Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಶುಕ್ರ-ರಾಹು ಸಂಯೋಗ: ಈ 4 ರಾಶಿಯವರಲ್ಲಿ ಆರ್ಥಿಕ ಪ್ರಗತಿ..ಸಂಪತ್ತು ವೃದ್ಧಿ!
ವೈದಿಕ ಶಾಸ್ತ್ರದಲ್ಲಿ ರಾಹು ಮತ್ತು ಶುಕ್ರ ಗ್ರಹಗಳನ್ನು ಬಹಳ ಪ್ರುಖ ಗ್ರಹಗಳೆಂದು ಪರಿಗಣಿಸಲಾಗಿದೆ, ಈ ಎರಡು ಗ್ರಹಗಳು ವ್ಯಕ್ತಿಯ ಜೀವನದಲ್ಲಿ ಹಲವು ರೀತಿಯ ಲಾಭ ಹಾಗೂ ನಷ್ಟಗಳಿಗಿದು ಕಾರಣವಾಗುತ್ತದೆ ಎಂದು ಹೇಳಲಾಗಿದೆ. ರಾಹುವಿನಿಂದ ಎಷ್ಟು ಲಾಭವೋ ಅಷ್ಟೆ ಸಂಕಷ್ಟಗಳೂ ಸಹ ನೀವು ಎದುರಿಸಬೇಕಾಗಬಹುದು, ಹಾಗೆ ಶುಕ್ರನನ್ನು ಸಂಪತ್ತಿನ ಗ್ರಹವೆಂದು ಪರಿಗಣಿಸಲಾಗಿದೆ.
ಒಬ್ಬರ ಜಾತಕದಲ್ಲಿ ರಾಹು ಮತ್ತು ಶುಕ್ರರು ಶುಭ ಸ್ಥಾನದಲ್ಲಿರದಿದ್ದರೆ ಅವರ ಜೀವನದಲ್ಲಿ ವಿವಿಧ ಪರಿಣಾಮಗಳು ಉಂಟಾಗಬಹುದು. ಆದರೆ, 2025ರಲ್ಲಿ ರಾಹು ಮತ್ತು ಶುಕ್ರ ಸೇರುತ್ತಾರೆ. ಈ ಎರಡು ಗ್ರಹಗಳ ಸಂಯೋಗದಿಂದಾಗಿ, 4 ರಾಶಿ ಜನರಲ್ಲಿ ಹಲವು ದೋಷಗಳು ನಿವಾರಣೆಯಾಗುತ್ತಿವೆ. ಹಾಗೆ ಅವರಲ್ಲಿ ಹಲವು ರೀತಿಯ ಲಾಭದಾಯಕ ವಿಚಾರಗಳು ಉಂಟಾಗುತ್ತಿದೆ.

ಹಾಗಾದ್ರೆ ರಾಹು ಹಾಗೂ ಶುಕ್ರನ ಸಂಯೋಗದಿಂದ ಯಾವ 4 ರಾಶಿಯವರಿಗೆ ಲಾಭದಾಯಕವಾಗಲಿದೆ, ಯಾವೆಲ್ಲಾ ಲಾಭ ಗಳಿಸಲಿದ್ದಾರೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ ರಾಹು ಹಾಗೂ ಶುಕ್ರನ ಸಂಯೋಗದಿಂದಾಗಿ ಅತ್ಯಧಿಕ ಲಾಭ ಗಳಿಸುವವರಾಗಿದ್ದಾರೆ. ಜೀವನದಲ್ಲಿ ಸಂತೋಷ, ಸಮೃದ್ಧಿ ಅವರನ್ನು ಹುಡುಕಿಕೊಂಡು ಬರಲಿದೆ. ಬಹಳ ಕಾಲದಿಂದ ನಿಮ್ಮಲ್ಲಿದ್ದ ಒಂದಿಷ್ಟು ಸಮಸ್ಯೆಗಳು, ಜಾತಕ ದೋಷಗಳು ನಿವಾರಣೆಯಾಗುತ್ತಿದೆ. ಕೆಲಸ, ಕಾರ್ಯದಲ್ಲಿ ಉತ್ತಮ ಪ್ರಗತಿ ಕಾಣಲಿದ್ದೀರಿ. ಹಾಗೆ ನಿಮ್ಮ ಸಾಲದ ಹೊರೆ ಕಡಿಮೆಯಾಗುತ್ತಾ ಸಾಗಲಿದೆ. ಮನೆಯಲ್ಲಿ ಶುಭ ಕಾರ್ಯ, ದೇವಾಲಯ ಭೇಟಿಯಂತಹ ಚಟುವಿಟಿಕೆಗಳು ನಡೆಯಲಿವೆ. ಒತ್ತಡದಿಂದ ಒಂದಿಷ್ಟು ದಿನಗಳು ನೀವು ಮುಕ್ತರಾಗುವತ್ತ ಗಮನಹರಿಸಿ, ಇದರಿಂದ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣಲಿದ್ದೀರಿ.
ತುಲಾ ರಾಶಿ
ತಯಲಾ ರಾಶಿಯ ಜನರಿಗೆ ಈ ಶುಕ್ರ ಹಾಗೂ ರಾಹುವಿನ ಸಂಯೋಗವು ಉತ್ತಮ ವಾತಾವರಣ ನಿರ್ಮಿಸಲಿದೆ. ಸಾಲದ ಸಮಸ್ಯೆಯಲ್ಲಿ ನೀವು ಸಿಲುಕಿದ್ದರೆ ಅದರಿಂದ ಪಾರಾಗಲು ಮಾರ್ಗಗಳು ಸಿಗಲಿದೆ. ಪಾಲುದಾರಿಕೆ ವ್ಯಹಹಾರಗಳು ನಿಮ್ಮ ಕೈಹಿಡಿಯಲಿದೆ. ಈ ವರ್ಷ ನಿಮಗೆ ಉತ್ತಮ ಆರ್ಥಿಕ ಪ್ರಗತಿಗೆ ಕಾರಣವಾಗು ಸನ್ನಿವೇಶಗಳು ಸೃಷ್ಟಿಯಾಗಲಿದೆ. ವಾಹನ ಲಾಭ, ಅವಿವಾಹಿತರಿಗೆ ವಿವಾಹ ಭಾಗ್ಯವಿದೆ. ಇಮ್ಮ ಪ್ರತಿಭೆಗೆ ತಕ್ಕಂತೆ ನಿಮ್ಮ ಗುರುತಿಸುವಿಕೆ ನಡೆಯಲಿದೆ.
ಮೀನ ರಾಶಿ
ಮೀನ ರಾಶಿಯವರಿಗೆ ಗ್ರಹಗಳ ಸಂಯೋಗವು ಅನಿರೀಕ್ಷಿತ ಹಣದ ಹರಿವಿಗೆ ಕಾರಣವಾಗಲಿದೆ. ನಿಮ್ಮ ಜಾತಕ ದೋಷಗಳು ನಿವಾರಣೆಯಾಗುತ್ತಿವೆ. ಹಾಗೆ ಯೋಗಗಳಿಂದ ನಿಮ್ಮ ಸಂಕಷ್ಟಗಳು ದೂರಾಗುವ ಸಮಯ ಇದಾಗಿರಲಿದೆ. ನಿಮಗೆ ಎಲ್ಲಾ ವಿಚಾರಗಳಲ್ಲೂ ಅಡ್ಡಿ ಆತಂಕ ಎದುರಾಗುತ್ತಿದ್ದರೆ ಅದು ನಿವಾರಣೆಯಾಗುತ್ತದೆ. ಆಸ್ತಿ ವಿಚಾರದಲ್ಲಿ ನಿಮ್ಮ ಪರವಾದ ಒಲವು ಇರಲಿದೆ. ನೀವು ನೀಡಿದ್ದ ಸಾಲ, ಹೂಡಿಕೆ ವಾಪಾಸು ಬರುವ ಕಾಲವಿದು.
ಧನು ರಾಶಿ
ಧನು ರಾಶಿಯವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಯೋಗ ಪಡೆಯಲಿದ್ದಾರೆ. ನಿಮ್ಮ ಉಳಿತಾಯ ಹೆಚ್ಚಾಗಲಿದೆ. ಬ್ಯಾಂಕಿಂಗ್ ವ್ಯವಹಾರ, ಹಣಕಾಸು ವ್ಯವಹಾರಗಳು, ಲೇವಾದೇವಿ, ಬಡ್ಡಿ, ಕಾನೂನು ವ್ಯಾಜ್ಯಗಳು ಸೇರಿ ಹಲವು ವಿಚಾರದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ನಿಮಗೆ ಗೌರವದ ಜೊತೆಗೆ ಹಣಕಾಸು ನೆರವು ಹೆಚ್ಚಾಗಲಿದೆ. ವಿವಾಹಿತರಲ್ಲಿ ಕೌಟುಂಬಿಕ ಸಮಸ್ಯೆಗಳು ನಿವಾರಣೆಯಾಗಲಿದೆ. ಬಹುದಿನಗಳಿಂದ ಬಯಸಿದ್ದ ನಿಮ್ಮ ಬೇಡಿಕೆಗಳು ಈಡೇರಲಿದೆ. ಆರೋಗ್ಯದಲ್ಲಿಯೂ ಸುಧಾರಣೆ ಕಾಣಲಿದ್ದೀರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











