ಮಾರ್ಚ್‌ 31ರಿಂದ ರಾಹು-ಶುಕ್ರ ಯುತಿ: ಈ 4 ರಾಶಿಯವರಿಗೆ ತುಂಬಾ ಅದೃಷ್ಟಕರ

ರಾಹು ಗ್ರಹವು ಮೀನ ರಾಶಿಯಲ್ಲಿದೆ. ಇನ್ನು ಮಾರ್ಚ್‌ 31ಕ್ಕೆ ಶುಕ್ರ ಗ್ರಹ ಮೀನ ರಾಶಿಗೆ ಸಂಚರಿಸಲಿದೆ. ಮಾರ್ಚ್ 31ರಿಂದ ಶುಕ್ರ-ರಾಹು ಗ್ರಹವು ಒಂದೇ ರಾಶಿಯಲ್ಲಿ ಇರುವುದರಿಂದ ರಾಹು-ಶುಕ್ರ ಯುತಿಯ ಪ್ರಭಾವ ಎಲ್ಲಾ ರಾಶಿಗಳ ಮೇಲಿರಲಿದೆ.

ಶುಕ್ರ ಸಂತೋಷ, ಸಂಪತ್ತು, ವೈಭವ, ಸೌಂದರ್ಯ ಮತ್ತು ಐಷಾರಾಮಿ ನೀಡುವ ಗ್ರಹವಾಗಿದೆ. ರಾಹು ಹಿಮ್ಮುಖ ಚಲನೆಯಲ್ಲಿರುವ ಗ್ರಹವಾಗಿದ್ದು ಇದರ ಪ್ರಭಾವ ಈಗಾಗಲೇ ದ್ವಾದಶ ರಾಶಿಗಳ ಮೇಲೆ ಇರಲಿದೆ. ಈ ಎರಡೂ ಗ್ರಹಗಳು ಒಂದೇ ರಾಶಿಯಲ್ಲಿದ್ದಾಗ ಉತ್ತಮ ಪ್ರಯೋಜನ ನೀಡಲಿದೆ.

ರಾಹು ಎಲ್ಲಾ ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಅದರ ಸ್ಥಾನ ಉತ್ತಮವಾಗಿದ್ದರೆ ಅದು ಉತ್ತಮ ಪರಿಣಾಮ ಬೀರುವುದು, ಇದೀಗ ರಾಹು, ಶುಕ್ರ ಯುತಿಯಾಗಿರುವುದರಿಂದ ಯಾವೆಲ್ಲಾ ರಾಶಿಗಳಿಗೆ ಮಂಗಳಕರವಾಗಿದೆ ಎಂದು ನೋಡೋಣ ಬನ್ನಿ:

Venus Rahu Conjunction 2024

ಕರ್ಕ ರಾಶಿ

ಕರ್ಕ ರಾಶಿಯವರ 10ನೇ ಮನೆಯಲ್ಲಿ ರಾಹು-ಶುಕ್ರ ಯುತಿ ಉಂಟಾಗಲಿದೆ. ಈ ರಾಹು- ಶುಕ್ರ ಯುತಿ ಕರ್ಕ ರಾಶಿಯವರಿಗೆ ಅದೃಷ್ಟಕರವಾಗಿದೆ. ಈ ಅವಧಿಯಲ್ಲಿ ಏನಾದರೂ ಹೊಸ ಕೆಲಸಕ್ಕೆ ತುಂಬಾನೇ ಉತ್ತಮವಾಗಿದೆ. ನೀವು ಕೆಲಸವನ್ನು ಹುಡುಕುತ್ತಿದ್ದರೆ ಈ ಅವಧಿಯಲ್ಲಿ ನೀವು ಬಯಸಿದ ಕೆಲಸ ಸಿಗಲಿದೆ. ಉದ್ಯೋಗಿಗಳಿಗೆ ಈ ಅವಧಿಯಲ್ಲಿ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ವ್ಯಾಪಾರಿಗಳು ಉತ್ತಮ ಲಾಭ ಪಡೆಯಬಹುದು. ಆರ್ಥಿಕ ಸ್ಥಿತಿ ತುಂಬಾ ಉತ್ತಮವಾಗಿರಲಿದೆ. ಒಟ್ಟಿನಲ್ಲಿ ಈ ಅವಧಿ ನಿಮಗೆ ಅದೃಷ್ಟಕರವಾಗಿರಲಿದೆ. ಆದ್ದರಿಂದ ಈ ಅವಧಿಯಲ್ಲಿ ನೀವು ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ.

ಸಿಂಹ ರಾಶಿ

ಸಿಂಹ ರಾಶಿಯವರ 9ನೇ ಮನೆಯಲ್ಲಿ ಶುಕ್ರ ಮತ್ತು ರಾಹುವಿನ ಸಂಯೋಗವಾಗುತ್ತಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ಇನ್ನು ವ್ಯವಹಾರ ಮಾಡುವವರು ಉತ್ತಮ ಲಾಭ ಗಳಿಸುವ ಸಾಧ್ಯತೆ ಇದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯನ್ನು ಕಾಣುವಿರಿ. ಈ ಅವಧಿಯಲ್ಲಿ ವಿವಾಹಿತರ ವೈವಾಹಿಕ ಜೀವನ ಚೆನ್ನಾಗಿರಲಿದೆ. ನಿಮ್ಮಿಬ್ಬರ ನಡುವೆ ಉತ್ತಮ ಹೊಂದಾಣಿಕೆ ಇರಲಿದೆ. ನಿಮ್ಮಿಬ್ಬರ ನಡುವೆ ಪ್ರೀತಿ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಪ್ರಗತಿ ಮತ್ತು ಕೆಲಸದ ಸ್ಥಳದಲ್ಲಿ ಪ್ರಗತಿಯ ಸಾಧ್ಯತೆಗಳಿವೆ, ಈ ಅವಧಿಯಲ್ಲಿ ಯಾವುದೆ ಚಿಂತೆಯಿರದೆ ಖುಷಿಯಿಂದ ಸಮಯ ಕಳೆಯುತ್ತೀರಿ.

ಕನ್ಯಾರಾಶಿ

ಕನ್ಯಾ ರಾಶಿಯವರಲ್ಲಿ ಶುಕ್ರ ಮತ್ತು ರಾಹುವಿನ ಸಂಯೋಗವಾಗಲಿದೆ. ಈ ಅವಧಿಯಲ್ಲಿ ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮಗೆ ಸಂಗಾತಿಯ ಬೆಂಬಲ ಸಿಗಲಿದೆ. ಇನ್ನು ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವವರಿಗೆ ಈ ಅವಧಿ ತುಂಬಾ ಒಳ್ಳೆಯದು, ಈ ಅವಧಿಯಲ್ಲಿ ನೀವು ಉತ್ತಮ ಲಾಭ ಗಳಿಸುತ್ತೀರಿ. ವ್ಯಾಪಾರಿಗಳು ಈ ಅವಧಿಯಲ್ಲಿ ವ್ಯವಹಾರದಲ್ಲಿ ಉತ್ತಮ ಬೆಳವಣಿಗೆಯನ್ನು ಕಾಣುತ್ತೀರಿ. ಉದ್ಯೋಗಿಗಳಿಗೆ ಬಡ್ತಿ ದೊರೆಯಬಹುದು. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಗೆ ಕಾರಣವಾಗುವುದು. ಈ ಅವಧಿಯಲ್ಲಿ ಹೊಸ ಉದ್ಯಮ ಮಾಉವವರಿಗೆ ತುಂಬಾ ಅನುಕೂಲಕರವಾಗಿರಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಈ ಅವಧಿ ತುಂಬಾ ಮಂಗಳಕರವಾಗಿರಲಿದೆ. ಈ ಹಿಂದೆ ಮಾಡಿದ ಹೂಡಿಕೆಯಿಂದ ಉತ್ತಮ ಲಾಭ ಗಳಿಸಬಹುದು. ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಉದ್ಯೋಗಿಗಳು ಕೆಲಸದಲ್ಲಿ ಅನೇಕ ಧನಾತ್ಮಕ ಫಲಿತಾಂಶ ಪಡೆಯುತ್ತಾರೆ. ಉದ್ಯೋಗಿಗಳಿಗೆ ಉತ್ತಮ ಲಾಭ ಪಡೆಯುವ ಸಾಧ್ಯತೆ ಇದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿಯನ್ನುಕಾಣುತ್ತೀರಿ.

ಗುರು ಹಾಗೂ ಶುಕ್ರ ಮಂತ್ರ ಪಠಿಸಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Venus Rahu Conjunction: Lucky To These 4 Zodiac Signs

Venus Rahu Conjunction 2024: These yuti brings lucky to these zodiac signs,
X
Desktop Bottom Promotion