಮಕರ ರಾಶಿಯವರು ಅನಿರೀಕ್ಷಿತ ಏರಳಿತ ಎದುರಿಸಬಹುದು, ವೈವಾಹಿಕ ಜೀವನದಲ್ಲಿ ಭಿನ್ನಾಬಿಪ್ರಾಯವಿರಬಹುದು, ಅರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಬೇಡ.
ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿದೆ.

ಕುಂಭ ರಾಶಿ

ವೈವಾಹಿಕ ಜೀವನದ ಕಡೆಗೆ ಗಮನಹರಿಸಿ. ಈ ಅವಧಿಯಲ್ಲಿ ಆರೋಗ್ಯ ಚೆನ್ನಾಗಿರಲಿದೆ, ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿದೆ.
ಇನ್ನು ವಿದೇಶದದಲ್ಲಿ ಕೆಲಸಕ್ಕೆ ಶ್ರಮಿಸುತ್ತಿದ್ದರೆ ಈ ಅವಧಿ ಉತ್ತಮವಾಗಿದೆ.

ಮೀನ ರಾಶಿ

ಈ ಶುಕ್ರ ಸಂಚಾರ ನಿಮಗೆ ಅಷ್ಟೊಂದು ಅನುಕುಲಕರವಲ್ಲ, ಈ ಅವಧಿಯಲ್ಲಿ ಯಾವುದೇ ಪ್ರಮುಖ ಸಾಲದ ವಹಿವಾಟುಗಳನ್ನು ತಪ್ಪಿಸಿ. ಇತರರನ್ನು ಅತಿಯಾಗಿ ನಂಬಬೇಡಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Venus Transit In Leo: Shukra Sanchar In simha Rashi, Effect On 12 Zodiac Signs In Kannada

Venus Transit In Leo: Shukra sanchar in simha rashi, effects on 12 zodiac signs, read on....
Story first published: Monday, July 29, 2024, 19:25 [IST]
X
Desktop Bottom Promotion