Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಗಸ್ಟ್ 1ರಂದು ಶುಕ್ರನ ನಕ್ಷತ್ರ ಬದಲಾವಣೆ: ಈ ರಾಶಿಯವರಿಗೆ ಅದೃಷ್ಟ, ಹೊಸ ವಸ್ತು ಒಲಿಯಲಿದೆ!
ಶುಕ್ರನನ್ನು ಅತ್ಯಂತ ಶುಭ ಗ್ರಹವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವು ಗ್ರಹಗಳ ಚಲನೆ ಹಾಗೂ ಸ್ಥಾನಪಲ್ಲಟ್ಟಕ್ಕೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಅದರಂತೆ ಶುಕ್ರನು ಕೂಡ ಪ್ರಮುಖ ಗ್ರಹ ಎಂದು ಆತನ ಸಂಚಾರ ಕೂಡ ಮುಖ್ಯ ಪರಿಗಣಿಸಲಾಗಿದೆ. ಶುಕ್ರನನ್ನು ಪ್ರೀತಿ, ಸಂಪತ್ತು, ಕಲೆ, ಭೌತಿಕ ಸಂತೋಷ, ಐಷಾರಾಮಿ ಜೀವನದ ಸಂಕೇತ ಎಂದು ಪರಿಗಣಿಸಲಾಗುತ್ತದೆ.
ಶುಕ್ರನ ಸಂಚಾರದಿಂದ ಮೇಷದಿಂದ ಹಿಡಿದು ಮೀನ ರಾಶಿಯವರೆಗೂ ಪರಿಣಾಮ ಎದುರಿಸಬೇಕಾಗುತ್ತದೆ. ಶುಕ್ರನು 23 ದಿನಗಳ ಕಾಲ ಒಂದೇ ರಾಶಿಯಲ್ಲಿ ನೆಲೆಸುತ್ತಾನೆ. ಪ್ರಸ್ತುತ ಶುಕ್ರನು ಮಿಥುನ ರಾಶಿಯಲ್ಲಿದ್ದು, ಈ ಸಮಯದಲ್ಲಿ ಆತ ಆರ್ದ್ರ ನಕ್ಷತ್ರಕ್ಕೆ ಚಲಿಸುತ್ತಾನೆ. ಮಿಥುನ ರಾಶಿಯಲ್ಲಿರುವಾಗ ಆರ್ದ್ರ ನಕ್ಷತ್ರಕ್ಕೆ ಚಲಿಸುವುದು ಹಲವು ರಾಶಿಗಳ ಮೇಲೆ ಅದರ ಪರಿಣಾಮ ಉಂಟು ಮಾಡಲು ಕಾರಣವಾಗುತ್ತದೆ.

ಆಗಸ್ಟ್ 1ರಂದು ಶುಕ್ರನು ಆರ್ದ್ರ ನಕ್ಷತ್ರಕ್ಕೆ ಚಲಿಸಲಿದ್ದಾನೆ. ಇದರಿಂದ ಹೆಚ್ಚಾಗಿ ಮೇಷ, ಸಿಂಹ ಮತ್ತು ಧನು ರಾಶಿಯ ಜನರು ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ಈ ಜನರ ವೃತ್ತಿ, ವ್ಯವಹಾರ ಮತ್ತು ವೈವಾಹಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಬರಬಹುದು. ಹಾಗಾದ್ರೆ ಅವರಿಗೆ ಒದಗಿ ಬರುವ ಲಾಭಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ಮೇಷ ರಾಶಿ
ಶುಕ್ರನ ರಾಶಿಚಕ್ರ ಚಿಹ್ನೆಯಲ್ಲಿನ ಬದಲಾವಣೆಯು ಮೇಷ ರಾಶಿಯ ಜನರಿಗೆ ಅದೃಷ್ಟ ತರಬಹುದು. ನಿಮ್ಮ ಬಾಕಿ ಇರುವ ಕೆಲಸಗಳು ಅಪೇಕ್ಷಿತ ರೀತಿಯಲ್ಲಿ ಪೂರ್ಣಗೊಳ್ಳುತ್ತವೆ. ನಿಮ್ಮ ಹಲವು ಸಮಯದಿಂದ ಯಶಸ್ವಿಯಾಗದೆ ಉಳಿದ ಕೆಲಸ ಕೂಡ ಪೂರ್ಣವಾಗಲಿದೆ. ವ್ಯಾಪಾರ, ವ್ಯವಹಾರದಲ್ಲಿನ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಇದರಿಂದ ನಿಮಗೆ ಶುಭಕರ ಸಮಯ ಬಂದೊದಗಲಿದೆ. ಕುಟುಂಬಸ್ಥರೊಂದಿಗೆ ನೀವು ಮನರಂಜನ ಕಾರ್ಯಕ್ರಮಗಳು, ಪ್ರವಾಸದಂತಹ ಕೆಲಸಕ್ಕೆ ಮುಂದಾಗಬಹುದು. ನಿಮಗೆ ಹೊಸ ಜವಾಬ್ದಾರಿಗಳು, ಕೆಲಸಗಳು ಒಲಿದು ಬರಲಿವೆ. ಉನ್ನತ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿಗಳಿಗೆ ಉತ್ತಮ ಸಮಯ ಇದಾಗಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಶುಕ್ರನಿಂದ ಬಹಳ ಲಾಭಕರ ದಿನಗಳು ಬರಲಿವೆ. ನಿಮ್ಮ ಅನೇಕ ಕೆಲಸಗಳು ಶುಭಾರಂಭ ಪಡೆಯಲಿವೆ. ಹೊಸ ಕೆಲಸಗಳು, ಉದ್ಯಮಗಳು ನಿಮಗೆ ಒಳಿತು ತರಲಿವೆ. ಹಣದಿಂದ ನಿಮಗೆ ಇದ್ದಂತಹ ಒತ್ತಡ ಕಡಿಮೆಯಾಗುತ್ತದೆ. ನೀವು ಅಂದುಕೊಂಡಿದ್ದ ಹಣಕಾಸು ಕೆಲಸವೊಂದು ಪೂರ್ಣವಾಗಲಿದೆ. ಆರ್ಥಿಕವಾಗಿ ನೀವಿಂದು ಸದೃಢರಾಗುವ ಸಮಯವಾಗಿರಲಿದೆ. ಅವಿವಾಹಿತರಿಗೆ ಪ್ರೀತಿಯಲ್ಲಿ ಮಧುರತೆ ಇರಲಿದೆ. ತಂದೆ ತಾಯಿಯ ಕೆಲಸಗಳಲ್ಲಿ ನೀವು ಬೆಂಬಲವಾಗಿ ನಿಲ್ಲುತ್ತೀರಿ. ಯಾರಿಗೂ ಸಾಲ ನೀಡಲು ಮುಂದಾಗದೆ ಇರುವುದು ಉತ್ತಮ. ಆಸ್ತಿ ವಿಚಾರದಲ್ಲಿ ಲಾಭದಾಯಕ ದಿನಗಳಿವೆ. ಅಪರಿಚಿತ ವ್ಯಕ್ತಿಗಳೊಂದಿಗೆ ಹಣಕಾಸು ವ್ಯವಹಾರಕ್ಕೆ ಮುಂದಾಗಬೇಡಿ.
ಧನು ರಾಶಿ
ಧನು ರಾಶಿಯವರಿಗೆ ಈ ಸಮಯ ವಿಶೇಷವಾಗಿರುತ್ತದೆ. ನೀವು ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದ ಯೋಜನೆಯಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಖ್ಯಾತಿ ಮತ್ತು ಜನಪ್ರಿಯತೆ ಹೆಚ್ಚಾಗುತ್ತದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ಸಂತೋಷದ ಕ್ಷಣಗಳ ಕಳೆಯುವಿರಿ. ಪಿತ್ರಾರ್ಜಿತ ಆಸ್ತಿಯ ವಿಚಾರವಾಗಿ ನಿಮಗೆ ಸಂತಸದ ದಿನಗಳಿವೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ನೋಡುವಿರಿ, ಅದ್ರಕ್ಕೂ ದೀರ್ಘಕಾಲದ ಸಮಸ್ಯೆಗಳ ನಿವಾರಣೆ ಸಂಭವವಿದೆ. ಅವಿವಾಹಿತರಲ್ಲಿ ವಿವಾಹ ಸಂಬಂಧಿ ವಿಚಾರವು ಧನಾತ್ಮಕವಾಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ.)



Click it and Unblock the Notifications