ನವೆಂಬರ್‌ 7ರಿಂದ ಧನು ರಾಶಿಗೆ ಶುಕ್ರ ಸಂಚಾರ: ಈ 6 ರಾಶಿಗಳು ಡಿಸೆಂಬರ್ 2ರವರೆಗೆ ಜಾಗ್ರತೆ

ಶುಕ್ರನು ನವೆಂಬರ್ 7ಕ್ಕೆ ಧನು ರಾಶಿಗೆ ಸಂಚರಿಸಲಿದೆ, ಡಿಸೆಂಬರ್‌ 2ರವರೆಗೆ ಇದೇ ರಾಶಿಯಲ್ಲಿ ಇರಲಿದೆ. ಈ ಸಂಚಾರ ಕೆಲವೊಂದು ರಾಶಿಗಳಿಗೆ ಅಷ್ಟೊಂದು ಅನುಕೂಲಕರವಲ್ಲ, ಆ ರಾಶಿಗಳೆಂದರೆ...

Venus transit

ವೃಷಭ ರಾಶಿ
ಶುಕ್ರನು ವೃಷಭ ರಾಶಿಯ 8ನೇ ಮನೆಗೆ ಸಂಚರಿಸಲಿದೆ, ಈ ಮನೆ ನಿಮಗೆ ಆರ್ಥಿಕವಾಗಿ ತುಂಬಾ ಉತ್ತಮ ಪ್ರಯೋಜನ ನೀಡಲಿದೆ. ಆದರೆ ವೃತ್ತಿ ಬದುಕಿನಲ್ಲಿ ಈ ಅವಧಿ ಸವಾಲಿನ ಸಮಯ. ನೀವು ಯೋಜನೆ ಮಾಡಿದಂತೆ ಕೆಲಸ ಕಾರ್ಯವು ನಡೆಯದಿದ್ದಾಗ ಕಿರಿಕಿರಿ ಅನಿಸಬಹುದು, ಆದಾಯ ಚೆನ್ನಾಗಿದ್ದರೂ ಖರ್ಚು ಅಷ್ಟೇ ಇರಲಿದೆ, ಆರೋಗ್ಯದ ಸಂಬಂಧಿತ ಸಮಸ್ಯೆಗಳು ಕಾಡಬಹುದು. ಕುಟುಂಬ ಜೀವನದಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಲಿದೆ.

ಕರ್ಕ ರಾಶಿ
ಕರ್ಕ ರಾಶಿಯಲ್ಲಿ ಶುಕ್ರನು 6ನೇ ಮನೆಗೆ ಸಂಚರಿಸಲಿದೆ. ಈ ಮನೆ ನಿಮಗೆ ಅಷ್ಟೊಂದು ಶುಭ ಫಲಿತಾಂಶ ನೀಡುವುದಿಲ್ಲ, ಹಣದ ಸಮಸ್ಯೆ ಎದುರಾಗಬಹುದು, ಸಾಲ ತೆಗೆದುಕೊಂಡಿದ್ದರೆ ಸಾಲ ಮರು ಪಾವತಿಸಲು ಒತ್ತಡ ಬರಬಹುದು. ವೃತ್ತಿ ಬದುಕಿನಲ್ಲಿ ಸವಾಲಿನ ಸಮಯ, ಕೆಲ ಅನಿರೀಕ್ಷಿತ ಸವಾಲು ಎದುರಾಗಬಹುದು. ಕುಟುಂಬದಲ್ಲಿಯೂ ಕೆಲ ಭಿನ್ನಾಭಿಪ್ರಾಯ ಉಂಟಾಗಬಹುದು. ನಿಮ್ಮ ಹಾಗೂ ಸಂಗಾತಿ ನಡುವೆ ಮನಸ್ತಾಪ ಹೆಚ್ಚಾಗದಂತೆ ಜಾಗ್ರತೆವಹಿಸಿ.

ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಶುಕ್ರನು 5ನೇ ಮನೆಗೆ ಸಂಚರಿಸಲಿದೆ, ಕೆಲಸದಲ್ಲಿ ಒತ್ತಡವಿರಲಿದೆ, ಮೇಲಾಧಿಕಾರಿಯ ಜೊತೆ ಭಿನ್ನಾಭಿಪ್ರಾಯ ಬರಬಹುದು, ಕೆಲಸದಲ್ಲಿ ಅತೃಪ್ತಿ ಇರಲಿದೆ. ಕೆಲಸಕ್ಕೆ ಸಂಬಂಧಿಸಿದ ತೀರ್ಮಾನ ಅವಸರದಿಂದ ತೆಗೆದುಕೊಳ್ಳಬೇಡಿ. ಆರ್ಥಿಕವಾಗಿ ಉತ್ತಮವಾಗಿದೆ,ವ್ಯಾಪಾರಿಗಳಿಗೆ ಹೆಚ್ಚಿನ ಹೂಡಿಕೆ ಮಾಡದಂತೆ ಸಲಹೆ ನೀಡಲಾಗುವುದು. ಹಣದ ಖರ್ಚು ಹೆಚ್ಚಿರಲಿದೆ. ಆರೋಗ್ಯ ಚೆನ್ನಾಗಿರಲಿದೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯfಲಿ ಶುಕ್ರನು 2ನೇ ಮನೆಯಲ್ಲಿ ಇರುವಾಗ ನೀವು ಸ್ವಲ್ಪ ಜಾಗ್ರತೆವಹಿಸಬೇಕು, ನಿಮ್ಮ ಕೆಲಸದ ಕಡೆಗೆ ತುಂಬಾನೇ ಗಮನಹರಿಸಬೇಕು. ಇನ್ನು ವೃತ್ತಿ ಜೀವನಕ್ಕೆ ಸಂಬಂಧಿಸಿದ ನಿರ್ಧಾರ ಆತುರದಿಂದ ತೆಗೆದುಕೊಳ್ಳಬೇಡಿ. ವೈವಾಹಿಕ ಬದುಕಿನ ಕಡೆಗೆ ಗಮನಹರಿಸಬೇಕು, ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯ ಬಂದರೆ ವಿಷಯ ದೊಡ್ಡದು ಮಾಡದೆ ಬಗೆಹರಿಸಿಕೊಂಡು ಹೋಗಲು ಪ್ರಯತ್ನಿಸಿ.

ಧನು ರಾಶಿ
ಶುಕ್ರನು ನಿಮ್ಮ ಲಗ್ನ ಮನೆಗೆ ಸಂಚರಿಸಿದಾಗ ನೀವು ಜಾಗ್ರತೆವಹಿಸಬೇಕು. ಈ ಅವಧಿಯಲ್ಲಿ ನೀವು ಆರೋಗ್ಯದ ಕಡೆಗೆ ಗಮನಹರಿಸಬೇಕು. ವ್ಯಾಪಾರಿಗಳು ತಮ್ಮ ಯೋಜನೆಯ ಕಡೆ ಗಮನಹರಿಸಬೇಕು. ಕುಟುಂಬ ಜೀವನದ ಕಡೆಗೆ ಗಮನಹರಿಸಿ, ಆರೋಗ್ಯದ ಕಡೆಗೆ ಗಮನಹರಿಸಿ. ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ.

ಮೀನ ರಾಶಿ
ಮೀನ ರಾಶಿಯಲ್ಲಿ ಶುಕ್ರನು 10ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ವೃತ್ತಿ ಬದುಕಿನ ಕಡೆಗೆ ತುಂಬಾನೇ ಗಮನಹರಿಸಬೇಕು. ಕೆಲಸದಲ್ಲಿ ಅತೃಪ್ತಿ ಕಾಡಬಹುದು, ಅಭದ್ರತೆ ಇರಲಿದೆ. ಆರ್ಥಿಕ ನಷ್ಟದ ಸಾಧ್ಯತೆ ಇರುವುದರಿಂದ ವ್ಯಾಪಾರಿಗಳು ಜಾಗ್ರತೆವಹಿಸಬೇಕು. ಕುಟುಂಬದಲ್ಲಿಯೂ ಚಿಕ್ಕ ವಿಷಯಕ್ಕೆ ಭಿನ್ನಾಭಿಪ್ರಾಯವಿರಬಹುದು. ನೀವು ಮನೆಯ ಶಾಂತಿಯ ಕಡೆಗೆ ಗಮನಹರಿಸಿ.ಆರೋಗ್ಯ ಚೆನ್ನಾಗಿರಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Venus transit 2024: Sukra Sanchar In Dhanu Rashi Not Good For These Zodiac

Venus Transit: Sukura Sanchar In Dhanu Rashi , these not good for these zodiac signs, read on..
Story first published: Wednesday, November 6, 2024, 22:08 [IST]
X
Desktop Bottom Promotion