Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೀನ ರಾಶಿಯಲ್ಲಿ ಶುಕ್ರ ಉದಯ: ಈ ರಾಶಿಯವರಿಗೆ ಸುವರ್ಣಯುಗ, ಕೌಟುಂಬಿಕ ಸುಖ!
ಜ್ಯೋತಿಷ್ಯದಲ್ಲಿ ಪ್ರತಿಯೊಂದು ರಾಶಿಯನ್ನು ಕೂಡ ಬಹಳ ಪ್ರಮುಖ ಎಂದು ಕರೆಯಲಾಗಿದೆ. ಅದ್ರಲ್ಲೂ ವಿಶೇಷ ದಿನದಂದು ಗ್ರಹಗಳ ಸಂಚಾರವು ವಿಶೇಷ ಯೋಗವನ್ನು ತರುವುದು ನೋಡಬಹುದು. ಈ ಯೋಗವು ಹಲವು ರೀತಿ ಲಾಭಕ್ಕೆ ಕಾರಣವಾಗಲಿದೆ. ಹಾಗೆ ಶುಕ್ರನ ಚಲನೆಯನ್ನು ಜ್ಯೋತಿಷ್ಯದಲ್ಲಿ ಬಹಳ ಪ್ರಮುಖ ವಿದ್ಯಮಾನವಾಗಿ ನೋಡಲಾಗುತ್ತದೆ. ಶುಕ್ರನಿಂದ ಹಲವು ರೀತಿ ಲಾಭಗಳಿವೆ. ಶುಕ್ರನು ಸಂಚರಿಸುವ ರಾಶಿ ಹಾಗೆ ಆತನೊಂದಿಗೆ ಸಂಯೋಗವಾಗುವ ಗ್ರಹದಿಂದ ಯೋಗಗಳನ್ನು ನೋಡಬಹುದು.
ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುವ ಶುಕ್ರನು ಫೆಬ್ರವರಿ 1 ರಂದು ಉದಯಿಸಲಿದ್ದಾನೆ. ಶುಕ್ರನು ತನ್ನ ಉತ್ತುಂಗ ರಾಶಿಯಾದ ಮೀನ ರಾಶಿಯಲ್ಲಿ ಉದಯಿಸುತ್ತಾನೆ. ಇದು ಕೆಲವು ರಾಶಿ ಜನರಿಗೆ ಸುವರ್ಣಯುಗದ ಅವಧಿ ಎನ್ನಬಹುದು. ಈ ರಾಶಿ ಜನರಲ್ಲಿ ಸಂಪತ್ತು ವೃದ್ಧಿ, ಸಂತೋಷ, ಸಮೃದ್ಧಿ, ಉದ್ಯೋಗ ಸಂಬಂಧಿತ ವಿಚಾರದಲ್ಲಿ ಬಹಳ ಮುಖ್ಯ ಗ್ರಹ ಎಂದು ಹೇಳಬಹುದು.

ಇನ್ನು ಫೆಬ್ರವರಿಯಲ್ಲಿ ತನ್ನದೇ ಮೀನ ರಾಶಿಯಲ್ಲಿ ಉದಯಿಸಲಿದ್ದಾನೆ. ಇದರಿಂದ ಯಾವೆಲ್ಲಾ ರಾಶಿಗಳಿಗೆ ಶುಭಕಾಲ ಆರಂಭವಾಗಲಿದೆ, ಯಾರಿಗೆ ಲಾಭದಾಯಕ? ಯಾರಲ್ಲಿ ಸಂಪತ್ತು ವೃದ್ಧಿಯ ಸಂಕೇತವಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮೀನ ರಾಶಿ
ಶುಕ್ರನ ಉದಯವು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಶುಕ್ರನು ನಿಮ್ಮ ರಾಶಿಯ ಲಗ್ನ ಮನೆಯಲ್ಲಿ ಉದಯಿಸುತ್ತಾನೆ. ಈ ಸಮಯದಲ್ಲಿ ನಿಮ್ಮ ವ್ಯಕ್ತಿತ್ವವು ಮತ್ತಷ್ಟು ಜಯದತ್ತ ಮುಖ ಮಾಡಲಿದೆ. ನಿಮ್ಮ ಅನೇಕ ಕೆಲಸಗಳಲ್ಲಿ ಅಚ್ಚರಿಯ ಫಲತಾಂಶ ಸಿಗಬಹುದು. ಗೌರವ ಹೆಚ್ಚಾಗುವುದು ನಿಮ್ಮ ಮಾನಸಿಕ ನೆಮ್ಮದಿ ಹೆಚ್ಚಲು ಕಾರಣವಾಗುತ್ತದೆ. ಆಸ್ತಿ ಸಂಬಂಧಿತ ವಿಚಾರವಾಗಿ ನೀವು ಓಡಾಟಗಳ ಮಾಡುತ್ತಿದ್ದರೆ ಈ ಸಮಯದಿಂದ ಅದರಲ್ಲಿ ಯಶಸ್ಸು ಪಡೆಯಲಿದ್ದೀರಿ. ವಿವಾಹಿತರಲ್ಲಿ ದಾಂಪತ್ಯ ವಿಚಾರವಾಗಿ ಸಂತಸದ ವಾತಾವರಣೆಗಳು ಇರಲಿದೆ. ಕುಟುಂಬದಲ್ಲಿನ ಸಮಸ್ಯೆಗಳುನ್ನು ನೀವು ಪರಿಹಾರ ಮಾಡುವಿರಿ. ವಾಹನ ಸಂಬಂಧಿತ ವಿಚಾರದಲ್ಲು ನಿಮಗೆ ಶುಭವಾಗುವ ಸಮಯ ಇದಾಗುತ್ತದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಶುಕ್ರನ ಉದಯವು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ನಿಮ್ಮ ರಾಶಿಯ ಆದಾಯ ಮತ್ತು ಲಾಭದ ಮನೆಯಲ್ಲಿ ಶುಕ್ರನ ಉದಯವಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಆದಾಯ ಗಮನಾರ್ಹವಾಗಿ ಹೆಚ್ಚಾಗಬಹುದು. ಹಾಗೆ ನಿಮ್ಮ ಹೂಡಿಕೆಗಳು, ಉಳಿತಾಯಗಳಲ್ಲಿಯೂ ಹೆಚ್ಚಳವಾಗುವುದು ನೋಡಬಹುದು. ವಾಹನ ಖರೀದಿ, ಮನೆ ಖರೀದಿ, ಚಿನ್ನ ಖರೀದಿಯಂತಹ ವಿಚಾರದಲ್ಲಿ ನಿಮಗೆ ಶುಭವಾಗಲಿದೆ. ವ್ಯವಹಾರ ಒಪ್ಪಂದಗಳಲ್ಲಿ ನಿಮಗೆ ಉತ್ತಮ ಶುಭದಾಯಕ ದಿನ ಎನ್ನಬಹುದು. ಮಕ್ಕಳ ವಿವಾಹ ಸಂಬಂಧವಾಗಿದ್ದ ಚಿಂತೆಯು ದೂರಾಗಬಹುದು ಅಥವಾ ಅದರಿಂದ ನಿರಾಳರಾಗಬಹುದು.
ಮಿಥುನ ರಾಶಿ
ವೃತ್ತಿ ಮತ್ತು ವ್ಯವಹಾರದ ವಿಷಯದಲ್ಲಿ ಶುಕ್ರನ ಉದಯವು ಶುಭವೆಂದು ಸಾಬೀತಾಗಲಿದೆ. ಶುಕ್ರನು ನಿಮ್ಮ ಕರ್ಮ ಭಾವದಲ್ಲಿ ಉದಯಿಸಲಿರುವುದರಿಂದ, ಈ ಸಮಯದಲ್ಲಿ ನಿಮ್ಮ ಕೆಲಸದಲ್ಲಿ ಶುಭವಾಗುವುದು. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ನೋಡುವಿರಿ. ಉದ್ಯೋಗದಲ್ಲಿರುವವರು ಬಡ್ತಿ, ವೇತನ ಹೆಚ್ಚಳದಂತಹ ವಿಶೇಷ ಲಾಭ ನೋಡಬಹುದು. ನಿಮ್ಮ ಆದಾಯದಲ್ಲಿ ಪ್ರಗತಿ ನೋಡುತ್ತೀರಿ, ಬಹು ಸಮಯದ ಖರ್ಚುಗಳು ನಿಧಾನವಾಗಿ ಮುಕ್ತಾಯವಾಗಲಿವೆ. ನಿಮ್ಮ ಮನೆಯ ಖರ್ಚುಗಳನ್ನು ನಿಭಾಯಿಸುವುದು ನಿಮ್ಮ ಉಳಿತಾಯ ಹೆಚ್ಚುವಂತೆ ಮಾಡಲಿವೆ. ನ್ಯಾಯಾಲಯ ಸಂಬಂಧಿತ ಓಡಾಟಗಳಿಂದ ಮುಕ್ತಿ ಪಡೆಯಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications