Latest Updates
-
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ
10 ವರ್ಷಗಳ ಬಳಿಕ ಕೇತು-ಶುಕ್ರ ಸಂಯೋಗ: ಈ 3 ರಾಶಿಯವರಿಗೆ ಶುಭವೋ ಶುಭ
ಶುಕ್ರನನ್ನು ಶುಭ ನೀಡುವ ಗ್ರಹವೆಂದರೆ ಕೇತುವನ್ನು ಅಶುಭ ಗ್ರಹ, ನೆರಳಿನ ಗ್ರಹವೆಂದು ಪರಿಗಣಿಸಲಾಗಿದೆ. ಈ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಸಂಯೋಜನೆಯಾಗುವುದು ಅಪರೂಪ. ಸುಮಾರು 10 ವರ್ಷಗಳ ಬಳಿಕ ಕೇತು ಮತ್ತು ಶುಕ್ರ ಕನ್ಯಾ ರಾಶಿಯಲ್ಲಿ ಸಂಯೋಜನೆಯಾಗಿದೆ. ಇದರಿಂದ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಈ ಸಂಯೋಜನೆ ಯಾವ ರಾಶಿಗಳಿಗೆ ತುಂಬಾನೇ ಶುಭ ಎಂದು ಹೇಳುವ ಮೊದಲು ಈ ಶುಕ್ರ ಹಾಗೂ ರಾಹುವಿನ ಮಹತ್ವ ನೋಡುವುದಾದರೆ

ಶುಕ್ರನ ಮಹತ್ವ
ಶುಕ್ರನನ್ನು ಸ್ತ್ರೀ ಅಂಶದ ಗ್ರಹವೆಂದು ಗುರುತಿಸಲಾಗುವುದು. ಈ ಶುಕ್ರ ಮನೆಗೆ ಸಂತೋಷ ಸಮೃದ್ಧಿಯನ್ನು ತರುತ್ತದೆ, ಶುಕ್ರದೆಸೆಯಿದ್ದರೆ ಸವಕರ್ಯಗಳು ಹೆಚ್ಚಾಗುವುದು. ಶುಕ್ರ ಪ್ರೀತಿ, ಸೌಂದರ್ಯದ ಗ್ರಹ ಕೂಡ ಹೌದು. ಶುಕ್ರ ಬಲವಾದ ಸ್ಥಾನದಲ್ಲಿದ್ದರೆ ಹಣಕಾಸಿನ ವಿಷಯದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ.
ಕೇತು ಗ್ರಹದ ಪ್ರಭಾವ
ಕೇತುವನ್ನು ನೆರಳಿನ ಗ್ರಹವೆಂದು ಕರೆಯಲಾಗುವುದು, 1.8 ವರ್ಷಕ್ಕೊಮ್ಮೆ ಕೇತು ರಾಶಿ ಬದಲಾಯಿಸುತ್ತದೆ, ಇದೀಗ ಕೇತು ಕನ್ಯಾ ರಾಶಿಗೆ ಚಲಿಸಿದೆ, ಈ ಗ್ರಹ ಹಿಮ್ಮುಖವಾಗಿ ಚಲಿಸುವ ಗ್ರಹವಾಗಿದೆ. ಇದೀಗ ಶುಕ್ರ ಹಾಗೂ ಕೇತುವಿನ ಸಂಯೋಗ ಈ ರಾಶಿಯವರಿಗೆ ಅದೃಷ್ಟಕರವಾಗಿದೆ:
ಮೇಷ ರಾಶಿ
ನಿಮ್ಮ ಸೌಕರ್ಯಗಳು ಹೆಚ್ಚಾಗುವುದು. ನಿಮಗೆ ಆರ್ಥಿಕ ಸಮಸ್ಯೆಯಿದ್ದರೆ ಅದು ಬಗೆಹರಿಯಲಿದೆ. ಈ ಅವಧಿಯಲ್ಲಿ ಉದ್ಯಮದಲ್ಲಿ ಅಪಾಯ ಯಶಸ್ಸು ಕಾಣುವಿರಿ, ಅಲ್ಲದೆ ಲಾಭ ಗಳಿಸಲು ಅನೇಕ ಮಾರ್ಗಗಳು ಸಿಗಲಿದೆ, ಇದರಿಂದಾಗಿ ನಿಮ್ಮ ಎಲ್ಲಾಆರ್ಥಿಕ ಸಮಸ್ಯೆ ಬಗೆಹರಿಯಲಿದೆ. ಸ್ಟಾಕ್ ಮಾರ್ಕೆಟ್‌ನಲ್ಲಿ ತೊಡಗಿಸಿಕೊಂಡವರು ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು. 2024 ನಿಮಗೆ ಅದ್ಭುತವಾಗಿರಲಿದೆ.
ಸಿಂಹ ರಾಶಿ
ಶುಕ್ರ ಹಾಗೂ ಕೇತುವಿನ ಸಂಯೋಗ ಸಿಂಹ ರಾಶಿಯವರಿಗೂ ತುಂಬಾನೇ ಅನುಕೂಲಕರವಾಗಿದೆ. ಈ ಗ್ರಹಗಳ ಸಂಯೋಗದಿಂದ ನಿಮ್ಮ ಸಂವಹನ ಕೌಶಲ್ಯ ತುಂಬಾನೇ ಉತ್ತಮವಾಗುವುದು, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸ್ಥಿರತೆ ಇರಲಿದೆ, ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ನಿಮ್ಮ ಆಸೆಗಳು ನೆರವೇರಲಿದೆ, ನೀವು ಸುಲಭವಾಗಿ ಇತರರನ್ನು ಆಕರ್ಷಿಸುತ್ತೀರಿ, ಗ್ರಹಗಳು ಅನುಕೂಲಕರವಾಗಿರುವುದರಿಂದ 2024 ನಿಮಗೆ ಅದ್ಭುತವಾಗಿರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯಲ್ಲಿ ಶುಕ್ರ ಹಾಗೂ ಕೇಯುವಿನ ಸಂಯೋಗವಾಗಲಿದ್ದು ಈ ಸಂಯೋಗ ನಿಮಗೆ ಶುಭ ಫಲವನ್ನು ನೀಡಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಉದ್ಯೋಗಿಗಳು ಈ ಅವಧಿಯಲ್ಲಿ ಉತ್ತಮ ಪ್ರಯೋಜನವನ್ನು ಪಡೆಯಬಹುದು. ಧಾರ್ಮಿಕವಾಗಿ ಈ ಅವಧಿ ನಿಮಗೆ ತುಂಬಾನೇ ಒಳ್ಳೆಯದಿದೆ, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ಕಾಣುವಿರಿ. ವಿವಿಧ ಮೂಲಗಳಿಂದ ನಿಮಗೆ ಸಂಪತ್ತು ದೊರೆಯಲಿದೆ. ಆದ್ದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರಲಿದೆ.
ಕೇತು ನಮ್ಮ ರಾಶಿಯಲ್ಲಿ ಬಲವಾದ ಸ್ಥಾನದಲ್ಲಿದ್ದರೆ ಏನು ಪ್ರಯೋಜನ
* ವ್ಯಕ್ತಿ ಧಾರ್ಮಿಕ ವಿಷಯಗಳ ಕಡೆ ಹೆಚ್ಚು ಆಸಕ್ತಿ ತೋರಿಸುತ್ತಾನೆ
* ವ್ಯಕ್ತಿಯ ಬುದ್ಧಿವಂತಿಕೆ, ಜ್ಞಾನ ಹೆಚ್ಚಾಗುವುದು
* ಕೇತು ಬಲವಾಗಿದ್ದರೆ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡುತ್ತಾರೆ.
* ಕೇತುವಿನ ಸ್ಥಾನ ಬಲವಾಗಿದ್ದರೆ ಆರ್ಥಿಕ ಸ್ಥಿತಿಯಲ್ಲಿ ತುಂಬಾನೇ ಪ್ರಗತಿ ಕಾಣಲಿದೆ.
* ಕೇತು ಬಲವಾದ ಸ್ಥಾನದಲ್ಲಿ ವ್ಯಕ್ತಿ ತುಂಬಾ ಧೈರ್ಯವಂತನಾಗುತ್ತಾನೆ.
ಕೇತು ಮೊದಲ ಮನೆಯಲ್ಲಿದ್ದರೆ
* ವಸ್ತು ಸೌಕರ್ಯ ಹೆಚ್ಚಾಗುವುದು
* ಹೆಚ್ಚು ಪ್ರಯಾಣ ಮಾಡುವಿರಿ
* ಸೌಕರ್ಯ ಹೆಚ್ಚಾಗುವುದು
ಕೇತು 2ನೇ ಮನೆಯಲ್ಲಿದ್ದರೆ
ವ್ಯಕ್ತಿಯ ಜ್ಞಾನ ಹೆಚ್ಚಾಗುವುದು
* ಮಾತಿನ ಮೂಲಕ ಸಮಸ್ಯೆ ಬಗೆಹರಿಸುವ ಕೌಶಲ್ಯವಿರುತ್ತದೆ
* ಕುಟುಂಬದಲ್ಲಿ ಸಮಸ್ಯೆ
ಕೇತು 3ನೇ ಮನೆಯಲ್ಲಿದ್ದರೆ
ವ್ಯಕ್ತಿಯ ಖ್ಯಾತಿ ಹೆಚ್ಚಾಗುವುದು
* ಸಂಬಂಧದದ ವಿಷಯದಲ್ಲಿ ಒಳ್ಳೆಯದಲ್ಲ
ಕೇತು 4ನೇ ಮನೆಯಲ್ಲಿದ್ದರೆ
ತಾಯಿಯ ಆರೋಗ್ಯಕ್ಕೆ ಒಳ್ಳೆಯದಲ್ಲ
* ಕುಟುಂಬದಲ್ಲಿ ಸಮಸ್ಯೆಗಳಿರುತ್ತದೆ
ಕೇತು 5ನೇ ಮನೆಯಲ್ಲಿದ್ದರೆ
ಕಲಿಕೆಯಲ್ಲಿ ಆಸಕ್ತಿ ಹೆಚ್ಚಾಗುವುದು
* ಧಾರ್ಮಿಕ ವಿಷಯಗಳ ಕಡೆ ಆಸಕ್ತಿ ಹೆಚ್ಚಾಗುವುದು
ಗರ್ಭಧಾರಣೆಗೆ ತೊಂದರೆಯಾಗುವುದು
ಕೇತು 6ನೇ ಮನೆಯಲ್ಲಿದ್ದರೆ
ಅಪಘಾತದ ಬಗ್ಗೆ ಜಾಗ್ರತೆವಹಿಸಬೇಕು
ಕ್ರಿಮಿನಲ್ ಚಟುವಟಿಕೆ ಮಾಡಬಹುದು
ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು
ಕೇತು 7ನೇ ಮನೆಯಲ್ಲಿದ್ದರೆ
ಮದುವೆಗೆ ಸಂಬಂಧಿಸಿದ ಸಮಸ್ಯೆ ಬರಬಹುದು
* ಕುಟುಂಬದಲ್ಲಿ ಖುಷಿ ಇರಲ್ಲ
ಕೇತು 8ನೇ ಮನೆಯಲ್ಲಿದ್ದರೆ
* ಆರೋಗ್ಯ ಸಂಬಂಧಿಸಿದ ಸಮಸ್ಯೆಗಳಿರುತ್ತದೆ
ಕೇತು 9ನೇ ಮನೆಯಲ್ಲಿದ್ದರೆ
ಹೆಚ್ಚು ಪ್ರಯಾಣ ಮಾಡುವಿರಿ
ಜ್ಞಾನ ಹೆಚ್ಚಾಗುವುದು
ತಂದೆಗೆ ತುಂಬಾ ಒಳ್ಳೆಯದು
ಕೇತು 10ನೇ ಮನೆಯಲ್ಲಿದ್ದರೆ
ಸೌಕರ್ಯ ಹೆಚ್ಚಾಗುವುದು
ಸಾಮಾಜಿಕ ಗೌರವ ಹೆಚ್ಚಾಗುವುದು
ಜ್ಞಾನ ಹೆಚ್ಚುವುದು
ಕೇತು 11ನೇ ಮನೆಯಲ್ಲಿದ್ದರೆ
ಹಣಕಾಸಿನ ಸ್ಥಿತಿ ತುಂಬಾ ಚೆನ್ನಾಗಿರಲಿದೆ.
ತುಂಬಾ ಸೌಮ್ಯ ಸ್ವಭಾವ ಇರುತ್ತದೆ
ಕೇತು 12ನೇ ಮನೆಯಲ್ಲಿದ್ದರೆ
ಹೆಚ್ಚು ಬೆರೆಯುವುದಿಲ್ಲ
ಮಾಟ-ಮಂತ್ರಕ್ಕೆ ಸಂಬಂಧಿಸಿದಂತೆ ಆಸಕ್ತಿ ಹೆಚ್ಚುವುದು
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











