Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕರ್ಕ ರಾಶಿಗೆ ಶುಕ್ರ ಸಂಚಾರ: ಆಗಸ್ಟ್ 21ರಿಂದ 5 ರಾಶಿಯವರಿಗೆ ಹಣದ ಹರಿವು!
ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆಯನ್ನು ಬಹಳ ಪ್ರಮುಖ ವಿದ್ಯಮಾನವಾಗಿ ಪರಿಗಣಿಸಲಾಗಿದೆ. ಈಗ ಶುಕ್ರನು ತನ್ನ ರಾಶಿ ಬದಲಾಯಿಸುವುದು ಹಲವು ರೀತಿಯಲ್ಲಿ ಶುಭ ಹಾಗೂ ಲಾಭಕಾರವಾಗಿ ಬದಲಾಗುತ್ತದೆ. ಆಗಸ್ಟ್ 21 ರಂದು ಶುಕ್ರನು ಮಿಥುನ ರಾಶಿಯಿಂದ ಕರ್ಕ ರಾಶಿ ಪ್ರವೇಶಿಸಲಿದೆ. ಶುಕ್ರನನ್ನು ಸೌಂದರ್ಯ, ಕಲೆ, ಸಂಗೀತ, ಐಷಾರಾಮಿ ವಿಚಾರವೆಂದು ಪರಿಗಣಿಸಲಾಗುತ್ತದೆ. ಹಾಗೆ ಶುಕ್ರನ ಚಲನೆಯು ಹಲವರಲ್ಲಿ ಶುಕ್ರ ದೆಸೆಗೆ ಕಾರಣವಾಗುತ್ತದೆ.
ಶುಕ್ರನು ತನ್ನ ಸ್ಥಾನವನ್ನು ಬದಲಾಯಿಸಿದಾಗಲೆಲ್ಲಾ, ಅದರ ಪ್ರಭಾವದ ಪರಿಣಾಮವು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮೇಲೆ ವಿಭಿನ್ನ ರೂಪಗಳಲ್ಲಿ ಕಂಡುಬರುತ್ತದೆ. ಶುಕ್ರನು ಕರ್ಕ ರಾಶಿ ಪ್ರವೇಶಿಸಿದಾಗ, ಕೆಲವು ರಾಶಿ ಜನರಿಗೆ ಹಲವು ರೀತಿಯ ಶುಭವಾಗುವುದು ನೋಡಬಹುದು. ವ್ಯಾಪಾರ, ವ್ಯವಹಾರ, ಆಸ್ತಿ ಕುರಿತ ವಿಚಾರವಾಗಿಯೂ ಅನುಕೂಲ ತರಲಿದೆ.

ಹಾಗಾದ್ರೆ ಶುಕ್ರನು ಕರ್ಕ ರಾಶಿ ಪ್ರವೇಶದಿಂದಾಗಿ ಯಾವೆಲ್ಲಾ ರಾಶಿಗಳ ಪರಿಣಾಮ ಬೀರಲಿದೆ. ಯಾರಿಗೆಲ್ಲಾ ಶುಭಕರವಾಗಲಿದೆ ಎಂಬುದನ್ನು ಇಲ್ಲಿ ತಿಳಿದಿಕೊಳ್ಳೋಣ.
ಮೇಷ ರಾಶಿ
ಶುಕ್ರನು ಮೇಷ ರಾಶಿಯ 4ನೇ ಮನೆಯಲ್ಲಿ ಶುಕ್ರ ಸಂಚಾರ ನೋಡಬಹದು. ಇದರಿಂದ ಕುಟುಂಬ ವಿಚಾರದಲ್ಲಿ ಶಾಂತಿ ಇರಲಿದೆ. ಹಾಗೆ ಪ್ರೀತಿಯ ವಾತಾವರಣ ನೋಡಬಹದು. ಪಿತ್ರಾರ್ಜಿತ ಆಸ್ತು, ವ್ಯಾಪಾರ ವ್ಯವಹಾರ ಸಂಬಂಧವಾಗಿ ನಿಮಗೆ ಶುಭ ಸುದ್ದಿ ಬರಬಹುದು. ವಾಹನ, ನಿವೇಶನ ಸಂಬಂಧಿ ವಿಚಾರದಲ್ಲಿ ನಿಮಗೆ ಲಾಭ. ಆರೋಗ್ಯದ ವಿಚಾರವಾಗಿ ನಿಮಗೆ ಬಹಳ ಅನುಕೂಲಕರ
ವೃಷಭ ರಾಶಿ
ವೃಷಭ ರಾಶಿಯ 3ನೇ ಮನೆಯಲ್ಲಿ ಶುಕ್ರ ಸಂಚಾರ ನೋಡಬಹುದು. ಇದರಿಂದ ನಿಮ್ಮ ಕಳೆದು ಹೋದ ವಸ್ತುವೊಂದನ್ನು ನೀವು ಮರಳಿ ಪಡೆಯಬಹುದು. ಅದು ಯಾವುದೇ ವಸ್ತು ಅಥವಾ ವಿಚಾರಗಳಾಗಿರಬಹುದು. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವ ಕೆಲಸ ಮಾಡಲಿದ್ದೀರಿ. ಪ್ರಯಾಣಗಳಲ್ಲಿ ನೀವು ಅಂದುಕೊಂಡಿದ್ದ ಯಶಸ್ಸು ಸಿಗಲಿದೆ. ಪ್ರೀತಿ, ಪ್ರೇಮ, ದಾಂಪತ್ಯದ ವಿಚಾರವಾಗಿ ಬಹಳ ಉತ್ತಮ ಸಮಯ ಆಗಿರಲಿದೆ.
ಕರ್ಕ ರಾಶಿ
ಶುಕ್ರನು ಕರ್ಕ ರಾಶಿಯ ಲಗ್ನ ಮನೆ ಪ್ರವೇಶಿಸಲಿದ್ದಾನೆ. ಹೀಗಾಗಿ ನಿಮ್ಮ ವ್ಯಕ್ತಿತ್ವ ಮತ್ತಷ್ಟು ಆಕರ್ಷಕ ಆಗಿರಲಿದೆ. ಪ್ರೇಮ ಸಂಬಂಧದಲ್ಲಿ ಮಧುರತೆ ಇರಲಿದೆ. ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಸಿಗುತ್ತವೆ ಮತ್ತು ಬಡ್ತಿಯ ಸಾಧ್ಯತೆಯೂ ಇರುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ವ್ಯಾಪಾರ ಹಾಗೂ ವ್ಯವಹಾರ ಸಂಬಂಧವಾಗಿ ನಿಮಗೆ ಅನುಕೂಲಕರ ದಿನಗಳಿವೆ.
ಸಿಂಹ ರಾಶಿ
ಶುಕ್ರನು ಸಿಂಹ ರಾಶಿಯ 12ನೆ ಮನೆಯಲ್ಲಿ ಚಲಿಸಲಿದ್ದಾನೆ. ಇದರಿಂದ ನಿಮ್ಮ ಮನೆ ಕುರಿತಾದ ವಿಚಾರ, ವಿದೇಶ ಪ್ರವಾಸ, ಶುಭ ಕಾರ್ಯಗಳಲ್ಲಿ ಭಾಗಿಯಾಗಬಹುದು. ವ್ಯವಹಾರ ವಿಸ್ತರಣೆ ಆಗಬಹುದು. ನಿಮ್ಮ ಉಳಿತಾಯ ಹೆಚ್ಚಳ ಆಗೋದು ಖಚಿತ. ಹಾಗೆ ನಿಮ್ಮ ಕೆಲಸದಲ್ಲಿ ಅಡ್ಡಿಯಾಗಿದ್ದ ಆರ್ಥಿಕ ಸಮಸ್ಯೆಗೆ ಕಡಿವಾಣ ಹಾಕಬಹುದು. ನಿಮ್ಮ ದೀರ್ಘಕಾಲದ ಅನಾರೋಗ್ಯವೊಂದರಿಂದ ಮುಕ್ತಿ ಪಡೆಯಬಹುದು.
ತುಲಾ ರಾಶಿ
ತುಲಾ ರಾಶಿಯ 10ನೇ ಮನೆಯಲ್ಲು ಶುಕ್ರನ ಸಂಚಾರ ಉಂಟಾಗಲಿದೆ. ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಬರುತ್ತವೆ ಆದರೆ ಭಾವನಾತ್ಮಕವಾಗಿ ತೆಗೆದುಕೊಳ್ಳುವ ನಿರ್ಧಾರಗಳು ಸಮಸ್ಯೆಗಳನ್ನು ತರಬಹುದು. ಕೆಲಸದ ಕ್ಷೇತ್ರದಲ್ಲಿ ಬದಲಾವಣೆ ಸಾಧ್ಯ. ಕೌಟುಂಬಿಕ ವಿಚಾರದಲ್ಲಿ ಉತ್ತಮ ಸಮಯವಿದೆ. ಮನೆಗಾಗಿ ನೀವು ದುಬಾರಿ ವಸ್ತುವೊಂದನ್ನು ಖರೀದಿಸಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications