Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶುಕ್ರ-ಚಂದ್ರನ ಸಂಯೋಗದಿಂದ ಯಾರಿಗೆಲ್ಲಾ ಲಾಭ? ಯಾರಿಗೆ ಶುಭಕರ ದಿನಗಳಿವೆ?
ಜ್ಯೋತಿಷ್ಯದಲ್ಲಿ ಚಂದ್ರನಿಗೆ ಬಹಳ ಮುಖ್ಯ ಸ್ಥಾನಮಾನ ಹಾಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಹಾಗೆ ಚಂದ್ರನು ಅತ್ಯಂತ ವೇಗವಾಗಿ ಚಲಿಸುವಂತಹ ಗ್ರಹವಾಗಿದೆ. ಒಂದು ರಾಶಿಯಲ್ಲಿ ಎರಡೂವರೆ ದಿನಗಳ ಕಾಲ ಮಾತ್ರವೇ ಚಲಿಸಲಿದ್ದಾನೆ. ಹೀಗಾಗಿ ಚಂದ್ರ ಪ್ರತಿಯೊಂದು ರಾಶಿಯಲ್ಲಿ ಚಲಿಸಿದಾಗಲು ಆ ರಾಶಿಯಲ್ಲಿರುವ ಗ್ರಹದೊಂದಿಗೆ ಸಂಯೋಗವಾಗುತ್ತಾನೆ.
ಅದೇ ರೀತಿ ಜೂನ್ 20ರಂದು ಕೂಡ ಚಂದ್ರನು ಮೇಷ ರಾಶಿ ಪ್ರವೇಶಿಸಿದಾಗ ಅಲ್ಲಿ ಶುಕ್ರನೊಂದಿಗೆ ಸಂಯೋಗಗೊಂಡಿದ್ದಾನೆ. ಶುಕ್ರನು ಪ್ರಸ್ತುತ ಮೇಷ ರಾಶಿಯಲ್ಲಿದ್ದಾಗ ಚಂದ್ರನು ಕೂಡ ಆ ರಾಶಿಗೆ ಚಲಿಸುವುದು ಹಲವರಿಗೆ ಲಾಭದಾಯಕವಾಗುತ್ತದೆ. ಹಾಗೆ ಒಂದಿಷ್ಟು ಶುಭಕರ ಲಾಭಗಳಿಗೆ ಇದು ಕಾರಣವಾಗಲಿದೆ.

ಈ ಸಂಯೋಗದಿಂದ ಹಲವು ರೀತಿ ಫಲಗಳ ನೋಡಬಹುದು, ಮುಖ್ಯವಾಗಿ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ, ವಿವಾಹ ಯೋಗ, ಆಸ್ತಿ ಸಂಬಂಧ ಇದ್ದ ಅಡ್ಡಿ ದೂರಾಗುವುದು ಸೇರಿ ಹಲವು ರೀತಿಯ ಪ್ರಯೋಜನ ನೀವು ಪಡೆಯಬಹುದು. ಹಾಗಾದ್ರೆ ಶುಕ್ರ ಹಾಗೂ ಚಂದ್ರನ ಸಂಯೋಗ ಯಾರಿಗೆ ಲಾಭದಾಯಕವಾಗಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ಚಂದ್ರ ಹಾಗೂ ಶುಕ್ರನ ಸಂಯೋಗದಿಂದಾಗಿ ಮೇಷ ರಾಶಿಯವರಲ್ಲಿ ಅತ್ಯಧಿಕ ಲಾಭ ನೋಡಬಹುದು. ನಿಮ್ಮ ಅನೇಕ ಕೆಲಸಗಳು ಶುಭಕರವಾಗಲಿವೆ. ಮೇಷ ರಾಶಿಯ ಮೊದಲ ಮನೆಯಲ್ಲಿ ಸಂಯೋಗ ರೂಪುಗಳ್ಳಲಿದೆ. ನಿಮ್ಮ ಸಂಬಂಧಗಳು ಗಟ್ಟಿಯಾಗಲಿವೆ. ಹಾಗೆ ನಿಮ್ಮ ಬಹಳ ದಿನದ ಬಯಕೆಯನ್ನು ಈಡೇರಿಸಿಕೊಳ್ಳಬಹುದು, ನೀವು ಉದ್ಯೋಗ ಹುಡುಕುತ್ತಿದ್ದರೆ ಈ ದಿನ ಬಹಳ ಶುಭಕರವಾಗಿರಲಿದೆ. ಸಹೋದರರೊಂದಿಗೆ, ಸಂಬಂಧಿಕರೊಂದಿಗಿನ ಒಡನಾಟಗಳು ತೃಪ್ತಿ ತರಲಿವೆ. ಹಾಗೆ ನಿಮ್ಮ ಹಣಕಾಸು ವಿಚಾರಗಳಲ್ಲಿ ಯಶಸ್ಸಿನ ಫಲಿತಾಂಶ ಪಡೆಯಲಿದ್ದೀರಿ.
ತುಲಾ ರಾಶಿ
ತುಲಾ ರಾಶಿಯವರಿಗೆ ಶುಕ್ರ-ಚಂದ್ರ ಸಂಯೋಗವು ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಿಸುತ್ತದೆ. ನಿಮ್ಮ ವ್ಯಾಪಾರ ಸಂಬಂಧವಾಗಿ ಹಾಗೆ ನಿತ್ಯದ ಕೆಲಸದ ಸಂಬಂಧವಾಗಿ ಇದ್ದ ಅಡ್ಡಿಯೊಂದು ನಿವಾರಣೆಯಾಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ಕೀರ್ತಿ ಹೆಚ್ಚಾಗಲಿದೆ. ನಿಮ್ಮ ಶ್ರಮ ಗುರುತಿಸಲಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆ ನೋಡುತ್ತೀರಿ. ಕುಟುಂಬದಲ್ಲಿ ಇದ್ದ ಸಮಸ್ಯೆಗಳು ನಿವಾರಣೆ ಆಗಲಿದೆ. ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ, ಬಡ್ತಿಯ ವಿಚಾರದಲ್ಲಿ ಶುಭವಾಗಲಿದೆ. ಯಾರಿಂದಾದರು ಹಣಕಾಸು ಸಹಾಯ ಪಡೆಯಬಹುದು.
ಸಿಂಹ ರಾಶಿ
ಶುಕ್ರ-ಚಂದ್ರನ ಸಂಯೋಗದಿಂದಾಗಿ ಸಿಂಹ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ನಿಮ್ಮ ಔದ್ಯೋಗಿಕ ಸಂಬಂಧಿ ಒತ್ತಡ ಕಡಿಮೆಯಾಗಲಿದೆ, ಹಾಗೆ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನಿಮ್ಮ ಪ್ರಯಾಣಗಳಲ್ಲಿ ಲಾಭದಾಯಕ ಫಲಿತಾಂಶ ನೋಡುತ್ತೀರಿ. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ. ದಾಂಪತ್ಯ, ಪ್ರೀತಿ ವಿಚಾರವಾಗಿಯೂ ನಿಮಗೆ ಉತ್ತಮ ದಿನಗಳಿವೆ. ನಿಮ್ಮ ದುಂದು ವೆಚ್ಚಗಳ ಕಡಿಮೆ ಮಾಡುವಿರಿ. ನಿಮ್ಮ ಭವಿಷ್ಯದ ಉಳಿತಾಯ ಸಂಬಂಧವಾಗಿ ಆಲೋಚನೆಯಲ್ಲಿರುವಿರಿ.
ಧನು ರಾಶಿ
ಶುಕ್ರ-ಚಂದ್ರನ ಸಂಯೋಗದಿಂದಾಗಿ ಧನು ರಾಶಿಯವರಿಗೆ ದಾಂಪತ್ಯ ಜೀವನದಲ್ಲಿ ಹೆಚ್ಚಿನ ಮಾಧುರ್ಯ ಇರಲಿದೆ. ಅವಿವಾಹಿತರಿಗೆ ಉತ್ತಮ ಲಾಭ ನೋಡಬಹುದು. ಮದುವೆ ವಿಚಾರದಲ್ಲಿ ಧನಾತ್ಮಕ ಬದಲಾವಣೆ ಇರಲಿದೆ. ಆರ್ಥಿಕ ಲಾಭಕ್ಕೆ ಹಲವು ಕೆಲಸಗಳು ಕಾರಣವಾಗಲಿವೆ. ವಾಹನ ಲಾಭದಂತಹ ವಿಚಾರಗಳಿವೆ. ಉದ್ಯೋಗ ಬದಲಾಯಿಸುವ ಸಾಧ್ಯತೆ ಹೆಚ್ಚು. ಆರೋಗ್ಯದಲ್ಲೂ ಸುಧಾರಣೆ ನೋಡುವಿರಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವಿರಿ. ಉದ್ಯಮಿಗಳು ಬಹಳ ಉತ್ತಮ ದಿನ ಎನ್ನಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











