Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವರ್ಷದ ಕೊನೆಯಲ್ಲಿ ಶುಕ್ರ ಸಂಚಾರ: ಈ 4 ರಾಶಿಗಳಿಗೆ ಹೊಸ ವರ್ಷದ ಆರಂಭ ಅದ್ಭುತವಾಗಿರಲಿದೆ
ವರ್ಷದ ಕೊನೆ ಜ್ಯೋತಿಷ್ಯದ ದೃಷ್ಟಿಯಿಂದಲೂ ತುಂಬಾ ಮಹತ್ವದ್ದಾಗಿದೆ, ಏಕೆಂದರೆ ವರ್ಷದ ಕೊನೆಯಲ್ಲಿ ಪ್ರಮುಖ ಗ್ರಹವಾದ ಶುಕ್ರನು ರಾಶಿ ಬದಲಾವಣೆ ಮಾಡುತ್ತಿದ್ದಾನೆ. ಶುಕ್ರನು ಶನಿ ನೆಲೆಸಿರುವ ಕುಂಭ ರಾಶಿಗೆ ಸಂಚರಿಸುತ್ತಿದ್ದಾರೆ. ಡಿಸೆಂಬರ್ 28 ರಾತ್ರಿ 11:20ಕ್ಕೆ ರಾಶಿ ಬದಲಾವಣೆ ಮಾಡುತ್ತಿದ್ದಾನೆ.
ಶುಕ್ರನು ವ್ಯಕ್ತಿಯ ಹಣ, ಆಸ್ತಿ, ಐಷಾರಾಮಿ ವಸ್ತುಗಳ ಮೇಲೆ ಪ್ರಭಾವ ಬೀರುವ ಗ್ರಹವಾಗಿದೆ, ಶುಕ್ರನು ಅನುಕೂಲಕರ ಸ್ಥಾನದಲ್ಲಿದ್ದೆ ಅದ್ಭುತವಾದ ಪ್ರಯೋಜನ ನೀಡುತ್ತಾನೆ. ಇದೀಗ ಶುಕ್ರನು ವರ್ಷದ ಕೊನೆಯಲ್ಲಿ ರಾಶಿ ಬದಲಾವಣೆ ಮಾಡುತ್ತಿದ್ದು ಈ ಶುಕ್ರ ಸಂಚಾರ ಈ ರಾಶಿಗಳ ಮೇಲೆ ಶುಭ ಪರಿಣಾಮ ಬೀರುತ್ತದೆ:

ಮಿಥುನ ರಾಶಿ
ಶುಕ್ರನು ಮಿಥುನ ರಾಶಿಯಲ್ಲಿ 9ನೇ ಮನೆಗೆ ಸಂಚಾರಿಸಲಿದೆ. ಈ ಶುಕ್ರ ಸಂಚಾರ ನಿಮಗೆ ಅನುಕೂಲಕರವಾದ ಪ್ರಭಾ ಬೀರಲಿದೆ. ಪ್ರೇಮಿಗಳಿಗೆ ಈ ಅವಧಿ ಅನುಕೂಲಕರವಾಗಿದೆ, ನೀವು ಮದುವೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಈ ಅವಧಿ ಅನುಕೂಲಕರವಾಗಿದೆ.
ವೃತ್ತಿ ಬದುಕಿನ ದೃಷ್ಟಿಯಿಂದ ಈ ಸಮಯ ನಿಮಗೆ ತುಂಬಾನೇ ಚೆನ್ನಾಗಿರಲಿದೆ. ನಿಮ್ಮ ಕೆಲಸ ಕಾರ್ಯಗಳು ತುಂಬಾ ಚೆನ್ನಾಗಿ ನಡೆಯಲಿದೆ. ಶುಕ್ರನು ನಿಮ್ಮ ಸೌಕರ್ಯ ಹೆಚ್ಚಿಸುತ್ತದೆ. ವ್ಯಾಪಾರಿಗಳು ನಿಮಗೆ ಉತ್ತಮ ಲಾಭ ಸಿಗಲಿದೆ. ಶುಕ್ರನ ಸಂಚಾರ ನಿಮ್ಮ ವೈಯಕ್ತಿಕ ಹಾಗೂ ವೃತತ್ಇ ಬದುಕಿನ ದೃಷ್ಟಿಯಿಂದ ತುಂಬಾ ಚೆನ್ನಾಗಿರಲಿದೆ.
ಕುಟುಂಬ ಜೀವನದ ಮೇಲೆ ಕೂಡ ಶುಕ್ರ ಸಂಚಾರ ಅನುಕೂಲಕರ ಪ್ರಯೋಜನ ನೀಡಲಿದೆ. ವೈವಾಹಿಕ ಜೀವನದಲ್ಲಿ ಪ್ರೀತಿ, ಹೊಂದಾಣಿಕೆ ಇರಲಿದೆ.
ಸಿಂಹ ರಾಶಿ
ಶುಕ್ರನು ಸಿಂಹ ರಾಶಿಯಲ್ಲಿ 7ನೇ ಮನೆಯಲ್ಲಿ ಸಂಚರಿಸಲಿದೆ. ಈ 7ನೇ ಮನೆ ಪಾಲುದಾರಿಕೆಯ ಮನೆಯಾಗಿದ್ದು ಈ ಅವಧಿಯಲ್ಲಿ ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವೆ ಏನಾದರೂ ಸಣ್ಣ ಪುಟ್ಟ ಮುನಿಸು ಇದ್ದರೆ ಈ ಶುಕ್ರ ಸಂಚಾರದ ಅವಧಿಯಲ್ಲಿ ಅವೆಲ್ಲಾ ದೂರಾಗಿ ನಿಮ್ಮ ನಡುವೆ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ.
ಈ ಶುಕ್ರ ಸಂಚಾರ ಹಣಕಾಸಿನ ದೃಷ್ಟಿಯಿಂದಲೂ ನಿಮಗೆ ತುಂಬಾನೇ ಅನುಕೂಲಕರವಾಗಿದೆ. ವ್ಯಾಪಾರಿಗಳಿಗೆ ಈ ಸಮಯ ಚೆನ್ನಾಗಿರಲಿದೆ, ಅದರಲ್ಲಿಯೂ ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿರುವವರೆಗೆ ಈ ಅವಧಿ ತುಂಬಾನೇ ಚೆನ್ನಾಗಿರಲಿದೆ, ನೀವು ಹೆಚ್ಚಿನ ಲಾಭ ಗಳಿಸುತ್ತೀರಿ.
ಅವಾಹಿತರಿಗೆ ಈ ಅವಧಿ ಹೆಚ್ಚ ಪ್ರಯೋಜನಕಾರಿಯಾಗಿದೆ, ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಈ ಸಮಯದಲ್ಲಿ ಮದುವೆ ಸೆಟ್ ಆಗಬಹುದು, ಪ್ರೇಮಿಗಳಿಗೂ ವಿಶೇಷವಾಗಿರಲಿದೆ.
ತುಲಾ ರಾಶಿ
ತುಲಾ ರಾಶಿಯಲ್ಲಿ ಶುಕ್ರನು ನಿಮಗೆ 5ನೇ ಮನೆಯಲ್ಲಿ ಇರಲಿದೆ. ಈ ಶುಕ್ರ ಸಂಚಾರ ವೃತ್ತಿ ಬದುಕಿನ ದೃಷ್ಟಿಯಿಂದ ತುಂಬಾನೇ ಚೆನ್ನಾಗಿದೆ, ವಿದ್ಯಾರ್ಥಿಗಳು ಉತ್ತಮ ಯಶಸ್ಸು ಪಡೆಯುತ್ತೀರಿ. ವೃತ್ತಿ ಬದುಕಿನಲ್ಲಿ ನಿಮಗೆ ಉತ್ತಮ ಅವಕಾಶ ಸಿಗಲಿದೆ. ನೀವು ವೃತ್ತಿ ಜೀವನದಲ್ಲಿ ಹೊಸ ಅವಕಾಶಕ್ಕೆ ಹುಡುಕುತ್ತಿದ್ದರೆ ಈ ಅವಧಿ ತುಂಬಾ ಚೆನ್ನಾಗಿಲಿದೆ.
ಈ ಶುಕ್ ಸಂಚಾರ ಕುಟುಂಬ ಜೀವನದ ದೃಷ್ಟಿಯಿಂದಲೂ ನಿಮಗೆ ತುಂಬಾನೇ ಚೆನ್ನಾಗಿರಲಿದೆ, ವೈವಾಹಿಕ ಜೀವನದಲ್ಲಿ ಬಾಂಧವ್ಯ ಚೆನ್ನಾಗಿರಲಿದೆ. ಮಕ್ಕಳ ವಿಷಯದಲ್ಲಿ ನಿಮಗೆ ಖುಷಿ ಇರಲಿದೆ.
ಮಕರ ರಾಶಿ
ಶುಕ್ರನು ಮಕರ ರಾಶಿಯಲ್ಲಿ ಎರಡನೇ ಮನೆಯಲ್ಲಿ ಇರಲಿದೆ. ಇದು ಸಂಪತ್ತಿನ ಮನೆಯಾಗಿದೆ. ಆದ್ದರಿಂದ ಶುಕ್ರನು ನಿಮ್ಮ ಸೌಕರ್ಯ ಹೆಚ್ಚಿಸಲಿದ್ದಾನೆ, ನೀವು ಏನಾದರೂ ಹೊಸ ಬ್ಯುಸ್‌ನೆಸ್ ಪ್ರಾರಂಭ ಮಾಡಿದ್ದರೆ ಒಳ್ಳೆಯ ಲಾಭ ಪಡೆಯುತ್ತೀರಿ. ಹಣಕಾಸಿನ ದೃಷ್ಟಿಯಿಂದ ಈ ಅವಧಿ ತುಂಬಾ ಚೆನ್ನಾಗಿರಲಿದೆ, ನಿಮ್ಮ ಆರ್ಥಿಕ ಸ್ಥಿತಿ ಮತ್ತಷ್ಟು ಬಲವಾಗಲಿದೆ.
ಇನ್ನು ವೈಯಕ್ತಿಕ ಜೀವನದ ದೃಷ್ಟಿಯಿಂದಲೂ ಈ ಸಮಯ ನಿಮಗೆ ತುಂಬಾನೇ ಪ್ರಯೋಜನಕಾರಿಯಾಗಿದೆ, ಈ ಅವಧಿಯಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆ ದೂರಾಗಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications