Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
18 ತಿಂಗಳ ಬಳಿಕ ಶುಕ್ರ-ಮಂಗಳ ಸಮ್ಮಿಲನ: ಈ ರಾಶಿಯವರಲ್ಲಿ ಸುವರ್ಣಕಾಲ ಆರಂಭ!!
ಜ್ಯೋತಿಷ್ಯದಲ್ಲಿ ಗ್ರಹಗಳನ್ನು ವ್ಯಕ್ತಿ ಜೀವನದಲ್ಲಿ ಪ್ರಮುಖ ಬದಲಾವಣೆಗಳ ತರುವಂತಹ ಅಂಶಗಳೆಂದು ಪರಿಗಣಿಸಲಾಗಿದೆ. ಪ್ರತಿಯೊಂದು ಗ್ರಹಗಳು ಕೂಡ ನಿರ್ದಿಷ್ಟ ಸಮಯದಲ್ಲಿ ಆಯಾ ರಾಶಿಗಳಿಗೆ ಚಲಿಸುವುದು ನೋಡಬಹುದು. ಗ್ರಹಗಳು ಈ ರೀತಿ ಕಾಲ ಕಾಲಕ್ಕೆ ಬದಲಾಗುವುದು ಹಲವರ ಜೀವನದಲ್ಲಿಯೂ ಬದಲಾವಣೆಗಳಾಗುವುದು ನೋಡಬಹುದು. ಹಾಗೆ ಇದರಿಂದ ಶುಭ ಹಾಗೂ ಅಶುಭ ಯೋಗಗಳು ಕೂಡ ಸೃಷ್ಟಿಯಾಗುವುದು ಹೊಸತೇನಲ್ಲ.
ಹಾಗೆ ಈ ಗ್ರಹಗಳ ಚಲನೆಯಿಂದಾಗಿ ಹಲವು ರೀತಿ ಯೋಗ ನೋಡಬಹುದು. ಒಂದೇ ರಾಶಿಯಲ್ಲಿ ಎರಡು ಗ್ರಹಗಳ ಒಟ್ಟಿಗೆ ಚಲನೆಯಿಂದ ಯೋಗ ರೂಪುಗೊಳ್ಳುವುದು ಹಾಗೆ ಎರಡು ಗ್ರಹಗಳ ಚಲನೆಯಿಂದಾಗಿ ಯೋಗಗಳು ರೂಪುಗೊಳ್ಳುತ್ತದೆ. ಈ ತಿಂಗಳ 26 ರಂದು ಸಂಪತ್ತಿನ ಗ್ರಹವಾದ ಶುಕ್ರನು ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ, ಅಲ್ಲಿ ಗ್ರಹಗಳ ಅಧಿಪತಿಯಾದ ಮಂಗಳ ಈಗಾಗಲೇ ಸ್ಥಾನ ಪಡೆದಿದ್ದಾನೆ.

ಪರಿಣಾಮವಾಗಿ ವೃಶ್ಚಿಕ ರಾಶಿಯಲ್ಲಿ ಮಂಗಳ ಮತ್ತು ಶುಕ್ರನ ಸಂಯೋಗವು ವಿಶಿಷ್ಟ ಹಾಗೂ ಅಪರೂಪದ ಯೋಗಕ್ಕೆ ಕಾರಣವಾಗುತ್ತಿದೆ. ಶುಕ್ರ ಮತ್ತು ಮಂಗಳನ ಯತಿಯಿಂದಾಗಿ ಸುವರ್ಣಕಾಲ ಆರಂಭವಾಗುತ್ತದೆ. ಮಂಗಳನು ಸಂಪತ್ತು, ಆಸ್ತಿ, ಸೌಕರ್ಯ, ಐಷಾರಾಮಿಯ ಪ್ರತೀಕ, ಹಾಗೆ ಶುಕ್ರನು ಕೂಡ ಸಂತೋಷ, ಸಂಪತ್ತು, ದಾಂಪತ್ಯ, ಸಂಬಂಧ, ಉದ್ಯೋಗದ ಸಂಕೇತ. ಈ ಎರಡು ಗ್ರಹಗಳು ವೃಶ್ಚಿಕ ರಾಶಿಯಲ್ಲಿ 18 ತಿಂಗಳ ಬಳಿಕ ಒಟ್ಟಿಗೆ ಚಲಿಸುತ್ತಿವೆ.
