Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶುಕ್ರನಿಂದ 3 ಬಾರಿ ನಕ್ಷತ್ರ ಬದಲಾವಣೆ: ನವೆಂಬರ್‌ನಲ್ಲಿ ಯಾರಿಗೆಲ್ಲಾ ಶುಕ್ರದೆಸೆ, ಆರ್ಥಿಕ ಯಶಸ್ಸು?
Venus Nakshatra Change November 2025: ನವೆಂಬರ್‌ನಲ್ಲಿ ನಾವು ಹಲವು ಗ್ರಹಗಳ ಸಂಚಾರ ನೋಡಲಿದ್ದೇವೆ, ಅದ್ರಲ್ಲು ಶುಕ್ರ ಗ್ರಹದ ಸಂಚಾರವು ಎಲ್ಲಾ ರಾಶಿಗಳ ಮೇಲೆಯೂ ಉಂಟಾಗಲಿದೆ. ಶುಕ್ರನು ವೇಗವಾಗಿ ಚಲಿಸುವ ಗ್ರಹ. ಹಾಗೆ ಶುಕ್ರನಿಂದ ಶಾಂತಿ, ಪ್ರಗತಿ, ಲಾಭ ಅನುಭವಿಸಬಹುದು. ಶುಕ್ರನ ಆಶೀರ್ವಾದ ಪಡೆಯುವ ರಾಶಿಗಳಲ್ಲಿ ಯಶಸ್ಸು ಹುಡುಕಿ ಬರುವುದು ನೋಡಬಹುದು.
ಶುಕ್ರನು ಈಗ ನವೆಂಬರ್ 07ರಂದು ತನ್ನ ನಕ್ಷತ್ರ ಬದಲಾಯಿಸುತ್ತಾನೆ. ಶುಕ್ರನು ಚಿತ್ತ ನಕ್ಷತ್ರದಿಂದ ಸ್ವಾತಿ ನಕ್ಷತ್ರಕ್ಕೆ ಚಲಿಸಲಿದ್ದಾನೆ. ಇದು ಉಳಿದ 12 ರಾಶಿಗಳ ಮೇಲೆಯೂ ತನ್ನ ಪರಿಣಾಮ ಉಂಟು ಮಾಡುವುದು ನೋಡಬಹುದು. ಹಾಗೆ ನವೆಂಬರ್ 18ರಂದು ಸ್ವಾತಿ ನಕ್ಷತ್ರದಿಂದ ವೈಶಾಖ ನಕ್ಷತ್ರಕ್ಕೆ ಚಲಿಸುತ್ತಾನೆ.

ಈ ರೀತಿ ಶುಕ್ರನ ನಕ್ಷತ್ರ ಬದಲಾವಣೆಯಿಂದಾಗಿ ಎಲ್ಲಾ 12 ರಾಶಿಗಳ ಮೇಲೆಯೂ ಅದರ ಪರಿಣಾಮ ಉಂಟಾಗುವುದು ನೋಡಬಹುದು. ಹಾಗಾದ್ರೆ ಶುಕ್ರನ ಈ ನಕ್ಷತ್ರ ಬದಲಾವಣೆಯಿಂದ ಯಾವೆಲ್ಲಾ ರಾಶಿಗಳ ಮೇಲೆ ನೇರ ಪರಿಣಾಮ ಬೀರಲಿದೆ? ಯಾರೆಲ್ಲಾ ಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ನಾವು ನೋಡಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ಶುಕ್ರನಿಂದಾಗಿ ಬಹಳ ಅನುಕೂಲಕರ ದಿನಗಳ ನೋಡಬಹುದು. ನಿಮ್ಮ ಹಲವು ವಿಚಾರದಲ್ಲಿ ಶುಭವಾಗುತ್ತಿದೆ. ಪ್ರೇಮ ಸಂಬಂಧಗಳು ಬಲವಾಗುತ್ತಿವೆ. ನಿಮ್ಮ ಶುಭ ಸಂಕಲ್ಪಗಳು ನಿಮ್ಮ ಬಯಕೆಯಂತೆ ಈಡೇರಲಿವೆ. ಸಂತೋಷ ಮತ್ತು ಶಾಂತಿಯ ಪರಿಸ್ಥಿತಿ ನಿಮ್ಮ ಸುತ್ತಲು ನೋಡಬಹುದು. ಉದ್ಯೋಗ ಸಂಬಂಧಿತ ವಿಚಾರದಲ್ಲಿ ಶುಭವಾಗುವುದು ನೋಡಬಹುದು.
ಮಿಥುನ ರಾಶಿ
ಮಿಥುನ ರಾಶಿಯಲ್ಲಿ ಶುಕ್ರನ ಸಂಚಾರವು ನಿಮಗೆ ಅನೇಕ ಪ್ರಯೋಜನಗಳನ್ನು ತರಲಿದೆ. ನಿಮ್ಮ ಹೊಸ ಯೋಜನೆಗಳು ಲಾಭ ತರಲಿವೆ. ದೊಡ್ಡ ನಿರ್ಧಾರಗಳು ನಿಮಗೆ ಶುಭವಿದೆ. ಕೆಲಸದ ಮೇಲಿನ ಒತ್ತಡದಿಂದ ನಿಮಗೆ ನಿರಾಳತೆ ಇರಲಿದೆ. ಹಣಕಾಸಿನ ವಿಚಾರದಲ್ಲಿ ಕ್ರಾಂತಿ ನೋಡಬಹುದು. ದಾಂಪತ್ಯ ವಿಚಾರದಲ್ಲಿ ಶುಭವಿದೆ. ನಿಮ್ಮ ಕೌಟುಂಬಿಕ ಸಮಸ್ಯೆಗಳು ಬಗೆಹರಿಯಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರು ಕೆಲಸದ ವಿಚಾರದಲ್ಲಿದ್ದ ಒತ್ತಡ ಹಾಗೂ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾರೆ. ನಿಮ್ಮ ಕೆಲಸಗಳು ತೃಪ್ತಿ ತರಲಿದೆ. ನಿಮ್ಮ ಜೀವನದಲ್ಲಿ ಎದುರಾಗಿದ್ದ ದೊಡ್ಡ ಹಣಕಾಸಿನ ಸಮಸ್ಯೆಯೊಂದು ನಿವಾರಣೆಯಾಗಲಿದೆ. ಹೊಸ ಸಂಬಂಧಗಳು ಪ್ರಗತಿಯಾಗಲಿದೆ. ಆಪ್ತರಿಂದ ಬರಬೇಕಿದ್ದ ಹಣ ನಿಮ್ಮ ಕೈ ಸೇರಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಶುಕ್ರನಿಂದಾಗಿ ದೊಡ್ಡ ಲಾಭಗಳಿವೆ. ನಿಮ್ಮ ಹಲವು ಕೆಲಸಗಳಲ್ಲಿ ಧನಾತ್ಮಕವಾಗಿ ಮುಗಿಯಲಿವೆ. ಆರ್ಥಿಕವಾಗಿ ಇಷ್ಟು ದಿನಗಳ ಕಾಲ ನೀವು ಎದುರಿಸಿದಂತಹ ಕಷ್ಟದ ದಿನಗಳು ಮರೆಯಾಗುವ ಅವಕಾಶ ಸಿಗಲಿದೆ. ಆರೋಗ್ಯದಲ್ಲಿನ ಚೇತರಿಕೆಯು ನಿಮಗೆ ಕೆಲಸದಲ್ಲಿ ತೊಡಗುವಂತೆ ಮಾಡಲಿವೆ. ಧನಲಾಭದ ನಿರೀಕ್ಷೆ ಇಟ್ಟುಕೊಳ್ಳಬಹುದು.
ಧನು ರಾಶಿ
ಧನು ರಾಶಿಯಲ್ಲಿ ಶುಕ್ರನ ಸಂಚಾರವು ಗೌರವ ಮತ್ತು ಖ್ಯಾತಿಯನ್ನು ಹೆಚ್ಚಿಸುತ್ತದೆ. ನಿಮ್ಮ ಸಮಾಜಮುಖಿ ಕಾರ್ಯದಿಂದ ಹೆಸರು, ಘನತೆ ಬರಲಿದೆ. ಮನೆಯಲ್ಲಿ ನೆಮ್ಮದಿ, ಶಾಂತಿ ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ. ಪ್ರೇಮ ಸಂಬಂಧಗಳು ಮತ್ತು ಸ್ನೇಹಗಳು ಬಲಗೊಳ್ಳುತ್ತವೆ. ಸ್ವಂತ ಉದ್ಯೋಗ ಮಾಡುತ್ತಿರುವ ಮಂದಿಗೆ ಯಶಸ್ಸು ನೋಡುವ ಸಮಯವಿದು. ಅವಿವಾಹಿತರಿಗೆ ವಿವಾಹ ಸಂಬಂಧವಾಗಿ ದೊಡ್ಡ ಶುಭವಿದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಹೊಸ ಉದ್ಯೋಗಗಳನ್ನು ಪ್ರಾರಂಭಿಸಲು ಇದು ಉತ್ತಮ ಸಮಯ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











