Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಶುಕ್ರ-ರಾಹು ಮೀನರಾಶಿಯಲ್ಲಿ ಸಂಯೋಗ..! ಈ ರಾಶಿಯವರಲ್ಲಿ ಐಶ್ವರ್ಯ ಪ್ರಾಪ್ತಿ..!
ಜ್ಯೋತಿಷ್ಯದಲ್ಲಿ ಗ್ರಹಗತಿಗಳ ಬದಲಾವಣೆಗಳು ಹಲವು ರೀತಿಯ ಲಾಭ ನಷ್ಟಕ್ಕೆ ಕಾರಣವಾಗುತ್ತದೆ. ಹಾಗೆ ಎಲ್ಲಾ ರಾಶಿಗಳ ಮೇಲೆಯೂ ಇದು ಪ್ರಭಾವ ಬೀರುತ್ತದೆ. ಫೆಬ್ರವರಿಯಲ್ಲಿ ಕೆಲವು ಗ್ರಹಗಳು ತಮ್ಮ ಸ್ಥಾನಪಲ್ಲಟ ಆಗುತ್ತಿರುವುದು ಹತ್ತಾರು ರೀತಿಯ ಲಾಭ ಉಂಟಾಗುತ್ತಿದೆ. ಹಾಗೆ ಹಲವು ಯೋಗಗಳಿಂದ ಪ್ರತಿಯೊಂದು ರಾಶಿಯು ನಿರ್ಧಿಷ್ಟ ಲಾಭ ಗಳಿಸುತ್ತಿವೆ.
ಈಗ ಶುಕ್ರನು ಮೀನ ರಾಶಿಗೆ ಚಲಿಸುತ್ತಿರುವುದರಿಂದ ಹಲವು ಬಗೆಯ ಲಾಭ ಉಂಟಾಗುತ್ತಿದೆ. ಏಕೆಂದರೆ ಮೀನರಾಶಿಯಲ್ಲಿ ಈಗಾಗಲೇ ರಾಹು ಸಂಚರಿಸುತ್ತಿದ್ದಾನೆ. ಇದರಿಂದ ಮೀನರಾಶಿಯಲ್ಲಿ ಶುಕ್ರ ಹಾಗೂ ರಾಹುವಿನ ಸಂಯೋಗಕ್ಕೆ ಕಾರಣವಾಗುತ್ತದೆ. ಇದರಿಂದ ಹಲವು ಬಗೆಯ ಲಾಭಗಳಿಗೆ ಕಾರಣವಾಗುತ್ತಿದೆ. ಈ ಸಂಯೋಗದಿಂದ ಯಾವ ರಾಶಿಯವರ ಅದೃಷ್ಟ ಬದಲಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಜನವರಿ 28, 2025 ರಂ ಬೆಳಗ್ಗೆ 07:12 ಕ್ಕೆ ಶುಕ್ರನು ಮೀನ ರಾಶಿಗೆ ಚಲಿಸಿದ್ದಾನೆ. ಈ ಸಮಯದಲ್ಲಿ ರಾಹುವಿನ ಸಂಯೋಗದಿಂದ ಈ ರಾಶಿಯವರಿಗೆ ಶುಭ ಕಾಲ ಆರಂಭವಾಗುತ್ತಿದೆ. ಹಾಗಾದ್ರೆ ರಾಹು ಶುಕ್ರನಿಂದ ಯಾರಿಗೆ ಲಾಭ ಎನ್ನುವುದನ್ನು ನೋಡೋಣ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ರಾಹು ಮತ್ತು ಶುಕ್ರ ಸಂಯೋಗವು ಆರ್ಥಿಕ ಮತ್ತು ವೃತ್ತಿ ಜೀವನದಲ್ಲಿ ಅದ್ಭುತ ಪ್ರಯೋಜನಗಳ ನೀಡಲಿದೆ. ಈ ಸಮಯದಲ್ಲಿ ನೀವು ಕೆಲಸದ ಸ್ಥಳದಲ್ಲಿ ಅತ್ಯುತ್ತಮ ಯಶಸ್ಸು ಪಡೆಯಲಿದ್ದೀರಿ. ವೃತ್ತಿ ಜೀವನದ ಯಶಸ್ಸಿಗೆ ರಾಹು ಕಾರಣರಾಗಲಿದ್ದಾನೆ. ಹಾಗೆ ನಿಮ್ಮ ಆರ್ಥಿಕ ಪ್ರಗತಿಗೆ ಕಾರಣವಾಗಲಿದ್ದಾನೆ. ಶುಕ್ರನಿಂದಾಗಿ ನಿಮ್ಮ ಸಕಲ ಸಂಪತ್ತು, ಐಶ್ವರ್ಯ, ಧನಲಾಭದ ನಿರೀಕ್ಷೆ ಇದೆ. ನೀವು ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿದ್ದರೆ ಲಾಭದಾಯಕ ದಿನಗಳನ್ನು ನೋಡಲಿದ್ದೀರಿ. ಪಾಲುದಾರಿಕೆ ವ್ಯಾಪಾರದಲ್ಲಿದ್ದರೆ ನಿಮ್ಮ ಲಾಭಾಂಶದ ಪ್ರಮಾಣ ಹೆಚ್ಚಾಗಲಿದೆ. ಹೂಡಿಕೆಗಳಿಂದ ಲಾಭದಾಯಕ ರೀತಿಯ ವಾಪಾಸಾತಿ ಇರಲಿದೆ.
ಕರ್ಕ ರಾಶಿ
ರಾಹು ಮತ್ತು ಶುಕ್ರರ ಸಂಯೋಗವು ಕರ್ಕ ರಾಶಿಗೆ ಪರಿಪೂರ್ಣ ಲಾಭಕ್ಕೆ ಕಾರಣವಾಗುತ್ತಿದೆ. ಈ ಸಂಯೋಗದಿಂದ ಅದೃಷ್ಟ ನಿಮ್ಮ ಕೈಸೇರಲಿದೆ. ಈ ಸಮಯದಲ್ಲಿ ನೀವು ಮಾಡುವ ಎಲ್ಲಾ ಕೆಲಸಗಳಲ್ಲು ಯಶಸ್ಸು ಸಿಗಲಿದೆ. ಅದೃಷ್ಟದ ಬೆಂಬಲ ನಿಮ್ಮ ಪರವಾಗಿ ಇರಲಿದೆ. ವಿದೇಶ ಪ್ರವಾಸ, ದೇವಾಲಯ ಭೇಟಿ, ದೂರ ಪ್ರಯಾಣ ಕೂಡ ಹೊರಡಬಹುದು. ನಿಮ್ಮ ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಈಗ ಪೂರ್ಣಗೊಳ್ಳಬಹುದು ಮತ್ತು ನಿಮ್ಮ ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಬಹುದು. ಕುಟುಂಬದಲ್ಲಿ ನಿಮ್ಮ ಮಾತುಗಳಿಗೆ ಬೆಂಬಲ, ಮಾನ್ಯತೆ ಸಿಗಲಿದೆ.
ಮಕರ ರಾಶಿ
ರಾಹು-ಶುಕ್ರ ಸಂಯೋಗವು ಮಕರ ರಾಶಿಯವರಿಗೆ ಎಲ್ಲಾ ದಿಕ್ಕುಗಳ ಲಾಭಕ್ಕೆ ಕಾರಣವಾಗುತ್ತಿದೆ. ನೀವು ಅಂದುಕೊಂಡಿದ್ದ ಕೆಲಸಗಳು ಬಹುಬೇಗ ಮುಕ್ತಾಯವಾಗಲಿವೆ. ಹಾಗೆ ನಿಮ್ಮ ದೈನಂದಿನ ಕೆಲಸ ಕಾರ್ಯಗಳು ಅಡೆತಡೆ ಇಲ್ಲದೆ ಮುಗಿಯಲಿವೆ. ಆರ್ಥಿಕವಾಗಿ ನೀವು ಬಯಸಿದ್ದಂತೆ ಲಾಭದಾಯಕ ದಿನಗಳು ಬರಲಿವೆ. ವ್ಯಾಪಾರ ಹಾಗೂ ಆರೋಗ್ಯ ವೃದ್ಧಿಯ ದಿನಗಳಿವೆ.
ಮೀನ ರಾಶಿ
ಮೀನ ರಾಶಿಯವರಿಗೆ ರಾಹು ಮತ್ತು ಶುಕ್ರ ಸಂಯೋಗವು ಅತ್ಯುತ್ತಮ ಫಲಿತಾಂಶಕ್ಕೆ ಕಾರಣವಾಗುತ್ತಿದೆ. ಯಾವುದಾದರು ಅನಾರೋಗ್ಯದಿಂದ ನೀವು ಬಳಲುತ್ತಿದ್ದರೆ ಶೀಘ್ರ ಗುಣಮುಖರಾಗುತ್ತೀರಿ. ಅವಿವಾಹಿತರಲ್ಲಿ ಮದುವೆ ಮಾತುಕತೆ ಹಾಗೂ ಸಂಬಂಧಗಳಲ್ಲಿ ವೃದ್ಧಿ ನೋಡಬಹುದು. ನೀವು ಕೈಗಾರಿಕಾ ವಲಯದಲ್ಲಿ ಕೆಲಸ ಮಾಡುತ್ತಿದ್ದರೆ ಬಡ್ತಿ, ವರ್ಗಾವಣೆಯಂತಹ ದಿನಗಳು ಎದುರಾಗಲಿವೆ. ಕುಟುಂಬಸ್ಥರಲ್ಲಿ ನಿಮ್ಮಿಂದ ನೆಮ್ಮದಿ ಇರಲಿದೆ. ಹೊಸ ಕೆಲಸಗಳಲ್ಲಿ ನೀವು ತೊಡಗಬಹುದು, ಇದು ನಿಮ್ಮ ಗೌರವ ಹೆಚ್ಚುವಂತೆ ಮಾಡಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











