ಜುಲೈ 11ಕ್ಕೆ ಶುಕ್ರ ಉದಯ: ಶುಭ ಕಾರ್ಯಗಳಿಗೆ ಶುಭ ಸಮಯ ಏಕೆ? ಈ ರಾಶಿಯವರು ಹೆಚ್ಚಿನ ಪ್ರಯೋಜನ ಪಡೆಯಲಿದ್ದೀರಿ

ಜುಲೈ 7ಕ್ಕೆ ಕರ್ಕ ರಾಶಿಗೆ ಪ್ರವೇಶಿಸಿದ್ದ ಶುಕ್ರನು ಅಸ್ತಂಗತವಾಗಿದ್ದ, ಇದೀಗ ಜುಲೈ 11ಕ್ಕೆ ಉದಯವಾಗಿದ್ದಾನೆ. ಶುಕ್ರನು ಭೌತಿಕ ಸೌಕರ್ಯಗಳನ್ನು ನೀಡುವ ಗ್ರಹವಾಗಿದೆ, ಇದೀಗ ಶುಕ್ರ ಉದಯವಾಗಿರುವುದರಿಂದ ಮಂಗಳಕರ ಕಾರ್ಯಕ್ಕೆ ಅನುಕೂಲಕರವಾಗಿದೆ.

Venus Rise In Cancer

ಈ ಶುಕ್ರ ಉದಯ ಮಂಗಳ ಕಾರ್ಯಕ್ಕೆ ಅವಶ್ಯಕ ಏಕೆ?

ಮದುವೆ ಮುಂತಾದ ಶುಭ ಕಾರ್ಯಗಳನ್ನು ಮಾಡುವಾಗ ಶುಕ್ರ ಅಸ್ತಂತತವಾಗಿದ್ದ ಸಮಯ ಅನುಕೂಲಕರವಲ್ಲ, ಇದೀಗ ಶುಕ್ರ ಉದಯವಾಗಿದೆ, ಹೀಗಾಗಿ ಶುಭ ಕಾರ್ಯಗಳಿಗೆ ಮಂಗಳಕರ ಎಂದು ಪರಿಗಣಿಸಲಾಗಿದೆ.

ಕರ್ಕ ರಾಶಿಯಲ್ಲಿ ಶುಕ್ರನ ಉದಯ

ಕರ್ಕ ರಾಶಿಯಲ್ಲಿ ಶುಕ್ರನ ಉದಯದಿಂದಾಗಿ ಈ ಅವಧಿ ಅನುಕೂಲಕರವಾಗಿದೆ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಈ ಸಮಯದಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕವಾಗಿಯೂ ಪ್ರಯೋಜನಕಾರಿಯಾಗಿದೆ. ಶುಕ್ರ ಅನುಕೂಲಕರ ಸ್ಥಾನದಲ್ಲಿ ಇರುವವರ ಆತ್ಮ ವಿಶ್ವಾಸ ಹೆಚ್ಚಾಗಲಿದೆ.

ಶುಕ್ರ ಉದಯವಾಗಿರುವುದರಿಂದ ಈ ರಾಶಿಯವರು ಹೆಚ್ಚಿನ ಪ್ರಯೋಜನ ಪಡೆಯುತ್ತೀರಿ

ಮಿಥುನ ರಾಶಿ
ಮಿಥುನ ರಾಶಿಯವರು ಈ ಅವಧಿ ತುಂಬಾನೇ ಪ್ರಯೋಜನಕಾರಿಯಾಗಿದೆ. ಇನ್ನು ಹೊಸ ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಿದ್ದರೆ ಈ ಅವಧಿಯಲ್ಲಿ ಒಳ್ಳೆಯ ಕೆಲಸ ಸಿಗಲಿದೆ, ವ್ಯಾಪಾರ, ವ್ಯವಹಾರದಲ್ಲಿ ಉತ್ತಮ ಪ್ರಯೋಜನ ಸಿಗಲಿದೆ. ಕುಟುಂಬ ಜೀವನದಲ್ಲಿ ಸಾಮರಸ್ಯ ಇರಲಿದೆ, ವೈವಾಹಿಕ ಜೀವನದಲ್ಲಿ ಪ್ರೀತಿ ಇರಲಿದೆ. ಆರೋಗ್ಯ ಚೆನ್ನಾಗಿರಲಿದೆ.

ಕನ್ಯಾ ರಾಶಿ
ಕರ್ಕ ರಾಶಿಯವರಿಗೆ ಈ ಅವಧಿ ಮಂಗಳಕರವಾಗಿದೆ. ವೃತ್ತಿ ಬದುಕಿನಲ್ಲಿ ಬಡ್ತಿ ಇರಲಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ, ಆರ್ಥಿಕವಾಗಿ ಉತ್ತಮವಾಗಿದೆ, ಆರೋಗ್ಯ ಚೆನ್ನಾಗಿರಲಿದೆ.

ಮಕರ ರಾಶಿ
ಮಕರ ರಾಶಿಯವರಿಗೆ ಈ ಸಮಯ ತುಂಬಾನೇ ಅನುಕೂಲಕರವಾಗಿದೆ, ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಪಡೆಯುತ್ತೀರಿ, ಆರ್ಥಿಕ ಪ್ರಯೋಜನ ಸಿಗಲಿದೆ, ಆರೋಗ್ಯದ ಕಡೆಗೆ ಗಮನಹರಿಸಬೇಕು.

ಕುಂಭ ರಾಶಿ
ಕುಂಭ ರಾಶಿಯ ವ್ಯಾಪಾರಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ಆರ್ಥಿಕವಾಗಿ ತುಂಬಾ ಲಾಭ ಗಳಿಸುತ್ತೀರಿ, ಆದರೆ ಕುಟುಂಬ ಜೀವನದ ಕಡೆಗೆ ಗಮನಹರಿಸಬೇಕು.

ಶುಕ್ರ ಅಸ್ತಂಗತವಾಗಿದ್ದ ಸಮಯದಲ್ಲಿ ಈ ಕಾರ್ಯಗಳನ್ನು ಮಾಡಬಾರದು?

ಶುಕ್ರ ಅಸ್ತಂಗತವಾಗಿದ್ದಾಗಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗದಿರುವುದು ಸೂಕ್ತ.
ಚಿನ್ನ ಅಥವಾ ವಜ್ರದ ಆಭರಣ ಖರೀದಿಸಬಾರದು
ಹೊಸ ಕಾರುಗಳು ಅಥವಾ ವಾಹನಗಳನ್ನು ಖರೀದಿಸಲು ಈ ಸಮಯ ಸೂಕ್ತವಲ್ಲ ಎಂದು ಹೇಳಲಾಗುವುದು
ಮುಂಡನ್ ಮತ್ತು ಗೃಹ ಪ್ರವೇಶ, ಮದುವೆ, ನಾಮಕರಣ ಈ ಬಗೆಯ ಶುಭ ಕಾರ್ಯಗಳನ್ನು ಮಾಡಬಾರದು.

ಶುಕ್ರನ ವಿಶೇಷ ಕೃಪೆ ಪಡೆಯಲು ಈ ಪರಿಹಾರ ಒಳ್ಳೆಯದು:
ಶುಕ್ರವಾರ ಬಿಳಿ ಬಣ್ಣದ ವಸ್ತ್ರ ಧರಿಸಬೇಕು, ಈ ದಿನ ಬಿಳಿ ಆಹಾರ ವಸ್ತುಗಳನ್ನು ದಾನ ಮಾಡಿ.
ಶುಕ್ರ ಯಂತ್ರ ಮನೆಯಲ್ಲಿ ಸ್ಥಾಪಿಸಿ ಪೂಜಿಸಿ
ಹರಿದ ಬಟ್ಟೆಗಳನ್ನು ಧರಿಸಬೇಡಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Venus Rise In Cancer Zodiac 2024:Shukra Uday Lucky Time To These Zodiac

Venus Rise In Cancer Zodiac 2024: Skura uday in Karaka lucky time to subha time,
X
Desktop Bottom Promotion