Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕರ ರಾಶಿಗೆ ಶುಕ್ರ ಸಂಚಾರ: 2026ರಲ್ಲಿ ಶ್ರೀಮಂತರಾಗೋದು ಇವರೇ! ಯಾರಿಗೆ ಲಾಭದಾಯಕ?
ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳು ಒಂದು ನಿರ್ದಿಷ್ಟ ಅವಧಿಯ ನಂತರ ತಮ್ಮ ರಾಶಿ ಮತ್ತು ನಕ್ಷತ್ರ ಬದಲಾಯಿಸುತ್ತಲೇ ಇರುತ್ತವೆ. ಇನ್ನೊಂದು ತಿಂಗಳಲ್ಲಿ ಹಲವು ಗ್ರಹಗಳ ಸಂಚಾರವು ಬದಲಾಗುವುದು ನೋಡಬಹುದು. ಅದ್ರಲ್ಲೂ 2026ರಲ್ಲಿ ಅನೇಕ ಗ್ರಹಗಳ ಚಲನೆಯಲ್ಲಿನ ಬದಲಾವಣೆ ಸಹ ನೋಡಬಹುದು.
2026 ರ ಆರಂಭದಲ್ಲಿ ಶುಕ್ರನು ಶನಿಯ ಅಧಿಪತ್ಯದ ಮಕರ ರಾಶಿಗೆ ಚಲಿಸಲಿದ್ದಾನೆ. ಶುಕ್ರನು ಬಹಳ ಮುಖ್ಯವಾದ ಗ್ರಹ ಎಂದು ಜ್ಯೋತಿಷ್ಯದಲ್ಲಿ ಪರಿಗಣಿಸಲಾಗುತ್ತದೆ. ಶುಕ್ರನ ಸಂಚಾರವು ಎಲ್ಲಾ ರಾಶಿ ಜನರ ಜೀವನದ ಮೇಲೆಯೂ ಪರಿಣಾಮ ಬೀರುತ್ತದೆ. ಜನವರಿ 13 2026 ರಂದು ಬೆಳಗ್ಗೆ 4:02 ಕ್ಕೆ, ಶುಕ್ರನು ಧನು ರಾಶಿಯಿಂದ ಮಕರ ರಾಶಿಗೆ ಸಾಗುತ್ತಾನೆ ಮತ್ತು ಫೆಬ್ರವರಿ 6ರ ವರೆಗೆ ಅದೇ ರಾಶಿಯಲ್ಲಿ ಚಲಿಸಲಿದ್ದಾನೆ.

ಈ ಸಂಚಾರವು ಕೆಲವು ರಾಶಿಗಳಿಗೆ ಅದೃಷ್ಟ ತರಲಿದೆ. 2026ರಲ್ಲಿ ಈ ರಾಶಿಗಳು ಧನಲಾಭದೊಂದಿಗೆ ಶ್ರೀಮಂತಿಗೆ ಅನುಭವಿಸಲಿದ್ದಾನೆ. ಶುಕ್ರನನ್ನು ಐಷಾರಾಮಿ, ಆಸ್ತಿ, ಸಂಪತ್ತು ಇಂತಹ ವಿಚಾರದಿಂದ ಅಳೆಯಲಾಗುತ್ತದೆ. ಹೀಗಾಗಿ ಶುಕ್ರನ ಆಶೀರ್ವಾದ ಪಡೆಯುವ ಈ ಗ್ರಹಗಳು ಅತ್ಯಂತ ಪ್ರಭಾವ ಶಾಲಿ ಅದೃಷ್ಟ ತಮ್ಮದಾಗಿಸಿಕೊಳ್ಳಲಿವೆ.
ಹಾಗಾದ್ರೆ 2026ರಲ್ಲಿ ಯಾವೆಲ್ಲಾ ರಾಶಿಗಳಿಗೆ ಅದೃಷ್ಟಕರ ಯಾರಿಗೆ ಧನಲಾಭವಿದೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ಮಕರ ರಾಶಿಗೆ ಶುಕ್ರನ ಸಂಚಾರವು ಸಕಾರಾತ್ಮಕ ಫಲಿತಾಂಶಗಳ ತರಲಿದೆ. ಈ ಸಂಚಾರವು ಮೇಷ ರಾಶಿಯ 10ನೇ ಮನೆಯಲ್ಲಿ ನಡೆಯಲಿದೆ. ಇದು ನಿಮ್ಮ ವ್ಯವಹಾರ ಸಂಬಂಧಿತ ಮನೆಯಾಗಿದೆ. ಈ ಸಮಯದಲ್ಲಿ ನಿಮ್ಮ ಶ್ರಮದಿಂದ ದ್ವಿಗುಣ ಫಲಿತಾಂಶ ಪಡೆಯಲಿದ್ದೀರಿ. ನಿಮ್ಮ ಆತ್ಮವಿಶ್ವಾಸದ ಕೆಲಸಗಳು ಹೆಚ್ಚು ಲಾಭ ತರಲಿವೆ. ಹಾಗೆ ನಿಮ್ಮ ಹಲವು ಕಷ್ಟಗಳ ನಿವಾರಿಸಲು ಇದು ಸೂಕ್ತ ಸಮಯ ಆಗಿರಲಿದೆ. ನಿಮಗೆ ಹೊಸ ವ್ಯವಹಾರ, ಉದ್ಯೋಗ ವಿಸ್ತರಣೆಗೆ ಅವಕಾಶಗಳು ಮೂಡಿಬರಲಿವೆ. ಹಣಕಾಸಿನ ವಿಚಾರದಲ್ಲಿ ನಿಮ್ಮ ಎಲ್ಲಾ ಪ್ರಯತ್ನಗಳು ಫಲ ತರಲಿವೆ, ಇದರಿಂದ ಎಲ್ಲಾ ಮಾರ್ಗದಲ್ಲೂ ನಿಮಗೆ ಶುಭವಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಶುಕ್ರನ ಸಂಚಾರದಿಂದಾಗಿ ಅಪಾರ ಅದೃಷ್ಟ ಬರಲಿದೆ. ಈ ಗ್ರಹ ಪರಿವರ್ತನೆಯು ತುಲಾ ರಾಶಿಯ 4ನೇ ಮನೆಯಲ್ಲಿ ಸಂಭವಿಸಲಿದೆ. ಇದರಿಂದಾಗಿ ಜೀವನದ ದೊಡ್ಡ ಹಣಕಾಸಿನ ಅಡ್ಡಿಯೊಂದು ನಿವಾರಣೆಯಾಗಲಿದೆ. ಹೂಡಿಕೆಗಳು ಲಾಭದಾಯಕ ಆಗಲಿದೆ. ಹಾಗೆ ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ಕುಟುಂಬ ಜೀವನದಲ್ಲಿ ಶಾಂತಿ ಮತ್ತು ಸಂತೋಷ ಮೇಲುಗೈ ಸಾಧಿಸುತ್ತದೆ. ಈ ಯೋಗದಿಂದಾಗಿ, ಅವರ ಜೀವನದಲ್ಲಿ ಐಷಾರಾಮಿ ವಸ್ತುಗಳ ಆಗಮನವಾಗಲಿದೆ. ಚಿನ್ನ ಬೆಳ್ಳಿಯಂತಹ ದುಬಾರಿ ವಸ್ತು ಖರೀದಿಯಲ್ಲಿ ನೀವು ತೊಡಗುವಿರಿ. ಉದ್ಯಮಿಗಳು ವಿವಿಧ ವ್ಯವಹಾರಗಳಿಂದ ಲಾಭ ನಿರೀಕ್ಷಿಸಬಹುದು.
ಮಕರ ರಾಶಿ
ಮಕರ ರಾಶಿಯ ಮೊದಲ ಮನೆಯಲ್ಲಿ ಶುಕ್ರ ಸಂಚರಿಸಲಿದ್ದಾನೆ. ಹೀಗಾಗಿ ನಿಮ್ಮಲ್ಲಿ ನೆಮ್ಮದಿ ಶಾಂತಿ, ನೆಲೆಸಲಿದೆ. ಶುಕ್ರ ಸಂಚಾರದಿಂದ ತಮಗಾಗಿ ಲಾಭ ಹೆಚ್ಚಿಸಿಕೊಳ್ಳುವಿರಿ. ಬಹುದಿನದ ಕನಸುಗಳ ಈಡೇರಿಸಿಕೊಳ್ಳುವ ಸಮಯವಿದು. ನೀವು ಆರ್ಥಿಕವಾಗಿ ಹೆಚ್ಚಿನ ಪ್ರಗತಿಯನ್ನು ಸಾಧಿಸಬಹುದು. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಎಚ್ಚರವಹಿಸಿ. ನಿಮ್ಮ ದೊಡ್ಡ ವ್ಯವಹಾರ ಲಾಭದಾಯಕವಾಗಬಹುದು. ದಾಂಪತ್ಯ ಕುರಿತಾದ ವಿಚಾರದಲ್ಲಿ ಶುಕ್ರನ ಆಶೀರ್ವಾದ ಪಡೆಯಲಿದ್ದೀರಿ, ಹೀಗಾಗಿ ಮನಸ್ತಾಪಗಳು ನಿವಾರಣೆಯಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಯನ್ನು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications