Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಕರ ರಾಶಿಯಲ್ಲಿರುವ ಶುಕ್ರ, ಈ ಅವಧಿಯಲ್ಲಿ 7 ರಾಶಿಯವರಿಗೆ ಶುಕ್ರದೆಸೆ
ಫೆಬ್ರವರಿ 12ಕ್ಕೆ ಶುಕ್ರನು ಮಕರ ರಾಶಿಗೆ ಸಂಚರಿಸಿದೆ, ಮಾರ್ಚ್ 7ರವರೆಗೆ ಶುಕ್ರ ಇದೇ ರಾಶಿಯಲ್ಲಿ ಇರಲಿದೆ, ಈ ಅವಧಿ ಯಾವ ರಾಶಿಗಳಿಗೆ ಶುಕ್ರದೆಸೆ ಎಂದು ನೋಡೋಣ ಬನ್ನಿ:
ಮೇಷ ರಾಶಿ
ಶುಕ್ರ ನಿಮ್ಮ ರಾಶಿಯಲ್ಲಿ 10ನೇ ಮನೆಯಲ್ಲಿ ಇರುವುದರಿಂದ ವೃತ್ತಿ ಜೀವನದ ದೃಷ್ಟಿಯಿಂದ ಅನುಕೂಲಕರವಾಗಿದೆ, ಉದ್ಯೋಗಿಗಳು ಹಾಗೂ ವ್ಯಾಪಾರಿಗಳು ಈ ಅವಧಿಯಲ್ಲಿ ನಿಮ್ಮ ಕೆಲಸದಲ್ಲಿ ಪ್ರಗತಿ ಕಾಣುವಿರಿ. ವೈವಾಹಿಕ ಜೀವನದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ, ಆರೋಗ್ಯದ ದೃಷ್ಟಿಯಿಂದಲೂ ಈ ಅವಧಿ ಉತ್ತಮವಾಗಿದೆ.

ವೃಷಭ ರಾಶಿ
ವೃಷಭ ರಾಶಿಯವರಲ್ಲಿ ಶುಕ್ರ 9ನೇ ಮನೆಯಲ್ಲಿ ಇರಲಿದೆ. ಈ ಅವಧಿ ನಿಮಗೆ ಶುಕ್ರದೆಸೆ. ವೈಯಕ್ತಿಕ ಜೀವನದಲ್ಲಿ ಪ್ರಗತಿ ಕಾಣುವಿರಿ. ಈ ಸಮಯದಲ್ಲಿ ಆರ್ಥಿಕ ಭದ್ರತೆ ಅನುಭವಿಸುವಿರಿ. ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಆದರೆ ಕಣ್ಣುಗಳ ಆರೋಗ್ಯದ ಬಗ್ಗೆ ಜಾಗ್ರತೆ.
ಸಿಂಹ ರಾಶಿ
ಸಿಂಹ ರಾಶಿಯಲ್ಲಿ 6ನೇ ಮನೆಯಲ್ಲಿ ಇದೆ. ವೃತ್ತಿ ಜೀವನದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ಕೆಲವರಿಗೆ ಹೊಸ ಅವಕಾಶ ಅಥವಾ ವರ್ಗಾವಣೆ ಸಿಗಬಹುದು. ವ್ಯಾಪಾರಿಗಳಿಗೆ ಈ ಅವಧಿ ಲಾಭದಾಯಕವಾಗಿದೆ. ದೀರ್ಘಾವಧಿಯ ಹೂಡಿಕೆಗೆ ಈ ಸಮಯ ಉತ್ತಮವಾಗಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಮೂಳೆ ಸಂಬಂಧಿತ ಸಮಸ್ಯೆ ಇರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯಲ್ಲಿ 5ನೇ ಮನೆಯಲ್ಲಿ ಇದೆ. ಸ್ವಂತ ವ್ಯವಹಾರ ಮಾಡುವವರಿಗೆ ಈ ಅವಧಿ ಅನುಕೂಲಕರವಾಗಿದೆ. ಆರ್ಥಿಕವಾಗಿ ಒಳ್ಳೆಯದಿದೆ, ಈ ಅವಧಿಯು ಹೂಡಿಕೆಗೆ ಉತ್ತಮವಾಗಿದೆ, ಹಣಕಾಸು ಚೆನ್ನಾಗಿರಲಿದೆ. ಕುಟುಂಬ ಜೀವನದಲ್ಲಿಯೂ ಖುಷಿಯಾಗಿರಲಿದೆ. ಈ ಅವಧಿಯಲ್ಲಿ ಶುಕ್ರನ ದೆಸೆಯಿಂದ ಆರೋಗ್ಯವೂ ಉತ್ತಮವಾಗಿರುತ್ತದೆ.
ತುಲಾ ರಾಶಿ
ತುಲಾ ರಾಶಿಯಲ್ಲಿ ಶುಕ್ರ 4ನೇ ಮನೆಯಲ್ಲಿ ಇರಲಿದೆ. ವೃತ್ತಿಜೀವನದ ದೃಷ್ಟಿಯಿಂದ ಈ ಅವಧಿಯು ಹೆಚ್ಚು ಅನುಕೂಲಕರವಾಗಿರುತ್ತದೆ ಹಣಕಾಸಿನ ವಿಷಯದಲ್ಲಿ ಅನುಕೂಲಕರ ಫಲಿತಾಂಶಗಳನ್ನು ನೋಡಬಹುದು. ಆರೋಗ್ಯದ ದೃಷ್ಟಿಯಿಂದ, ತುಲಾ ರಾಶಿಯವರಿಗೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ಧನು ರಾಶಿ
ಧನು ರಾಶಿಯಲ್ಲಿ ಮಕರ ರಾಶಿಯಲ್ಲಿ 2ನೇ ಮನೆಯಲ್ಲಿ ಇದೆ. ಉದ್ಯೋಗ ಬದಲಾವಣೆಗೆ ಅನುಕೂಲಕರವಾಗಿಲ್ಲ . ಹಣಕಾಸಿನ ವಿಷಯದಲ್ಲಿ ಜಾಗ್ರತೆವಹಿಸಿ. ಆರೋಗ್ಯದ ಕಡೆಗೆಗೂ ಗಮನಹರಿಸಬೇಕು.
ಮಕರ ರಾಶಿ
ಶುಕ್ರ ಮಕರ ರಾಶಿಯ ಲಗ್ನ ಮನೆಯಲ್ಲಿದೆ. ಈ ಸಾಗಣೆಯ ಸಮಯದಲ್ಲಿ ತಮ್ಮ ವೃತ್ತಿಜೀವನದ ಮೇಲೆ ಧನಾತ್ಮಕ ಪ್ರಭಾವವನ್ನು ನಿರೀಕ್ಷಿಸಬಹುದು, ಏಕೆಂದರೆ ವೃತ್ತಿಜೀವನದ ಬೆಳವಣಿಗೆ, ಪ್ರಗತಿ ಮತ್ತು ವೃತ್ತಿಪರ ಪ್ರಯತ್ನಗಳಲ್ಲಿ ಯಶಸ್ವಿ ಫಲಿತಾಂಶಗಳನ್ನು ಪಡೆಯುತ್ತೀರಿ. ಹಣಕಾಸಿನ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿದೆ. ಕುಟುಂಬ ಜೀವನದ ದೃಷ್ಟಿಯಿಂದಲೂ ಈ ಅವಧಿ ಉತ್ತಮವಾಗಿದೆ. ಆರೋಗ್ಯ ಚೆನ್ನಾಗಿರಲಿದೆ.
ಕುಂಭ ರಾಶಿ
ಶುಕ್ರ ಕುಂಭ ರಾಶಿಯ 12ನೇ ಮನೆಯಲ್ಲಿದೆ. ಈ ಅವಧಿಯಲ್ಲಿ ಹೊಸ ಉದ್ಯೋಗ ಅವಕಾಶ ಪಡೆಯಬಹುದು. ಈ ಸಮಯದಲ್ಲಿ ಹೂಡಿಕೆ ಮಾಡುವಾಗ ಜಾಗ್ರತೆವಹಿಸಿ. ಕುಟುಂಬ ಜೀವನದಲ್ಲಿ ಸಾಮರಸ್ಯ ಇರಲಿದೆ. ಆರೋಗ್ಯದ ಕಡೆಗೆ ಗಮನಹರಿಸಬೇಕು.
ಮೀನ ರಾಶಿ
ಮೀನ ರಾಶಿಯಲ್ಲಿ ಶುಕ್ರ 11ನೇ ಮನೆಯಲ್ಲಿ ಇರಲಿದೆ. ಶುಕ್ರ ಸಂಚಾರವು ವೃತ್ತಿಪರ ಕ್ಷೇತ್ರದಲ್ಲಿ ಧನಾತ್ಮಕ ಬೆಳವಣಿಗೆಗಳನ್ನು ತರುವ ಸಾಧ್ಯತೆಯಿದೆ. ಹಣಕಾಸಿನ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿದೆ. ಯಾವುದೇ ಆರೋಗ್ಯ ಸಮಸ್ಯೆ ಬಾರದಿರಲು ವ್ಯಾಯಾಮ, ಆಹಾರಕ್ರಮದ ಕಡೆಗೆ ಗಮನಹರಿಸಿ.
ಈ ಮೂರು ರಾಶಿಯವರು ಜಾಗ್ರತೆ
ಮಿಥುನ
ಮಿಥುನ ರಾಶಿಯಲ್ಲಿ ಶುಕ್ರ 8ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಕೆಲವು ಸವಾಲುಗಳು ಮತ್ತು ಅಡೆತಡೆಗಳು ಎದುರಾಗಬಹುದು. ಉದ್ಯೋಗಿಗಳು ಹೆಚ್ಚಿನ ಕೆಲಸ-ಸಂಬಂಧಿತ ತೊಂದರೆಗಳನ್ನು ಅನುಭವಿಸಬಹುದು . ವ್ಯಾಪಾರಿಗಳಿಗೆ ಲಾಭದಲ್ಲಿ ಕೊರತೆಯಿರಬಹುದು , ಖರ್ಚು ಅಧಿಕವಿರಲಿದೆ, ಕುಟುಂಬದಲ್ಲಿಯೂ ಕೆಲಸ ಸಮಸ್ಯೆಗಳು ಇರಲಿದೆ. ಆರೋಗ್ಯದ ಬಗ್ಗೆ ನೋಡುವುದಾದರೆ ಹಲ್ಲುನೋವು, ಮಾನಸಿಕ ಒತ್ತಡವಿರಬಹುದು.
ಕರ್ಕ ರಾಶಿ
ಕರ್ಕ ರಾಶಿಯಲ್ಲಿ ಶುಕ್ರ 7ನೇ ಮನೆಯಲ್ಲಿ ಇರಲಿದೆ. ಮಕರ ರಾಶಿಯಲ್ಲಿ ಶುಕ್ರ ಸಂಚಾರ ಕೆಲವು ಸವಾಲುಗಳನ್ನು ತರಬಹುದು, ವಿಶೇಷವಾಗಿ ಪಾಲುದಾರಿಕೆಯ ವ್ಯವಹಾರದಲ್ಲಿ ಸಮಸ್ಯೆಗಳು ಬರಬಹುದು, ಉದ್ಯೋಗಿಗಳು ನಷ್ಟವನ್ನು ಎದುರಿಸಬಹುದು, ಕುಟುಂಬದಲ್ಲಿಯೂ ಕೆಲ ಸಮಸ್ಯೆಗಳು ಇರಬಹುದು. ಈ ಸಮಯದಲ್ಲಿ ಪ್ರಯಾಣದ ವೇಳೆ ಜಾಗ್ರತೆ, ಆರೋಗ್ಯ ಸಂಬಂಧಿತ ಸಮಸ್ಯೆವಿರಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯಲ್ಲಿ ಶುಕ್ರ 3ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ವೃತ್ತಿ ಜೀವನದಲ್ಲಿ ಬದಲಾವಣೆಯನ್ನು ಬಯಸಬಹುದು. ಖರ್ಚುಗಳು ಹೆಚ್ಚಾಗಬಹುದು, ಆರೋಗ್ಯದ ಬಗ್ಗೆ ಹೇಳುವುದಾದರೆ ಕಾಲು, ಸೊಂಟ ನೋವಿನ ಸಮಸ್ಯೆ ಕಾಡಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











