Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಮೀನ ರಾಶಿಯಲ್ಲಿ ಶುಕ್ರ ಸಂಚಾರ: ಈ 3 ರಾಶಿಯವರಲ್ಲಿ ಬದಲಾಗಲಿದೆ ಅದೃಷ್ಟ..!
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಚಲನೆ, ಗ್ರಹಗಳ ರಾಶಿ ನಕ್ಷತ್ರ ಬದಲಾವಣೆಗೆ ಬಹಳ ಮಹತ್ವವಿದೆ. ಈ ರೀತಿಯ ಚಲನೆಯು ಹಲವು ರೀತಿಯ ಬದಲಾವಣೆಗಳು, ಹಲವು ಲಾಭ ನಷ್ಟಕ್ಕೆ ಕಾರಣವಾಗುತ್ತದೆ. ಹಾಗೆ ಒಂದು ಗ್ರಹದ ಚಲನೆಯು ಎಲ್ಲಾ ರಾಶಿಗಳ ಮೇಲೆಯು ಪರಿಣಾಮ ಬೀರುತ್ತದೆ. ಹಾಗೆ ಈಗ ಶುಕ್ರ ಗ್ರಹದ ಚಲನೆಯು ಹಲವು ರಾಶಿಯವರಿಗೆ ಲಾಭ ನಷ್ಟದ ಲೆಕ್ಕಾಚಾರಕ್ಕೆ ಕಾರಣವಾಗುತ್ತಿದೆ.
ಶುಕ್ರ ಗ್ರಹವು ಸಂಪತ್ತು, ಸೌಂದರ್ಯ, ಐಷಾರಾಮಿ ಜೀವನದ ಸಂಕೇತವಾಗಿದೆ. ಹಾಗೆ ಶುಕ್ರ ಗೆಲುವಿನ ಸಂಕೇತ. ಶುಕ್ರದೆಸೆಯಿಂದ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳು ಉಂಟಾಗುತ್ತದೆ ಎಂಬುದನ್ನು ನೀವು ಕೇಳಿರಬಹುದು. ಹಾಗೆ ಈಗ ಶುಕ್ರನು ಮೀನ ರಾಶಿಗೆ ಚಲಿಸುತ್ತಿದ್ದಾನೆ. ಇದು ಹಲವು ರಾಶಿಯವರಲ್ಲಿ ಲಾಭಕ್ಕೆ ಕಾರಣವಾಗುತ್ತಿದೆ.

ಶುಕ್ರ ವೃಷಭ ಮತ್ತು ತುಲಾ ರಾಶಿಯ ಅಧಿಪತಿ. ಆದ್ರೆ ಇಂದು ಶುಕ್ರನು ಮಿನ ರಾಶಿಗೆ ಚಲಿಸಲಿದ್ದಾನೆ. ಇದು ಹಲವು ಬಗೆಯ ಅದೃಷ್ಟಕ್ಕೆ ಕಾರಣವಾಗಲಿದೆ. ಹಾಗಾದ್ರೆ ಶುಕ್ರನ ಮೀನ ರಾಶಿ ಸಂಚಾರವು ಯಾರಿಗೆಲ್ಲಾ ಲಾಭದಾಯಕವಾಗಿ ಪರಿಣಮಿಸಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಿಥುನ ರಾಶಿ
ಶುಕ್ರನು ಮಿಥುನ ರಾಶಿಯ 10ನೇ ಮನೆಗೆ ಚಲಿಸಲಿದ್ದು, ಇದು ಮಿಥುನ ರಾಶಿಯವರಲ್ಲಿ ಅತ್ಯಧಿಕ ಲಾಭಕ್ಕೆ ಕಾರಣವಾಗುತ್ತಿದೆ. ಈ ರಾಶಿಯವರ ವ್ಯಾಪಾರ, ಉದ್ಯಮ, ಹಣಕಾಸು ವಿಚಾರದಲ್ಲಿ ಉತ್ತಮವಾಗಲಿದೆ, ಶುಕ್ರನ ಅನುಗ್ರಹದಿಂದ ನಿಮ್ಮ ಆರ್ಥಿಕ ಪ್ರಗತಿ ಸಾಧ್ಯವಾಗುತ್ತಿದೆ. ನಿಮ್ಮ ಕಷ್ಟದ ದಿನಗಳು ದೂರಾಗುವ ದಿನಗಳು ಹತ್ತಿರವಾಗಲಿದೆ, ನಿಮಗೆ ಸೇರಿದ್ದ ಬಹುಮುಖ್ಯ, ಅಮೂಲ್ಯ ವಸ್ತುವೊಂದು ನಿಮ್ಮ ಕೈ ಸೇರಬಹುದು. ವಾಹನ ಖರೀದಿ, ಆಸ್ತಿ, ಚಿನ್ನ ಖರೀದಿಗೆ ಇದು ಶುಭ ಕಾಲವಾಗಲಿದೆ. ಉದ್ಯೋಗ ಅರಸುವವರಿಗೆ ಇದು ಅತ್ಯಂತ ಶುಭಕಾಲವಾಗುತ್ತೆ. ನೀವು ಬಯಸಿದಂತಹ ಉದ್ಯೋಗ ಪಡೆಯುವಲ್ಲಿ ನೀವು ಯಶಸ್ವಿಯಾಗುತ್ತೀರಿ.
ಕುಂಭ ರಾಶಿ
ಶುಕ್ರನು ಕುಂಭ ರಾಶಿಯ ಎರಡನೇ ಮನೆಗೆ ಪ್ರವೇಶಿಸಲಿದ್ದಾನೆ, ಹೀಗಾಗಿ ಈ ರಾಶಿಯವರ ಆರೋಗ್ಯದ ವಿಚಾರದಲ್ಲಿ ಅತ್ಯಂತ ಸುರಕ್ಷಿತರಾಗುತ್ತಾರೆ. ಭೌತಿಕ ಸುಖಗಳ ಪಡೆಯುತ್ತೀರಿ. ಅನಿರೀಕ್ಷಿತವಾಗಿ ನಿಮಗೆ ಹಲವು ರೀತಿಯಲ್ಲಿ ಲಾಭದಾಯಕ ದಿನಗಳು ಬರಲಿವೆ. ನಿಮ್ಮ ಬಹುದೊಡ್ಡ ಬಂಡವಾಳ ಲಾಭದ ರೂಪ ಪಡೆದುಕೊಳ್ಳಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸುವುದರಿಂದ ನೀವು ಬಯಸಿದ್ದ ವಸ್ತುಗಳ ಖರೀದಿಗೆ ಮುಂದಾಗುತ್ತೀರಿ. ಅವಿವಾಹಿತರಲ್ಲಿ ಮದುವೆಯ ಶುಭ ಯೋಗ ಕಾಣಬಹುದು. ಹಾಗೆ ವಿದೇಶ ಪ್ರಯಾಣ, ಪ್ರವಾಸ, ಬಡ್ತಿಯಂತಹ ಪ್ರಕ್ರಿಯೆಗಳಿಗೂ ನೀವು ಸಾಕ್ಷಿಯಾಗಲಿದ್ದೀರಿ.
ವೃಷಭ ರಾಶಿ
ಶುಕ್ರ ವೃಷಭ ರಾಶಿಯ 11 ನೇ ಮನೆಗೆ ಚಲಿಸಲಿದ್ದಾನೆ. ಇದು ನಿಮ್ಮ ಕುಟುಂದಲ್ಲಿ ಶುಭ ಕಾರ್ಯಕ್ಕೆ ಕಾರಣವಾಗುತ್ತಿದೆ. ನೀವು ಮಾಡಿದ್ದ ಹೂಡಿಕೆಗಳಿಂದ ಲಾಭ ಬರುವಂತಹ ಸಮಯವಿದು. ವ್ಯಾಪಾರ, ವ್ಯವಹಾರದಲ್ಲಿ ಮೇಲುಗೈ ಸಾಧಿಸಲಿದ್ದಿರಿ. ಸ್ವಂತ ಉದ್ಯಮದಲ್ಲಿ ನಿಧಾನವಾಗಿ ನಿಮ್ಮ ಲಾಭಾಂಶ ಹೆಚ್ಚಾಗಬಹುದು. ಹೊಸದಾಗಿ ಆದಾಯದ ಮೂಲಗಳು ನಿಮಗೆ ಬರಬಹುದು. ಬಹಳ ದಿನದಿಂದ ಸಿಲುಕಿರುವ ಹಣವೊಂದು ನಿಮ್ಮ ಕೈ ಸೇರಲಿದೆ. ಕಠಿಣ ಪರಿಶ್ರಮದ ಕಾರಣ ನಿಮಗೆ ಉತ್ತಮ ಫಲಿತಾಂಶ ಕಂಡುಬರಲಿದೆ. ಸರ್ಕಾರಿ ಹುದ್ದೆಯಲ್ಲಿರುವವರಿಗೆ ಶುಭ ಸುದ್ದಿ ಕಾದಿದೆ. ಪಾಲುದಾರಿಕೆ ವ್ಯವಹಾರದಲ್ಲಿ ತೊಡಗಿರುವವರಿಗೂ ಇದು ಒಳ್ಳೆಯ ಕಾಲವಾಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಪರಿಶೀಲಿಸಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದು ಮಾತ್ರವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