ಹಾಗಾದ್ರೆ ಈ ಎರಡು ಗ್ರಹಗಳ ಸಂಚಾರದಿಂದಾಗಿ ಯಾವೆಲ್ಲಾ ರಾಶಿಗಳಿಗೆ ಶುಭವಾಗುತ್ತಿದೆ ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಕುಂಭ ರಾಶಿ
ಮಂಗಳ ಮತ್ತು ಶುಕ್ರನ ಈ ಅಪರೂಪದ ಸಂಯೋಗದಿಂದಾಗಿ ಕುಂಭ ರಾಶಿ ಜನರಿಗೆ ಅತ್ಯುತ್ತಮ ಲಾಭಗಳಿವೆ. ಈ ಸಂಯೋಗವು ನಿಮ್ಮ ರಾಶಿಯ 11 ನೇ ಮನೆಯಲ್ಲಿ ಉಂಟಾಗಲಿದೆ. ಇದು ನಿಮ್ಮ ಆದಾಯ ಮತ್ತು ಹೂಡಿಕೆಗಳಿಂದ ಪ್ರಯೋಜನಗಳನ್ನು ತರಬಹುದು ಮತ್ತು ನಿಮ್ಮ ಆದಾಯವು ಹೆಚ್ಚಾಗುತ್ತದೆ. ಈ ಸಮಯದಲ್ಲಿ ನೀವು ಪ್ರಮುಖ ವ್ಯವಹಾರ ಒಪ್ಪಂದವೊಂದನ್ನು ಮಾಡಿಕೊಳ್ಳಬಹುದು. ಉದ್ಯಮಿಗಳ ಲಾಭದ ಅಂಶ ಹೆಚ್ಚಾಗಲಿದೆ. ಉಳಿತಾಯದಲ್ಲಿನ ಹೆಚ್ಚಳವು ನಿಮಗೆ ಶುಭತರಲಿದೆ. ದೊಡ್ಡ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸುತ್ತೀರಿ.
ಮೀನ ರಾಶಿ
ಮಂಗಳ ಮತ್ತು ಶುಕ್ರರ ಸಂಯೋಗವು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಈ ಸಂಯೋಗವು ನಿಮ್ಮ ರಾಶಿಚಕ್ರ ಚಿಹ್ನೆಯಿಂದ ಒಂಬತ್ತನೇ ಮನೆಯಲ್ಲಿ ರೂಪುಗೊಳ್ಳಲಿದೆ. ಈ ಸಮಯದಲ್ಲಿ ನೀವು ಕೆಲಸಕ್ಕೆ ಸಂಬಂಧಿಸಿದ ಪ್ರಯಾಣವನ್ನು ಸಹ ಕೈಗೊಳ್ಳಬಹುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಬಹುದು. ನಿಮ್ಮ ಆತ್ಮವಿಶ್ವಾಸ ಗಮನಾರ್ಹವಾಗಿ ಹೆಚ್ಚಾಗುತ್ತದೆ ಮತ್ತು ನೀವು ಸಾಮಾಜಿಕ ಗೌರವವನ್ನು ಪಡೆಯುತ್ತೀರಿ. ವೃತ್ತಿ ಜೀವನದಲ್ಲಿನ ದೊಡ್ಡ ಲಾಭವನ್ನು ನಿಮ್ಮದಾಗಿಸಿಕೊಳ್ಳುವಿರಿ.
ತುಲಾ ರಾಶಿ
ಮಂಗಳ ಮತ್ತು ಶುಕ್ರರ ಸಂಯೋಗವು ತುಲಾ ರಾಶಿಯವರಿಗೆ ಸಾಬೀತುಪಡಿಸಬಹುದು. ಈ ಸಂಯೋಗವು ನಿಮ್ಮ ರಾಶಿಯ ಸಂಪತ್ತಿನ ಮನೆಯಲ್ಲಿ ರೂಪುಗೊಳ್ಳುವುದರಿಂದ, ಈ ಸಮಯದಲ್ಲಿ ನೀವು ಅನಿರೀಕ್ಷಿತ ಆರ್ಥಿಕ ಲಾಭಗಳ ಅನುಭವಿಸಬಹುದು. ನಿಮ್ಮ ಹೊಸ ವ್ಯವಹಾರಗಳು ನಿಮಗೆ ಲಾಭ ತರಲಿದೆ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ನಿಮ್ಮ ಕೈ ಸೇರಲಿದೆ. ಅಪರೂಪದ ಪ್ರಯಾಣಗಳ ಮಾಡುವಿರಿ. ಶುಭ ಕಾರ್ಯಗಳಲ್ಲಿ ನೀವು ಭಾಗಿಯಾಗಬಹುದು. ಪ್ರೀತಿ, ದಾಂಪತ್ಯ ವಿಚಾರದಲ್ಲಿ ನಿಮಗೆ ಮಧುರ ಕ್ಷಣಗಳು, ಸಂತೋಷದ ಕ್ಷಣಗಳನ್ನು ಕಳೆಯುವ ಶುಭ ಸಮಯ ಆಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications