ಶುಕ್ರ-ಸೂರ್ಯನ ಸಮ್ಮಿಲನ: ಶುಕ್ರಾದಿತ್ಯ ರಾಜಯೋಗದಿಂದ ಯಾರಿಗೆಲ್ಲಾ ಆದಾಯ ಹೆಚ್ಚಳ

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಚಲನೆ, ಯೋಗಗಳು, ಸಂಯೋಗ, ದಿಕ್ಕು ಬದಲಾವಣೆಗೆ ಬಹಳ ಮಹತ್ವವಿದೆ. ಹಾಗೆ ಪ್ತತಿಯೊಂದು ಗ್ರಹಗಳ ರಾಶಿಯ ಬದಲಾವಣೆಯು ಹಲವು ರೀತಿಯ ಶುಭ ಹಾಗೂ ಅಶುಭ ಯೋಗಗಳಿಗೆ ಕಾರಣವಾಗುತ್ತಿರುತ್ತವೆ. ಈ ಕಾರಣದಿಂದಾಗಿ ಗ್ರಹಗಳ ಸಂಯೋಗ ಚಲನೆಯ ದಿಕ್ಕು ಕುರಿತಂತೆ ಬಹಳ ಮಹತ್ವವಿದೆ.

ಎಲ್ಲಾ ಗ್ರಹಗಳು ಕೂಡ ನಿರಂತರ ಚಲನೆ ಮೂಲಕ ರಾಶಿಗಳ ಬದಲಾಯಿಸುತ್ತವೆ. ಇದು ಕಾಲೋಚಿತ ಯೋಗಗಳಿಗೂ ಕಾರಣವಾಗುತ್ತದೆ. ಗ್ರಹಗಳು ರಾಶಿ ಬದಲಿಸುವ ಸಮಯದಲ್ಲಿ ಹಲವು ರಾಜಯೋಗಗಳು ರೂಪುಗೊಳ್ಳುತ್ತವೆ. ಈಗ ಶುಕ್ರನು ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಶುಕ್ರ ಐಶ್ವರ್ಯ, ಸಂಪತ್ತು, ಸೌಂದರ್ಯ, ಪ್ರೀತಿಯ ಪ್ರತೀಕವಾಗಿರುವ ಗ್ರಹವಾಗಿದೆ.

Shukraditya Raja Yoga Will Leads Financial Benefits

ಆದ್ರೆ ಈಗ ಶುಕ್ರ ಹಾಗೂ ಸೂರ್ಯನ ಸಮ್ಮಿಲನವು ವಿಶೇಷ ಯೋಗವೊಂದಕ್ಕೆ ಕಾರಣವಾಗುತ್ತಿದೆ. ಸೂರ್ಯ ಪ್ರತಿ ತಿಂಗಳು ಒಂದೊಂದು ರಾಶಿಯಲ್ಲಿ ಚಲಿಸುವುದು ನೋಡಬಹುದು. ಈಗ ಮಾರ್ಚ್ 14ರಂದು ಸೂರ್ಯನ ದಿಕ್ಕು ಬದಲಾಗುತ್ತಿದೆ. ಸೂರ್ಯ ಈ ದಿನ ಮೀನ ರಾಶಿಗೆ ಚಲಿಸುತ್ತಿದ್ದಾನೆ. ಆದ್ರೆ ಮೀನ ರಾಶಿಯಲ್ಲಿ ಈಗಾಗಲೇ ಶುಕ್ರನ ಸಂಚಾರವಿದೆ, ಹೀಗಾಗಿ ಮೀನ ರಾಶಿಯಲ್ಲಿ ಶುಕ್ರ ಹಾಗೂ ಸೂರ್ಯನ ಸಂಯೋಗವಾಗುತ್ತಿದೆ.

ಸೂರ್ಯ ಹಾಗೂ ಶುಕ್ರನ ಈ ಸಂಯೋಗವು ಶುಕ್ರಾದಿತ್ಯ ಯೋಗಕ್ಕೆ ಕಾರಣವಾಗುತ್ತಿದೆ. ಈ ಯೋಗವು ಎಲ್ಲಾ ರಾಶಿಗಳ ಮೇಲೆಯೂ ತನ್ನ ಪ್ರಭಾವ ಉಂಟು ಮಾಡಲಿದೆ. ಹಾಗಾದ್ರೆ ಶುಕ್ರಾದಿತ್ಯ ಯೋಗವು ಯಾವೆಲ್ಲಾ ರಾಶಿಯವರಿಗೆ ಲಾಭದಾಯಕವಾಗಲಿದೆ? ಯಾರಿಗೆ ಇದರಿಂದ ಶುಭವಾಗುತ್ತಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ವೃಷಭ ರಾಶಿ

ವೃಷಭ ರಾಶಿಯ 11 ನೇ ಮನೆಯಲ್ಲಿ ಶುಕ್ರಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ. ಪರಿಣಾಮವಾಗಿ ಈ ರಾಶಿ ಜನರ ಪ್ರತಿಯೊಂದು ಕೆಲಸದಲ್ಲೂ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ ಮತ್ತು ಉತ್ತಮ ಆರ್ಥಿಕ ಲಾಭವನ್ನು ಸಹ ಪಡೆಯುತ್ತಾರೆ. ಉದ್ಯೋಗಿಗಳಿಗೆ ಅನಿರೀಕ್ಷಿತ ಬೆಳವಣಿಗೆ ನೋಡಬೇಕಾಗುತ್ತದೆ. ಹಲವು ದಿನದಿಂದ ಮಾಡಲಾಗದೆ ಹಾಗೆಯೇ ಬಿಟ್ಟಿದ್ದ ಕೆಲಸಗಳು ಪೂರ್ಣವಾಗಲಿದೆ. ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ನೋಡಬಹುದು. ವೈಯಕ್ತಿಕ ಜೀವನವು ಸಂತೋಷವಾಗಿರಲಿದೆ. ಸಂಗಾತಿಯ ಜೊತೆಗೆ ಉತ್ತಮ ದಿನಗಳ ಕಳೆಯುತ್ತೀರಿ.

ತುಲಾ ರಾಶಿ

ತುಲಾ ರಾಶಿಯ 6ನೇ ಮನೆಯಲ್ಲಿ ಶುಕ್ರಾದಿತ್ಯ ರಾಜಯೋಗವು ರೂಪುಗೊಳ್ಳಲಿದೆ. ಇದು ಈ ರಾಶಿ ಜನರ ಪ್ರತಿಯೊಂದು ಪ್ರಯತ್ನವೂ ಯಶಸ್ವಿಯಾಗುವಂತೆ ಮಾಡಲಿದೆ. ಕೆಲಸ ಕಾರ್ಯದಲ್ಲಿ ನಿಮ್ಮ ಪರವಾದ ಒಲವು ಹೆಚ್ಚಾಗುತ್ತದೆ. ದೈಹಿಕ ಕೆಲಸದಿಂದ ನಿಮ್ಮ ಶ್ರಮ ಹೆಚ್ಚಾಗಲಿದೆ. ಹೊಸ ಆದಾಯದ ಮೂಲದಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲಿದೆ. ಉದ್ಯಮಿಗಳಿಗೂ ಒಳ್ಳೆಯ ಲಾಭ ತರುವಂತಹ ದಿನವಾಗಲಿದೆ.

ಮಿಥುನ ರಾಶಿ

ಮಿಥುನ ರಾಶಿಯ 10ನೇ ಮನೆಯಲ್ಲಿ ಶುಕ್ರಾದಿತ್ಯ ರಾಜಯೋಗ ಉಂಟಾಗಲಿದೆ. ಈ ರಾಶಿಚಕ್ರದ ಜನರು ಕೈಗೊಳ್ಳುವ ಪ್ರಯತ್ನಗಳಲ್ಲಿ ಉತ್ತಮ ಯಶಸ್ಸನ್ನು ತರುತ್ತದೆ. ಹೊಸ ವಸ್ತುಗಳ ಖರೀದಿ, ಆಸ್ತಿ, ಮನೆ, ವಾಹನ ಇಂತಹ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಅವಿವಾಹಿತರಲ್ಲಿ ಮದುವೆಯ ಯೋಗ ನೋಡಬಹುದು. ಆರ್ಥಿಕ ಸದೃಢತೆ ನೋಡಬಹುದು. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ದೃಢಪಡಿಸುವುದಿಲ್ಲ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Venus-Sun conjunction: Shukraditya Raja Yoga Will Leads Financial Benefits

This conjunction of Sun and Venus is leading to Shukraditya Yoga. This yoga will have its effect on all the zodiac signs. So, which zodiac signs will benefit from Shukraditya Yoga?
Story first published: Sunday, March 2, 2025, 10:20 [IST]
X
Desktop Bottom Promotion