Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಸಿಂಹ ರಾಶಿಗೆ ಶುಕ್ರ ಸಂಚಾರ: ಜುಲೈ 30ರ ಬಳಿಕ ಈ 4 ರಾಶಿಗಳಿಗೆ ಶುಕ್ರದೆಸೆ
ಶುಕ್ರನನ್ನು ಅದೃಷ್ಟದ ಗ್ರಹವೆಂದು ಪರಿಗಣಿಸಲಾಗಿದೆ, ಶುಕ್ರ ಅನುಕೂಲಕರ ಸ್ಥಾನದಲ್ಲಿದ್ದರೆ ಶುಕ್ರದೆಸೆ, ಅಂದರೆ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಇದೀಗ ಶುಕ್ರ ಕರ್ಕ ರಾಶಿಯಲ್ಲಿದೆ, ಜುಲೈ 31, 2024 ರಂದು ಮಧ್ಯಾಹ್ನ 02:15 ಕ್ಕೆ ಶುಕ್ರವು ಸಿಂಹ ರಾಶಿಗೆ ಸಾಗಲಿದೆ. ಈ ಶುಕ್ರ ಸಂಚಾರದ ಅವಧಿಯಲ್ಲಿ 4 ರಾಶಿಗಳಿಗೆ ಶುಕ್ರದೆಸೆ.....
ಶುಕ್ರ ಸಂಚಾರದ ಅವಧಿಯಲ್ಲಿ ಈ ರಾಶಿಯವರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ:

ವೃಷಭ ರಾಶಿ
ಶುಕ್ರ ಸಿಂಹ ರಾಶಿಗೆ ಸಂಚರಿಸಿದಾಗ ವೃಷಭ ರಾಶಿಯವರು ಹೆಚ್ಚಿನ ಪ್ರಯೋಜನ ಪಡೆಯಲಿದ್ದೀರಿ. ಈ ಅವಧಿ ಆರ್ಥಿಕವಾಗಿ ಚೆನ್ನಾಗಿರಲಿದೆ, ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಮನೆಯ ಸೌಕರ್ಯಗಳು ಹೆಚ್ಚಾಗಲಿದೆ. ಇನ್ನು ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆ ಈ ಬರೆದರೆ ಅದರಲ್ಲಿ ಯಶಸ್ಸು ಪಡೆಯುತ್ತೀರಿ. ಏಕೆಂದರೆ ಶ್ರಮದ ಜೊತೆಗೆ ಅದೃಷ್ಟದ ಬಲವೂ ಇರುತ್ತದೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ನೀವು ಪ್ರಯತ್ನಿಸಿದ ಕೆಲಸ ಸಿಗಲಿದೆ. ಇನ್ನು ಆಸ್ತಿ ಖರೀದಿಸಬೇಕು, ವಾಹನ ಖರೀದಿಸಬೇಕೆಂದು ಬಯಸುವವರೆಗೆ ಈ ಸಮಯ ಅನುಕೂಲಕರವಾಗಿದೆ.
ಮಿಥುನ ರಾಶಿ
ಸಿಂಹ ರಾಶಿಗೆ ಬುಧ ಸಂಚಾರ ಮಾಡಿದಾಗ ಮಿಥುನ ರಾಶಿಯವರು ಉತ್ತಮ ಪ್ರಯೋಜನ ಪಡೆಯಲಿದ್ದೀರಿ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಕೆಲಸ ಸಿಗಲಿದೆ, ಉದ್ಯೋಗಿಗಳಿಗೆ ಈ ಅವಧಿ ತುಂಬಾ ಚೆನ್ನಾಗಿರಲಿದೆ, ವೃತ್ತಿ ಜೀವನದಲ್ಲಿ ಒಳ್ಳೆಯ ಅವಕಾಶಗಲು ದೊರೆಯಲಿದೆ, ಆರ್ಥಿಕವಾಗಿ ತುಂಬಾನೇ ಒಳ್ಳೆಯದು. ಶುಕ್ರ ಸಂಚಾರದ ಈ ಅವಧಿಯಲ್ಲಿ ನೀವು ನಿಮ್ಮ ಸೌಕರ್ಯಕ್ಕಾಗಿ ಐಷಾರಾಮಿ ವಸ್ತುಗಳನನ್ನು ಖರೀದಿಸಬಹುದು.
ಕನ್ಯಾರಾಶಿ
ಶುಕ್ರ ಸಿಂಹ ರಾಶಿಗೆ ಸಂಚರಿಸಿದಾಗ ಕನ್ಯಾ ರಾಶಿಯ 12ನೆ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ವೃತ್ತಿ ಜಿವನದಲ್ಲಿ ಉತ್ತಮ ಪ್ರಗತಿ ಕಾಣುತ್ತೀರಿ, ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಕ್ಕೆ ಯಶಸ್ಸು ದೊರೆಯಲಿದೆ. ಇನ್ನು ವಿದೇಶದಲ್ಲಿ ಕೆಲಸಕ್ಕೆ ಪ್ರಯತ್ನಿಸುತ್ತಿರುವವರೆಗೆ ಈ ಅವಧಿ ಉತ್ತಮವಾಗಿದೆ. ವ್ಯಾಪಾರಿಗಳು ಧನ ಲಾಭವಾಗಲಿದೆ. ಉದ್ಯಮಿಗಳ ಉದದ್ಯಮ ವಿಸ್ತರಣೆಯಾಗಲಿದೆ. ಈ ಅವಧಿಯಲ್ಲಿ ಮನೆಯ ಸವಕರ್ಯ ಹೆಚ್ಚಾಗುವುದು, ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ.
ತುಲಾ ರಾಶಿ
ಈ ಶುಕ್ರ ಸಂಚಾರ ತುಲಾ ರಾಶಿಯವರಿಗೂ ತುಂಬಾನೇ ಪ್ರಯೋಜನಕಾರಿಯಾಗಿದೆ. ಶುಕ್ರ ಸಂಚಾರವು ನಿಮ್ಮ ವೃತ್ತಿಜೀವನದಲ್ಲಿ ಸಕರಾತ್ಮಕ ಬದಲಾವಣೆಯನ್ನು ತರಲಿದೆ. ವೃತ್ತಿ ಬದುಕಿನಲ್ಲಿ ನೀವು ತುಂಬಾ ಸಮಯದಿಂದ ನಿರೀಕ್ಷೆ ಮಾಡುತ್ತಿದ್ದ ಫಲ ದೊರೆಯಲಿದೆ. ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ಆರೋಗ್ಯ ಚೆನ್ನಾಗಿರಲಿದೆ. ನೀವು ತುಂಬಾ ಸಮಯದಿಂದ ಖರೀದಿಸಲು ಆಸೆ ಪಡುತ್ತಿದ್ದ ವಸ್ತು ಖರೀದಿಸಲು ಸಾಧ್ಯವಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
