Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸಿಂಹ ರಾಶಿಯಲ್ಲಿ ಶುಕ್ರ-ಕೇತು ಸಂಯೋಗ: ಯಾರಲ್ಲಿ ಕಾದಿದೆ ಆರ್ಥಿಕ ಲಾಭ ನೋಡಿ!
ವೈದಿಕ ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಗಳ ಚಲನೆಯನ್ನು ಕೂಡ ಪ್ರಮುಖ ವಿದ್ಯಮಾನ ಎಂದು ಪರಿಗಣಿಸಲಾಗಿದೆ. ಹಾಗೆ ಈ ಗ್ರಹಗಳ ಸ್ಥಾನ ಪಲ್ಲಟವನ್ನು ಮುಖ್ಯ ಹಾಗೂ ಪರಿಣಾಮಕಾರಿ ಪ್ರಕ್ರಿಯೆಗಳಾಗಿ ನೋಡಲಾಗಿದೆ. ಇನ್ನು ಈ ರಾಹು ಹಾಗೂ ಕೇತು ಸಂಚಾರಕ್ಕೂ ಸಹ ಅಷ್ಟೇ ಪ್ರಾಮುಖ್ಯತೆ ನೀಡಲಾಗಿದೆ.
ಪ್ರಸ್ತುತ ರಾಹು ಈಗ ಕುಂಭ ರಾಶಿಯಲ್ಲಿ ಹಾಗೂ ಕೇತು ಸಿಂಹ ರಾಶಿಯಲ್ಲಿ ಚಲಿಸುತ್ತಿವೆ. ಈ ಎರಡು ನೆರಳಿನ ಗ್ರಹಗಳು ಸುಮಾರು 18 ತಿಂಗಳ ಕಾಲ ಒಂದೇ ರಾಶಿಯಲ್ಲಿ ಚಲಿಸಲಿವೆ. ಹೀಗಾಗಿ 18 ತಿಂಗಳ ಕಾಲ ಚಲಿಸುವಾಗ ಗ್ರಹಗಳ ನಡುವಿನ ಸಂಯೋಗ ಉಂಟಾಗುವುದು ನೋಡಬಹುದು. ಈಗ ಶನಿ ಸಂಚಾರ ಈ ಗ್ರಹಗಳ ನಡುವೆ ಸಂಯೋಗಕ್ಕೆ ಕಾರಣವಾಗುತ್ತಿದೆ.

ರಾಹು ಮತ್ತು ಕೇತು ಗ್ರಹಗಳಿಗೆ ತನ್ನದೇ ಆದ ಸ್ವಂತ ರಾಶಿಗಳಿಲ್ಲ. ಆದರೂ ಈ ಎರಡು ಗ್ರಹಗಳು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರಬಹುದು. ಕೇತು ಈಗ ಸಿಂಹ ರಾಶಿಯಲ್ಲಿದ್ದು, ಈಗ ಸಿಂಹ ರಾಶಿಗೆ ಶುಕ್ರ ಕೂಡ ಎಂಟ್ರಿ ಕೊಡಲಿದ್ದಾನೆ. ಹೀಗಾಗಿ ಸಿಂಹ ರಾಶಿಯಲ್ಲಿ ಕೇತು ಹಾಗೂ ಶುಕ್ರನ ಸಂಯೋಗವಾಗುತ್ತಿದೆ.
ಶುಕ್ರನು ಸೆಪ್ಟೆಂಬರ್‌ನಲ್ಲಿ ಸಿಂಹ ರಾಶಿ ಪ್ರವೇಶಿಸಿದ ಬಳಿಕ ಅಲ್ಲಿ ಕೇತುವಿನೊಂದಿಗೆ 18 ವರ್ಷಗಳ ಕಾಲ ಸಿಂಹ ರಾಶಿಯಲ್ಲಿ ಒಂದೇ ರೀತಿಯ ಚಲನೆಯಲ್ಲಿರುತ್ತಾರೆ. ಈ ಸಂಯೋಗದಿಂದಾಗಿ ಕೆಲವರಿಗೆ ಅಶುಭವಾದರೆ ಮತ್ತೆ ಕೆಲವರಿಗೆ ಶುಭವಾಗುತ್ತಿದೆ. ಹಾಗಾದ್ರೆ ಯಾರಿಗೆಲ್ಲಾ ಇದು ಶುಭದಾಯಕ ಸಮಯ ಆಗಿರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಧನು ರಾಶಿ
ಕೇತು-ಶುಕ್ರ ಸಂಯೋಗವು ಧನು ರಾಶಿಯ 9 ನೇ ಮನೆಯಲ್ಲಿ ಸಂಭವಿಸುತ್ತದೆ. ಇದರಿಂದಾಗಿ ಈ ರಾಶಿ ಜನರಲ್ಲಿ ಬಹಳ ಅನುಕೂಲ ನೋಡಬಹುದು. ವೃತ್ತೀಪರ ಕ್ಷೇತ್ರದಲ್ಲಿ ಯಶಸ್ಸಿನ ಸಮಯ ಎನ್ನಬಹುದು. ಅಲ್ಲದೆ ನಿಮ್ಮ ಆರ್ಥಿಕ ಪರಿಸ್ಥಿತಿಗಳು ಹಿಂದೆಂದಿಗಿಂತಲೂ ಉತ್ತಮ ಸ್ಥಿತಿಗೆ ತಲುಪಲಿವೆ. ಸಾಲಗಳು ಮರುಪಾವತಿಯಾಗಲಿವೆ. ಶುಭ ಕಾರ್ಯಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಹೆಚ್ಚಾಗಲಿದೆ. ಆಸ್ತಿ ಕುರಿತಾದ ವಿಚಾರದಲ್ಲಿ ನೀವು ಬಯಸಿರುವ ಫಲಿತಾಂಶ ಪಡೆಯಬಹುದು. ವ್ಯಾಪಾರದಲ್ಲಿನ ಚಿಂತೆಗಳು ದೂರಾಗುವ ಕಾಲ ಎನ್ನಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ 10 ನೇ ಮನೆಯಲ್ಲಿ ಕೇತು ಮತ್ತು ಶುಕ್ರ ಸಂಯೋಗವಾಗುತ್ತಿದೆ. ಇದು ವ್ಯವಹಾರ ಸಂಬಂಧಿ ಸಮಸ್ಯೆಗಳ ದೂರ ಮಾಡಲಿದೆ. ಹಾಗೆ ದಾಂಪತ್ಯ ವಿಚಾರವಾಗಿ ದೊಡ್ಡ ಮನಸ್ತಾಪಗಳು ಅಥವಾ ಸಮಸ್ಯೆಗಳಿಗೆ ಪರಿಹಾರ ನೀಡಬಹುದು. ಸಹೋದರರೊಂದಿಗಿನ ಮನಸ್ತಾಪ ಕೂಡ ದೂರಾಗಲಿದೆ. ವ್ಯಾಪಾರ, ವೃತ್ತಿಯಲ್ಲಿ ಪ್ರಗತಿ ನೋಡುವಿರಿ. ವರ್ಗಾವಣೆ, ಬಡ್ತಿ, ವೇತನ ಹೆಚ್ಚಳದ ಕುರಿತಾಗಿ ಧನಾತ್ಮಕ ವಿಚಾರಗಳ ಕೇಳುವಿರಿ. ನಿರುದ್ಯೋಗಿಗಳು ಉತ್ತಮ ಉದ್ಯೋಗವಕಾಶ ಪಡೆಯಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಮೊದಲ ಮನೆಯಲ್ಲಿ ಕೇತು ಮತ್ತು ಶುಕ್ರ ಸಂಯೋಗವು ಸಂಭವಿಸುತ್ತದೆ. ಆದ್ದರಿಂದ ಈ ರಾಶಿ ಜನರಲ್ಲಿ ವೈಯಕ್ತಿನ ಜೀವನ ಸುಧಾರಿಸಲಿದೆ. ವಿವಾಹಿತರಲ್ಲಿ ಸಂತೋಷದ ದಿನಗಳ ನೋಡಬಹುದು. ನೀವು ಜಂಟಿ ವ್ಯವಹಾರದಲ್ಲಿ ಭಾಗಿಯಾಗಿದ್ದರೆ ಈ ಸಮಯದಲ್ಲಿ ಉತ್ತಮ ಲಾಭ ನೋಡಬಹುದು. ಹೂಡಿಕೆಗಳು ಈ ಸಮಯದಲ್ಲಿ ನಿಮ್ಮ ಪರವಾದ ಲಾಭಕ್ಕೆ ಕಾರಣವಾಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವಂತಹ ಕೆಲಸಗಳ ಮಾಡುತ್ತೀರಿ. ದಾಂಪತ್ಯದಲ್ಲಿ ಸುಖ ಕಾಣುವಿರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
