Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಸೆ. 2ಕ್ಕೆ ಶುಕ್ರನ ನಕ್ಷತ್ರ ಬದಲಾವಣೆ: ಹಸ್ತಾ ನಕ್ಷತ್ರದಲ್ಲಿರುವ ಶುಕ್ರ ಈ ರಾಶಿಗಳಲ್ಲಿ ದುರ್ಬಲವಾಗಿದೆ
ಜ್ಯೋತಿಷ್ಯದಲ್ಲಿ ಗ್ರಹಗಳ ನಕ್ಷತ್ರ ಬದಲಾವಣೆಯೂ ಪ್ರತಿಯೊಂದು ರಾಶಿಗಳ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುವುದು. ಸೆಪ್ಟೆಂಬರ್ 2ಕ್ಕೆ ಶುಕ್ರನು ಹಸ್ತಾ ನಕ್ಷತ್ರವನ್ನು ಪ್ರವೇಶಿಸುತ್ತದೆ. ಫಲ್ಗುಣಿ ನಕ್ಷತ್ರದಿಂದ ಹಸ್ತಾ ನಕ್ಷತ್ರಕ್ಕೆ ಪ್ರವೇಶ ಮಾಡಿದಾಗ 12 ರಾಶಿಗಳ ಮೇಲೆ ಪರಿಣಾಮ ಬೀರುವುದು.

ಶುಕ್ರನ ಈ ನಕ್ಷತ್ರ ಬದಲಾವಣೆ ಕೆಲ ರಾಶಿಗಳ ಮೇಲೆ ಅನುಕೂಲಕರ ಪ್ರಯೋಜನ ಬೀರಿದರೆ ಇನ್ನು ಕೆಲವು ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು. ಅದರಲ್ಲಿಯೂ ಶುಕ್ರನು ಹಸ್ತಾ ನಕ್ಷತ್ರಕ್ಕೆ ಸಂಚರಿಸಿದಾಗ ಈ ರಾಶಿಗಳ ಮೇಲೆ ಋಣಾತ್ಮಕ ಪರಿಣಾಮ ಬೀರುವುದು.
ಮೇಷ ರಾಶಿ
ಮೇಷ ರಾಶಿಯಲ್ಲಿ ಶುಕ್ರನ ಸಂಚಾರ ಋಣಾತ್ಮಕ ಪರಿಣಾಮ ಬೀರುವುದು, ಶೀಘ್ರದಲ್ಲೇ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬಹುದು. ಉದ್ಯಮಿಗಳು ವ್ಯಾಪಾರದಲ್ಲಿ ನಷ್ಟವನ್ನು ಎದುರಿಸುವ ಸಾಧ್ಯತೆ ಇದೆ. ಉದ್ಯೋಗಿಗಳ ಕೆಲಸದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳಿವೆ. ಮಾನಸಿಕ ಒತ್ತಡ ಹೆಚ್ಚಾಗಬಹುದು. ಇನ್ನು ಶುಕ್ರನು ಈ ಅವಧಿಯಲ್ಲಿ ಖರ್ಚು ಹೆಚ್ಚಿಸಲಿದೆ. ನೀವು ಬಜೆಟ್ ಅನ್ನು ಮಿತಿಯಲ್ಲಿ ಖರ್ಚು ಮಾಡಿದರೆ ಒಳ್ಳೆಯದು.
ಕರ್ಕ ರಾಶಿ
ಶುಕ್ರನು ಹಸ್ತಾ ನಕ್ಷತ್ರಕ್ಕೆ ಸಂಚರಿಸಿದಾಗ ಕರ್ಕ ರಾಶಿಯವರು ಕೂಡ ಕೆಲಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬಹುದು. ವ್ಯಾಪಾರದಲ್ಲಿ ಹೆಚ್ಚುತ್ತಿರುವ ನಷ್ಟದಿಂದ ಹಣಕಾಸಿನ ಪರಿಸ್ಥಿತಿ ದುರ್ಬಲವಾಗಬಹುದು. ಮನೆಯ ಕಡೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುವುದಿಲ್ಲ, ನಿಮ್ಮ ಹಾಗೂ ಸಂಗಾತಿಯ ನಡುವೆ ಭಿನ್ನಾಭಿಪ್ರಾಯವಿರಬಹುದು.
ಸಂಬಂಧದಲ್ಲಿ ಅಂತರ ಕೂಡ ಹೆಚ್ಚಾಗುವುದು.
ಕನ್ಯಾರಾಶಿ
ಈ ಅವಧಿಯಲ್ಲಿ ಶುಕ್ರನು ನಿಮಗೆ ಅನುಕೂಲಕರವಾಗಿ ಇರುವುದಿಲ್ಲ, ಹೀಗಾಗಿ ಸವಾಲುಗಳು ಹೆಚ್ಚಾಗುವುದುಜ, ಅಲ್ಲದೆ ಈ ಸಮಯದಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳು ಕೂಡ ತುಂಬಾನೇ ಕಾಡಬಹುದು. ಅಲ್ಲದೆ ಆದಾಯಕ್ಕಿಂತ ಹೆಚ್ಚು ಖರ್ಚು ಬರಲಿದೆ, ಕೆಲಸದಲ್ಲಿ ಒತ್ತಡ ಕುಡ ತುಂಬಾ ಇರಲಿದೆ, ಅಲ್ಲದೆ ವ್ಯಾಪಾರಿಗಳು ಜಾಗ್ರತೆವಹಿಸದಿದ್ದರೆ ಹಣ ಕೂಡ ನಷ್ಟವಾಗಬಹುದು.
ಧನು ರಾಶಿ
ಶುಕ್ರನ ಹಸ್ತಾ ನಕ್ಷತ್ರದಲ್ಲಿ ಇರುವ ಸಮಯ ನಿನಗೆ ಅನುಕೂಲಕರವಲ್ಲ, ವ್ಯಾಪಾರಿಗಳು ಈ ಸಮಯದಲ್ಲಿ ತುಂಬಾನೇ ಜಾಗ್ರತೆವಹಿಸಿ, ಇನ್ನು ಪಾಲುದಾರಿಕೆಯ ವ್ಯವಹಾರ ಮಾಡುತ್ತಿದ್ದರೆ ನಿಮ್ಮ ನಡುವೆ ಭಿನ್ನಾಬಿಪ್ರಾಯ ಬರಬಹುದು. ಖಾಸಗಿ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದರೆ ಈ ಅವಧಿಯಲ್ಲಿ ತುಂಬಾನೇ ಒತ್ತಡವಿರಲಿದೆ.
ಸಂಬಂಧದಲ್ಲಿಯೂ ಕೆಲ ಭಿನ್ನಾಬಿಪ್ರಾಯಗಳಿರಬಹುದು
ಮೀನ ರಾಶಿ
ಮೀನ ರಾಶಿಯವರು ಬಹಳ ಜಾಗರೂಕರಾಗಿರಬೇಕು. ಈ ಅವಧಿಯಲ್ಲಿ ಅರ್ಥಿಕ ಸಮಸ್ಯೆ ಎದುರಾಗುವುದು, ಅಲ್ಲದೆ ನಿಮ್ಮ ಮಾತು ಹಾಗೂ ವರ್ತನೆ ಸಂಬಂಧದ ಮೇಲೆ ಪರಿಣಾಮ ಬೀರುವುದು, ವೈವಾಹಿಕ ಬದುಕಿನಲ್ಲಿ ನಂಬಿಕೆಯ ಕೊರತೆ ಉಂಟಾಗುವುದು. ಆರೋಗ್ಯದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಲ್ಲ.
ಶುಕ್ರನನ್ನು ಬಲಪಡಿಸುವುದು ಹೇಗೆ?
ವಜ್ರವಿದ್ದರೆ ಧರಿಸಿ: ವಜ್ರದ ಆಭರಣವಿದ್ದರೆ ಅದನ್ನು ಧರಿಸುವುದರಿಂದ ನಿಮ್ಮ ಜಾತಕದಲ್ಲಿ ಶುಕ್ರನ ಸ್ಥಾನ ಬಲವಾಗುವುದು ಎಂದು ಹೇಳಲಾಗುವುದು.
ಆಕರ್ಷಕವಾಗಿ ಕಾಣಲು ಪ್ರಯತ್ನಿಸಿ: ನಿಮ್ಮ ದೈಹಿಕ ಸೌಂದರ್ಯದ ಕಡೆಗೆ ಗಮನಹರಿಸಿ, ಮಹಿಳೆಯರಾದರೆ ಅಲಂಕಾರ ಮಾಡಿ ಆಕರ್ಷಕವಾಗಿ ಕಾಣಬೇಕು. ಪುರುಷಾರಾದರೆ ನಿಮ್ಮ ಲುಕ್ ಕಡೆಗೆ ಗಮನಹರಿಸಿ.
ಬಿಳಿ ಬಣ್ಣದ ವಸ್ತ್ರಗಳನ್ನು ಧರಿಸಿ
ಶುಕ್ರ ಯಂತ್ರವನ್ನು ಸ್ಥಾಪಿಸಿ.
6 ಮುಖಿ ರುದ್ರಾಕ್ಷಿ ಧರಿಸುವುದು ಕೂಡ ಶುಕ್ರನ ಸ್ಥಾನ ಬಲಪಡಿಸುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











